Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಈ ರೀತಿ ಬೆಳ್ಳುಳ್ಳಿ ಎಸಳುಗಳಿಂದ ಹೀಗೆ ಮಾಡಿದ್ರೆ ಸಾಕು ತಕ್ಷಣ ನೀವು ಶ್ರೀಮಂತರಾಗುತ್ತೀರಾ …!!!

ಮನುಷ್ಯನಿಗೆ ಇದೀಗ ಏನು ಬೇಕೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರತಿಯೊಬ್ಬ ಮನುಷ್ಯನಿಗೂ ಹಣ ಬೇಕು. ಸುಖವಾಗಿ ಜೀವನವನ ನಡೆಸಲು ಹಣ ತುಂಬಾ ಮುಖ್ಯ. ಆದರೆ ಕೆಲವರು ಎಷ್ಟೇ ಕಷ್ಟ ಪಟ್ಟರೂ ಸಹ ಹಣ ಗಳಿಸಲು ಸಾಧ್ಯವಾಗುತ್ತಿರುವುದಿಲ್ಲ. ಒಂದು ವೇಳೆ ಅವರು ಹಣ ಗಳಿಸಿದರು ಕೂಡ ಅದು ಸ್ವಲ್ಪ ಸಮಯದಲ್ಲೇ ಎಲ್ಲವೂ ಕಾಲಿಯಾಗಿ ಬಿಡುತ್ತದೆ. ಇನ್ನು ಈ ರೀತಿಯ ಹಣದ ಸಮಸ್ಯೆಗಳಿಗೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ ಎಂದರೆ ನೀವು ನಂಬುತ್ತೀರಾ! ಹೌದು ನಂಬಲೇ ಬೇಕು. ಲಾಲ್ ಕಿತಾಬ್ ನಲ್ಲಿ ಬೆಳ್ಳುಳ್ಳಿಯ ಕೆಲವು ವಿಶೇಷ ಗುಣಗಳನ್ನು ಉಲ್ಲೇಖಿಸಲಾಗಿದೆ. ಹಾಗಾದರೆ ಏನಿದು ಎಂದು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ…

ನಿಮ್ಮ ಪರ್ಸನಲ್ಲಿ ಶನಿವಾರದ ದಿನ ಒಂದು ಪೀಸ್ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳಬೇಕು ಇನ್ನು ಪ್ರತಿವಾರ ಈ ಬೆಳ್ಳುಳ್ಳಿಯನ್ನು ಬದಲಾಯಿಸುತ್ತಿರಬೇಕು, ಇನ್ನು ಶನಿವಾರದ ದಿನ ಮಾತ್ರ ಬೆಳ್ಳುಳ್ಳಿಯನ್ನು ಬದಲಾಯಿಸಬೇಕು. ಇನ್ನು ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೆಂಪು ಬಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ಕಟ್ಟಿ, ನಿಮ್ಮ ಮನೆಯ ಆವರಣದಲ್ಲಿ ನೆಲದ ಅಡಿಯಲ್ಲಿ ಇಡಬೇಕು. ಶನಿವಾರ ಸಂಜೆ ಶನಿ ದೇವರ ದೇವಸ್ಥಾನಕ್ಕೆ ಹೋಗಿ ಬಂದಮೇಲೆ ಮಾಡುವುದು ಸೂಕ್ತ. ಇನ್ನು ಇದೇ ರೀತಿ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನಿಲ್ಲಿಸುವುದಕ್ಕೆ ಬಹುದಾದಂತಹ ಬೆಳ್ಳುಳ್ಳಿಯ ಉಪಾಯ ಬಹಳ ವಿಶೇಷವಾಗಿದೆ.

ಇದಕ್ಕಾಗಿ ಶನಿವಾರ ಸಂಜೆ 7 ಹೆಸರು ಬೆಳ್ಳುಳ್ಳಿಗಳನ್ನು ಕಡ್ಡಿಗೆ ಸಿಕ್ಕಿಸಿ ಮನೆಯ ಅಂಗಳ ಅಥವಾ ತಾರಸಿಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆ ಆಗುತ್ತದೆ, ಹಾಗೆ ಹಣದ ಸಮಸ್ಯೆಯು ನಿವಾರಣೆಯಾಗುತ್ತದೆ. ವ್ಯಾಪಾರದಲ್ಲಿ ಹಾಗೂ ಹಣಕಾಸಿನ ತೊಂದರೆಗೆ ಬೆಳ್ಳುಳ್ಳಿಯ ಉಪಾಯ ಬಹಳ ವಿಶೇಷ. ಶನಿವಾರದ ದಿನ ನಿಮ್ಮ ಅಂಗಡಿ ಅಥವಾ ವ್ಯಾಪಾರದ ಸ್ಥಳದ ಅಂಗಳದಲ್ಲಿ ಅಥವಾ ಮುಖ್ಯದ್ವಾರದಲ್ಲಿ 5 ಬೆಳ್ಳುಳ್ಳಿ ಎಸಳುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಡಬೇಕು. ಈ ರೀತಿ ಮಾಡುವುದರಿಂದ ವ್ಯಾಪಾರದಲ್ಲಿ ಯಾವುದೇ ನಷ್ಟ ಬರುವುದಿಲ್ಲ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಕೂಡ ಕಾಣಬಹುದು.

ಮಕ್ಕಳು ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರ ದೇಹದಿಂದ ಐದು ಬೆಳ್ಳುಳ್ಳಿ ಎಸಳುಗಳನ್ನು ದೃಷ್ಟಿ ತೆಗೆದು ಅದನ್ನು ಕೆಲವು ಕೆಂಪು ಮೆಣಸಿನಕಾಯಿಗಳ ಜೊತೆಗೆ ಸುಟ್ಟು ಹಾಕಬೇಕು, ಹೀಗೆ ಮಾಡುವುದರಿಂದ ಮಕ್ಕಳ ಮೇಲಿನ ದೃಷ್ಟಿ ದೋಷ ದೂರವಾಗಿ ಅವರು ಬೇಗನೆ ಚೇತರಿಸಿಕೊಳ್ಳುತ್ತಾರೆ. ಬೆಳ್ಳುಳ್ಳಿ ಹಾಗೂ ಕೆಂಪು ದಾರದಿಂದ ಈ ಉಪಾಯ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುವುದು ಖಚಿತ ಇದಕ್ಕೆ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು. ಸ್ವಚ್ಛ ಮಾಡಿದ ನಂತರ ಸ್ನಾನ ಮಾಡಿ ಶುಭ್ರವಾಗಬೇಕು. ಮಾಡಿದ ನಂತರ ಒಂದು ಗಂಟೆಯ ಒಳಗೆ ಈ ಪರಿಹಾರವನ್ನು ಮಾಡಬೇಕು ಇನ್ನು ಈ ಪರಿಹಾರ ಮಾಡಲು ಸೂಕ್ತ ದಿನವೆಂದರೆ ಅದು ಶುಕ್ರವಾರ.

ಮೊದಲಿಗೆ ಒಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದನ್ನು ಕೆಂಪು ದಾರದಿಂದ ಕಟ್ಟಬೇಕು ನಂತರ ಅದನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಬೇಕು, ನಂತರ ದೇವರ ಮುಂದೆ ನಮ್ಮ ಆರ್ಥಿಕ ಸಮಸ್ಯೆ ದೂರವಾಗಿ ಧನ ವೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ಇನ್ನು ಕೆಂಪುದಾರದ ಬೆಳ್ಳುಳ್ಳಿಯನ್ನು ಹಣ ಇಡುವ ಜಾಗದಲ್ಲಿ ಇಡಬೇಕು ನಂತರ ತಿಂಗಳಿಗೊಮ್ಮೆ ಇದನ್ನು ಬದಲಾಯಿಸಬೇಕು ಈ ಕೆಂಪು ದಾರದ ಬೆಳ್ಳುಳ್ಳಿಯನ್ನು ಯಾರು ನಡೆದಾಡದ ಜಾಗದಲ್ಲಿ ಎಸೆದು ಬರಬೇಕು. ಹೀಗೆ ಮಾಡುವುದರಿಂದ ಎಲ್ಲಾ ಕಷ್ಟಗಳು ದೂರವಾಗಿ ಹಣಕಾಸಿನ ಆಕರ್ಷಣೆಯಾಗುತ್ತದೆ.

ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗಯಾಗಿದೆ ಎನ್ನುವ ಅನುಮಾನ ನಿಮಗಿದ್ದರೆ ಮೊದಲು ಒಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದರ ಸಿಪ್ಪೆ ಬಿಡಿಸಿ ಅದನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗಬೇಕು ಇನ್ನು ಬೆಳಗ್ಗಿನ ಸಮಯದಲ್ಲಿ ಆ ಬೆಳ್ಳುಳ್ಳಿ ಕಪ್ಪು ಬಣ್ಣಕ್ಕೆ ತಿನ್ನುತ್ತಿರುವಿದ್ದರೆ ಅಥವಾ ಒಣಗಿದ್ದರೆ ಅಥವಾ ಅದರಿಂದ ಕೆಟ್ಟ ವಾಸನೆ ಬರುತ್ತಿದ್ದರೆ ನಿಮ್ಮ ಮೇಲೆ ಮಾಟ ಮಂತ್ರ ಆಯೋಗವಾಗಿದೆ ಎಂದರ್ಥ. ಇನ್ನು ಇವತ್ತಿನ ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟನ್ನು ಲೈಕ್ ಮಾಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ