ಅಕ್ಕಿ ಮತ್ತು ಅರಿಶಿಣದಿಂದ ಈ ಪರಿಹಾರವನ್ನು ಮಾಡಿಕೊಂಡಿದ್ದೆ ಆದಲ್ಲಿ, ನಿಮಗೆ ಗಜಕೇಸರಿ ಯೋಗ ಒಲಿದು ಬರುತ್ತದೆ. ಹೌದು ಮಗು ಹುಟ್ಟಿದ ನಂತರ ಆ ಮಗುವಿಗೆ ಗಜಕೇಸರಿ ಯೋಗ ಮತ್ತು ಶುಕ್ರದೆಸೆ ಈ ರೀತಿಯ ಎಲ್ಲ ಯೋಗಗಳನ್ನು ಜಾತಕವನ್ನು ಬರೆಸಿ ನೋಡುತ್ತಾರೆ.ಪಂಡಿತರ ಬಳಿ ಸಮಯ ಮತ್ತು ದಿನಾಂಕ ಹೇಳಿದಾಗ ಅವರು ಜನ್ಮಕುಂಡಲಿಯನ್ನು ಬರೆದು ಕೊಡುತ್ತಾರೆ ಯಾವಾಗ ಗುರು ಮತ್ತು ಚಂದ್ರ ಒಂದೇ ಮನೆಯಲ್ಲಿ ಇರುತ್ತಾರೆ, ಅದನ್ನು ಗಜಕೇಸರಿ ಯೋಗ ಅಂತ ಹೇಳ್ತಾರೆ.ಹೌದು ಯಾರ ಕುಂಡಲಿಯಲ್ಲಿ ಚಂದ್ರ ಮತ್ತು ಗುರು ಒಂದೇ ಮನೆಯಲ್ಲಿ ಇರುತ್ತಾರೆ ಅವರಿಗೆ ಗಜಕೇಸರಿ ಯೋಗ ಇದೆ ಅಂತಾ ಹೇಳಲಾಗುತ್ತದೆ.ಗಜ ಅಂದರೆ ಆನೆ ಐರಾವತ ಮತ್ತು ಕೇಸರಿ ಎಂದರೆ ಸಿಂಹ ರಾಜ ಗಾಂಭೀರ್ಯವನ್ನು ಹೊಂದಿರುವ ಕೇಸರಿ ಮತ್ತು ಐರಾವತ ಅಂದರೆ ಅದ್ಭುತವಾದ ಐಶ್ವರ್ಯಕ್ಕೆ ಸಂಕೇತವಾಗಿರುವ ಗಜ.
ಈ ಗಜಕೇಸರಿ ಯೋಗ ಹೊಂದಿರುವವರು ಕೂಡ ರಾಜನಂತೆ ಬಾಳುತ್ತಾನೆ ಅಂತಾ ಹೇಳಲಾಗುತ್ತದೆ. ಆದ ಕಾರಣ ಯಾರ ಜಾತಕದಲ್ಲಿ ಈ ಗಜಕೇಸರಿ ಯೋಗ ಇರುತ್ತದೆ ಅಂಥವರು ಅದೃಷ್ಟವಂತರು ಅಂತ ಕೂಡ ಹೇಳ್ತಾರೆ.ಗಜಕೇಸರಿ ಯೋಗ ಇರುವ ವ್ಯಕ್ತಿಗೆ ಫಲಗಳೇನು ಅಂದರೆ ಅವನು ಜೀವನದಲ್ಲಿ ರಾಜನ ಹಾಗೆ ಇರುತ್ತಾನೆ. ರಾಜ ಗಾಂಭೀರ್ಯ ಹೇಗಿರುತ್ತದೆ ಹಾಗೆ ಈ ಸಮಾಜದಲ್ಲಿ ಬದುಕುತ್ತಾನೆ ಆ ವ್ಯಕ್ತಿ.ಈ ಗಜಕೇಸರಿಯೋಗವನ್ನು ಪಡೆದುಕೊಳ್ಳಬೇಕು ಅಂದರೆ ಏನು ಮಾಡ ಬೇಕು ಅಂದರೆ ಅದಕ್ಕಾಗಿ ಈ ಪರಿಹಾರವನ್ನು ಮಾಡಿ. ಬೇಕಾಗಿರುವ ಪದಾರ್ಥಗಳು ಅರಿಶಿಣ ಮತ್ತು ಕೆಂಪು ಬಟ್ಟೆ ಹಾಗೆ ಅಕ್ಕಿ ಇದೀಗ ಮೊದಲು ಅರಿಶಿಣ ಮತ್ತು ಅಕ್ಕಿಯನ್ನು ಮಿಶ್ರ ಮಾಡಿಕೊಳ್ಳಬೇಕು
ನಂತರ ಒಂದು ಹಿಡಿ ಅಕ್ಕಿಯನ್ನು ಸ್ವಚ್ಛವಾದ ಕೆಂಪು ಬಟ್ಟೆಯ ಮೇಲೆ ಹಾಕಿ ಅದನ್ನ ಕಟ್ಟಬೇಕು. ನಂತರ ಈ ಗಂಟನ್ನು ದೇವರಪಟದ ಹಿಂದೆ ಇಡಬೇಕು ಹೌದು ನಿಮ್ಮ ಮನೆಯ ದೇವರ ಫೋಟೋ ಹಿಂದೆ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ಇಷ್ಟಾರ್ಥ ದೇವರ ಫೋಟೊ ಇದ್ದರೆ ಆ ಫೋಟೋದ ಹಿಂದೆ ಈ ಗಂಟನ್ನು ಇರಿಸಬೇಕು. ಈ ಪರಿಹಾರವನ್ನು ಗುರುವಾರ ಅಥವಾ ಶುಕ್ರವಾರದ ದಿವಸದಂದು ಮಾಡಿದರೆ ತುಂಬಾ ಒಳ್ಳೆಯದು.ಈ ರೀತಿ ದೇವರ ಫೋಟೋದ ಹಿಂದೆ ಇಟ್ಟ ಗಂಟು ಒಂದು ವಾರದವರೆಗೂ ಅಲ್ಲಿಯೆ ಇರಿಸಬೇಕು. ನಂತರ ಆ ಕೆಂಪು ಬಟ್ಟೆಯಲ್ಲಿ ಇರುವ ಅರಿಶಿಣದ ಅಕ್ಕಿಯನ್ನು ಯಾವುದಾದರೂ ಗಿಡಗಳಿಗೆ ಹಾಕಬೇಕು.
ನಂತರ ಆ ಕೆಂಪು ಬಟ್ಟೆಯನ್ನು ನೀವು ಮನೆಯಲ್ಲಿ ಹಣಕಾಸು ಇಡುವ ಜಾಗದಲ್ಲಿ ಇಡಬೇಕು. ಈ ರೀತಿಯ ಪರಿಹಾರವನ್ನು ಮಾಡಿಕೊಳ್ಳುವುದರಿಂದ ರಾಶಿ ಫಲಗಳಿಂದ ಗಜಕೇಸರಿ ಯೋಗವನ್ನು ಅನುಭವಿಸಬಹುದು.ಈ ಪರಿಹಾರವನ್ನು ಹೀಗೂ ಮಾಡಬಹುದು ಕೆಂಪು ಬಟ್ಟೆಯಲ್ಲಿ ಅರಿಶಿಣ ಮತ್ತು ಅಕ್ಕಿಯನ್ನು ಮಿಶ್ರಮಾಡಿ ಆ ಗಂಟನ್ನು ದೇವರ ಮುಂದೆ ಇಟ್ಟು ಒಂದು ದಿನ ಪೂರ್ತಿ ದೇವರ ಮನೆಯಲ್ಲಿಯೆ ಇರಿಸಿ ಪೂಜೆಯನ್ನು ಮಾಡಿ. ನಂತರ ಆ ಅಕ್ಕಿಯನ್ನು ಮಾರನೆ ದಿವಸ ಗಿಡಗಳಿಗೆ ಹಾಕಿ ಆ ಕೆಂಪು ಬಟ್ಟೆಯನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಇರಿಸಿ.
ಈ ಎರಡೂ ಪರಿಹಾರಗಳಲ್ಲಿ ಯಾವುದನ್ನಾದರೂ ಮಾಡಬಹುದು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪರಿಹಾರಗಳನ್ನು ಮಾಡಿಕೊಳ್ಳಬಹುದು ಇನ್ನೂ ಮನೆಯಲ್ಲಿ ಕೆಟ್ಟ ಶಕ್ತಿ ಪ್ರಭಾವ ಇದೆ ಅನ್ನುವವರು ಅಥವ ಯಾರಿಗಾದರೂ ಮನೆಯಲ್ಲಿ ದೃಷ್ಟಿ ತಗುಲಿದ್ದರೆ ಅಂತಹವರು ನಾಲ್ಕೈದು ಲವಂಗ ಮತ್ತು ನಾಲ್ಕೈದು ಕರ್ಪೂರದ ಬಿಲ್ಲೆಯನ್ನು ತೆಗೆದುಕೊಂಡು.ಆ ಕರ್ಪೂರ ಉರಿಯುವಾಗ ಅದಕ್ಕೆ ಲವಂಗವನ್ನು ಹಾಕಿ, ಆ ಕರ್ಪೂರದ ಹೊಗೆಯನ್ನು ಮನೆಗೆಲ್ಲ ಪಸರಿಸುವ ಹಾಗೆ ಮಾಡಬೇಕು. ಈ ರೀತಿ ಸಂಜೆ ಸಮಯದಲ್ಲಿ ಮಾಡಬೇಕು ಮನೆ ಬಾಗಿಲನ್ನು ಮುಚ್ಚಿರಬೇಕು ಈ ಪರಿಹಾರದಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಕೆಟ್ಟ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ.