Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಅವತ್ತು ಶ್ರೀಮಂತರ ಮನೆಯಲ್ಲಿ ಗಾರ್ಡನ್ ಕೆಲಸ ಮಾಡುತ್ತಿರುವಂತಹ ಮನುಷ್ಯ ಇವತ್ತು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು ಹೇಗೆ? ಈ ರೋಚಕ ದ ಸುದ್ದಿಯನ್ನು ಪ್ರತಿಯೊಬ್ಬ ನಾಗರಿಕನೂ ಓದುವಂತಹ ವಿಚಾರವಾಗಿದೆ !!!

ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಅನ್ನೋದು ಇರಲೇ ಬೇಕು ಗುರಿ ಇಲ್ಲದ ಮನುಷ್ಯ ಮನುಷ್ಯನೇ ಅಲ್ಲ ಎಂದು ಹಿರಿಯರು ಕೂಡ ಹೇಳುತ್ತಾರೆ, ಕನಸು ಕಾಣುವುದು ತಪ್ಪಲ್ಲ ಆದರೆ ನೀವು ಕಂಡಂತಹ ಕನಸನ್ನು ನೆರವೇರಿಸಿ ಕೊಳ್ಳಬೇಕಾದರೆ ನೀವು ಅದಕ್ಕೆ ಹಗಲು ರಾತ್ರಿ ದುಡಿಯಬೇಕಾಗುತ್ತದೆ. ಇಲ್ಲವಾದರೆ ನೀವು ಕಂಡಂತಹ ಕನಸುಗಳು ನೆರವೇರುವುದಿಲ್ಲ,

ಶೇಕಡ ನೂರರಷ್ಟು ಜನರಲ್ಲಿ ಕೆಲವೇ ಜನರು ತಾವು ಕಂಡಂತಹ ಕನಸು ಗೋಸ್ಕರ ತಪಸ್ಸು ಮಾಡುತ್ತಾರೆ ಹಾಗೂ ಅದಕ್ಕೋಸ್ಕರ ತನು ಮನ ಧನವನ್ನು ಮುಡುಪಾಗಿ ಇಡುತ್ತಾರೆ. ಹೀಗೆ ದೊಡ್ಡ ಶ್ರೀಮಂತರ ಮನೆಯಲ್ಲಿ ಕೇವಲ ಗಾರ್ಡನ್ ಕೆಲಸ ಮಾಡುತ್ತಿರುವಂತಹ ಈ ಮನುಷ್ಯ ಹೇಗೆ ನಾಲ್ಕು ವರ್ಷ ಆದ ನಂತರ ದೊಡ್ಡ ಉದ್ಯಮಿಯಾಗಿ ಬೆಳೆದುಬಿಟ್ಟ, ಅವರು ಮಾಡಿದಂತಹ ಕೆಲಸ ವಾದರೂ ಏನು ಹೇಗೆ ಅವರು ಸ್ವಲ್ಪ ಸಮಯದಲ್ಲಿ ಎಲ್ಲರನ್ನೂ ಮೆಚ್ಚಿಸುವ ಅಂತಹ ಉದ್ದಿಮೆಯಾಗಿ ಬೆಳೆದರು ಎನ್ನುವ ಸಂಪೂರ್ಣವಾದ ವಿಚಾರವನ್ನು ನಾನು ಈ ಲೇಖನದಲ್ಲಿ ನಿಮಗೆ ಹೇಳ್ತೀನಿ ಕೇಳಿ.

ಹೀಗೆ ನಾಲ್ಕು ವರ್ಷಗಳ ಬಳಿಕ ಉದ್ಯಮಿಯಾಗಿ ಬೆಳೆದಂತಹ ಈ ವ್ಯಕ್ತಿಯ ಹೆಸರಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಈ ವ್ಯಕ್ತಿಯ ಹೆಸರು ರಂಬೋ. ಹೀಗೆ ಒಬ್ಬರ ಕೈ ಕೆಳಗೆ ಹುಲ್ಲಿನ ಗಾರ್ಡನ್ ಅನ್ನು ಕೆಲಸ ಮಾಡುತ್ತಿರುವಂತಹ ಈ ವ್ಯಕ್ತಿಗೆ ಅವನ ಯಜಮಾನ ಒಂದು ಸಲಹೆಯನ್ನು ಕೊಡುತ್ತಾನೆ, ಅಸಲಿಗೆ ನೀನು ಗಾರ್ಡನ್ ಕೆಲಸ ಮಾಡುವ ಬದಲು ಯಾಕೆ ಎಲ್ಲರ ಗಾರ್ಡನ ಗಳನ್ನು ಗುತ್ತಿಗೆ ತೆಗೆದುಕೊಂಡು ಕೆಲಸ ಮಾಡಬಾರದು ಎಂದು.

ಇದಾದ ನಂತರ ರಂಬೋ ಎನ್ನುವ ಮನುಷ್ಯ ದುಡ್ಡು ದುಡ್ಡು ಶ್ರೀಮಂತರ ಮನೆಗೆ ಹೋಗಿ ಅವರ ಗಾರ್ಡನ್ ದತ್ತು ತೆಗೆದುಕೊಂಡು ಕೆಲಸ ಮಾಡಲು ಶುರು ಮಾಡುತ್ತಾನೆ. ಶ್ರಮದ ಜೊತೆಗೆ ಅದೃಷ್ಟವಿದ್ದರೆ ಹೇಗೆ ಅದೃಷ್ಟ ಖುಲಾಯಿಸುತ್ತದೆ ಎಂದರೆ ಈ ಮನುಷ್ಯನನ್ನು ನೋಡಿದರೆ ಅರ್ಥವಾಗುತ್ತದೆ. ಇವನು ಕೇಳಿದ ಕಡೆಯಲ್ಲೆಲ್ಲ ಯಾರು ಇಲ್ಲ ಎನ್ನದೇ ಅವರವರ ಗಾರ್ಡನ್ ಅನ್ನು ಇವನಿಗೆ ಕೊಡುತ್ತಾರೆ.

ಹೀಗೆ ತನ್ನ ಶ್ರಮದ ಮುಖಾಂತರ ಹಲವಾರು ದೊಡ್ಡ ದೊಡ್ಡ ಶ್ರೀಮಂತರ ಗಾರ್ಡನ್ ಗಳನ್ನು ತಾವು ಆಡಳಿತಕ್ಕೆ ತೆಗೆದುಕೊಂಡು ಹಲವಾರು ಜನರನ್ನು ತಮ್ಮ ಕೈಕೆಳಗೆ ಸೇರಿಸಿಕೊಂಡು ಈ ತರದ ಕೆಲಸಕ್ಕೆ ಕೈ ಹಾಕುತ್ತಾರೆ, ಮೊದಲು ಅವರು ನಾಲ್ಕು ಜನರ ಹುಡುಗರನ್ನು ಒಂದು ಟೀಮ್ ಮಾಡಿ ಕೆಲಸಕ್ಕೆ ಕೈ ಹಾಕುತ್ತಾರೆ ಹಾಗೆ ಕೆಲವು ವರ್ಷಗಳ ನಂತರ ಇವರದ್ದು 20ರಿಂದ 30 ಜನರ ಒಂದು ಗುಂಪು ಆಗುತ್ತದೆ.

ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದಂತಹ ಈ ಮನುಷ್ಯ ಕೊನೆಗೆ ಒಬ್ಬ ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾರೆ. ಇವಾಗ ಅವರು ಕೆಲಸಕ್ಕೆ ಹೋಗಬೇಕಾದರೆ ಕಾರ್ ನಲ್ಲಿ ಹೋಗ್ತಾರೆ ಹಾಗೂ ಕಾರ್ ನಲ್ಲಿ ಬರ್ತಾರೆ. ಗೊತ್ತಾಯ್ತಲ್ಲ ಸ್ನೇಹಿತರೆ ಒಬ್ಬ ಸಾಮಾನ್ಯ ಪ್ರಜೆ ಅದರಲ್ಲೂ ಓದು-ಬರಹ ಗೊತ್ತಿರುವಂತಹ ಮನುಷ್ಯ ಆದರೂ ಅಲ್ಲ, ಆದರೂ ಕೂಡ ಅತಿ ದೊಡ್ಡ ಉದ್ಯಮಿಯಾಗಿ ಬೆಳೆಯಲು ಯಾವುದೇ ಎಜುಕೇಶನ್ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ನಿಮಗೆ ಚಲ ಅನ್ನೋದು ಇದ್ದರೆ ಸಾಕು ನೀವು ಅಂದುಕೊಂಡಿದ್ದೆಲ್ಲ ಸಾಧಿಸಬಹುದಾಗಿದೆ .ಆದರೆ ದೃಢವಾದ ನಿರ್ಧಾರ ಬೇಕು ಹಾಗೂ ಕಷ್ಟಪಟ್ಟು ಕೆಲಸ ಮಾಡಬೇಕು.

ಇವರನ್ನ ನೋಡ್ತಾ ಇದ್ದಾರೆ ನಿಜವಾಗಲೂ ನಮಗೆ ಅವರಿಂದ ಸ್ಪೂರ್ತಿ ಆಗುತ್ತದೆ, ಹಲವಾರು ಯುವಕರು ಕಂಪನಿಯಿಂದ ಅವರವರ ಮೆನೇಜರ್ ಗಳಿಂದ ನಿಂದನೆಗೆ ಒಳಗಾದರೆ ತುಂಬಾ ಜನ ಅವರ ಲೈಫ್ ಅನ್ನು ಮತ್ತೆ ಕಟ್ಟಿಕೊಳ್ಳಲು ಆಗದೆ ಹಲವಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಅವರಿಗೆ ನಾನು ಹೇಳುವುದು ಒಂದೇ ಒಂದು ಓದು-ಬರಹ ಗೊತ್ತಿಲ್ಲ ಅಂತಹ ಒಬ್ಬ ಮನುಷ್ಯ ಉದ್ಯಮಿಯಾಗಿ ಬೆಳೆಯುತ್ತಾನೆ ಎಂದರೆ ನಿಮಗೆ ಗೊತ್ತಿರುವಂತಹ ವಿದ್ಯೆಯನ್ನು ಬಳಸಿಕೊಂಡು ನೀವು ಯಾಕೆ ದೊಡ್ಡ ಉದ್ಯಮಿಯಾಗಿ ಬೆಳೆಯಬಾರದು.

ಯಾರ ಲೈಫು ಯಾರ ಕೈಯಲ್ಲೂ ಇಲ್ಲ ಬಡವರಾಗಿ ಹುಟ್ಟಬಹುದು ಆದರೆ ಬಡವರಾಗಿ ಸಾಯುವುದು ತುಂಬಾ ಕೆಟ್ಟದ್ದು. ಈ ಲೇಖನ ನಿಮಗೆ ನಿಮ್ಮ ಲೈಫ್ ನಲ್ಲಿ ಒಂದು ಒಳ್ಳೆಯ ಸ್ಪೂರ್ತಿಯನ್ನು ನೀಡುತ್ತದೆ ಎಂದು ಅಂದುಕೊಳ್ಳುತ್ತೇನೆ.

ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಸಾಧ್ಯವಾದಷ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗು ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *