ದೇವರಿಗೆ ಹೂಗಳನ್ನು ಇಡುವಾಗ ಇಂಥ ತಪ್ಪುಗಳನ್ನು ಮಾಡಬೇಡಿ. ದೇವರಿಗೆ ಪೂಜೆ ಮಾಡಿದ ನಂತರ ಹೂಗಳನ್ನು ಹೇಗೆ ಏರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.ಹಾಯ್ ಸ್ನೇಹಿತರೆ ಎಲ್ಲರ ಮನೆಯಲ್ಲೂ ಸಮಸ್ಯೆಗಳು ಹಾಗೂ ನೋವುಗಳು ಇದ್ದೇ ಇರುತ್ತವೆ. ಎಲ್ಲವನ್ನು ಅಂದರೆ ಕಷ್ಟಸುಖಗಳನ್ನು ಸಮನಾಗಿ ದೇವರು ನಮಗೆ ನೀಡುತ್ತಾನೆ. ಆದರೆ ನಾವು ದೇವರಲ್ಲಿ ಏನೇ ಕಷ್ಟ ಬಂದರೂ ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕು. ಈಗಿನ ದಿನಗಳನ್ನು ನೋಡಿದರೆ ಆರೋಗ್ಯವು ಇದ್ದರೆ ಸಾಕು ಎನ್ನುವಂತಾಗಿದೆ.
ಇಂತಹ ಎಲ್ಲಾ ಸಮಸ್ಯೆಗಳಿಗೂ ನಾವು ದೇವರ ಪೂಜೆಯನ್ನು ಮಾಡುತ್ತೇವೆ ದೇವರ ಪೂಜೆ ಮಾಡುವಾಗ ನಾವು ಭಕ್ತಿಯಿಂದ ಪೂಜಿಸಬೇಕು. ದೇವರಲ್ಲಿ ನಂಬಿಕೆ ಇರಬೇಕು. ಪೂಜೆ ಮಾಡುವ ಮೊದಲು ದೇವರ ಮನೆಯಲ್ಲಿ ಸ್ವಚ್ಛವಾಗಿರಿಸಬೇಕು ಮತ್ತು ದೇವರುಗಳನ್ನು ತೊಳೆದು ವಿಭೂತಿ ಕುಂಕುಮ ಅರಿಶಿನಗಳನ್ನು ಹಚ್ಚಿ ಹೂಗಳನ್ನು ಏರಿಸಬೇಕು.ದೇವರ ಪೂಜೆಯನ್ನು ಮಾಡುವಾಗ ಹೂವುಗಳು ಇರದಿದ್ದರೆ ಪೂಜೆಯು ಸರಿಯಾಗಿ ಆಗೋದಿಲ್ಲ ಎಂದು ಕೂಡ ಅನಿಸುತ್ತದೆ. ಹಾಗಾದರೆ ಯಾವ ದೇವರಿಗೆ ಯಾವ ಯಾವ ಹೂಗಳನ್ನು ಇಡಬೇಕು
ಮತ್ತು ಹೂಗಳನ್ನು ಇಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂದು ಈ ಒಂದು ಮಾಹಿತಿಯಲ್ಲಿ ನಿಮಗೆ ನಾನು ತಿಳಿಸುತ್ತೇನೆ. ದೇವನೊಬ್ಬ ನಾಮ ಹಲವು ಎಂಬ ಗಾದೆಯಿದೆ. ಎಲ್ಲಾ ದೇವರು ಒಂದಲ್ಲ ಒಂದು ವಿಶೇಷದಿಂದ ಕೂಡಿದ್ದಾರೆ. ನಾವು ಯಾವುದೇ ಪೂಜೆಯನ್ನು ಮಾಡುವ ಮೊದಲು ಗಣೇಶನಿಗೆ ಪೂಜೆ ಮಾಡುತ್ತೇವೆ ಏಕೆಂದರೆ ಗಣೇಶನು ವಿಘ್ನಗಳನ್ನು ನಿವಾರಿಸುವಂತಹ ವಿಜ್ಞೇಶ್ವರ. ಗಣೇಶನಿಗೆ ಬಿಳಿ ಎಕ್ಕದ ಹೂಗಳೆಂದರೆ ಪ್ರಿಯವಾದದ್ದು. ಹಾಗೆಯೇ ವಿಷ್ಣು ದೇವನಿಗೆ ತುಳಸಿ ಪ್ರಿಯವಾದದ್ದು. ಶಿವನಿಗೆ ಬಿಲ್ಪತ್ರೆ ಪ್ರಿಯವಾದದ್ದು ಹಾಗೆಯೇ ಲಕ್ಷ್ಮಿ ದೇವರಿಗೆ ತಾವರೆ ಹೂವುಗಳು ಇಷ್ಟ.
ಇಂತಹ ಯಾವುದೇ ತರಹದ ಹೂವುಗಳನ್ನು ದೇವರಿಗೆ ನೀವು ಏರಿಸುವಾಗ ಈ ತರಹದ ತಪ್ಪುಗಳನ್ನು ಮಾಡಬೇಡಿ. ಮೊದಲನೆಯ ತಪ್ಪು ಯಾವುದೆಂದರೆ ಸ್ನಾನ ಮಾಡದೆ ಅವುಗಳನ್ನು ಕೀಳುವುದು. ಹೌದು ಸ್ನೇಹಿತರೆ ಇಂತಹ ಹೂವುಗಳನ್ನು ನೀವು ದೇವರಿಗೆ ಏರಿಸುವುದರಿಂದ ನಿಮ್ಮ ಪೂಜೆಗೆ ಫಲ ಸಿಗೋದಿಲ್ಲ. ಹಾಗೆ ಕೆಲವೊಬ್ಬರು ಕೆಳಗೆ ಬಿದ್ದಿರುವ ಹೂವುಗಳನ್ನು ದೇವರಿಗೆ ಏರಿಸುತ್ತಾರೆ. ಇದು ಕೂಡ ಒಂದು ತಪ್ಪು. ಇನ್ನು ಕೆಲವರು ನೀರಲ್ಲಿ ಹೂಗಳನ್ನು ಕಿತ್ತು ದೇವರಮನೆಗೆ ಬಂದು ಬಿಡುತ್ತಾರೆ ಹೀಗೆ ಮಲಿನವಾದ ಬಟ್ಟೆಗಳಲ್ಲಿ ಹೂಗಳನ್ನು ತರುವುದು ಕೂಡ ತಪ್ಪು.
ಪೂಜೆ ಮಾಡುವ ಮುನ್ನ ಹೂಗಳಿಗೆ ನೀರನ್ನು ಸಿಂಪಡಿಸಬೇಕು. ನೀರು ಎಂದರೆ ಗಂಗಾದೇವಿಯ ಸ್ವರೂಪ. ಗಂಗಾ ದೇವಿಯು ಶುದ್ಧ ಮಾಡುವ ಗುಣವನ್ನು ಹೊಂದಿದ್ದಾಳೆ. ಅದಕ್ಕೆ ಪೂಜೆ ಮಾಡುವಾಗ ಹೂಗಳಿಗೆ ನೀರನ್ನು ಹಾಕಬೇಕು. ದೇವರಿಗೆ ಬಿಡಿ ಹೂಗಳನ್ನು ಏರಿಸುವುದಕ್ಕಿಂತ ಮಾಲೆಯನ್ನು ಮಾಡಿ ಕಟ್ಟಬೇಕು. ದೇವರಿಗೆ ಮಾಲೆಗಳು ಪ್ರಿಯವಾಗಿವೆ. ಯಾವುದೇ ದೇವರಿಗೆ ಒಂದು ಹೂಗಳನ್ನು ಇಟ್ಟು ಪೂಜೆ ಮಾಡುವುದರಿಂದ ಪೂಜೆಯಲ್ಲಿ ಫಲವು ಸಿಗುತ್ತದೆ. ಇನ್ನು ಬೇರೆಯವರ ಮನೆಯಲ್ಲಿ ಹೂಗಳು ಬಿಟ್ಟಿದ್ದರೆ ಅವುಗಳನ್ನು ನಿಮ್ಮ ಕೈಲಾದಷ್ಟು ಹಣವನ್ನು ನೀಡಿ ಹೂಗಳನ್ನು ತೆಗೆದುಕೊಳ್ಳಬೇಕು.
ಈ ಹೂಗಳು ತುಂಬಾ ಶ್ರೇಷ್ಠವಾದದ್ದು. ದೇವರಿಗೆ ಹೂಗಳನ್ನು ಮಧ್ಯದ ಬೆರಳು ಮತ್ತು ಹೆಬ್ಬೆರಳಿನಿಂದ ಏರಿಸಬೇಕು ಈ ರೀತಿಯಾಗಿ ದೇವರಿಗೆ ಹೂಗಳನ್ನು ಸಮರ್ಪಣೆ ಮಾಡುವುದರಿಂದ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಹೀಗೆ ಮಾಡುವುದರಿಂದ ನಿಮ್ಮ ಪೂಜೆಗೆ ಫಲವು ಸಿಗುತ್ತದೆ. ಇಂತಹ ಒಂದು ಉಪಯೋಗವಾದ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ.
ಈ ಮಾಹಿತಿ ನಿಮಗೆ ತುಂಬಾ ಉಪಯೋಗವಾಗುತ್ತದೆ ಎಂದು ತಿಳಿಯುತ್ತೇನೆ ಧನ್ಯವಾದಗಳು ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ