ನಮಸ್ಕಾರ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಮನೆಯ ಅಡುಗೆ ಮನೆಯಲ್ಲಿ ಇರುವಂತಹ ಸಿಂಕ್ ಅನ್ನು ಹೆಚ್ಚು ಸಮಯ ವ್ಯರ್ಥವಿಲ್ಲದೆ, ಹಣದ ವ್ಯರ್ಥವಿಲ್ಲದೆ ಹೇಗೆ ಸ್ವಚ್ಛ ಪಡಿಸಬಹುದು ಎಂಬುದನ್ನು.ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ಮನೆಯಲ್ಲಿ ಅಡುಗೆ ಮನೆಯೊಳಗೆ ಸಿಂಕ್ ಇರುತ್ತದೆ, ಈ ಸಿಂಕ್ ಒಳಗೆ ಪಾತ್ರೆಗಳನ್ನು ಸ್ವಚ್ಛ ಪಡಿಸುತ್ತಾರೆ, ಅಡುಗೆ ಮಾಡಿದ ಪಾತ್ರೆ ಊಟ ಮಾಡಿದ ಪಾತ್ರೆ ಇವೆಲ್ಲವನ್ನು ಸಿಂಕ್ ಒಳಗೆ ತೊಳೆಯುವ ಕಾರಣ ಸಿಂಕ್ ಒಳಗಿನಿಂದ ಆಗಾಗ ವಾಸನೆ ಬರುವ ಸಮಸ್ಯೆ ಕಾಡುತ್ತಿರುತ್ತದೆ.
ಈ ಸಿಂಕ್ ಆಗಾಗ ಕಟ್ಟಿಕೊಳ್ಳುತ್ತಾ ಇರುತ್ತದೆ ಅಂದರೆ ಬೇಡದೆ ಇರುವ ಪದಾರ್ಥಗಳು, ಈ ಸಿಂಕ್ ನ ಪೈಪ್ ಒಳಗೆ ಕಟ್ಟಿಕೊಂಡು ಈ ಪೈಪ್ ಒಳಗಿನಿಂದ ನೀರು ಸಹ ಹೋಗುವುದಕ್ಕೆ ಸಾಧ್ಯವಾಗುತ್ತಿರುವುದಿಲ್ಲ, ಹಾಗೆ ಆಗಿಬಿಟ್ಟಿರುತ್ತದೆ.ಇದಕ್ಕೆ ಏನು ಮಾಡಬೇಕೆಂದು ತಿಳಿಯದೆ ಕೆಲವರು ಪರದಾಡುತ್ತಿರುತ್ತಾರೆ, ಅಂತಹವರಿಗೆ ಈ ದಿನದ ಮಾಹಿತಿಯಲ್ಲಿ ಸುಲಭವಾದ ಕೆಲವೊಂದು ಟಿಪ್ಸ್ ಗಳನ್ನು ತಿಳಿಸುತ್ತೇನೆ. ಇದನ್ನು ನೀವು ಪಾಲಿಸುವುದರಿಂದ ಸಮಯ ವ್ಯರ್ಥ ವಿಲ್ಲದೆ ಹೆಚ್ಚು ಆಯಾಸವಿಲ್ಲದೆ ಸಿಂಕ್ ಅನ್ನು ಸೂಪರ್ ಆಗಿ ಸ್ವಚ್ಛ ಮಾಡಿ ಬಿಡಬಹುದು.
ಮೊದಲನೆಯ ಪರಿಹಾರ, ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆಹಣ್ಣಿನ ಜ್ಯೂಸ್ ಅನ್ನು ತೆಗೆದುಕೊಳ್ಳಿ ಅದಕ್ಕೆ ನೀರು ಮತ್ತು ಉಪ್ಪು ಜೊತೆಗೆ ವಿನೆಗರ್ ಅನ್ನು ಬೆರೆಸಿ ಇದನ್ನು ಸಿಂಕ್ ನ ಒಳಗೆ ಹಾಕಬೇಕು,ಇದರಿಂದ ಕಟ್ಟಿಕೊಂಡಿರುವ ಪದಾರ್ಥವು ಆಚೆ ಹೋಗಿ ಸಿಂಕ್ ಒಳಗಿನ ಪೈಪ್ ಕ್ಲಿಯರ್ ಆಗುತ್ತದೆ. ನಿಂಬೆ ಹಣ್ಣನ್ನು ಬಳಸಿರುವ ಕಾರಣ ಸಿಂಕ್ ನಿಂದ ದುರ್ಗಂಧ ಬರುತ್ತಿದ್ದರೆ ವಾಸನೆ ಬರುತ್ತಿದ್ದರೆ ಅದು ಕೂಡ ಪರಿಹಾರವಾಗುತ್ತದೆ.ಮನೆಯಲ್ಲಿಯೇ ಇರುವ ಗೃಹಿಣಿಯರು ಈ ಒಂದು ಪರಿಹಾರವನ್ನು ಮಾಡಬಹುದು, ಅದೇನೆಂದರೆ ಅರ್ಧ ಲೋಟ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಬಹುದು
ಅಥವಾ ನಿಂಬೆ ಹಣ್ಣನ್ನು ಕತ್ತರಿಸಿ ಹಾಕಬಹುದು ಇದಕ್ಕೆ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಬೆರೆಸಿ ಇದನ್ನು ಐಸ್ ಕ್ಯೂಬ್ ರೀತಿ ಮಾಡಿಟ್ಟುಕೊಳ್ಳಬೇಕು.ನಂತರ ರಾತ್ರಿ ಮಲಗುವ ಮುನ್ನ ಸಿಂಕ್ ಒಳಗೆ ಒಂದು ಐಸ್ ಕ್ಯೂಬ್ ಹಾಕಿ ಮಲಗುವುದರಿಂದ, ಇದು ಮಾರನೇ ದಿವಸ ಸಿಂಕ್ ಒಳಗಿನಿಂದ ಬರುತ್ತಿರುವಂತಹ ವಾಸನೆಯನ್ನು ನಿವಾರಿಸುತ್ತದೆ.ಮತ್ತೊಂದು ಸುಲಭ ಪರಿಹಾರವನ್ನು ನೀವು ಪಾಲಿಸಬಹುದು, ಸಿಂಕ್ ಒಳಗಿನಿಂದ ಬಹಳ ವಾಸನೆ ಬರುತ್ತಿದೆ ಅಂದರೆ, ನಶೆ ಗುಳಿಗೆಯನ್ನು ಅಥವಾ ನಿಂಬೆ ಹಣ್ಣನ್ನು ದಪ್ಪದಾಗಿ ಕತ್ತರಿಸಿ ಸಿಂಕ್ ಒಳಗೆ ಇರಿಸುವುದರಿಂದ ಸಿಂಕ್ ಒಳಗಿನಿಂದ ವಾಸನೆ ಬರುವುದಿಲ್ಲ.
ಒಂದು ಸ್ಪ್ರೇ ಬಾಟಲ್ ತೆಗೆದುಕೊಂಡು ಇದಕ್ಕೆ ಅರ್ಧದಷ್ಟು ನೀರನ್ನು ಹಾಕಿ, ಎರಡು ಚಮಚ ವಿನೆಗರ್ ಮತ್ತು ನಿಂಬೆಹಣ್ಣಿನ ರಸವನ್ನು ಇದರಲ್ಲಿ ಹಿಂಡಬೇಕು, ನಂತರ ಇದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ಆಗಾಗ ಸಿಂಕ್ ಒಳಗೆ ಸ್ಪ್ರೇ ಮಾಡುವುದರಿಂದ, ಸಿಂಕ್ ಒಳಗಿನಿಂದ ವಾಸನೆ ಬರುವುದಿಲ್ಲ.ಈ ಎಲ್ಲ ಪರಿಹಾರಗಳು ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಒಂದು ಪರಿಹಾರವನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡೊದನ್ನು ಮರೆಯದಿರಿ ಧನ್ಯವಾದ.