ಮಕ್ಕಳು ತುಂಬಾ ಮೊಬೈಲನ್ನು ಬಳಕೆ ಮಾಡುತ್ತಾ ಇದ್ದಾರೆ ಹಾಗೆ ಪೋಷಕರು ಎಷ್ಟೇ ಪ್ರಯತ್ನ ಮಾಡಿದರೂ ಸಹ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಬಿಡುತ್ತಾ ಇಲ್ಲವಾ ಹಾಗಾದರೆ ನಾವು ತಿಳಿಸುವ ಈ ಟೆಕ್ನಿಕ್ ಅನ್ನು ನೀವು ಪಾಲಿಸಿ ಇದರಿಂದ ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡುತ್ತಾರೆ ಹಾಗೆ ಮತ್ತೊಂದು ವಿಚಾರವನ್ನು ಯಾವುದೇ ಕಾರಣಕ್ಕೂ ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಟೆಕ್ನಿಕ್ ಬಳಸುವುದಕ್ಕೆ ಆಗುವುದಿಲ್ಲ ಯಾಕೆ ಅಂದರೆ ಅವರ ವಿವೇಚನೆಗೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ.
ಆದ್ದರಿಂದ ಇವತ್ತಿನ ದಿವಸಗಳಲ್ಲಿ ತುಂಬಾ ಚಿಕ್ಕ ವಯಸ್ಸಿನ ಮಕ್ಕಳು ಕೂಡ ಮೊಬೈಲ್ಗೆ ಆಗಿರುತ್ತಾರೆ ಆದರೆ ಈ ರೀತಿ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆದರೆ ಅವರಿಗೆ ಮುಂದಿನ ದಿವಸಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ಪೋಷಕರು ನೆನಪಿನಲ್ಲಿಡಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರನ್ನು ಸುಮ್ಮನಾಗಿಸುವ ಆ ಕ್ಷಣಕ್ಕೆ ಉತ್ತಮವಾಗಿರುತ್ತದೆ. ಆದರೆ ಈ ರೀತಿಯ ಹವ್ಯಾಸ ಮಕ್ಕಳ ಬೆಳವಣಿಗೆಯ ಮೇಲೆ ಮತ್ತು ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಇನ್ನು ಚಿಕ್ಕವಯಸ್ಸಿನಲ್ಲಿಯೇ ಮೊಬೈಲ್ಗೆ ಅಡಿಕ್ಟ್ ಆಗುವ ಮಕ್ಕಳಿಗೆ ತಮ್ಮ ಭಾವನೆಗಳ ಮೇಲೆ ಹಿಡಿತ ಇರುವುದಿಲ್ಲ.
ಚಿಕ್ಕವಯಸ್ಸಿನಿಂದಲೇ ಮೊಬೈಲ್ ನೀಡುವ ಪೋಷಕರು ತಿಳಿಯಬೇಕಾದ ವಿಚಾರ ಇದಾಗಿದೆ ಆದ್ದರಿಂದ ಮಕ್ಕಳ ಶೂನ್ಯ ವಯಸ್ಸಿನಿಂದ ಅಂದರೆ ಮಕ್ಕಳು ಹುಟ್ಟಿದಾಗಿನಿಂದ ಅವರ ಎರಡು ವರ್ಷದ ವಯಸ್ಸಿನ ವರೆಗೆ ಅವರಿಗೆ ಮೊಬೈಲ್ ಕೊಡುವುದನ್ನು ರೂಢಿ ಮಾಡಬಾರದು. ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಅಂದರೆ ಎರಡು ವರುಷದ ವಯಸ್ಸಿನವರೆಗೆ ಮಕ್ಕಳಿಗೆ ಮೊಬೈಲ್ ಕೊಡುವುದು ಆಗಲಿ ಟಿವಿ ತೋರಿಸುವುದು ಆಗಲಿ ಈ ರೀತಿ ಸ್ಕ್ರೀನಿಂಗ್ ನೋಡುವ ಅವಕಾಶಗಳನ್ನು ಕಡಿಮೆ ಮಾಡಿಕೊಡಿ
ಎರಡು ವರುಷದ ನಂತರ ಮಕ್ಕಳು ಬೆಳವಣಿಗೆ ಆಗುತ್ತಾ ಇರುತ್ತಾರೆ. ಆಗ ಪೋಷಕರಾದವರು ತಮ್ಮ ಮಕ್ಕಳಿಗೆ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕು. ಇದರಿಂದ ಮಕ್ಕಳಿಗೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಹಾಗೂ ಚಿಕ್ಕವಯಸ್ಸಿನಲ್ಲಿ ಮೊಬೈಲ್ ಅಥವಾ ಟಿವಿ ರೂಢಿಯನ್ನು ಮಾಡದೆ ಇದ್ದಾಗ ಮುಂದಿನ ದಿವಸಗಳಲ್ಲಿ ಅವರಿಗೆ ಅವರ ಭಾವನೆಗಳ ಮೇಲೆ ಹಿಡಿತ ಇರುತ್ತದೆ ಆಗ ಆರೋಗ್ಯವೂ ಕೂಡ ಉತ್ತಮವಾಗಿ ಇರುತ್ತದೆ ಮಕ್ಕಳ ಬೆಳವಣಿಗೆ ಕೂಡ ಉತ್ತಮವಾಗಿ ಆಗುತ್ತದೆ.
ಇವತ್ತಿನ ಕಾಲದವರು ಮಕ್ಕಳನ್ನು ಆಚೆಯೂ ಸಹ ಬಿಡುವುದಿಲ್ಲ ಮತ್ತು ಮನೆಯಲ್ಲಿ ಮಕ್ಕಳು ಹಠ ಮಾಡುತ್ತಾರೆ ಅಥವಾ ಪೋಷಕರ ಕೆಲಸಕ್ಕೆ ಅಡ್ಡಿ ಮಾಡುತ್ತಾರೆ ಅಂತ, ಮೊಬೈಲ್ ಕೊಟ್ಟು ಕೂರಿಸುತ್ತಾರೆ ಇದರ ಬದಲು ಮಕ್ಕಳನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡಿ ಕೊಡಿ ಆಗ ಮಕ್ಕಳು ಮೊಬೈಲ್ ಬಳಸುವುದನ್ನು ಇಷ್ಟ ಪಡುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಇದನ್ನು ನೆನಪಿನಲ್ಲಿ ಮಕ್ಕಳ ಎರಡು ವರ್ಷದ ವಯಸ್ಸಿನವರೆಗೆ ಅವರಿಗೆ ಮೊಬೈಲ್ ಕೊಡುವುದಾಗಲಿ ಟಿವಿ ತೋರಿಸುವುದು ಆಗಲಿ ಮಾಡಬೇಡಿ ಇಲ್ಲವಾದಲ್ಲಿ ಮಕ್ಕಳ ಸೃಜನಶೀಲತೆ ಅಂದರೆ ಕ್ರಿಯೇಟಿವಿಟಿ ಕೂಡ ಕಡಿಮೆಯಾಗುತ್ತದೆ.
ಮಕ್ಕಳನ್ನು ತಮ್ಮ ಆಟವಾಡುವ ವಯಸ್ಸಿನಲ್ಲಿ ಬೇರೆಯವರ ಜೊತೆ ಆಟವಾಡುವುದಕ್ಕೆ ಬಿಡಬೇಕು ಆಗಲೇ ಮಕ್ಕಳು ಬೇರೆಯವರ ಜೊತೆಯು ಕೂಡ ಹೊಂದಿಕೊಳ್ಳುವ ರೂಢಿಯನ್ನು ಅಥವಾ ಗುಣವನ್ನು ಕಲಿತೂಕೊಳ್ಳುತ್ತಾರೆ. ಮನೆಯಲ್ಲಿಯೇ ಇದ್ದರೆ ಮಕ್ಕಳು ಆಕ್ಟಿವ್ ಆಗಿ ಇರುವುದಿಲ್ಲ. ಆದ್ದರಿಂದ ಅವರ ವಯಸ್ಕರ ಜೊತೆ ಆಟವಾಡಲು ಬಿಡುವುದು ಒಳ್ಳೆಯದು ಮಕ್ಕಳನ್ನು ಮೊಬೈಲಿಂದ ದೂರ ಇರಿಸಬಹುದು.