ಸ್ನೇಹಿತರೆ ಮನೆಯಲ್ಲಿ ಸಾಮಾನ್ಯವಾಗಿ ಪ್ರತಿನಿತ್ಯ ಹಲವಾರು ಕೀಟಗಳು ಕಾಡಿಸುತ್ತವೆ ಆದರೆ ಅವುಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಎಲ್ಲರೂ ಮಲಗಿದ ನಂತರ ಆ ಕೀಟಗಳು ಬಂದು ಮನೆಯ ಸುತ್ತ ಓಡಾಡುವುದನ್ನು ಗಮನಿಸಬಹುದಾಗಿದೆ ಅದರಲ್ಲಿ ಜಿರಲೆ ಮತ್ತು ಇರುವೆಗಳು ಕೂಡಾ ಒಂದು.ಸಾಮಾನ್ಯವಾಗಿ ಈ ಜಿರಲೆ ಮತ್ತು ಇರುವೆಗಳು ನಮ್ಮ ಮನೆಯಲ್ಲಿ ಯಾವಾಗಲೂ ಇರುತ್ತದೆ ಆದರೆ ಅವು ಇದೆ ಎಂದು ನಮ್ಮ ಗಮನಕ್ಕೆ ಬರುವುದೇ ಕಡಿಮೆ. ಏಕೆಂದರೆ ನಾವುಗಳೆಲ್ಲ ರಾತ್ರಿ ಮಲಗಿದ ನಂತರ ಅಡುಗೆ ಮನೆ ಎಲ್ಲ ಅವುಗಳ ಸಾಮ್ರಾಜ್ಯ ವಾಗಿರುತ್ತವೆ.
ಆಹಾರದ ಪಾತ್ರೆ ಆಹಾರ ಗ್ಯಾಸ್ ಇಲ್ಲೆಲ್ಲಾ ಕೂಡ ಅವರು ರಾಜ್ಯಭಾರ ಮಾಡುವುದನ್ನು ಗಮನಿಸಬಹುದು.ಎಷ್ಟೊಂದು ಬಾರಿ ಜಿರಲೆ ಮತ್ತು ಇರುವೆಗಳನ್ನು ಓಡಿಸಲು ನಾವು ಎಷ್ಟೊಂದು ರಾಸಾಯನಿಕಗಳನ್ನು ನಾವು ತಂದಿರುತ್ತೇವೆ ಆದರೆ ಅವುಗಳು ನಮ್ಮ ದೇಹಕ್ಕೆ ಅನುಕೂಲ ಮಾಡುವುದಕ್ಕಿಂತ ಅನಾನುಕೂಲ ಮಾಡುವುದೇ ಹೆಚ್ಚಾಗಿರುತ್ತದೆ .ಅದಕ್ಕೆ ಈ ದಿನ ನಾನು ಮನೆಯಲ್ಲಿಯೇ ಸುಲಭವಾಗಿ ಒಂದು ಮನೆ ಮದ್ದನ್ನು ಮಾಡುವುದು ಹೇಗೆ ಎಂಬುದರ ಮಾಹಿತಿಯನ್ನು ನೀಡುತ್ತೇವೆ ಇದು ಮನೆಯಲ್ಲಿಯೇ ಇರುವ ಪದಾರ್ಥಗಳಿಂದ ನೀವು ತಯಾರಿಸಿಕೊಳ್ಳಬಹುದು
ಮತ್ತು ಅತ್ಯಂತ ಸುಲಭವಾಗಿ ಜಿರಳೆ ಮತ್ತು ಇರುವೆಯನ್ನು ಮನೆಯಿಂದ ಹೋಗಲಾಡಿಸಬಹುದು .ಸಾಮಾನ್ಯವಾಗಿ ಮನೆಯಲ್ಲಿ ಊದುಬತ್ತಿ ಮತ್ತು ಕರ್ಪೂರ ಯಾವಾಗಲೂ ಇರುತ್ತದೆ ಇವುಗಳನ್ನು ದೇವರನ್ನು ಒಲಿಸಿಕೊಳ್ಳಲು ಅವುಗಳಿಗೆ ಪೂಜೆ ಮಾಡಲು ಬಳಸುವಂತಹ ಸಾಮಗ್ರಿಗಳು ಈ ಸಾಮಗ್ರಿಗಳಿಂದ ಈ ದಿನದ ಮನೆ ಮದ್ದನ್ನು ತಯಾರಿಸೋಣ.ಮೊದಲು ಒಂದು ಗಾಜಿನ ಬೌಲ್ ಗೆ ಸ್ವಲ್ಪ ನೀರನ್ನು ತೆಗೆದುಕೊಳ್ಳಿ ಬಿಸಿನೀರಿನ ಅಗತ್ಯವಿಲ್ಲ ತಣ್ಣೀರು ತೆಗೆದುಕೊಂಡರೆ ಸಾಕು ಅದಾದ ನಂತರ ಕರ್ಪೂರವನ್ನು ಕೈಯಿಂದ ಪುಡಿ ಮಾಡಿ ರೆಡಿ ಮಾಡಿಟ್ಟುಕೊಳ್ಳಿ ಐದು ಬಿಲ್ಲೆ ಕರ್ಪೂರ ಆದರೆ ಸಾಕು
ಮತ್ತು ನಾಲ್ಕರಿಂದ ಐದು ಊದು ಬತ್ತಿಗಳನ್ನು ತೆಗೆದುಕೊಂಡು ಅವುಗಳನ್ನು ಕೂಡ ಪುಡಿ ಮಾಡಿ ಇಟ್ಟುಕೊಳ್ಳಿ ಈ ಎರಡೂ ಪುಡಿಗಳು ಆದ ನಂತರ ನಾನು ಮೊದಲೆ ಹೇಳಿದ ರೀತಿಯಲ್ಲಿ ಬೌಲಿನಲ್ಲಿ ನೀರು ತಯಾರಾಗಿದೆ.ಈ ಎರಡೂ ಪುಡಿಗಳನ್ನು ಆ ನೀರಿಗೆ ಕಲಸಿ ಅದಾದ ನಂತರ ಅವು ಎರಡೂ ಕೂಡ ಕರಗಲು ಸ್ವಲ್ಪ ಸಮಯ ಬಿಡಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಬಿಟ್ಟರೆ ಆ ಎರಡೂ ಪುಡಿಗಳು ಕೂಡ ನೀರಿನಲ್ಲಿ ಚೆನ್ನಾಗಿ ಕಲೆತು ಮಿಶ್ರಣವಾಗಿರುವುದನ್ನು ನಾವು ಗಮನಿಸಬಹುದಾಗಿದೆ.
ಅದಾದ ನಂತರ ಮನೆಯಲ್ಲಿ ಇರುವ ಹತ್ತಿ ಯನ್ನು ತೆಗೆದುಕೊಳ್ಳಿ ಅವುಗಳನ್ನು ಸಣ್ಣ ಸಣ್ಣ ಉಂಡೆಗಳಾಗಿಟ್ಟು ಕೊಳ್ಳಿ ಆ ಉಂಡೆಗಳನ್ನು ಮಾಡುವ ಕಾರಣ ಆ ನೀರಿನಲ್ಲಿ ಅದ್ದಿ ಅವುಗಳನ್ನು ನಿಮ್ಮ ಮನೆಯಲ್ಲಿ ಜಿರಳೆಗಳು ಎಲ್ಲಿ ಓಡಾಡುವ ಸಾಧ್ಯತೆಯಿದೆ ಅಲ್ಲಿ ಇಡಬೇಕು .ಮೊದಲು ಉಂಡೆಗಳನ್ನು ಮಾಡಿಕೊಳ್ಳಿ ಅದಾದ ನಂತರ ಅವುಗಳನ್ನು ನೀರಿಗೆ ಅದ್ದಿ ಇರುವೆಗಳು ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಇಡಿ ಈ ರೀತಿ ವಾರಕ್ಕೆ ಒಮ್ಮೆ ಅವುಗಳನ್ನು ಬದಲಾಯಿಸುತ್ತಾ ಬರಬೇಕು.ಒಂದು ತಿಂಗಳು ಈ ರೀತಿ ಮಾಡುವುದರಿಂದಾಗಿ ನಿಮ್ಮ ಮನೆಯಲ್ಲಿ ಸಂಪೂರ್ಣವಾಗಿ ಜಿರಲೆ ಮತ್ತು ಇರುವೆಗಳಿಂದ ಮುಕ್ತಿಯನ್ನು ಪಡೆಯಬಹುದು
ಇದೊಂದು ಸರಳವಾದಂತಹ ವಿಧಾನವಾಗಿದೆ.ಈ ವಿಧಾನ ಮಾಡುವುದರಿಂದ ಯಾವುದೇ ರೀತಿಯ ದಂತಹ ಅಡ್ಡ ಪರಿಣಾಮಗಳಾಗುವುದಿಲ್ಲ ನೀವು ಒಮ್ಮೆ ಈ ವಿಧಾನವನ್ನು ಬಳಸಿ ಮತ್ತು ನಿಮ್ಮ ಸ್ನೇಹಿತರಿಗೂ ಈ ವಿಧಾನವನ್ನು ಬಳಸಲು ಸೂಚನೆಯನ್ನು ನೀಡಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ