ಚಿನ್ನ ತುಂಬ ದುಬಾರಿ ವಸ್ತು, ಚಿನ್ನವನ್ನು ಕೊಡುಕೊಳ್ಳಬೇಕಾದರೆ ತುಂಬಾ ಹಣವನ್ನು ವೆಚ್ಚ ಮಾಡಬೇಕು, ಅಷ್ಟೊಂದು ವೆಚ್ಚಮಾಡಿ ಖರೀದಿಸಿದ ಚಿನ್ನ ಅಥವಾ ಬಂಗಾರವನ್ನ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟದ ವಿಷಯವೇ ಸರಿ ಆದರೆ ಇಂದು ನಾವು ನಿಮಗೆ ಮನೆಯಲ್ಲೇ ನಿಮ್ಮ ಆಭರಣಗಳು ಪಳ ಪಳ ಹೊಳೆಯುವಂತೆ ಸೂಚಿ ಮಾಡಲು ಉತ್ತಮ ಟಿಪ್ಸ್ ಅನ್ನು ನೀಡಲಿದ್ದೇವೆ ಮುಂದೆ ಓದಿ.
ಟೂತ್ಪೇಸ್ಟ್ : ಹೌದು ಟೂತ್ಪೇಸ್ಟ್ ಬಳಸಿ ಸ್ವಚ್ಛ ಮಾಡುವುದನ್ನ ನೀವು ಸಾಮಾಜಿಕ ಜಾಲತಾಣದ ವಿಡಿಯೋ ಗಳಲ್ಲಿ ನೋಡಿರಿತ್ತೀರಾ, ಕಾರಣ ಟೂತ್ಪೇಸ್ಟ್ ಬಹಳ ಪರಿಣಾಮ ಕಾರಿ ಹಾಗು ಸುಲಭ ವಿಧಾನ, ಲ್ಪ ಟೂತ್ಪೇಸ್ಟ್ನ್ನು ಆಭರಣಗಳ ಮೇಲೆ ಹಚ್ಚಿ, ಬ್ರಶ್ ಸಹಾಯದಿಂದ ನಿಧಾನವಾಗಿ ಉಜ್ಜಿ. ಆದಷ್ಟು ಮೈಲ್ಡ್ ಹಾಗೆ ಬಿಳಿ ಬಣ್ಣದ ಟೂತ್ಪೇಸ್ಟ್ ಬಳಸಿ. ನಂತರ ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಮುಳುಗಿಸಿಡಿ.
ಅಮೋನಿಯಾ : ಅಮೋನಿಯಾ ಪೌಡರ್ ಅನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಮುತ್ತು ಹವಳ ಇಲ್ಲ ಆಭರಣಗಳನ್ನ ಎರಡು ನಿಮಿಷ ಈ ಬೆಚ್ಚಗಿನ ಅಮೋನಿಯಾ ಮಿಶ್ರಿತ ನೀರಿನಲ್ಲಿ ಬಿಟ್ಟು ನಂತ್ರ ಅದನ್ನ ಬ್ರೆಷ್ ನಲ್ಲಿ ಚೆನ್ನಾಗಿ ಉಜ್ಜಿ ಸದಾ ನೀರಿನಲ್ಲಿ ಸ್ವಚ್ಛ ಮಾಡಿ.
ಉಪ್ಪು : ಇನ್ನು ಬೆಳ್ಳಿಯ ಆಭರಣ ಶುಚಿ ಮಾಡಲು ಉಪ್ಪು ಒಳ್ಳೆಯ ಸಾಧನ, ಬಿಸಿ ನೀರಿಗೆ ಉಪ್ಪು ಸೇರಿಸಿ ಅದರಲ್ಲಿ ಬೆಳ್ಳಿಯ ಆಭರಣಗಳನ್ನು ಮುಳುಗಿಸಿ. ನಂತರ ಬ್ರಶ್ ಮೂಲಕ ಸ್ವಚ್ಛಗೊಳಿಸಿ ಸಾದಾ ನೀರಿನಿಂದ ತೊಳೆಯಿರಿ.
ಡಿಶ್ವಾಶ್ ಪೌಡರ್ ಅಥವಾ ಲಿಕ್ವಿಡ್ : ಎಲ್ಲಾ ಮನೆಯಲ್ಲೂ ಡಿಶ್ವಾಶ್ ಪೌಡರ್ ಅಥವಾ ಲಿಕ್ವಿಡ್ ಸರ್ವೇ ಸಾಮಾನ್ಯ, ಇವು ನಿಮ್ಮ ಚಿನ್ನವನ್ನು ಕ್ಲೀನ್ ಮಾಡಲು ದಿ ಬೆಸ್ಟ್, ಬೆಚ್ಚಗಿನ ನೀರನ್ನ ಬಳಸಿ ಸ್ವಚ್ಛ ಮಾಡಿ, ಅದರಿಂದ ಅಂಟಿಕೊಂಡಿರುವ ಕೊಳೆಯುವು ಹೋಗಿ ಕಾಂತಿ ಮೂಡುತ್ತದೆ.
ಸಿಲ್ವರ್ ಪಾಲಿಶ್ : ಇದು ಮಾರುಕಟ್ಟೆಯಲ್ಲಿ ಸಿಲ್ವರ್ ಪಾಲಿಶ್ ಗಾಗಿಯೇ ಸಿಗುವ ವಸ್ತು, ಇದನ್ನು ಖರೀದಿಸಿ ಸಹ ನಿಮ್ಮ ಆಭರಣವನ್ನು ಸ್ವಚ್ಛವಾಗಿ ಇಡಬಹುದು, ಈ ಮಾಹಿತಿ ನಿಮಗೆ ಇಷ್ಟವಾದರೆ ಹಂಚಿಕೊಳ್ಳುವುದು ಮರೆಯದಿರಿ.