ಹೌದು ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು ಮತ್ತು ಮುಜುಗರ ಉಂಟುಮಾಡುತ್ತದೆ.
ನಿಮಗೆ ತಲೆಹೊಟ್ಟು ಕಾಣಿಸಿದರೆ ಕೆಮಿಕಲ್ ಇರುವ ಡ್ಯಾಂಡ್ರಫ್ ಫ್ರೀ ಶ್ಯಾಂಪೂ ಹಾಕುವ ಬದಲು ಈ ಟಿಪ್ಸ್ ಪಾಲಿಸಿದರೆ ತಲೆಹೊಟ್ಟು ಸಮಸ್ಯೆಯೂ ಇರುವುದಿಲ್ಲ ಮತ್ತು ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುವುದು.
ನಿಮ್ಮ ಕೂದಲಿನ ಬುಡ ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸುತ್ತದೆ, ಆದ್ದರಿಂದ ಕೂದಲಿಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಜ್ ಮಾಡಿ ಯಾಕೆಂದರೆ ಎಣ್ಣೆ ಹಾಕುವುದರಿಂದ ತಲೆಯ ಹೊಟ್ಟು ಸಮಸ್ಯೆ ಬಗೆಹರಿಯುವುದರ ಜೊತೆಗೆ ತಲೆ ಕೂದಲು ಸದೃಢವಾಗುತ್ತದೆ
ಮೆಂತೆಯನ್ನು ರುಬ್ಬಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ತಲೆಯಲ್ಲಿನ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಒಂದು ಕಪ್ ಬಿಸಿ ನೀರಿಗೆ ಸ್ವಲ್ಪ ಕಹಿಬೇವಿನ ಎಲೆ ಹಾಕಿ ಮಾರನೆಯ ದಿನ ಎಲೆಯನ್ನು ತೆಗೆದು ಬಿಸಾಡಿ, ಆ ನೀರಿನಿಂದ ತಲೆ ಬುಡಕ್ಕೆ ಮಸಾಜ್ ಮಾಡಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯುವುದರಿಂದ ತಲೆಹೊಟ್ಟು ಕಡಿಮೆಯಾಗುವುದರ ಜೊತೆಗೆ ತಲೆ ತುರಿಕೆ ಇದ್ದರೆ ಬೇಗನೆ ಕಡಿಮೆಯಾಗುವುದು.
ತಲೆಗೆ ಮೆಹಂದಿ ಹಾಕುವುದರಿಂದ ಸಹ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು, ಈ ರೀತಿಯಾಗಿ ಅನುಸರಿಸಿದರೆ ತಲೆಯಲ್ಲಿನ ಹೊಟ್ಟು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
ಜೊತೆಯಲ್ಲಿ ಇದನ್ನ ಒಮ್ಮೆ ಓದಿ ದ್ರಾಕ್ಷಿ ಹಣ್ಣು ತಿಂದರೆ ಇರುವ ಉಪಯೋಗಗಳು.
ದ್ರಾಕ್ಷಿ ೩-೪ ಬಗೆಯಲ್ಲಿರುತ್ತವೆ ಈ ಪತಿ ಕರಿಯ ಬಣ್ಣದ ದ್ರಾಕ್ಷಿ ದೇಹರೋಗ್ಯಕ್ಕೆ ಹಿತಕರವಾದುದು.
ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತವೃದ್ಧಿ ಮತ್ತು ನರದೌರ್ಬಲ್ಯ ಶಮಾನವಾಗುತ್ತದೆ.
ಬಿಳಿ ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ರಕ್ತ ವೃದ್ದಿಯಾಗುತ್ತದೆ ನರಗಳಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ.
ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಿಗಳಿಗೆ ಸಕ್ಕರೆ ಹಾಕದೆ ಕೊಟ್ಟರೆ ಗುಣವಾಗುತ್ತದೆ.
ಬೆಳ್ಳಿ ದ್ರಾಕ್ಷಿಯನ್ನು ಆಗಾಗ್ಗೆ ತಿನ್ನುತ್ತಿದ್ದರೆ ಹೊಟ್ಟೆ ಹುಣ್ಣು ಗುಣವಾಗುವುದು ಅಲ್ಲದೆ ಶರೀರದಲ್ಲಿ ರಕ್ತಶುದ್ದಿಗೊಳ್ಳುವುದು.
ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ದರಕ್ತ ವೃದ್ಧಿಯಾಗುವುದು.
ಕರಿಯ ಹುಳಿ ದ್ರಾಕ್ಷಿಹಣ್ಣು ತಿಂದರೆ ಹೊಟ್ಟೆಉಬ್ಬರ ಹುಳಿತೇಗು ಅಜೀರ್ಣ ಮತ್ತು ಮಲಬದ್ದತೆಯು ನಿವಾರಣೆಯಾಗುವುದು.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನ ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.