Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬೆಳಗಿನ ಜಾವದ 3 ರಿಂದ 5 ಗಂಟೆಯ ವೇಳೆ ದಿನಾಲೂ ನಿಮಗೆ ಎಚ್ಚರ ಆಗುತ್ತಾ ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂಥರು ಇನ್ಯಾರು ಇಲ್ಲ ಯಾಕೆ ಗೊತ್ತ …!!!

ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಬೆಳಗ್ಗಿನ ಜಾವ ಮೂರರಿಂದ ಐದು ಗಂಟೆಯವರೆಗೂ ಈ ಸಮಯವನ್ನು ತುಂಬಾ ವಿಶೇಷ ಎನ್ನಲಾಗುತ್ತದೆ. ಇನ್ನು ಈ ಸಮಯವನ್ನು ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಎಂದು ಪರಿಗಣಿಸಿದ್ದಾರೆ. ರಾತ್ರಿ ಕಳೆದ ನಂತರ ಹಾಗೂ ಬೆಳಕು ಹರಿಯುವ ಮುಂಚೆ ಇರುವ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನಲಾಗುತ್ತದೆ. ಇನ್ನು ಈ ಸಮಯ ತುಂಬಾ ಶ್ರೇಷ್ಠ ಹಾಗೂ ಶುಭ ಎಂದು ನಮ್ಮ ಹಿರಿಯರು ಪರಿಗಣಿಸಿದ್ದಾರೆ. ಕೆಲವರು ಗಾಡ ನಿದ್ರೆಯಲ್ಲಿದ್ದರು ಸಹ ಸಮಯಕ್ಕೆ ಸರಿಯಾಗಿ ನಿದ್ದೆಯಿಂದ ಎದ್ದೇಳುತ್ತಾರೆ. ಇನ್ನು ಇದಕ್ಕೆ ವಿಶೇಷ ಕಾರಣ ಇದೆ, ಇನ್ನು ಈ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ…

ಇನ್ನು ನಮ್ಮ ಋಷಿ ಮುನಿಗಳು ಋಷಿಮುನಿಗಳು ಬ್ರಾಹ್ಮಿ ಮುಹೂರ್ತಕ್ಕೆ ವಿಶೇಷವಾದ ಮಹತ್ವ ನೀಡಿದ್ದಾರೆ. ಇನ್ನು ನಮ್ಮ ಋಷಿಮುನಿಗಳ ಪ್ರಕಾರ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ನಮ್ಮ್ ಸೌಂದರ್ಯ, ಚುರುಕುತನ, ಆರೋಗ್ಯ, ಆಯಸ್ಸು ಎಲವೂ ಹೆಚ್ಚುತ್ತದೆ ಎಂದಿದ್ದಾರೆ. ಕೆಲವರು ಈ ಸಮಯಕ್ಕೆ ಗಾಢವಾದ ನಿದ್ರೆಯಲ್ಲಿದ್ದರೂ ಸಹ ಅಚಾನಕ್ಕಾಗಿ ಎದ್ದೇಳುತ್ತಾರೆ. ಇನ್ನು ಕೆಲವರು ಈ ಸಮಯಕ್ಕೆ ಎದ್ದು ಮತ್ತೆ ಮಲಗುತ್ತಾರೆ. ಇನ್ನು ಈ ರೀತಿಯಾಗಿ ಅಚಾನಕ್ಕಾಗಿ ನಿದ್ರೆಯಿಂದ ಎದ್ದೇಳುವುದು ಸಾಮಾನ್ಯ ವಿಷಯವಲ್ಲ. ನಾವು ಇವುಗಳನ್ನು ನಿರ್ಲಕ್ಷಿಸಬಾರದು. ಈ ಜಗತ್ತಿನಲ್ಲಿ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆ ಕೂಡ ಅರ್ಥ ಇರುತ್ತದೆ.

ಇನ್ನು ಈ ರೀತಿ ಮೂರರಿಂದ ಐದುಗಂಟೆಯ ನಡುವೆ ಎಚ್ಚರವಾಗೋಕೆ ಕಾರಣವಿದೆ. ಏಕೆಂದರೆ ಈ ಸಮಯದಲ್ಲಿ ಕೆಲವೊಂದು ಅಲೌಕಿಕ ಶಕ್ತಿಗಳು ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಅಲೌಕಿಕ ಶಕ್ತಿಗಳು ಕೆಲವೊಂದು ಮನುಷ್ಯರನ್ನ ಮಾತ್ರ ಇಂತಹ ಸಮಯದಲ್ಲಿ ಎಚ್ಚರಿಸುತ್ತದೆ. ಇನ್ನು 3 ರಿಂದ 5 ಗಂಟೆಯ ಸಮಯದಲ್ಲಿ ಎಚ್ಚರ ಆಗಲು ಕಾರಣ ಎಂದರೆ, ಮನೆಯಲ್ಲಿ ಧನ ಹಾಗೂ ಸಂಪತ್ತು ವೃದ್ಧಿಯಾಗಲಿದೆ ಎಂದರ್ಥ. ಇನ್ನು ಈ ಸಮಯದಲ್ಲಿ ಎಚ್ಚರವಾಗುವ ವ್ಯಕ್ತಿಗಳ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಎನ್ನುವ ಸಂಕೇತ ಇದು. ಇನ್ನು ಈ ಸಮಯದಲ್ಲಿ ಎಚ್ಚರವಾಗುವವರು ತುಂಬಾ ಧೈರ್ಯವಂತರು ಹಾಗೂ ಬುದ್ಧಿವಂತರು ಎನ್ನಲಾಗುತ್ತದೆ.

ಈ ಸಮಯದಲ್ಲಿ ಎಚ್ಚರ ಗೊಳ್ಳುವವರು ತುಂಬಾ ಕ್ರಿಯಾಶೀಲರು ಹಾಗೂ ಪ್ರಕೃತಿಯ ಸೌಂದರ್ಯವನ್ನು ಸವುಯುವವರಾಗಿರುತ್ತಾರೆ. ಇನ್ನು ಹಠಾತ್ ಆಗಿ ನೀವು ರಾತ್ರಿ 2 ಗಂಟೆಯ ಸಮಯದಲ್ಲಿ ಎಚ್ಚರವಾದರೆ ಇದಕ್ಕೆ ಕಾರಣ ಏನು ಎನ್ನುವುದನ್ನು ಕೆಲವು ಜನರು ಹುಡುಕುತ್ತಿರಬಹುದು. ಇನ್ನು 3 ಗಂಟೆಗೂ ಮುಂಚೆ ನಿಮ್ಮ ನಿದ್ದೆಗೆಟ್ಟು ಎಚ್ಚರವಾದರೆ ನಿಜಕ್ಕೂ ಅದು ತುಂಬಾ ಕೆಟ್ಟದ್ದು ಎಂದು ತುಂಬಾ ಜನರು ಭಾವಿಸುತ್ತಾರೆ. ಏಕೆಂದರೆ ಈ ಸಮಯದಲ್ಲಿ ಭೂತಗಳ ಭಾದೆಯೂ ತುಂಬಾ ಹೆಚ್ಚಾಗಿರುತ್ತದೆ. ಸ್ಪಷ್ಟವಾದ ಕಾರಣಗಳು ತಿಳಿದಿಲ್ಲವಾದರೂ ಜನರಲ್ಲಿ ನಿದ್ರೆ ಹಾಗೂ ನಿದ್ರಾ ಹೀನತೆಗೆ ಸಾಕಷ್ಟು ಅವ್ಯಾಸಗಳು ಕಾರಣವಾಗಿರುತ್ತದೆ.

ಇನ್ನು ಈ ರೀತಿ ನಿಮಗೂ ಕೂಡ 3 ಗಂಟೆಗೂ ಮುನ್ನ ಎಚ್ಚರವಾಗುತ್ತಿದ್ದರೆ ಮೊದಲು ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಸವಾಲುಗಳನ್ನು ಹಾಗೂ ವಿಷಯಗಳನ್ನು ಬಗೆ ಹರಿಸಿಕೊಳ್ಳಿ. ಹಾಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತುಳಸಿ ಹಾಗೂ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಸದಾ ನೆಮ್ಮದಿ ಶಾಂತಿ ತುಂಬಿರುತ್ತದೆ ಎನ್ನಲಾಗುತ್ತದೆ. ಇನ್ನು ಈ ಸಮಯದಲ್ಲಿ ವಿದ್ಯಾರ್ಥಿಗಳು ಓದಲು ಕೂತರೆ ಅದನ್ನು ಅವರು ಎಂದಿಗೂ ಮರೆಯುವುದಿಲ್ಲ ಎನ್ನಲಾಗುತ್ತದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ