ಹನುಮಾನ್ ಚಾಲೀಸಾ ಇದೊಂದು ಸ್ತೋತ್ರ ಮಾತ್ರವಲ್ಲ ಇಡೀ ಬ್ರಹ್ಮಾಂಡದ ಶಕ್ತಿಯು ಈ ಹನುಮಾನ್ ಚಾಲೀಸಾ ದಲ್ಲಿ ಅಡಗಿದೆ. ಹಾಗಾದರೆ ಇದನ್ನು ಹೇಗೆ ಪಠಿಸಬೇಕು ಯಾವ ವಿಧಾನದಲ್ಲಿ ಪಠಿಸಬೇಕು? ಯಾವಾಗ ಪಠಿಸಬೇಕು..ಪ್ರಿಯ ಸ್ನೇಹಿತರೆ ಹನುಮಾನ್ ಚಾಲೀಸಾ ಬಗ್ಗೆ ಕೇಳಿಯೇ ಇರ್ತೀರಾ, ಹನುಮಾನ್ ಚಾಲೀಸಾ ಅಂದರೆ ಮಂತ್ರಗಳೇ ಆಗಿದ್ದರು ಇದು ಸ್ತೋತ್ರವೇ ಆಗಿದ್ದರೂ, ಹನುಮಾನ್ ಚಾಲೀಸಾ ವೈಜ್ಞಾನಿಕವಾಗಿಯೂ ನಿರೂಪಣೆಗೊಂಡಿದೆ ಇದು ನಮ್ಮಲ್ಲಿರುವ ನೆಗೆಟಿವಿಟಿಯನ್ನು ದೂರಮಾಡುತ್ತದೆ ನಮ್ಮಲ್ಲಿರುವ ಸ್ಟ್ರೆಸ್ ನಿವಾರಣೆ ಮಾಡುತ್ತದೆ ಎಂದು.
ಹಾಗಾಗಿ ಹನುಮಾನ್ ಚಾಲೀಸಾ ಬಗ್ಗೆ ತಿಳಿದುಕೊಳ್ಳುವುದು ಉತ್ತಮವಾಗಿದೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹನುಮಾನ್ ಚಾಲೀಸದ ಬಗ್ಗೆ ಇನ್ನಷ್ಟು ಮಾಹಿತಿಗಳು ತಿಳಿಯೋಣ ಹೆಚ್ಚಿನ ಮಾಹಿತಿ ತಿಳಿಯುವುದಕ್ಕೆ ಕೆಳಗಿನ ಪುಟವನ್ನ ಓದಿರಿ.ಹನುಮಂತನು ಶ್ರೀ ರಾಮನ ಬಂಟ ತನ್ನ ಭಕ್ತಿ ಮೂಲಕ ಧ್ಯಾನವನ್ನು ಮಾಡಿ ಶ್ರೀರಾಮನ ದರ್ಶನ ಪಡೆದ ಹನುಮಂತನು ಭೂಮಿ ಮೇಲಿರುವ ರಾಮಭಕ್ತರನ್ನು ಕಾಪಾಡುವುದಾಗಿ ಶ್ರೀರಾಮ ದೇವನಿಗೆ ಭಾಷೆ ನೀಡಿರುತ್ತಾರೆ. ಹಾಗಾಗಿ ರಾಮಭಕ್ತ ಹನುಮಂತನ ಸದಾ ರಾಮಭಕ್ತರ ಕಾವಲಿಗೆ ಬಂದೇ ಬರ್ತಾರೆ ಶ್ರೀರಾಮನ ಜಪ ಮಾಡುವವರಿಗೆ ಆಂಜನೇಯನ ಅನುಗ್ರಹವು ಕೂಡ ಇದ್ದೇ ಇರುತ್ತದೆ.
ಹನುಮಾನ್ ಚಾಲೀಸಾದ ಬಗ್ಗೆ ಹೇಳುವುದಾದರೆ ಇದನ್ನು ಯಾವ ಸಮಯದಲ್ಲಿ ಪಠಿಸಬೇಕು ಯಾವ ದಿನದಂದು ಪಠಿಸಿದರೆ ಬಹಳ ಒಳ್ಳೆಯದು ಮತ್ತು ಹನುಮಾನ್ ಚಾಲೀಸವನ್ನು ಪಠಿಸುವಾಗ ಯಾವ ಕೆಲವೊಂದು ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು ಎಲ್ಲವನ್ನೂ ತಿಳಿಯೋಣ ಬನ್ನಿ. ಹೌದು ಪ್ರಿಯ ಸ್ನೇಹಿತರೆ ಹನುಮಾನ್ ಚಾಲೀಸಾ ಪಠಿಸುವುದರಿಂದ ಲೇ ಅದೆಷ್ಟೋ ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಅದರಲ್ಲಿಯೂ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವವಿರುವ ಹನುಮಾನ್ ಚಾಲೀಸವನ್ನು ನಿಮ್ಮಿಂದ ಪಠಿಸಲು ಸಾಧ್ಯವಾಗದಿದ್ದರೂ ಹನುಮಾನ್ ಚಾಲೀಸವನ್ನು ಕೇಳಿಸಿಕೊಳ್ಳುವುದರಿಂದ ಕೂಡ ಬಹಳಷ್ಟು ಉಪಯೋಗವಿದೆ.
ಹನುಮಾನ್ ಚಾಲೀಸವನ್ನು ಯಾರು ಬೇಕಾದರೂ ಘಟಿಸಬಹುದು ಹಾಗೆ ರಾತ್ರಿ ಸಮಯದಲ್ಲಿ ಮಲಗುವ ಮುನ್ನ ಹನುಮಾನ್ ಚಾಲೀಸಾ ವನ್ನು 8 ಬಾರಿ ಪಠಿಸಬೇಕು ಇದರಿಂದ ನಾವು ಆ ದಿನ ಮಾಡಿದ ಪಾಪ ಕರ್ಮಗಳು ಒಬ್ಬರನ್ನು ನೋಯಿಸಿದ್ದಾಗ ಉಂಟಾದ ಪಾಪವೆನ್ನ ಈ ಮೂಲಕ ನಾವು ಪರಿಹಾರ ಮಾಡಿಕೊಳ್ಳಬಹುದು. ಹೌದು ಹನುಮಾನ್ ಚಾಲೀಸವನ್ನು ರಾತ್ರಿ ಸಮಯದಲ್ಲಿ ಪಠಿಸಿ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೆ ಹನುಮಾನ್ ಚಾಲೀಸವನ್ನು ಬೆಳಗಿನ ಸಮಯದಲ್ಲಿ ಸ್ನಾನಾದಿಗಳನ್ನು ಮುಗಿಸಿ ಬಳಿಕ ಪಠಿಸಬೇಕು ಇದರಿಂದ ನಮ್ಮ ದಿನ ಬಹಳ ಉತ್ತಮವಾಗಿರುತ್ತದೆ ಹಾಗೂ ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಎಂದ ಪಾಲ್ಗೊಳ್ಳಬಹುದು.
ಹನುಮಾನ್ ಚಾಲೀಸವನ್ನು ಪಠಿಸುವುದಕ್ಕೆ ಮಂಗಳವಾರ ಮತ್ತು ಶನಿವಾರ ದಿನ ಪ್ರಶಸ್ತವಾದ ದಿನಗಳು ಆಗಿರುತ್ತದೆ. ಅವ್ರು ಆಂಜನೇಯಸ್ವಾಮಿಯನ್ನು ಆರಾಧಿಸುವುದಕ್ಕೆ ಉತ್ತಮವಾದ ದಿನಗಳು ಕೂಡ ಶನಿವಾರ ಮತ್ತು ಮಂಗಳವಾರ ಆಗಿರುತ್ತದೆ ಹಾಗೆ ಹನುಮಾನ್ ಚಾಲೀಸವನ್ನು ಪ್ರತಿದಿನ ಪಡಿಸಲು ಸಾಧ್ಯವಾಗುವುದಿಲ್ಲ ಅನ್ನುವವರು ಶನಿವಾರದ ದಿವಸ ಮತ್ತು ಮಂಗಳವಾರದ ದಿವಸದಂದು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಪಠಿಸುವುದರಿಂದ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.
ಈ ಮೊದಲೇ ಹೇಳಿದಂತೆ ಹನುಮಾನ್ ಚಾಲೀಸಾ ದಲ್ಲಿ ಬ್ರಹ್ಮಾಂಡದ ಶಕ್ತಿ ಅಡಗಿದ್ದು ಈ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಶನಿ ದೋಷ ಸಾಡೇಸಾತಿ ನಡೆಯುತ್ತಿದ್ದರೂ ಕೂಡ ಆಂಜನೇಯನ ಅನುಗ್ರಹದಿಂದ ಶನಿದೋಷ ಕೂಡ ಪರಿಹರವಾಗುತ್ತದೆ ಯಾಕೆಂದರೆ ಒಮ್ಮೆ ಶನಿದೇವ ಮತ್ತು ಆಂಜನೇಯನ ನಡುವಿನ ಒಪ್ಪಂದದಿಂದಾಗಿ ಶನಿ ದೋಷ ಇದ್ದವರು ಆಂಜನೇಯನ ಅನುಗ್ರಹದಿಂದ ಶನಿ ಭುಕ್ತಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು..