ಮುಖ್ಯದ್ವಾರದ ಬಳಿ ಏನಿರಬೇಕು ಮತ್ತು ಏನ್ ಇರಬಾರದು ಮನೆ ಮುಂದೆ ಹೇಗಿರಬೇಕು ಈ ಎಲ್ಲಾ ಮಾಹಿತಿಯನ್ನು ನೀವೇ ಓದಿ ತಿಳಿದುಕೊಳ್ಳಿ.ಸ್ನೇಹಿತರೆ ಎಲ್ಲರಿಗೂ ಅವರವರ ಮನೆ ತುಂಬಾ ಕಂಫರ್ಟ್ ಆದಂತಹ ಒಂದು ಸ್ಥಳ. ಹೌದಲ್ವಾ ಸ್ನೇಹಿತರೆ ನಮ್ಮ ಮನೆಯಲ್ಲಿ ಇದ್ದ ಹಾಗೆ ನಾವು ಬೇರೆಯವರ ಮನೆಯಲ್ಲಿ ಇರುವುದಕ್ಕೆ ಆಗುವುದಿಲ್ಲ. ಪ್ರತಿಯೊಬ್ಬರಿಗೂ ಅವರ ಮನೆ ಚೆನ್ನಾಗಿರಬೇಕು ನಮ್ಮ ಮನೆಯಲ್ಲಿ ಖುಷಿ ಇರಬೇಕು ನಮ್ಮ ಮನೆಯ ಅಲಂಕಾರದಿಂದ ಇರಬೇಕು ಎನ್ನುವ ಆಸೆ ಇರುತ್ತದೆ. ಮನುಷ್ಯನ ಜೀವನ ಅವರು ಇರುವ ಸ್ಥಳ ಸುತ್ತಮುತ್ತಲಿನ ಜನ ಇನ್ನೂ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತದೆ. ಸ್ನೇಹಿತರೆ ಮನೆಗೆ ಮುಖ್ಯದ್ವಾರವು ತುಂಬಾ ವಿಶೇಷವಾದ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಮುಖ್ಯದ್ವಾರವು ಎಲ್ಲರೂ ಬರುವಂತಹ ಸ್ಥಳ.
ನಾವು ದಿನಕ್ಕೆ ಹತ್ತಾರು ಸಾರಿ ಮುಖ್ಯದ್ವಾರದಿಂದ ಒಳಗೆ-ಹೊರಗೆ ಅಡ್ಡಾಡುತ್ತಿರುತ್ತೇವೆ. ಕೆಲವೊಂದು ನಕಾರಾತ್ಮಕ ಶಕ್ತಿಗಳು ಆಗ ನಮ್ಮ ಜೊತೆಗೆ ಒಳಗೆ ಬರಬಹುದು ಅದಕ್ಕಾಗಿ ಮುಖ್ಯದ್ವಾರವನ್ನು ಯಾವಾಗಲೂ ಬೆಳಗ್ಗೆ ಎದ್ದ ತಕ್ಷಣ ಸ್ವಚ್ಛವಾಗಿ ತೊಳೆದು ಅರಿಶಿನ ಕುಂಕುಮಗಳಿಂದ ಪೂಜೆ ಮಾಡಿ ಮನೆಯ ಮುಂದೆ ರಂಗೋಲಿಯನ್ನು ಹಾಕಿ ನಮ್ಮ ಮನೆಯ ಸುತ್ತಮುತ್ತ ಸ್ವಚ್ಛ ಇರುವ ರೀತಿ ನೋಡಿಕೊಳ್ಳಬೇಕು. ಮನೆ ಸುತ್ತಮುತ್ತ ಎಷ್ಟು ಸ್ವಚ್ಛ ಇರುತ್ತದೆ ಅಷ್ಟೇ ನಾವು ಸಕಾರಾತ್ಮಕವಾಗಿ ಇರುತ್ತೇವೆ. ರಂಗೋಲಿ ಬರದಿದ್ದರೆ ಮನೆಯ ಮುಂದೆ ಸ್ವಸ್ತಿಕ ಚಿತ್ರವನ್ನು ಕೂಡ ಹಾಕಬಹುದು. ಮನೆಯ ಮುಖ್ಯ ದ್ವಾರದ ಹತ್ತಿರ ಯಾವುದೇ ಕಪ್ಪುಬಣ್ಣದ ಗೋಡೆಗಳು ಇರಬಾರದು ಮನೆಯ ಮುಂದೆ ಕಪ್ಪು ಮ್ಯಾಟ್ ಹಾಕಬಾರದು. ಬದಲಾಗಿ ಕೆಂಪು ಬಣ್ಣದ ಮ್ಯಾಟ್ ಹಾಕಿದರೆ ಒಳ್ಳೆಯದು.
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಮನೆಯಲ್ಲಿ ಬರೀ ಕಿರಿಕಿರಿ ಹಾಗೂ ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚುತ್ತದೆ. ಮನೆಯ ಮುಂದೆ ಯಾವಾಗಲೂ ಒಂದು ತುಳಸಿ ಗಿಡವನ್ನು ನೆಡಬೇಕು. ತುಳಸಿ ಗಿಡವು ಲಕ್ಷ್ಮೀದೇವಿಯ ಸಂಕೇತವಾಗಿದೆ. ತುಳಸಿ ಗಿಡವು ಒಳ್ಳೆಯ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಹಾಗೂ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಯಾವಾಗಲೂ ಸೂರ್ಯನ ಬೆಳಕು ಬರುತ್ತಿರಬೇಕು ಅಂದಾಗ ಮಾತ್ರ ಮನೆತುಂಬಾ ಬೆಳಕಿನಿಂದ ಇರುತ್ತದೆ. ಇನ್ನೂ ಮನೆಯ ಮುಂದೆ ನೀವು ಯಾವಾಗಲೂ ಬಿಳಿಬಣ್ಣದ ಲೈಟನ್ನು ಹಾಕಬೇಕು ಬೇರೆ ಬಣ್ಣದ ಕಲರ್ ಕಲರ್ ಲೈಟ್ ಗಳನ್ನು ಹಾಕಬಾರದು. ಹೊಸ್ತಿಲನ್ನು ಪೂಜೆ ಮಾಡುವಾಗ ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಹಾಕಿಕೊಂಡು ಮುಖ್ಯದ್ವಾರವನ್ನು ತೊಳೆಯಬೇಕು ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯು ಸದಾ ನಿಮ್ಮ ಮನೆಗೆ ಆಶೀರ್ವದಿಸುತ್ತಾಳೆ
ಹಾಗೆಯೇ ಯಾವುದೇ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುವುದಿಲ್ಲ. ಹಾಗೆ ಮನೆಯ ಮುಖ್ಯದ್ವಾರವನ್ನು ಎಷ್ಟು ಸಾಧ್ಯವೋ ಅಷ್ಟು ಅಲಂಕಾರ ಮಾಡುತ್ತಿರಬೇಕು ಹಬ್ಬಕ್ಕೆ ಮಾತ್ರವಲ್ಲದೆ ಪ್ರತಿನಿತ್ಯವೂ ಮುಖ್ಯದ್ವಾರಕ್ಕೆ ಹೂವಿನ ಮಾಲೆ ಅಥವಾ ಮಾವಿನ ಎಲೆಯ ಮಾಲೆ ಮಾಡಿ ಹಾಕಬೇಕು ಇದು ಕೂಡ ಮನೆಗೆ ನಕಾರಾತ್ಮಕ ಶಕ್ತಿಯನ್ನು ತಡೆದು ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಇನ್ನು ಇವುಗಳನ್ನು ಹಾಕಿದಮೇಲೆ ಬಾಡಿದ ಮೇಲೆ ಬೇಗ ಅವುಗಳನ್ನು ತೆಗೆಯಬೇಕು ಇಲ್ಲವಾದರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುವುದಿಲ್ಲ. ಪ್ರತಿನಿತ್ಯ ನಾವು ಮುಖ್ಯದ್ವಾರವನ್ನು ಪೂಜಿಸಿ ಉದ್ದಿನ ಕಡ್ಡಿ ಹಚ್ಚುವುದರಿಂದ ಯಾವುದೇ ನೆಗೆಟಿವ್ ಎನರ್ಜಿಗಳು ನಮ್ಮನೆಗೆ ಬರುವುದಿಲ್ಲ. ಬೆಳಿಗ್ಗೆ ಹಾಗೂ ಸಾಯಂಕಾಲ ದೇವರ ಮುಂದೆ ದೀಪ ಹಚ್ಚಿ ಊದಬತ್ತಿ ಬೆಳಗಬೇಕು.
ಇನ್ನೂ ಮುಖ್ಯದ್ವಾರಕ್ಕೆ ರಂಗೋಲಿಯನ್ನು ಹಾಕಿದಾಗ ಬಲಕ್ಕೆ ಆಗುವುದಕ್ಕೆ ಒಂದೊಂದು ಸ್ವಸ್ತಿಕ್ ಚಿತ್ರವನ್ನು ಹಾಕಬೇಕು ಸ್ವಸ್ತಿಕ್ ಚಿತ್ರಕ್ಕೆ ತುಂಬಾ ಮಹತ್ವವಿದೆ ಲಕ್ಷ್ಮೀದೇವಿಯು ಆಗಮಿಸುತ್ತಾಳೆ. ಸ್ವಸ್ತಿಕ್ ಚಿತ್ರವು ಮನೆಯಲ್ಲಿ ಶುಭಕಾರ್ಯಗಳನ್ನು ಮಾಡಿಸುತ್ತದೆ. ಮನೆಯಲ್ಲಿ ಆರೋಗ್ಯ ನೆಮ್ಮದಿ ಅದೃಷ್ಟ ಸದಾ ಇರುವಂತೆ ಮಾಡುತ್ತದೆ. ಸ್ನೇಹಿತರೆ ನೀವು ಕೂಡ 40 ದಿನ ಈ ಒಂದು ಪ್ರಯೋಗ ಮಾಡಿ ನೋಡಿ ಮನೆಯಲ್ಲಿ ಸಾಕಷ್ಟು ಲಾಭಗಳು ನಿಮ್ಮದಾಗುತ್ತದೆ ನಿಮಗೆ ಗೊತ್ತಿರದ ಹಾಗೆ ಒಳ್ಳೆಯ ಕೆಲಸಗಳು ಆಗಿರುತ್ತವೆ. ಸ್ನೇಹಿತರೆ ಹಾಗಾದರೆ ಮುಖ್ಯ ದ್ವಾರದ ಮುಂದೆ ಏನಿರಬೇಕು ಹಾಗೂ ಹೇಗಿರಬೇಕು ಎಂದು ಈ ಮಾಹಿತಿಯಲ್ಲಿ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.