Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವಾಗಲೂ ದೇವರಿಗೆ ಹಚ್ಚುವ ದೀಪಕ್ಕೆ ಈ ಎಣ್ಣೆಯನ್ನು ಬಳಸಲೇಬೇಡಿ … ಹಾಗಾದ್ರೆ ಯಾವ ಎಣ್ಣೆಯನ್ನು ಬಳಸಬೇಕು ಯಾವ ಎಣ್ಣೆ ಶ್ರೇಷ್ಠ ..!!!

ದೀಪಕ್ಕೆ ಈ 2 ಎಣ್ಣೆಗಳನ್ನು ಬಳಸುವುದರಿಂದ ನಿಮಗೆ ಸಾಕಷ್ಟು ತೊಂದರೆ ಆಗುತ್ತದೆ ಹಾಗಾದರೆ ಯಾವ ಎಣ್ಣೆ ದೀಪಕ್ಕೆ ಶ್ರೇಷ್ಠವೆಂದು ತಿಳಿಯಲು ಮಾಹಿತಿ ನೋಡಿ.ಹಾಯ್ ಸ್ನೇಹಿತರೆ ನಾವು ಪ್ರತಿನಿತ್ಯ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುತ್ತೇವೆ. ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ ಎನ್ನುವ ನಂಬಿಕೆ ಕೂಡ ಇದೆ. ದೇವರ ಕೋಣೆಯಲ್ಲಿ ಜಗಲಿಯನ್ನು ಅಂದರೆ ದೇವರು ಇರುವ ಸ್ಥಳವನ್ನು ಮೊದಲು ಸ್ವಚ್ಛ ಮಾಡುತ್ತೇವೆ ನಂತರ ದೀಪವನ್ನು ಹಚ್ಚುತ್ತೇವೆ. ನಾವು ದೀಪ ಹಚ್ಚಿ ನಂತರ ಪೂಜೆಯನ್ನು ಪ್ರಾರಂಭ ಮಾಡುತ್ತೇವೆ. ದೀಪವು ಬೆಳಕಿನ ಸಂಕೇತ ಹಾಗಾಗಿ ದೇವರಲ್ಲಿ ನಮ್ಮ ಜೀವನಕ್ಕೆ ಬೆಳಕು ನೀಡು ಎಂದು ಕೇಳಿಕೊಳ್ಳುತ್ತೇವೆ ಎಂದು ಇದರ ಅರ್ಥ.

ಹಾಗಾದರೆ ದೀಪಕ್ಕೆ ಯಾವ ಎಣ್ಣೆ ಶ್ರೇಷ್ಠವಾದದ್ದು ಎಂದು ತಿಳಿಯೋಣ ನೀವೇನಾದರೂ ಈ ಎರಡು ಎಣ್ಣೆಗಳನ್ನು ಬಳಸಿದರೆ ನಿಮಗೆ ಋಣಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಹಾಗೂ ಮನೆಯಲ್ಲಿ ಅಸಮಾಧಾನ ಹಾಗೂ ದರಿದ್ರತನ ಹೆಚ್ಚಾಗುತ್ತದೆ. ದೀಪವನ್ನು ಬೆಳಗುವುದರಿಂದ ಮನಸ್ಸಿಗೆ ಹಾಗು ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಅದಕ್ಕೆ ಯಾವುದೇ ಶುಭ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವ ಮುನ್ನ ದೀಪವನ್ನು ಬೆಳಗಿಸುತ್ತಾರೆ. ದೀಪಕ್ಕೆ ತುಂಬಾ ಮಹತ್ವವಿದೆ. ದೇವರ ಮುಂದೆ ದೀಪ ಹಚ್ಚಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳು ಕೂಡ ದೂರ ಆಗುತ್ತದೆ. ಪ್ರತಿನಿತ್ಯ ನಾವು ಬೆಳಿಗ್ಗೆ ಹಾಗೂ ಸಾಯಂಕಾಲ ದೀಪ ಬೆಳಗುವುದರಿಂದ ಮನೆಯಲ್ಲಿ ಯಾವುದೇ ತರಹದ ಹಣಕಾಸಿನ ತೊಂದರೆಗಳು ಹಾಗೂ ಕೆಟ್ಟ ವಿಚಾರಗಳು ಬರುವುದಿಲ್ಲ.

ಇನ್ನೂ ನಿಮಗೆ ಯಾವಾಗಲೂ ಶುಭ ಸಮಾಚಾರಗಳು ತಿಳಿದಾಗ ಮೊದಲು ದೇವರಿಗೆ ದೀಪವನ್ನು ಬೆಳಗುತ್ತಿರಿ. ಏಕೆಂದರೆ ದೇವರು ನಿಮ್ಮ ಮೇಲೆ ಆಶೀರ್ವಾದ ಮಾಡಿದ್ದಾನೆ ಎಂದು ದೇವರಿಗೆ ನೀವು ದೀಪ ಹಚ್ಚುವುದರ ಮೂಲಕ ನಿಮ್ಮ ಭಕ್ತಿಯನ್ನು ತೋರಿಸುತ್ತೀರಿ. ಅದರಲ್ಲೂ ಮಹಿಳೆಯರು ದೀಪವನ್ನು ಬೆಳಗುವುದರಿಂದ ಸಾಕಷ್ಟು ಪುಣ್ಯವನ್ನು ಪಡೆಯುತ್ತೀರಿ. ಯಾವ ರೀತಿ ಒಂದು ಹೆಣ್ಣು ಮನೆಯನ್ನು ಬೆಳಗುತ್ತಾಳೆ ಅದೇ ರೀತಿ ದೀಪವನ್ನು ಹಚ್ಚಿ ಅವಳು ಮನೆಗೆ ಬೆಳಕನ್ನು ನೀಡುತ್ತಾನೆ. ಆದರೆ ದೀಪ ಹಚ್ಚುವ ಮುನ್ನ ಸ್ನಾನವನ್ನು ಮಾಡಬೇಕು. ಪವಿತ್ರವಾದ ಹಾಗೂ ಶ್ರೇಷ್ಠವಾದ ದೀಪವನ್ನು ಬೆಳಗಿಸಲು ನಾವು ಮಲಿನ ಆಗಿರಬಾರದು. ನೀವು ಯಾವುದೇ ಪೂಜೆ ಪ್ರಾರಂಭ ಮಾಡಿದರು ಮೊದಲು ದೀಪವನ್ನು ಬೆಳಗಿಸಬೇಕು.

ಸ್ನೇಹಿತರೆ ಹಾಗಾದರೆ ಇಂತಹ ಮಹತ್ವವಾದ ದೀಪಕ್ಕೆ ಯಾವ ಎಣ್ಣೆ ಶ್ರೇಷ್ಠವೆಂದು ನಾನು ನಿಮಗೆ ತಿಳಿಸುತ್ತೇನೆ. ದೀಪಕ್ಕೆ ಒಳ್ಳೆಣ್ಣೆ ಹಾಗೂ ಎಳ್ಳೆಣ್ಣೆ ಮತ್ತು ತೆಂಗಿನಕಾಯಿ ಎಣ್ಣೆ ಅಂದರೆ ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆ ತುಂಬಾ ಶ್ರೇಷ್ಠವಾದದ್ದು. ಇವುಗಳನ್ನು ನಾವು ದಿನನಿತ್ಯ ದೀಪ ಹಚ್ಚುವುದಕ್ಕೆ ಬಳಸುತ್ತೇವೆ. ಇನ್ನು ವಿಶೇಷವಾಗಿ ನಾವು ಪೂಜೆ ಮಾಡುವಾಗ ಅದರಲ್ಲೂ ಬ್ರಾಹ್ಮೀಮುಹೂರ್ತದಲ್ಲಿ ತುಪ್ಪದ ದೀಪವನ್ನು ಹಚ್ಚುವುದು ತುಂಬಾ ಒಳ್ಳೆಯ ಫಲವನ್ನು ಸಿಗುವಂತೆ ಮಾಡುತ್ತದೆ. ಕೆಲವೊಬ್ಬರು ದೀಪಕ್ಕೆ ಬೇವಿನಕಾಯಿ ಎಣ್ಣೆಯನ್ನು ಕೂಡ ಬಳಸುತ್ತಾರೆ ಇದು ಕೂಡ ತುಂಬಾ ವಿಶೇಷವಾಗಿದೆ. ಈ ಎಲ್ಲಾ ಎಣ್ಣೆಗಳನ್ನು ನಾವು ದೀಪ ಬೆಳಗಿಸುವುದಕ್ಕೆ ಬಳಸಬಹುದು. ಇವುಗಳನ್ನು ಬಳಸುವುದರಿಂದ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.

ತಮಗೆ ಒಳ್ಳೆಯ ಫಲಗಳು ಯಾವಾಗಲೂ ಸಿಗುತ್ತವೆ. ಆದರೆ ದೀಪಕ್ಕೆ ಸೂರ್ಯಕಾಂತಿ ಎಣ್ಣೆ ಹಾಗೂ ಕಡಲೆಕಾಯಿ ಎಣ್ಣೆಯನ್ನು ಬಳಸಬಾರದು ಇವು ನಿಮ್ಮ ಮನೆಗೆ ದರಿದ್ರತನವನ್ನು ತಂದುಕೊಡುತ್ತವೆ. ಈ ಮಾಹಿತಿ ತಿಳಿದ ಮೇಲೆ ನೀವು ಎಣ್ಣೆಗಳನ್ನು ದೀಪಕ್ಕೆ ಬಳಸಬೇಡಿ. ಮುಖ್ಯವಾಗಿ ಈ ಎಲ್ಲಾ ವಿಷಯವನ್ನು ನಿಮ್ಮ ಪ್ರೀತಿಪಾತ್ರರಿಗೆ ತಿಳಿಸಿ. ದೀಪವನ್ನು ಹಚ್ಚುವುದು ಪುಣ್ಯದ ಫಲ ಸಿಗಬೇಕು ಎಂದು ಆದರೆ ದೀಪಾರಾಧನೆ ಮಾಡುವುದು ತಪ್ಪಾದರೆ ನಮಗೆ ಫಲಗಳು ಸಿಗುವುದಿಲ್ಲ. ಸ್ನೇಹಿತರೆ ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ