ತೆಂಗಿನ ಮರವನ್ನು ನಾವು ಕಲ್ಪ ವೃಕ್ಷ ಅಂತ ಕರೆಯುತ್ತೇವೆ ಕಾರಣ ಈ ಮರದ ಬೇರಿನಿಂದ ಎಲೆಯವರೆಗೂ ಎಲ್ಲವು ಮನುಜನಿಗೆ ಉಪಕಾರಿ, ಇನ್ನು ನೀವು ತೆಂಗಿನ ಎಣ್ಣೆಯ ಉಪಯೋಗ ಮಾಡಿರುತ್ತೀರಿ, ಅದರಂತೆಯೇ ತೆಂಗಿನ ಹಾಲಿನ ಉಪಯೋಗದ ಬಗ್ಗೆ ಕೆಲವರಿಗೆ ಅಷ್ಟೇನೂ ತಿಳಿದಿರುವುದಿಲ್ಲ, ಇಂದು ನಾವು ತೆಂಗಿನ ಹಾಲಿ ಆರೋಗ್ಯ ಉಪಯೋಗಗಳ ಬಗ್ಗೆ ಮಾಹಿತಿ ಪಡೆಯೋಣ.
ಜೀರ್ಣ ಕ್ರಿಯೆ : ತಿಂದ ಆಹಾರ ಸಲೀಸಾಗಿ ಕರುಗುವಂತೆ ಮಾಡಿ ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ತೆಂಗಿನ ಹಾಲಿನ ಸೇವನೆ ಶೀಘ್ರ ಪರಿಹಾರ ನೀಡುತ್ತದೆ, ಇದರಲ್ಲಿರುವ ವಿಟಮಿನ್ ಮತ್ತು ಮಿನರಲ್ಸ್ ದೇಹದಲ್ಲಿ ಒಳ್ಳೆಯ ಫ್ಯಾಟ್ ಅಂಶ ಸಂಚರಿಸುವಂತೆ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ತೆಂಗಿನ ಹಾಲು ಪೌಷ್ಟಿಕಾಂಶ ಹಾಗು ವಿಟಮಿನ್ ಗಳ ಸಾರವನ್ನ ವೊಂದಿದ್ದು ಇದು ಆರೋಗ್ಯಕ್ಕೆ ಬಹಳ ಉಪಕಾರಿ, ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ತುರಿದ ತೆಂಗಿನಕಾಯಿಯನ್ನ ಹಾಕಿ ಜ್ಯೂಸ್ ರೀತಿಯಲ್ಲಿ ರುಬ್ಬಿ ನಂತರ ಸೇವಿಸ ಬಹುದು, ಈ ರೀತಿ ನೇರವಾಗಿ ಅಥವಾ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಅನೇಕ ಉಪಯೋಗವಿದ್ದು ಅದನ್ನೊಮ್ಮೆ ನೋಡೋಣ.
ಹೃದಯದ ಅರೋಗ್ಯ : ತೆಂಗಿನ ಹಾಲಿನಲ್ಲಿ ಲ್ಯುರಿಕ್ ಆ್ಯಸಿಡ್ ಅಂಶ ಸಮೃದ್ಧವಾಗಿದೆ ಎಂದು ಅಧ್ಯಯನಗಳು ತಿಳಿಸಿದ್ದು, ಜೊತೆಗೆ ಮೀಡಿಯಮ್ ಚೈನ್ ಫ್ಯಾಟಿ ಆ್ಯಸಿಡ್ಗಳು ಇದೆಯಂತೆ, ಇದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೂಕ ಇಳಿಕೆ : ತೆಂಗಿನ ಹಾಲು ನಿಮ್ಮ ದೇಹದ ಬೇಡವಾದ ಬೊಜ್ಜನ್ನ ಕರಗಿಸಲು ಸಹಾಯ ಮಾಡುತ್ತದೆ, ತೆಂಗಿನ ಕಾಯಿಯಲ್ಲಿ ಎಮ್ಸಿಟಿ ಎಂಬುವ ಅಂಶವು ಹೇರಳವಾಗಿದ್ದು ದೇಹದ ಫ್ಯಾಟ್ ಮಟ್ಟವನ್ನು ಕಡಿಮೆ ಮಾಡು ಅತ್ಯಂತ ಸಹಾಯಕಾರಿ.
ಮೂಳೆ ಗಟ್ಟಿ : ದೇಹದ ಮೂಳೆ ಗಟ್ಟಿಯಾಗಲು ಕ್ಯಾಲ್ಶಿಯಮ್ ಮತ್ತು ಪಾಸ್ಫರಸ್ ಅಂಶಗಳ ಅವಶ್ಯಕತೆ ಇದೆ, ಈ ಅಂಶಗಳು ತೆಂಗಿನ ಹಾಲಿನಲ್ಲಿ ನಿಮಗೆ ಸುಲಭವಾಗಿ ದೊರೆಯುತ್ತದೆ.
ಉತ್ತಮ ಕೂದಲು : ಒರಟು ಕೂದಲಿಗೆ ಇದು ರಾಮ ಬಾಣ ಕೂದಲಿಗೆ ತೆಂಗಿನ ಹಾಲನ್ನು ಹಚ್ಚಿ ಮಸಾಜ್ ಮಾಡಿ 20-30 ನಿಮಿಷ ಹಾಗೆ ಬಿಡಿ, ನಂತರ ಶ್ಯಾಂಪು ಮೂಲಕ ಕೂದಲನ್ನು ತೊಳೆಯಿರಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ.