Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೀಪ ಹಚ್ಚುವಾಗ ದೀಪ ಏನಾದ್ರು ಆರಿದರೆ ಹೀಗೆ ಮಾಡಿ ಸಾಕು ಯಾವುದೇ ತೊಂದರೆ ನಿಮ್ಮ ಜೀವನದಲ್ಲಿ ಉಂಟಾಗಲ್ಲ …!!!

ದೀಪಾರಾಧನೆಯ ಸಮಯದಲ್ಲಿ ದೀಪ ಆರಿ ಹೋದರೆ ಅದನ್ನು ಅಪಶಕುನ ಎಂದು ತಿಳಿಯದೆ ಈ ವಿಧಾನವನ್ನು ಪಾಲಿಸಿ ಯಾವುದೇ ತರಹದ ತೊಂದರೆಗಳು ಎದುರಾಗುವುದಿಲ್ಲ ಮತ್ತು ನಿಮ್ಮ ಮನಸ್ಸಿಗೂ ಕೂಡ ಶಾಂತಿ ದೊರೆಯುತ್ತದೆ ಹಾಗಾದರೆ ಬನ್ನಿ ಆರಾಧನೆಯ ಸಮಯದಲ್ಲಿ ಹಚ್ಚಿದ ದೀಪ ಸಣ್ಣಗೆ ಆದರೆ ಮಾಡಬೇಕಾದ ಪರಿಹಾರವೇನು ಅಂತ ತಿಳಿಯೋಣ.ಹೌದು ಸಾಮಾನ್ಯವಾಗಿ ನಾವು ಪೂಜಿಸುವ ವೇಳೆ ಗಾಳಿ ಅಥವಾ ಎಣ್ಣೆ ಆಗಿ ಹೋದರೆ ಅಥವಾ ಬತ್ತಿ ಕರಗಿಹೋದರೆ ದೀಪ ಆರಿ ಹೋಗುತ್ತದೆ.

ಈ ರೀತಿ ದೀಪ ತಣ್ಣಗೆ ಆದರೆ ಆಗ ಮಾಡಬೇಕಾದ ಪರಿಹಾರವೇನು ಇದನ್ನ ಅಪಶಕುನ ಅಂತಾರಾ ಪರಿಹಾರ ಶಾಸ್ತ್ರದಲ್ಲಿ ಮತ್ತು ಈ ರೀತಿ ಆರಾಧನೆಯ ಸಮಯದಲ್ಲಿ ದೀಪಾ ತಣ್ಣಗೆ ಆಗಿ ಹೋದರೆ ಅದಕ್ಕೆ ಮಾಡಬಹುದಾದ ಸರಳ ಪರಿಹಾರವೇನು ಅದರಿಂದ ನಮಗೆ ಯಾವುದೇ ಕೆಡುಕು ಇದ್ದರೂ ಪರಿಹಾರವಾಗುತ್ತಾ ಈ ಎಲ್ಲದರ ಬಗ್ಗೆ ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ.ದೇವರ ಆರಾಧನೆಯಲ್ಲಿ ಸಾಮಾನ್ಯವಾಗಿ ದೀಪದ ಆರಾಧನೆ ಬಹು ಮುಖ್ಯ ಎಂದು ಪರಿಗಣಿಸುತ್ತೇವೆ ಯಾಕೆಂದರೆ ಅದು ಕೂಡ ಕಾರಣವಿದೆ ಸ್ನೇಹಿತರೆ

ಕೆಲವನ್ನು ಪುಣ್ಯಕ್ಷೇತ್ರಗಳಲ್ಲಿ ಇವತ್ತಿಗೂ ಈ ದೀಪಾರಾಧನೆಯ ಪ್ರಾಧಾನ್ಯತೆ ತುಂಬಾನೇ ಇದೆ ಬಹುಮುಖ್ಯವಾಗಿ ಇದೆ ಯಾಕೆಂದರೆ ಆ ದೀಪಾರಾಧನೆ ಮಾಡುವಾಗಲೇ ದೇವರ ದರ್ಶನ ಪಡೆಯುವುದು ಇಂದಿಗೂ ಹಲವು ದೇವಸ್ಥಾನಗಳಲ್ಲಿ ಪದ್ಧತಿಯಾಗಿದೆ.ಅಂದಿನ ಕಾಲದಲ್ಲಿ ಈ ರೀತಿ ಬೆಳಕಿನಲ್ಲಿ ಅಥವಾ ಕರೆಂಟ್ ಬೆಳಕಿನಲ್ಲಿ ದೇವರ ದರ್ಶನವನ್ನು ಯಾರೂ ಕೂಡ ಮಾಡುತ್ತಿರಲಿಲ್ಲ ದೇವರಿಗೆ ಆರತಿ ಬೆಳಗುವಾಗ ಅಥವಾ ದೀಪಾರಾಧನೆಯ ಬೆಳಕಿನಲ್ಲಿ ದೇವರ ದರ್ಶನ ಪಡೆಯುವುದು ದೇವರ ದರ್ಶನ ಮಾಡುವುದು ಅಂದು ಪದ್ದತಿಯಾಗಿತ್ತು ಮತ್ತು ಅದನ್ನು ಶ್ರೇಷ್ಠ ಎಂದು ಕೂಡಾ ಪರಿಗಣಿಸಲಾಗಿತ್ತು.

ಇಂದಿಗೂ ಕೂಡ ಈ ಪದ್ಧತಿಯನ್ನು ಹಲವು ಪುಣ್ಯಕ್ಷೇತ್ರಗಳಲ್ಲಿ ಪಾಲಿಸುತ್ತಾರೆ ಮತ್ತು ದೀಪಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಹಾಗಾಗಿ ದೀಪಾರಾಧನೆಯ ವೇಳೆ ಈ ರೀತಿ ಯಾವುದಾದರೂ ಬದಲಾವಣೆ ಕಂಡುಬಂದರೆ ಮನಸ್ಸಿಗೆ ತಳಮಳ ವುಂಟಾಗುತ್ತದೆ ಮುಂದೆ ಏನು ಕಾದಿದೆಯೋ ಮನೆಗೆ ಏನಾದರೂ ಕೆಡುಕು ಉಂಟಾಗುತ್ತದೆ ಎಂದು ಆದರೆ ಗಾಳಿಗೆ ಅಥವಾ ಬತ್ತಿ ಕರಗಿ ಹೋದ ಕಾರಣದಿಂದ ದೀಪ ಏನಾದರೂ ತಣ್ಣಗೆ ಆದರೆ ಚಿಂತಿಸಬೇಡಿ.ಅದಕ್ಕೆ ಸರಳ ಪರಿಹಾರವಿದೆ ಅದನ್ನ ನೀವು ಪಾಲಿಸಿ ಅದೇನೆಂದರೆ ದೀಪ ಆರಾಧನೆಯ ವೇಳೆ ತಣ್ಣಗೆ ಆದರೆ ಆಗ ಆ ದೀಪವನ್ನು ಮತ್ತೆ ಹಚ್ಚಬೇಡಿ

ಅದರಲ್ಲಿರುವ ಎಣ್ಣೆ ಮತ್ತು ಬತ್ತಿಯನ್ನು ಬೇರೆ ಬಟ್ಟಲಿಗೆ ಸಂಗ್ರಹ ಮಾಡಿ ಇಟ್ಟು ಮತ್ತೆ ಕೈ ಕಾಲು ತೊಳೆದು ಮತ್ತೆ ದೀಪವನ್ನು ಹಚ್ಚಿ ದೀಪವನ್ನು ಆರಾಧಿಸಿ. ಯಾವುದೇ ಕೆಟ್ಟ ಆಲೋಚನೆಯು ಬೇಡ ಯಾವ ಕೆಡುಕೂ ಉಂಟಾಗುವುದು ಮತ್ತು ಹೊಸದಾದ ದೀಪವನ್ನು ಹಚ್ಚಿ ದೇವರ ಆರಾಧನೆ ಮಾಡಿ ಆದರೆ ಈ ರೀತಿ ಸಂಗ್ರಹ ಮಾಡಿಟ್ಟ ಎಣ್ಣೆ ಮತ್ತು ಬತ್ತಿಯನ್ನು ಅದೇ ತಿಂಗಳು ಅಮಾವಾಸ್ಯೆ ಬರುವ ಮುನ್ನ ಬರುವ ಭಾನುವಾರದಂದು ದೇವರ ಮುಂದೆ ಆ ಎಣ್ಣೆಯಿಂದ ದೀಪವನ್ನು ಉರಿಸಿ ಇದರಿಂದ ಮುಂದೆ ಬರುವ ಕೆಡಕುಗಳು ಕೂಡ ಪರಿಹಾರವಾಗುತ್ತೆ ಚಿಂತೆ ಬೇಡ.ಈ ಲೇಖನದಲ್ಲಿ ನಾವು ತಿಳಿಸಿದಂತಹ ಪರಿಹಾರ, ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖಗೊಂಡಿದ್ದು, ಯಾವುದೇ ಚಿಂತೆ ಇಲ್ಲದೆ ಈ ಸರಳ ಪರಿಹಾರ ಪಾಲಿಸಿ ಯಾವುದೇ ತರಹದ ಕೆಡುಕು ಸಹ ಉಂಟಾಗುವುದಿಲ್ಲ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ