ಧನಯೋಗ ತುಂಬಾ ಹೆಚ್ಚಾಗಿ ಇದ್ದರು ದರಿದ್ರ ಯೋಗ ಅನ್ನುವುದು ಒಂದು ಇದ್ದಾರೆ ಸಾಕು ನಿಮ್ಮ ಸಂಪಾದನೆ ಅಸ್ತಿ ಪಾಸ್ತಿ ಯಲ್ಲ ಕ್ಷಣದಲ್ಲಿ ಮಾಯವಾಗಲು, ನೀವು ದುಡ್ಡಿಗಾಗಿ ಲಕ್ಷ್ಮಿಯನ್ನು ಹೇಗೆ ವಲಿಸಿ ಕೊಳ್ಳಲು ಪ್ರಯತ್ನಿಸಿತ್ತೀರೋ ಹಾಗೆಯೇ ದರಿದ್ರ ದೇವತೆಯು ನಿಮ್ಮ ಅತ್ತಿರ ಬರದಂತೆ ನೋಡಿಕೊಳ್ಳುವುದು ಅತಿ ಮುಖ್ಯ.
ಕೆಲವರಿಗಂತೂ ಈ ದರಿದ್ರ ಯೋಗವಂತೂ ಪೂರ್ತಿ ಜೀವನ ಇರುತ್ತದೆ, ಇನ್ನು ಕೆಲವರಿಗೆ ಸ್ವಲ್ಪ ಕಾಲ ಮಾತ್ರ ಇರುತ್ತದೆ, ಈ ಯೋಗ ಮನುಷ್ಯನ ಕರ್ಮಾನುಸಾರ ಬರುತ್ತದೆ ಕೆಲವರಿಗೆ ತಾರುಣ್ಯದಲ್ಲೇ ಬಂದರೆ ಇನ್ನು ಕೆಲವರಿಗೆ ನಡು ವಯಸ್ಸಿನಲ್ಲೇ ಬರುತ್ತದೆ.
ಎಷ್ಟೇ ಸುಖಪುರುಷ ನಾಗಿದ್ದರು ಒಮ್ಮೆಲೇ ಕಷ್ಟದ ಸಾಗರಕ್ಕೆ ನೂಕುವ ಶಕ್ತಿ ದರಿದ್ರ ದೇವತೆಗೆ ಇದೆ ಇನ್ನು ಇದಕ್ಕೆ ಒಂದು ಕಾರಣ ನಿಮ್ಮ ರಾಶಿ ಕುಂಡಲಿಯಲ್ಲಿ ಎರಡನೇ ಮನೆ ಅಧಿಪತಿ ಅಥವಾ ಗುರು ಹನ್ನೆರಡನೇ ಮನೆಯಲ್ಲಿದ್ದರೆ ಅಂತವರಿಗೆ ದರಿದ್ರ ಯೋಗ ಬಂದಿದೆ ಅಂತ ಜೋತಿಷ್ಯ ಶಾಸ್ತ್ರ ಹೇಳುತ್ತದೆ, ಈ ದರಿದ್ರ ಯೋಗದಿಂದ ಪಾರಾಗಲು ಏನು ಮಾಡಬೇಕು ಎಂದು ಈಗ ತಿಳಿಯೋಣ.
ಈ ಯೋಗ ಇದ್ದವರು ಪ್ರತಿದಿನ ಶಿವನ ಆರಾಧನೆ ಮಾಡಬೇಕು ಹಾಗು ಲಕ್ಷ್ಮಿ ಅರಾಧನೆ ಸಹ ಮಾಡಬೇಕು, ಜೊತೆಯಲ್ಲಿ ಒಂದು ಒಳ್ಳೆ ದಿನ ನೋಡಿ ಬನ್ನಿ ಮರದ ಕಡ್ಡಿಯನ್ನು ಮನೆಗೆ ತರಬೇಕು, ಹೀಗೆ ತಂದ ಕಡ್ಡಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನೀರಿನಿಂದ ತೊಳೆದು ಅದಕ್ಕೆ ಗಂಡ, ಅರಿಶಿನ, ಕುಂಕುಮ ಇಟ್ಟು ಈ ಕಡ್ಡಿಯನ್ನು ಲಕ್ಷ್ಮಿ ದೇವಿಯ ಬಳಿ ಇಟ್ಟು ದಿನವೂ ಪೂಜೆ ಮಾಡಿದರೆ ಒಳ್ಳೆಯದು.
ಹೀಗೆ ಮಾಡುವುದರಿಂದ ಖರ್ಚು ಕಡಿಮೆಯಾಗಿ ಮನೆಯಲ್ಲಿ ಹಣ ಶೇಖರಣೆಯಾಗುತ್ತದೆ ಹಾಗು ಲಕ್ಷ್ಮಿ ದೇವಿಯ ಕೃಪೆ ನಿಮಗೆ ದೊರೆತು ದರಿದ್ರ ದೂರವಾಗಿ ಮನೆಯಲ್ಲಿ ಅಷ್ಟ ಐಶ್ವರ್ಯಗಳು ನಿಮ್ಮದಾಗುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.