ವಸ್ತು ವಿನಿಮಯದಂತಹ ವಿಧಾನಗಳ ಬಳಕೆ ಕನಿಷ್ಠ ಪಕ್ಷ ೧೦೦,೦೦೦ ವರ್ಷಗಳಷ್ಟು ಪ್ರಾಚೀನವಿರಬಹುದು, ನಂತರ ಬಂದದ್ದೇ ಹಣ, ಪ್ರತಿಯೊಂದು ವಸ್ತುವಿಗೆ ಹಣ ಬೆಲೆಕಟ್ಟುವುದಿಲ್ಲ ಬದಲಿಗೆ ಮನುಷ್ಯನನ್ನೇ ಬೆಲೆ ಮಾಡುವಷ್ಟು ಹಣ ಈಗ ಬೆಳೆದು ನಿಂತಿದೆ, ನಾನು ಕಷ್ಟ ಪಟ್ಟು ದುಡಿಯುವುದು ಹಣಕ್ಕಾಗಿ, ದೇವರನ್ನು ಬೇಡುವುದು ಈ ಹಣವನ್ನೇ, ಮನುಷ್ಯನ ಸುಖ ಹಾಗು ದುಃಖಗಳು ಸಹ ಅವಲಂಬಿತ ವಾಗಿರುವುದು ಈ ಹಣವನ್ನೇ, ಈ ಹಣ ಸಂಪಾದನೆಗೆ ಸಾವಿರ ದಾರಿಗಳು, ಸಾವಿರ ಯೋಚನೆಗಳು ಹಾಗು ಸಾವಿರ ಆದರೂ ಹಣ ಸಿಗುವುದು ಕೆಲವರಿಗೆ ಮಾತ್ರ, ಹಣವನ್ನ ಧರ್ಮದಲ್ಲಿ ಲಕ್ಷ್ಮಿ ತಾಯಿಗೆ ಹೋಲಿಕೆ ಮಾಡುತ್ತಾರೆ, ಆ ಲಕ್ಷ್ಮಿಯು ಬಹಳ ಚಂಚಲೆ, ಎಲ್ಲರಿಗು ಅಷ್ಟು ಸುಲಭವಾಗಿ ಒಲಿಯುವುದಿಲ್ಲ.
ಇನ್ನು ದಾರಿಯಲ್ಲಿ ಸಿಕ್ಕ ಹಣ ಅಂದರೆ ಲಕ್ಷ್ಮಿಯನ್ನ ಏನು ಮಾಡಬೇಕು ಅಂತ ನಿಮಗೆ ಗೊತ್ತಾ, ಇದರ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿಯೋಣ.
ಒಂದು ಪಕ್ಷ ನಿಮಗೆ ದಾರಿಯಲ್ಲಿ ಹಣ ದೊರೆತರೆ ಅದರ ಅರ್ಥ ಒಬ್ಬ ವ್ಯಕ್ತಿಯು ಆ ಹಣವನ್ನು ಕಳೆದು ಕೊಂಡಿರುತ್ತಾನೆ ಅಂತ ಅರ್ಥ ಬರುತ್ತದೆ ಅಲ್ಲವೇ, ಆ ವ್ಯಕ್ತಿ ಆ ಹಣವನ್ನು ಕಷ್ಟ ಪಟ್ಟು ಸಂಪಾದನೆ ಮಾಡಿರುತ್ತೊನೋ ಅಥವಾ ಮೋಸ ಮಾಡಿ ಪಡೆದಿರುತ್ತಾನೋ ಗೊತ್ತಿಲ್ಲ ಹಾಗು ತೀರಾ ಬಡವನಾಗಿದ್ದರೆ ಹಣವನ್ನು ಕಳೆದು ಕೊಂಡ ಮೇಲೆ ಅತಿಯಾದೆ ವೇದನೆಯನ್ನು ಹೊಂದಿರುತ್ತಾನೆ, ಅಂತಹ ಹಣವನ್ನ ನಾವು ನಮ್ಮ ಸ್ವಂತಕ್ಕೆ ಅಥವಾ ನಮ್ಮ ಸ್ವಾರ್ಥಕ್ಕೆ ಬಳಸಿದರೆ ಆತನ ದಾರಿದ್ರ್ಯ ನಿಮ್ಮ ಬೆನ್ನಿಗೂ ಬರುವ ಸಾಧ್ಯತೆಗಳೇ ಹೆಚ್ಚು ಆದ್ದರಿಯಿಂದ ಯಾವುದೇ ಕಾರಣಕ್ಕೂ ನಿಮಗೆ ದಾರಿಯಲ್ಲಿ ಸಿಕ್ಕ ಹಣವನ್ನ ನಿಮ್ಮ ಸ್ವಂತ ಉಪಯೋಗಕ್ಕೆ ಬಳಸಬೇಡಿ.
ಹಾಗಾದರೆ ಸಿಕ್ಕ ಹಣವನ್ನ ಏನು ಮಾಡಬೇಕು.
ಅಕಸ್ಮಾತ್ ನಿಮಗೇನಾದರೂ ದಾರಿಯಲ್ಲಿ ಹಣವೇನಾದರೂ ಸಿಕ್ಕಿದರೆ ಅಲ್ಲೇ ಬಿಟ್ಟು ಬರುವ ಬದಲು, ಆ ಹಣವನ್ನ ಹಸಿದವರಿಗೆ ಅಥವಾ ದೇವಸ್ಥಾನದ ಹುಂಡಿಗೆ ಅಥವಾ ಬಡವರಿಗೆ ಹಂಚಿಬಿಡಿ, ಹೀಗೆ ಮಾಡುವುದರಿಂದ ನಿಮ್ಮ ಆ ಹಣದ ಜವಾಬ್ದಾರಿಯನ್ನ ಅಲ್ಲಿಗೆ ಕಳೆದು ಕೊಳ್ಳುತ್ತೀರಾ ಹಾಗು ಯಾವುದೇ ಕೆಟ್ಟ ಪರಿಣಾಮಗಳು ನಿಮ್ಮ ಬೆನ್ನಿಗೆ ಬರಲು ಸಾಧ್ಯವೇ ಇರುವುದಿಲ್ಲ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.