ಸಸ್ಯ ವರ್ಗದಲ್ಲಿಯೇ ವಿಭಿನ್ನವಾದ ವಿಶೇಷವಾದ ಅಂಶವನ್ನು ಹೊಂದಿರುವ ಈ ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸುವುದರಿಂದ ಎಷ್ಟೆಲ್ಲ ಪ್ರಯೋಜನವಿದೆ ಎಂಬುದನ್ನು ನಾವು ಈಗಾಗಲೇ ಸಾಕಷ್ಟು ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ,ಇದರ ಜೊತೆಗೆ ಆಧ್ಯಾತ್ಮಿಕವಾಗಿ ವೈಜ್ಞಾನಿಕವಾಗಿಯು ಮಹತ್ವವನ್ನು ಪಡೆದುಕೊಂಡಿರುವ ಈ ತುಳಸಿ ಗಿಡವನ್ನು ಹೇಗೆ ಬೆಳೆಸಬೇಕು ಹಾಗೆ ಈ ತುಳಸಿ ಗಿಡವು ಹೇಗೆ ದಟ್ಟವಾಗಿ ಬೆಳೆಸುವುದು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ಹೌದು ತುಳಸಿ ಗಿಡದಲ್ಲಿ ಲಕ್ಷ್ಮಿ ವಿಷ್ಣು ನೆಲೆಸಿರುತ್ತಾರೆ ಎಂದು ನಂಬಲಾಗಿದೆ ಇದರ ಜೊತೆಗೆ ತುಳಸಿ ಗಿಡವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುವುದರೊಂದಿಗೆ ಇದು ಮನೆಗೆ ಕೆಟ್ಟ ಶಕ್ತಿ ಪ್ರಭಾವವಾದರೆ ಅದನ್ನು ಕೂಡ ಸೂಚಿಸುತ್ತದೆ.ತುಳಸಿ ಗಿಡ ಈ ಒಂದು ತುಳಸಿ ಗಿಡವು ಪದೇ ಪದೇ ಮನೆಯಲ್ಲಿ ಒಣಗುತ್ತಿದ್ದರೆ ಇದು ಮನೆಗೆ ಹಿತಾಶಕ್ತಿ ಪ್ರವೇಶವಾಗಿದೆ ಎಂಬುದನ್ನು ಸೂಚಿಸುತ್ತಿರುತ್ತದೆ ಹಾಗೆ ಈ ತುಳಸಿ ಗಿಡವನ್ನು ಒಣಗದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ.-ಮನೆಯಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸುವುದು ಧಾರ್ಮಿಕ ನಂಬಿಕೆ ಆದರೂ ಈ ಗಿಡವನ್ನು ಬೆಳೆಸುವುದರಿಂದ ಉತ್ತಮ ಗಾಳಿಯ ಬರುತ್ತದೆ.
ಬಲಿತ ಗಿಡದಲ್ಲಿನ ಒಣಗಿದ ಹೂಗಳನ್ನು ನಿಧಾನವಾಗಿ ಹೆಚ್ಚು ಅಲುಗಾಡಿಸದಂತೆ ಕತ್ತರಿಸಿ ಅದರಲ್ಲಿನ ಸೂಕ್ಷ ್ಮ ಬೀಜಗಳನ್ನು ಸಂಗ್ರಹಿಸಿ ಬೇಕಾದಾಗ ಮಣ್ಣಿಗೆ ಹಾಕಿ ಗಿಡ ಬೆಳೆಸ ಬಹುದು.ಸಾವಯವ ಗೊಬ್ಬರ ಮಿಶ್ರಿತ ಮಣ್ಣನ್ನು ಹಗುರ ಗೊಳಿಸಿ ಗಿಡದ ಬೀಜಗಳನ್ನು ಮಡಿಗಳಲ್ಲಿ ಹರಡಿ, ತೆಳುವಾಗಿ ಮಣ್ಣನ್ನು ಮುಚ್ಚಿ ನೀರು ಹಾಕಿದರೆ ಬೇಗ ಮೊಳಕೆಯೊಡೆಯುತ್ತದೆ.ಬೀಜ ಬಿತ್ತನೆ ಮಾಡಿದ ಮಣ್ಣಿಗೆ ನಿಧಾನವಾಗಿ ನೀರು ಹಾಕಬೇಕು. ಹೆಚ್ಚು ರಭಸವಾಗಿ ನೀರು ಹಾಕಿದರೆ ಬೀಜಗಳು ಕೊಚ್ಚಿ ಹೋಗುತ್ತವೆ.
ಮಡಿಗಳಲ್ಲಿ ಬೆಳೆದ ಸಣ್ಣ ಸಸಿಗಳನ್ನು ತೆಗೆದು ಮಣ್ಣಿನಲ್ಲಿ ಸರಿಯಾದ ಅಂತರದ ಸಾಲಿನಲ್ಲಿ ನೆಟ್ಟು ನೀರು ಗೊಬ್ಬರ ಹಾಕಬೇಕು.ಈಗ ತಿಳಿಯೋಣ ತುಳಸಿ ಗಿಡವನ್ನು ಹೇಗೆ ಮನೆಯ ಮುಂದೆ ಅದರಲ್ಲಿಯು ಕಡಿಮೆ ಜಾಗದಲ್ಲಿ ದಟ್ಟವಾಗಿ ಬೆಳೆಸುವುದು ಎಂಬುದನ್ನು ತಿಳಿಯೋಣ, ಎಲ್ಲರಿಗೂ ಸಾಮಾನ್ಯವಾಗಿ ಈ ತುಳಸಿ ಗಿಡವನ್ನು ಹೇಗೆ ನೀಡುವುದು ಎಂಬುದು ತಿಳಿದಿರುತ್ತದೆ ಹಾಗೆ ತುಳಸಿ ಗಿಡವನ್ನು ನೆಡುವಾಗ ಆದಷ್ಟು ಕಪ್ಪು ಮಣ್ಣನ್ನು ಬಳಸಿ ಮತ್ತೆ ಈ ತುಳಸಿ ಗಿಡವು ಚೆನ್ನಾಗಿ ಬೆಳೆಯಬೇಕಾದರೆ ಆಗಾಗ ತುಳಸಿ ಗಿಡದ ಮಣ್ಣನ್ನು ಸಡಿಲ ಮಾಡುತ್ತಾ ಇರಬೇಕು.
ಇದಕ್ಕೆ ಕಾರಣವನ್ನು ಹೇಳುವುದಾದರೆ ತುಳಸಿ ಗಿಡದ ಮಣ್ಣನ್ನು ಎರಡು ಮೂರು ದಿನಗಳಿಗೊಮ್ಮೆ ಸಡಿಲ ಮಾಡುತ್ತಿದ್ದರೆ ತುಳಸಿ ಗಿಡದ ಬುಡಕ್ಕೆ ಅಂದರೆ ಬೇರುಗಳಿಗೆ ಆಮ್ಲಜನಕದ ಪೂರೈಕೆ ಚೆನ್ನಾಗಿ ಆಗುತ್ತದೆ ಇದರಿಂದ ತುಳಸಿ ಗಿಡವು ಬೇಗನೆ ಬೆಳೆಯುವುದರೊಂದಿಗೆ ತುಳಸಿ ಗಿಡ ದಟ್ಟವಾಗಿ ಬೆಳೆಯುತ್ತದೆ.ಇದರ ಜೊತೆಗೆ ತುಳಸಿ ಗಿಡವು ಚೆನ್ನಾಗಿ ಬೆಳೆಯಬೇಕಾದರೆ ಅಥವಾ ಯಾವುದೇ ಗಿಡ ಚೆನ್ನಾಗಿ ಬೆಳೆಯಬೇಕೆಂದರೆ ಅದಕ್ಕೆ ಎರೆಹುಳುವಿನ ಗೊಬ್ಬರ ಹಾಕುವುದು ಒಳ್ಳೆಯದು,
ಈ ಕೆರೆ ಹುಳುವಿನ ಗೊಬ್ಬರ ನರ್ಸರಿಯಲ್ಲಿ ಅಥವಾ ಆನ್ ಲೈನ್ ನಲ್ಲಿಯೂ ಕೂಡ ನೀವು ಈ ಎರೆಹುಳುವಿನ ಗೊಬ್ಬರವನ್ನು ತರಿಸಿಕೊಳ್ಳಬಹುದು ಹಾಗೆ ಎರೆಹುಳುವಿನ ಗೊಬ್ಬರವನ್ನು ಹಾಕುವುದರಿಂದ ತುಳಸಿ ಗಿಡವು ನೈಸರ್ಗಿಕವಾಗಿ ಬೆಳೆಯುತ್ತದೆ ಅದೇ ರಾಸಾಯನಿಕ ಗೊಬ್ಬರವನ್ನು ಹಾಕುವುದರಿಂದ ಈ ತುಳಸಿ ಗಿಡದ ಎಲೆಯನ್ನು ನೀವು ಸೇವಿಸುವುದಕ್ಕೆ ಸಾಧ್ಯವಾಗುವುದಿಲ್ಲ.ತುಳಸಿ ಗಿಡವು ಬೆಳೆದಾಗ ಅದರ ಸುತ್ತ ಬಿದ್ದಿರುವ ಎಲೆಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು ಈ ಎಳೆ ಮಣ್ಣಿನಲ್ಲಿಯೇ ಕೊಳೆತರೆ ಅದು ಫಂಗಸ್ ಆಗುವ ಸಾಧ್ಯತೆ ಇರುತ್ತದೆ ಇದರ ಜೊತೆಗೆ ತುಳಸಿ ಗಿಡ ಚೆನ್ನಾಗಿ ಬೆಳೆಯದೇ ಬಾಡಿ ಹೋಗುತ್ತದೆ.
ಈ ರೀತಿಯ ಕ್ರಮದಲ್ಲಿ ತುಳಸಿ ಗಿಡವನ್ನು ಬೆಳೆಸಿ ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗುವುದಿಲ್ಲ ಮತ್ತು ಆಗಾಗ ಈ ತುಳಸಿ ಗಿಡದ ಪಾರ್ಟ್ ನಲ್ಲಿ ಎಲೆಗಳು ಉದುರುತ್ತಿದ್ದರೆ ಅದನ್ನು ತೆಗೆದು ಹಾಕಿ ಇಲ್ಲವಾದಲ್ಲಿ ಅದು ಗಿಡದಲ್ಲಿ ಫಂಗಸ್ ಅನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ವಾರಕ್ಕೆ ಒಮ್ಮೆ ತುಳಸಿ ಗಿಡದ ಮೇಲ್ಭಾಗದಲ್ಲಿ ಮಣ್ಣನ್ನು ಸಡಿಲ ಮಾಡುತ್ತ ಇರಿ, ಇದರಿಂದ ಮಣ್ಣಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆಯಾಗಿ ಗಿಡ ಚೆನ್ನಾಗಿ ಬೆಳೆಯುತ್ತದೆ.ತುಳಸಿ ಗಿಡದ ಎಲೆಗಳು ಉದುರುತ್ತಿದ್ದರೆ ಇದನ್ನು ತಡೆಗಟ್ಟುವುದಕ್ಕಾಗಿ ಮಾರುಕಟ್ಟೆಯಲ್ಲಿ ಎಪ್ಸನ್ ಶಾರ್ಟ್ ಎಂದು ದೊರೆಯುತ್ತದೆ ಅದನ್ನು ತಂದು ಮಣ್ಣಿನೊಂದಿಗೆ ಬೆರೆಸುವುದರಿಂದ ಎಲೆಗಳು ಉದುರುವುದು ನಿಂತು ಹೋಗುತ್ತದೆ
ಆದರೆ ಈ ಎಕ್ಸಾನ್ ಸಾಲ್ಟ್ ಅನ್ನು ಬಳಸಿದರೆ ನೀವು ತುಳಸಿ ಗಿಡದ ಎಲೆಗಳನ್ನು ಸೇವಿಸೋಕೆ ಆಗುವುದಿಲ್ಲ ಆದ ಕಾರಣ ಎಲೆಗಳು ಉದುರುವ ಸಮಸ್ಯೆ ಹೆಚ್ಚಾಗಿದ್ದರೆ ಮಾತ್ರ ಈ ಎಕ್ಸಾನ್ ಸ್ಕರ್ಟನ್ನು ಬಳಸುವುದು ಒಳ್ಳೆಯದು. ಈ ರೀತಿ ತುಳಸಿ ಗಿಡವನ್ನು ಬೆಳೆಯುವಾಗ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡು ತುಳಸಿ ಗಿಡವನ್ನು ಬೆಳೆಸುವುದರಿಂದ ತುಳಸಿ ಗಿಡ ಮನೆಯ ಅಂಗಳದಲ್ಲಿ ಬಹಳಾನೇ ಚೆನ್ನಾಗಿ ಬೆಳೆಯುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ