Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಪ್ಪಿ ತಪ್ಪಿಯೂ ನಿಮ್ಮ ಪಿತೃಗಳ ಫೋಟೋವನ್ನು ಈ ದಿಕ್ಕಿನಲ್ಲಿ ಹೊರತು ಪಡಿಸಿ ಬೇರೆ ದಿಕ್ಕಿಗೆ ಹಾಕಬೇಡಿ. ಇಲ್ಲವಾದರೆ ಮನೆಗೆ ಊಹಿಸದ ಕಷ್ಟ ನಿಮಗೆ ಎದುರಾಗುತ್ತೆ …!!

ಮನೆಯಲ್ಲಿ ಸ’ತ್ತವರ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ಕೊಣೆಯಲ್ಲಿ ನಮ್ಮ ಹಿರಿಯರ ಫೋಟೋ ಅಂದರೆ ಸ’ತ್ತವರ ಫೋಟೋ ಇಟ್ಟರೆ, ಅವರ ಆಶೀರ್ವಾದ ನಮಗೆ ದೊರೆಯುತ್ತದೆ , ಇನ್ನು ಯಾವೆಲ್ಲಾ ಶುಭಗಳು ನಡೆಯುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ಬನ್ನಿ ನೋಡೋಣ. ಆಗಿನ ಕಾಲದಿಂದ ಅದೆಷ್ಟೋ ಜನರು ತಮ್ಮ ಮನೆಯ ಹಾಲ್ ನಲ್ಲಿ ಅಥವಾ ತಮ್ಮ ಮನೆಯ ಬೆಡ್ ರೂಮ್ ನಲ್ಲಿ, ಇನ್ನು ಹಳ್ಳಿಯ ಮನೆಗಳಾದರೆ ತಮ್ಮ ಮನೆಯ ಮುಂಬಾಗದಲ್ಲಿ ಎಲ್ಲರಿಗೂ ಕಾಣುವಂತೆ, ಮನೆಗೆ ಬಂದ ಜನರಿಗೆ ಕಾಣುವಂತೆ ಸತ್ತವರ ಫೋಟೋವನ್ನು ಹಾಕಿಕೊಂಡಿರುತ್ತಾರೆ.

ಈ ರೀತಿ ಮನೆಯಲ್ಲಿ ಸತ್ತವರ ಫೋಟೋವನ್ನು ಎಲ್ಲಿ ಹಾಕಬೇಕು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ. ಮನೆಯಲ್ಲಿ ಯಾವ ಜಾಗದಲ್ಲಿ ಬೇಕಾದರೂ ಸತ್ತವರ ಫೋಟೋವನ್ನು ಹಾಕಬಹುದು, ಆದರೆ ದಕ್ಷಿಣ ಭಾಗದ ಗೋಡೆ ಎಲ್ಲಿರುತ್ತದೆಯೋ ಅಲ್ಲಿ ಮಾತ್ರ ಸತ್ತವರ ಫೋಟೋವನ್ನು ಇಡಬೇಕು. ನೀವು ಆ ಫೋಟೋವನ್ನು ದಕ್ಷಿಣ ಭಾಗದ ಗೋಡೆಗೆ ಹಾಕಿ ಅದು ಫೋಟೋ ಉತ್ತರಕ್ಕೆ ಮುಖ ಮಾಡಿದಂತೆ ಹಾಕಬೇಕು. ಇನ್ನು ದಕ್ಷಿಣ ದಿಕ್ಕಿಗೆ ಸತ್ತವರ ಫೋಟೋವನ್ನು ಹಾಕಿದರೆ, ಮನೆಯಲ್ಲಿ ಶುಭ ಕಾರ್ಯ ಜರುಗುತ್ತದೆ ಎನ್ನಲಾಗುತ್ತದೆ.

ಇನ್ನು ಅದೆಷ್ಟೋ ಜನರ ಮನೆಯಲ್ಲಿ ಪಿತೃ ದೋಷಗಳು ಕಾಡುತ್ತಿರುತ್ತದೆ, ಇನ್ನು ಅನೇಕ ಸಮಸ್ಯೆಗಳಿಂದ ಅವರು ಬಳಲುತ್ತಿರುತ್ತಾರೆ. ಗುರುಗಳೇ ನಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆದು ಬಹಳ ವರ್ಷಗಳೇ ಆಗಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಕೂಡ ಏಳಿಗೆ ಎನ್ನುವುದು ಆಗುತ್ತಿಲ್ಲ. ನಾವು ಕೂಡ ನಮ್ಮ ಪಿತೃ ಕಾರ್ಯವನ್ನು ಬಹಳ ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. ಆದರೂ ಕೂಡ ಮನೆಯಲ್ಲಿ ಒಳ್ಳೇದು ಎನ್ನುವುದನ್ನು ನೋಡಲೇ ಇಲ್ಲ ಎನ್ನುವಂತವರು ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..

ಹೌದು ನಿಮ್ಮ ಮನೆಯಲ್ಲಿ ನಿಮ್ಮ ಪಿತೃಗಳ ಫೋಟೋವನ್ನು ದಕ್ಷಿಣ ಗೋಡೆಗೆ ನೇತಾಕಬೇಕು. ಹಾಗೆ ಈ ಒಂದು ಚಿಕ್ಕ ಕೆಲಸವನ್ನು ನೀವು ಒಮ್ಮೆ ಪಾಲಿಸಬೇಕು. ಯಾವುದೇ ಕಾರಣಕ್ಕೂ ನಮ್ಮ ಪಿತೃಗಳನ್ನು ನಮ್ಮ ಪೋಷಕರನ್ನು ನಮ್ಮ ಹಿರಿಯರನ್ನು ನಾವು ಮರೆಯಬಾರದು, ಪ್ರತಿ ಅಮಾವಾಸ್ಯೆ ಅಥವಾ ಪ್ರತಿ ಹುಣ್ಣಿಮೆಯ ದಿನ ನಿಮ್ಮ ಪಿತೃಗಳ ಫೋಟೋ ಮುಂದೆ ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ನೈವೇದ್ಯವಾಗಿ ಇಡಬೇಕಾಗುತ್ತದೆ. ಈ ಒಂದು ಕೆಲಸವನ್ನು ಯಾರ ಮನೆಯಲ್ಲಿ ಮಾಡುತ್ತಾರೋ ಅವರ ಮನೆಯಲ್ಲಿ ಸದಾ ಪಿತೃಗಳ ಆಶೀರ್ವಾದ ಇರುತ್ತದೆ.

ಇನ್ನು ಕೆಲವರ ಮನೆಯಲ್ಲಿ ಮಲಗುವಂತಹ ಕೊನೆಯಲ್ಲಿ ಸತ್ತವರ ಫೋಟೋವನ್ನು ಹಾಕಿಕೊಂಡಿರುತ್ತಾರೆ. ಹೀಗೆ ಎಂದಿಗೂ ಸಹ ಮಾಡಬಾರದು. ಗಂಡ ಹೆಂಡತಿ ಸಂಸಾರ ನಡೆಸುವಂತಹ ಮನೆಯಲ್ಲಿ ಹಿರಿಯರ ಫೋಟೋವನ್ನು ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಹಾಕಿಕೊಳ್ಳಬಾರದು. ಇನ್ನು ನಿಮ್ಮ ಮನೆಯಲ್ಲಿ ಮಕ್ಕಳು  ಇದ್ದರೆ ಅವರ ಕೊಣೆಯಲ್ಲಿ ಸಹ ನಿಮ್ಮ ಪಿತೃಗಳ ಫೋಟೋವನ್ನು ಯಾವುದೇ ಕಾರಣಕ್ಕೂ ಹಾಕಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಇನ್ನು ನಿಮ್ಮ ಮನೆಯ ಪಿತೃಗಳ ಫೋಟೋವನ್ನು ನಿಮ್ಮ ಮನೆಯ ಹಾಲ್ ನಲ್ಲಿ ದಕ್ಷಿಣ ಗೋಡೆಗೆ ಇಡಬೇಕು. ಇನ್ನು ಈ ಹಿಂದೆ ತಿಳಿಸಿದಂತೆ ಪ್ರತಿ ಅಮಾವಾಸ್ಯೆ ಹಾಗೇ ಹುಣ್ಣಿಮೆಗೆ ಅವರಿಗೆ ಪೂಜೆ ಮಾಡಿ ಅವರಿಗೆ ಇಷ್ಟವಾದಂತಹ ತಿಂಡಿಗಳನ್ನು ನೈವೇದ್ಯ ಮಾಡಬೇಕು. ಇನ್ನು ಇಂದಿನಿಂದಲೇ ಈ ಎಲ್ಲವನ್ನೂ ಪಾಲಿಸಿ, ನಿಮ್ಮ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾಗಿ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ