ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥ ಲವಂಗ, ಈ ಲವಂಗ ಆಹಾರದ ರುಚಿಯನ್ನು ಹೆಚ್ಚಿಸುವಲ್ಲದೆ ಆರೋಗ್ಯವನ್ನು ನೀಡುತ್ತದೆ ಅನ್ನುವುದು ನಮಗೆಲ್ಲ ತಿಳಿದಿರುವ ವಿಷ್ಯ ಆದರೆ ನಿಮಗೆ ತಿಳಿಯದ ಇನ್ನೊಂದು ವಿಷಯವೆಂದರೆ ನಿಗೂಢ ಕಾರ್ಯ ಸಿದ್ಧಿಗೂ ಹಾಗು ಮಾಟ ಮಂತ್ರದಂತಹ ಕಾರ್ಯಗಳಿಗೂ ಲವಂಗ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.
ಎಷ್ಟೋ ಕೆಲಸಗಳು ನಮ್ಮಿಂದ ಅದೆಷ್ಟೇ ಕಷ್ಟ ಪಟ್ಟರು ಪೂರ್ಣ ಮಾಡಲು ಸಾಧ್ಯವೇ ಆಗಿರುವುದಿಲ್ಲ, ಬಹಳಷ್ಟು ಸಮಯ ಹಾಗು ಹಣವನ್ನು ಅದಕ್ಕಾಗಿ ಕಳೆದಿರುತ್ತೇವೆ, ಆದರೂ ಏನಾದರೂ ಸಮಸ್ಯೆ ಎದುರಾಗಿ ಆ ಕಾರ್ಯ ಅರ್ಧಕ್ಕೆ ನಿಂತು ಬಿಡುತ್ತದೆ, ಈ ತರಹದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಒಂದು ಲವಂಗ ಬಳಸಿ ನಾವು ಹೇಳಿದ ಹಾಗೆ ಮಾಡಿ ಪರಿಹಾರ ಕಂಡುಕೊಳ್ಳಿ.
ಬೆಳಗ್ಗೆ ದೇವರ ಪೂಜೆ ಮಾಡುವ ವೇಳೆ ದೀಪಕ್ಕೆ ಎರಡು ಲವಂಗ ಹಾಕಿ, ಇದು ಅರ್ಧಕ್ಕೆ ನಿಂತ ಕೆಲಸಗಳನ್ನ ಪೂರ್ಣಗೊಳಿಸಲು ಹಾಗು ನಿಮ್ಮ ನೋವು, ಸಂಕಷ್ಟಗಳನ್ನ ಕಡಿಮೆ ಮಾಡುತ್ತದೆ.
ಧನ ಪ್ರಾಪ್ತಿಗೆ ಲವಂಗ ಹೇಳಿ ಮಾಡಿಸಿದ ಉಪಾಯವೆಂದು ನಂಬಲಾಗಿದೆ, ಎರಡು ಲವಂಗವನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಹನುಮಂತನ ಪೂಜೆ ಮಾಡಿ, ಇದು ಆರ್ಥಿಕ ವೃದ್ಧಿ ಜೊತೆಗೆ ನಿಮ್ಮ ಎಲ್ಲ ಭಯವನ್ನು ದೂರ ಮಾಡುತ್ತದೆ.
ಪ್ರತಿ ಕೆಲಸದಲ್ಲಿಯೂ ಯಶಸ್ಸು ಬಯಸುವರು ಈ ವಿಧಾನ ಅನುಸರಿಸ ಬಹುದು, ಮೊದಲು ಒಂದು ನಿಂಬೆ ಹಣ್ಣು ಹಾಗು ನಾಲ್ಕು ಆವಂಗವನ್ನು ತೆಗೆದುಕೊಳ್ಳಿ, ಹನುಮಂತನ ಮೂರ್ತಿ ಮುಂದೆ ಕುಳಿತು ನಿಂಬೆ ಹಣ್ಣಿನ ಮೇಲೆ ಲವಂಗವನ್ನ ಚುಚ್ಚಿಡಿ.
ಮುಖ್ಯವಾಗಿ ಈ ಎಲ್ಲಾ ಕೆಲಸವನ್ನ ಮಾಡುವಾಗ ಲವಂಗವನ್ನ ಶುದ ಮಾಡುವುದನ್ನು ಮರೆಯದಿರಿ, ಹಾಗು ಲವಂಗ ಶುದ ಮಾಡಲು ಬೆಳಗ್ಗೆ ಉತ್ತಮ ಸಮಯ, ಹತ್ತಿ, ಲವಂಗ, ಸಿಂಧೂರ, ತುಪ್ಪ, ನೀರು ಬೇಕಾಗುತ್ತದೆ, ಪದ್ಧತಿ ಪ್ರಕಾರ ಲವಂಗವನ್ನು ಶುದ್ಧ ಮಾಡಬೇಕು.