ಜೀವನದಲ್ಲಿ ಶತ್ರುಭಾದೆ ಇದೆಯಾ ಹಾಗಾದರೆ ಶತ್ರು ಬಾಧೆಯಿಂದ ನೀವು ತುಂಬಾನೇ ತೊಂದರೆ ಅನ್ನೋ ಅನುಭವಿಸುತ್ತಾ ಇದ್ದೀರಾ ಅನ್ನುವುದಾದರೆ ತಪ್ಪದೆ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ. ಪರಿಹಾರಗಳು ಯಾವುವು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ನೀವು ಅದೇ ರೀತಿಯಲ್ಲಿ ಶತ್ರುಬಾಧೆ ನಿವಾರಣೆ ಪಡೆದುಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಕೈಗೊಂಡಿದ್ದೇ ಆದಲ್ಲಿ
ಕೆಲವೊಂದು ದೋಷಗಳಿಂದ ಅಥವಾ ಕೆಲವರ ಸಹವಾಸದಿಂದ ನಿಮ್ಮ ಜೀವನದಲ್ಲಿ ನೀವು ಏಳಿಗೆಯನ್ನ ಕಾಣುತ್ತಿಲ್ಲ ಅನ್ನುವುದಾದರೆ ಆ ಸಮಸ್ಯೆಗಳೆಲ್ಲವೂ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನಾವು ಈ ದಿನ ತಿಳಿಸುವ ಪರಿಹಾರ ನಿಮಗೆ ಪರಿಣಾಮಕಾರಿಯಾಗಿ ಇರುತ್ತದೆ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ ಕೆಲವೊಂದು ಗ್ರಹದೋಷಗಳಿಂದ ಕೂಡ ಶತ್ರು ಬಾಧೆ ಉಂಟಾಗುತ್ತದೆ ಕೆಲ ವ್ಯಕ್ತಿಗಳಿಂದ ನಿಮಗೆ ನಿಮ್ಮ ಜೀವನದಲ್ಲಿ ಕಷ್ಟಗಳು ಉಂಟಾಗುತ್ತದೆ ಆ ಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ ಆದರೆ ಇಂತಹ ಕೆಲವೊಂದು ವಿಚಾರಗಳನ್ನು ಕೆಲವರು ನಂಬಲು ಅಸಾಧ್ಯ ಆದರೆ ಜೀವನದಲ್ಲಿ ಯಾವಾಗ ಕೆಲವೊಂದು ಸನ್ನಿವೇಶಗಳು ತುಂಬಾ ಕೆಟ್ಟದಾಗಿ ಅನುಭವವನ್ನು ನೀಡುತ್ತದೆ ಆಗ ಅವರಿಗೆ ಅನುಭವಕ್ಕೆ ಬರುತ್ತದೆ ಅದರಿಂದ ನಿಮಗೆ ಯಾವುದೇ ತರಹದ ತೊಂದರೆಗಳಿದ್ದರೂ ಅದು ಶತ್ರುವಿನಿಂದ ನಿಮಗೆ ಆಗುತ್ತಿದೆ ಅಂದರೆ ಈ ಕೆಲವೊಂದು ಪರಿಹಾರಗಳನ್ನು ನಿಮಗೆ ಸುಲಭ ಅನಿಸುವ ಪರಿಹಾರವನ್ನು ಪಾಲಿಸಿ ಶತ್ರು ಬಾಧೆಯಿಂದ ನಿವಾರಣೆ ಪಡೆದುಕೊಳ್ಳಿ.
ಮೊದಲಿಗೆ ಈ ಪರಿಹಾರವನ್ನು ಭಾನುವಾರದ ದಿವಸದಂದು ನೀವು ಮಾಡಬೇಕಾಗುತ್ತದೆ ಮನೆಯಲ್ಲಿಯೇ ಇರುವ ಲವಂಗವನ್ನು ತೆಗೆದುಕೊಳ್ಳಿ ನಾಲ್ಕೈದು ಲವಂಗವನ್ನು ತೆಗೆದುಕೊಂಡು, ನಿಮ್ಮ ಎಡಗೈಗೆ ಇಟ್ಟುಕೊಳ್ಳಿ ನಂತರ ನಿಮ್ಮ ಶತ್ರುವಿನ ಹೆಸರನ್ನು ಹೇಳಿ ಅವರಿಂದ ನಿಮಗೆ ಆಗುತ್ತಿರುವ ತೊಂದರೆಯನ್ನು ಕೂಡ ನೀವು ಮನಸ್ಸಿನಲ್ಲಿಯೇ ಹೇಳಿಕೊಂಡು, ನಿಮಗೆ ನೀವು ನಿವಾರಿಸಿಕೊಳ್ಳಬೇಕು. ಹೇಗೆ ಅಂದರೆ ಎಡದಿಂದ ಬಲಕ್ಕೆ ಅಂದರೆ ಆ್ಯಂಟಿ ಕ್ಲಾಕ್ ವೈಸ್ ನಲ್ಲಿ ಈ ಲವಂಗದಿಂದ ನೀವು ನಿಮ್ಮನ್ನು ನಿವಾರಿಸಿಕೊಳ್ಳಬೇಕು. ನಂತರ ಅಗ್ನಿಗೆ ಹಾಕಿ ಈ ಲವಂಗವನ್ನು ಸುಡಬೇಕು ಇದರಿಂದ ನಿಮ್ಮ ಶತ್ರುಬಾಧೆ ನಿವಾರಣೆ ಆಗುತ್ತದೆ ಇದನ್ನು ನೀವು ಭಾನುವಾರದ ದಿವಸದಂದು ತಪ್ಪದೆ ಪಾಲಿಸಿ.
ಎರಡನೆಯದಾಗಿ ಮಾಡಿಕೊಳ್ಳಬಹುದಾದ ಪರಿಹಾರ ಇದನ್ನು ಶನಿವಾರದ ದಿವಸದಂದು ಮಾಡಿಕೊಳ್ಳಬೇಕು 1ಅಗಲವಾದ ಶುದ್ಧವಾದ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಬನ್ನಿ ನಂತರ ಗಂಧಿಗೆ ಅಂಗಡಿಯಲ್ಲಿ ಚಂದನ ದೊರೆಯುತ್ತದೆ ಆ ಚಂದನವನ್ನು ತೆಗೆದುಕೊಂಡು ದಾಳಿಂಬೆ ಗಿಡದ ಒಂದು ಚಿಕ್ಕದಾದ ಕಡ್ಡಿಯನ್ನು ತೆಗೆದುಕೊಂಡು,
ಆ ಕಡ್ಡಿಯ ಸಹಾಯದಿಂದ ಅರಳಿ ಮರದ ಎಲೆಯ ಮೇಲೆ, ಚಂದನದಿಂದ ಈ ಮಂತ್ರವನ್ನು ಬರೆಯಿರಿ ಅದೇನೆಂದರೆ “ಓಂ ಶ್ರೀಂ ಹ್ರೀಂ ಶತ್ರುವಿನಾಶಾಯ ನಮಃ” ಹೀಗೆ ಬರೆದು ನಂತರ ಅರಳಿ ಮರದ ಎಲೆಯನ್ನು ಸುತ್ತಬೇಕು ನಂತರ ಅದರ ಮೇಲೆ 3ಬಾರಿ ಶುದ್ಧವಾದ ನೀರನ್ನು ಪ್ರೋಕ್ಷಣೆ ಮಾಡಬೇಕು. ಈ ಎಲೆಯನ್ನು ನೀವು ನಂತರ ಹರಿಯುವ ನೀರಿಗೆ ಬಿಡಬೇಕು ಈ ರೀತಿ ನೀವು ಶನಿವಾರದ ದಿವಸದಂದು ಮಾಡಿಕೊಳ್ಳುವುದರಿಂದ ಶತ್ರು ವಿನಾಶವಾಗುತ್ತದೆ ಶತ್ರುಭಾದೆ ಪರಿಹಾರ ಆಗುತ್ತದೆ.
ಇನ್ನೂ ಸುಲಭವಾದ ಪರಿಹಾರ ಅಂದರೆ ಮಂಗಳವಾರ ದಿವಸದಂದು ಚಿಕ್ಕ ಮಕ್ಕಳಿಗೆ ಸಿಹಿ ಹಂಚುವುದರಿಂದ ಕೂಡ ನಿಮ್ಮ ಜೀವನದಲ್ಲಿ ಶತ್ರುಕಾಟ ನಿವಾರಣೆಯಾಗುತ್ತದೆ. ಇದು ತುಂಬಾ ಸುಲಭವಾದ ಸರಳವಾದ ಪರಿಹಾರ ಆಗಿರುತ್ತದೆ. ಈ ಪರಿಹಾರವನ್ನು ಯಾರು ಬೇಕಾದರೂ ಬಳಸಬಹುದು ಇದನ್ನು ಮಂಗಳವಾರದ ದಿವಸದಂದು ಪಾಲಿಸಬೇಕಾಗುತ್ತದೆ.