ಲವಂಗವನ್ನು ಸುಟ್ಟು ಮತ್ತು ಬೂದಿಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇರುವುದಿಲ್ಲ.ಜೀವನದಲ್ಲಿ ಕಷ್ಟ ಇಲ್ಲದ ಮನುಷ್ಯ ಈ ಭೂಮಿಯ ಮೇಲೆ ಯಾರು ಇಲ್ಲ ಅನಿಸುತ್ತದೆ ಮಾತಿಗೆ ನಾನು ತುಂಬಾ ಆರಾಮಾಗಿದ್ದೇನೆ ನನಗೆ ಯಾವುದೇ ಕಷ್ಟ ಇಲ್ಲ ಎನ್ನುವರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾರೆ. ಆದರೆ ಎಷ್ಟೇ ಕಷ್ಟಗಳು ಬಂದರು ಜೀವನದಲ್ಲಿ ಧೈರ್ಯಗೆಡದೆ ಕಷ್ಟಗಳು ಬಂದಿರುವುದು ನಮಗೆ ಒಂದೊಂದು ಹೊಸ ಪಾಠಗಳನ್ನು ಕಲಿಸಲು ಎಂದು ತಿಳಿದುಕೊಂಡು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಆದರೆ ನಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ನಮಗೆ ಯಾವುದೇ ಸಕಾರಾತ್ಮಕ ಯೋಚನೆಗಳು ಬರುವುದಿಲ್ಲ ಮನೆಯಲ್ಲಿ ಬರಿ ಆರೋಗ್ಯದ ಸಮಸ್ಯೆ ಮೇಲಿಂದ ಮೇಲೆ ತುಂಬಾ ಖರ್ಚು ಹಾಗೆ ಪ್ರತಿನಿತ್ಯ ಜಗಳ ಇದ್ದೇ ಇರುತ್ತವೆ.
ಇದಕ್ಕೆಲ್ಲ ಕಾರಣ ಯಾರಾದರೂ ನಮ್ಮ ಮನೆಗೆ ದೃಷ್ಟಿ ಬಿಟ್ಟಿದ್ದರೆ ಹೀಗೆ ಆಗುತ್ತದೆ. ಮನೆಯಲ್ಲಿ ಈ ಒಂದು ಪ್ರಯೋಗವನ್ನು ನೀವು ಮಾಡಿ ನೋಡಿ ನಿಮಗೆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಇದ್ದರೂ ಬೇಗನೆ ಪರಿಹಾರವಾಗುತ್ತದೆ ಈ ಪರಿಹಾರಕ್ಕೆ ಕೇವಲ ಲವಂಗಗಳು ಬೇಕು. 5 ಲವಂಗಗಳನ್ನು ತೆಗೆದುಕೊಂಡು ದೇವರ ಪೂಜೆ ಮಾಡಿ ಕರ್ಪೂರದೊಂದಿಗೆ ಲವಂಗಗಳನ್ನು ಸುಟ್ಟು ಅದರ ಬೂದಿಯನ್ನು ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಇದ್ದರೆ ದೂರಾಗುತ್ತವೆ. ಇನ್ನು ಹಿಂದಿನ ಕಾಲದಲ್ಲಿ ನಕಾರಾತ್ಮಕ ಶಕ್ತಿಗಳನ್ನು ದೂರಮಾಡಲು ದೇವರಿಗೆ ಪೂಜೆ ಮಾಡಿ ವಿಭೂತಿಯನ್ನು ಹಚ್ಚಿಕೊಳ್ಳುತ್ತಿದ್ದರು ಈಗಲೂ ಕೆಲವೊಬ್ಬರ ಮನೆಯಲ್ಲಿ ವಿಭೂತಿ ಇದ್ದೇ ಇರುತ್ತದೆ ಅದರಲ್ಲೂ ಲಿಂಗಾಯತ ಮನೆಗಳಲ್ಲಿ ವಿಭೂತಿಯನ್ನು ತಪ್ಪದೆ ಹಚ್ಚುತ್ತಾರೆ
ಇದನ್ನು ಹಚ್ಚಿಕೊಳ್ಳುವುದರಿಂದ ಯಾವುದೇ ನಕಾರಾತ್ಮಕ ಶಕ್ತಿ ಇರುವುದಿಲ್ಲ. ವಿಭೂತಿಯನ್ನು ಆಕಳ ಸಗಣಿಯಿಂದ ಹಾಲು ತುಪ್ಪ ಹಾಕಿ ಮಾಡಿರುತ್ತಾರೆ ಇಂತಹ ಪರಿಶುದ್ಧವಾದ ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ತುಂಬಾ ಲಾಭ ಇದೆ. ಅದೇ ರೀತಿಯಾಗಿ ಅಡುಗೆ ಮಾಡಿದ ಮೇಲೆ ಒಲೆಯಲ್ಲಿರುವ ಬೂದಿಗೆ ನೀರು ಹಾಕಿ ಇದರಲ್ಲಿ ಸ್ವಲ್ಪ ಚಿಟಿಕೆಯಷ್ಟು ಬೂದಿಯನ್ನು ಮಕ್ಕಳ ಬಾಯಿಗೆ ಹಚ್ಚುತ್ತಿದ್ದರು ಹೀಗೆ ಮಾಡುವುದರಿಂದ ಮಕ್ಕಳಿಗೆ ಯಾವುದೇ ದೃಷ್ಟಿ ಆಗುತ್ತಿರಲಿಲ್ಲ ಸ್ನೇಹಿತರೆ ಇವೆಲ್ಲ ನಂಬಿಕೆಗಳು ಅವರಿಗೆ ತುಂಬಾ ಲಾಭವನ್ನು ಫಲಿಸುವೆ. ಈ ಒಂದು ಒಲೆಯ ಬೂದಿಯಲ್ಲಿ ಸ್ವಲ್ಪ ನೀರು ಹಾಗೂ ಜೇನುತುಪ್ಪವನ್ನು ಹಾಕಿ ಮನೆಯ ಮುಖ್ಯ ದ್ವಾರಕ್ಕೆ ಸ್ವಸ್ತಿಕ್ ಚಿತ್ರವನ್ನು ಬಿಡಿಸಿದರೆ ನಿಮ್ಮ ಮನೆಗೆ ಆಗಿರುವ ಎಲ್ಲಾ ದೃಷ್ಟಿಗಳು ದೂರವಾಗುತ್ತವೆ.
ಸ್ನೇಹಿತರೆ ಸ್ವಸ್ತಿಕ್ ಚಿತ್ರಕ್ಕೆ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುವ ಶಕ್ತಿ ಇದೆ ಇದು ಲಕ್ಷ್ಮೀದೇವಿಯ ಸಂಕೇತ ಎಂದು ಹೇಳಲಾಗುತ್ತದೆ ಇದನ್ನು ನೀವು ಮನೆಯಲ್ಲಿ ಸಿಂಧೂರದಿಂದ ಕೂಡ ಹಚ್ಚಬಹುದು ಆದರೆ ಈಗಿನ ಕಾಲದಲ್ಲಿ ಪರಿಶುದ್ಧವಾದ ಸಿಂಧೂರ ಸಿಗುವುದು ತುಂಬಾ ಕಷ್ಟ ಆಗಿದೆ ಹಾಗಾಗಿ ಒಲೆಯ ಬೂದಿಯಿಂದ ಮನೆ ಹೊರಗೆಯಾದರೆ ಮನೆಯ ಮುಖ್ಯ ದ್ವಾರಕ್ಕೆ ಮುಂದೆ ಹಚ್ಚಬಹುದು ಮನೆಯ ಒಳಗಡೆ ಆದರೆ ರೂಮಿನ ಒಳಗಡೆ ಭಾಗದಲ್ಲಿ ಇದನ್ನು ಅಂದರೆ ಈ ಸ್ವಸ್ತಿಕ್ ಚಿತ್ರವನ್ನು ಬಿಡಿಸಿಕೊಳ್ಳಬೇಕು. ಸ್ನೇಹಿತರೆ ಈ ಒಂದು ಚಿತ್ರ ನಿಮ್ಮ ಮನೆಯಲ್ಲಿ ಇದ್ದರೆ ನೀವು ಅದೃಷ್ಟವಂತರು ಆಗುತ್ತೀರಿ ಹಾಗೆಯೇ ಎಲ್ಲಿ ಯಾವುದೇ ಕಷ್ಟನಷ್ಟಗಳು ಇದ್ದರೆ ಬೇಗನೆ ಪರಿಹಾರ ಆಗುತ್ತವೆ.
ಸ್ವಸ್ತಿಕ್ ಚಿತ್ರಕ್ಕೆ ತುಂಬಾ ಮಹತ್ವವಿದೆ ಇದು ಮನೆಯಲ್ಲಿ ಶುಭಕಾರ್ಯಗಳನ್ನು ಹೆಚ್ಚು ಮಾಡುತ್ತದೆ ಹಾಗೆ ಅಶುಭ ದೋಷಗಳನ್ನು ತಡೆಹಿಡಿಯುತ್ತದೆ. ಮನೆಯಲ್ಲಿ ಯಾವುದೇ ಖರ್ಚಿಲ್ಲದೆ ಒಲೆಯ ಬೂದಿಯಿಂದ ಈ ಒಂದು ಪರಿಹಾರ ಮಾಡಿಕೊಂಡರೆ ನಿಮಗೆ ತುಂಬಾ ಲಾಭ ಸಿಗುತ್ತದೆ ಹಾಗೆ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಉಳಿಯುವುದಿಲ್ಲ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಇರುತ್ತದೆ ವ್ಯಾಪಾರದಲ್ಲಿ ಲಾಭ ಆರೋಗ್ಯದಲ್ಲಿ ಶಿಕ್ಷಣದಲ್ಲಿ ಅಭಿವೃದ್ಧಿ ಹೀಗೆ ಎಲ್ಲಾ ಶುಭಫಲಗಳು ನಿಮಗೆ ಸಿಗುತ್ತವೆ. ಲವಂಗದಿಂದ ಮಾಡಿಕೊಂಡ ಪರಿಹಾರ ಹಾಗೂ ಬೂದಿಯಿಂದ ಮಾಡಿಕೊಂಡ ಪರಿಹಾರ ನಿಮ್ಮ ಮನೆಯ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ನಿಮಗೆ ಒಳ್ಳೆಯದನ್ನು ಮಾಡುತ್ತವೆ ಇದು ಈಗ ಬಂದ ನಂಬಿಕೆ ಅಲ್ಲ
ಹಿಂದಿನ ಕಾಲದಿಂದಲೂ ಈ ಒಂದು ನಂಬಿಕೆ ಇದೆ ಹಾಗೂ ಸ್ವಸ್ತಿಕ್ ಚಿತ್ರಕ್ಕೆ ಎಲ್ಲಾ ಸಮಸ್ಯೆಗಳನ್ನು ಹಾಗೂ ದೋಷಗಳನ್ನು ಪರಿಹರಿಸುವ ಶಕ್ತಿ ಇದೆ ಇದನ್ನು ಮನೆಯ ಮುಖ್ಯದ್ವಾರದಲ್ಲಿ ಬಿಡಿಸಿದರೆ ನಿಮಗೆ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಹಾಗೆ ನಿಮ್ಮ ಮನೆಗೆ ದೃಷ್ಟಿ ಆಗುವುದಿಲ್ಲ. ಸ್ನೇಹಿತರೆ ಹಾಗಾದರೆ ಈ ಒಂದು ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ