ಚಿಟ್ಟೆಗಳು ಮನೆಗೆ ಬರುವುದರಿಂದ ನಮಗೆ ಶುಭವೇ ಅಥವಾ ಅಶುಭವೇ. ಯಾಕೆ ಈ ಚಿಟ್ಟೆಗಳು ಮನೆ ಒಳಗೆ ಬರುತ್ತವೆ ಬಂದರೆ ಏನಾಗುತ್ತದೆ ನೋಡಿ.
ನಮ್ಮ ಪ್ರಕೃತಿ ಎಷ್ಟು ಚೆನ್ನಾಗಿದೆ ಹಾಗೂ ಏನೇಲ್ಲ ಒಳಗೊಂಡಿದೆ ನಿಮಗೆ ತಿಳಿದಿದೆ.ಈ ಸುಂದರವಾದ ಪ್ರಕೃತಿಯಲ್ಲಿ ಗಿಡಮರ,ಪ್ರಾಣಿ ಪಕ್ಷಿ,ಮನುಷ್ಯರು ಏನೆಲ್ಲ ಇವೆ ಅಲ್ಲವೇ. ಅದರಲ್ಲೂ ಪ್ರಕೃತಿಗೆ ತುಂಬಾ ಹತ್ತಿರವಾಗಿರುವುದು ಮರಗಿಡಗಳು, ಮತ್ತು ಮರಗಿಡಗಳಿಗೆ ಹತ್ತಿರವಾದದ್ದು ಚಿಟ್ಟೆಗಳು.ಚಿಟ್ಟೆಗಳು ನೋಡಲು ತುಂಬಾ ಮನಮೋಹಕವಾಗಿರುತ್ತದವೆ. ಚಿಟ್ಟೆಗಳು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸ್ನೇಹಿತರೆ ನಿಮಗೆ ಯಾವ ಚಿಟ್ಟೆ ಇಷ್ಟ ಮತ್ತು ಚಿಟ್ಟೆಗಳ ಬಗ್ಗೆ ನಿಮಗೆಷ್ಟು ತಿಳಿದಿದೆ ಸ್ವಲ್ಪ ಸಮಯ ನೀವು ಪ್ರಕೃತಿಗೆ ಮೀಸಲು ಇಟ್ಟಿರುವಿರಾ ಎಂದು ಒಂದು ಸಲ ಯೋಚಿಸಿ.
ನಾವು ಇರುವುದೇ ಈ ಪ್ರಕೃತಿಯಲ್ಲಿ ಆದರೆ ಇಂದಿನ ಆಧುನಿಕ ಯುಗದಲ್ಲಿ ನಾವು ಪ್ರಕೃತಿಯನ್ನು ತುಂಬಾ ಕಲುಷಿತ ಮಾಡುತ್ತಿದ್ದೇವೆ. ವರ್ಷಕ್ಕೆ ಒಂದು ಸಲ ಆದರೂ ನಾವು ಪ್ರಕೃತಿಯನ್ನು ನೋಡಬೇಕು ಅಂದರೆ ಹಸಿರು ಪ್ರದೇಶವನ್ನು ನೋಡಬೇಕು ಇದರಿಂದ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಯೋಚನೆಗಳು ದೂರಾಗುತ್ತವೆ ಹಾಗೂ ನಮ್ಮ ಮನಸ್ಸು ತುಂಬಾ ಹಗುರಾಗುತ್ತದೆ ಆರೋಗ್ಯದಲ್ಲಿ ಕೂಡ ಅಭಿವೃದ್ಧಿ ಇರುತ್ತದೆ. ನೋಡಿ ಸ್ನೇಹಿತರೆ ಪ್ರಕೃತಿಗೆ ಎಷ್ಟು ಶಕ್ತಿ ಇದೆ. ಇನ್ನು ಚಿಟ್ಟೆಗಳ ವಿಷಯಕ್ಕೆ ಬಂದರೆ ಪ್ರಪಂಚದಲ್ಲಿ 25000ಕ್ಕೂ ಹೆಚ್ಚು ಪ್ರಜಾತಿಯ ಚಿಟ್ಟೆಗಳಿವೆ ಮತ್ತು 15000 ಪ್ರಜಾತಿಯ ಚಿಟ್ಟೆಗಳು ನಮ್ಮ ದೇಶದಲ್ಲಿವೆ. ಚಿಟ್ಟೆಗಳು ಸರಾಸರಿ ಎರಡರಿಂದ ನಾಲ್ಕು ತಿಂಗಳವರೆಗೆ ಬದುಕುತ್ತವೆ.
ಗಂಡು ಚಿಟ್ಟೆ ಗಳಿಗಿಂತ ಹೆಣ್ಣು ಚಿಟ್ಟೆಗಳಿಗೆ ಆಯಸ್ಸು ಜಾಸ್ತಿ ಮತ್ತು ಚಿಟ್ಟೆಗಳು ಯಾವ ಮೊಟ್ಟೆಯಿಂದ ಹೊರಗಡೆ ಬಂದಿರುತ್ತದೆಯೋ ಆ ಮೊಟ್ಟೆಯ ಹೊರಗಡೆ ಇರುವ ಪದರನ್ನು ಮೊದಲು ತಾನು ತಿನ್ನುತ್ತದೆ. ಚಿಟ್ಟೆಗಳು ಹೂಗಿಡ ತನ್ನ ಕಾಲುಗಳಿಂದ ದುಂಬಿಗಳನ್ನು ಸ್ಪರ್ಶಿಸುತ್ತವೆ. ಚಿಟ್ಟೆಗಳು ಯಾವುದೇ ಸುಗಂಧವನ್ನು ತನ್ನ ಆಂಟೆನಾದಿಂದ ಗ್ರಹಿಸುತ್ತೆ. ಚಿಟ್ಟೆಗಳಿಗೆ ಹೊಳೆಯುವ ಕಣ್ಣುಗಳು ಇರುತ್ತೆ. ಮೊದಮೊದಲಾಗಿ ಚಿಟ್ಟೆಗಳಿಗೆ ಕಿವಿಗಳು ಇಲ್ಲ ಎನ್ನುತ್ತಿದ್ದರು. ನಂತರ 1912 ನೆಯ ಸಂಶೋಧನೆಯಲ್ಲಿ ಚಿಟ್ಟೆಗಳಿಗೆ ಕಿವಿಗಳಿದೆ ಎಂದು ತಿಳಿದು ಬಂದಿತು. ಚಿಟ್ಟೆಗಳು ಅವುಗಳ ಸುತ್ತಲಿನ ಶಬ್ದವನ್ನು ಕಿವಿಗಳಿಂದ ಗ್ರಹಿಸುತ್ತವೆ. ಚಿಟ್ಟೆಗಳ ಕಣ್ಣುಗಳಲ್ಲಿ ಲೆನ್ಸ್ ಪದರವಿರುತ್ತದೆ ಇದರಿಂದ ಚಿಟ್ಟೆಗಳು ಬಿಸಿಲಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುತ್ತವೆ.
ಚಿಟ್ಟೆಗಳಿಗೆ ದೊಡ್ಡದಾದ ಕೊಳವೆಯಾಕಾರದ ನಾಲಿಗೆ ಇರುತ್ತದೆ ಮತ್ತು ಈ ನಾಲಿಗೆಯಿಂದ ದುಂಬಿಗಳ ಮಕರಂದವನ್ನು ಚಿಟ್ಟೆಗಳು ಹೀರುತ್ತವೆ. ಚಿಟ್ಟೆಗಳು ತಾವು ತಿನ್ನುವ ಆಹಾರವನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳುತ್ತವೆ. ಚಿಟ್ಟೆಗಳ ರಕ್ತ ತುಂಬಾ ತಂಪಾಗಿರುತ್ತದೆ ಪ್ರಕೃತಿಯಲ್ಲಿ ಹವಮಾನದ ಶಾಖದ ಪ್ರಮಾಣ ಕಮ್ಮಿಯಾದರೆ ಇವುಗಳು ಹಾರುವುದಿಲ್ಲ. ಏಕೆಂದರೆ ಇದರಲ್ಲಿರುವ ರಕ್ತ ತುಂಬಾ ತಂಪಾಗಿರುತ್ತದೆ ಮತ್ತು ತಮ್ಮ ಶರೀರದ ಶಾಕವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಚಿಟ್ಟೆಗಳ ರೆಕ್ಕೆಗಳ ತುಂಬಾ ಪಾರದರ್ಶಕವಾಗಿರುತ್ತವೆ ಮತ್ತು ಚಿಟ್ಟೆಗಳು ಎಷ್ಟು ದೂರ ಹಾರುತ್ತವೋ ಅಷ್ಟು ಯೋಚನಾ ಶಕ್ತಿಯನ್ನು ಕೂಡ ಸಹ ಹೊಂದಿರುತ್ತವೆ. ಆದರೆ ಈ ಚಿಟ್ಟೆಗಳು ವರ್ಷದ ಎಲ್ಲಾ ಕಾಲದಲ್ಲೂ ನೋಡಲು ಸಿಗುವುದಿಲ್ಲ.
ಈ ಚಿಟ್ಟೆಗಳು ತಿಂಗಳಿನಲ್ಲಿ ಎರಡು ಬಾರಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಚಿಟ್ಟೆಗಳ ವೇಗ ಕುದುರೆಗಳ ವೇಗಕ್ಕಿಂತ ಹೆಚ್ಚಾಗಿರುತ್ತದೆ. ಇಂತಹ ಚಿಟ್ಟೆಗಳು ನಿಮ್ಮ ಮನೆಯ ಮುಂದೆ ಅಥವಾ ಹೊರಾಂಗಣದಲ್ಲಿ ಅಥವಾ ಮನೆಯ ಒಳಗಡೆ ಬಂದರೆ ತುಂಬಾ ಶುಭವಾದದ್ದು. ಶ್ರೀಕೃಷ್ಣ ಚಿಟ್ಟೆಗಳು ಹಾಗೂ ಪಕ್ಷಿಗಳು ಮನೆಯ ಮುಂದೆ ಬಂದು ಶುಭ ಸಮಾಚಾರಗಳನ್ನು ನೀಡುತ್ತವೆ ಎಂದು ಹೇಳಿದ್ದಾನೆ. ಶಾಸ್ತ್ರಗಳಲ್ಲಿ ಕೂಡ ಚಿಟ್ಟೆಗಳು ಮನೆ ಒಳಗಡೆ ಬಂದರೆ ಶುಭ ಎಂದು ಹೇಳಲಾಗುತ್ತದೆ. ಯಾವುದೇ ಕೆಲಸಕ್ಕೆ ಹೋಗುವಾಗ ಚಿಟ್ಟೆಗಳು ಎದುರಾದರೆ ಅದು ಶುಭದ ಸಂಕೇತ.
ಈ ಚಿಟ್ಟೆಗಳು ಮನುಷ್ಯನ ಉನ್ನತಿ ಹಾಗೂ ಶಾಂತಿಯ ಸಂಕೇತಗಳಾಗಿವೆ. ಹಾಗೆಯೇ ಚಿಟ್ಟೆಗಳನ್ನು ನಾವು ದಿನಾಲು ನೋಡುವುದರಿಂದ ಅವುಗಳ ಮೇಲಿನ ಬಣ್ಣಗಳು ನಮ್ಮಜಾತಕಗಳ ಮೇಲೆ ಅನುಕೂಲಕರಗಳ ಪ್ರಭಾವ ಬೀರುತ್ತವೆ ಮತ್ತು ನಮ್ಮ ಜೀವನದಲ್ಲಿ ತುಂಬಾ ಏಳಿಗೆ ಆಗುತ್ತದೆ. ಹಾಗೆಯೇ ಚಿಟ್ಟೆಗಳು ಮನೆಯ ಒಳಗಡೆ ಜೋಡಿಯಾಗಿ ಬಂದರೆ ಶೀಘ್ರದಲ್ಲಿ ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಚಿಟ್ಟೆಗಳನ್ನು ದಿನಾಲು ನೋಡುವುದರಿಂದ ಅದರಲ್ಲೂ ನಿಮ್ಮ ಮನೆಯ ಮುಂದೆ ನೋಡುವುದರಿಂದ ತುಂಬಾ ಸಂತೋಷವಿರುತ್ತದೆ.
ಚಿಟ್ಟೆಗಳ ಆಯಸ್ಸು ತುಂಬಾ ಚಿಕ್ಕದಾಗಿರುತ್ತದೆ ಆದರೂ ಕೂಡ ಅವು ತುಂಬಾ ಖುಷಿಯಾಗಿ ಹಾರಾಡಿಕೊಂಡು ಇರುತ್ತವೆ. ಚಿಟ್ಟೆಗಳು ಕೂಡ ನಮಗೆ ಬದುಕುವುದನ್ನು ಕಲಿಸುತ್ತವೆ ಚಿಟ್ಟೆಯ ಹಾಗೆ ಜೀವನದಲ್ಲಿ ನೀವು ಕೂಡ ಖುಷಿಯಾಗಿ ಇರಿ. ಸ್ವಲ್ಪ ದಿನ ಇದ್ದರೂ ಕೂಡ ಯಾರಿಗೂ ನೋವು ಮಾಡದೆ ಚೆನ್ನಾಗಿರಬೇಕು. ಹಾಗಾದ್ರೆ ಗೊತ್ತಾಯಿತಲ್ಲ ಫ್ರೆಂಡ್ಸ್ ಚಿಟ್ಟೆಗಳು ಎಂದೆಂದಿಗೂ ನಮಗೆ ಶುಭವನ್ನೇ ಮಾಡುತ್ತವೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ