ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ಯಾವುದಾದರೂ ವ್ಯಾಪಾರ ಕೆಲಸದಲ್ಲಿ ತೊಡಗಿದ್ದರೆ ಅದು ಕೆಲವೊಮ್ಮೆ ಚೆನ್ನಾಗಿ ನಡೆಯುತ್ತದೆ ಮತ್ತು ಕೆಲವೊಮ್ಮೆ ನಷ್ಟದಲ್ಲಿ ನಡೆಯುತ್ತಾ ಇರುತ್ತದೆ ಆದರೆ ನಷ್ಟ ನಾವು ಬೇಕು ಎಂದು ಮಾಡಿಕೊಳ್ಳುವುದಲ್ಲ ಹಾಗಾಗಿ ವ್ಯಾಪಾರದಲ್ಲಿ ಆಗುವಂತಹ ಅನೇಕ ನಷ್ಟಗಳು ನಮಗೆ ಎದುರಾಗುತ್ತಲೇ ಇರುತ್ತದೆ ಅನೇಕ ಬಾರಿ ಅಂತಹ ನಷ್ಟಗಳು ನಮಗೆ ಎದುರಾಗಬಾರದು ಎಂದರೆ ಅದಕ್ಕೆ ಹಲವು ಪರಿಹಾರಗಳಿವೆ. ಹಾಗಾದರೆ ಯಾವೆಲ್ಲ ಪರಿಹಾರಗಳು ಇದೆ ಎಂದು ಮೊದಲು ತಿಳಿದುಕೊಳ್ಳುವುದು ಉತ್ತಮ ಜೊತೆಗೆ ಯಾವ ಪರಿಹಾರ ಸೂಕ್ತ ಎಂದು ಕೂಡ ನಾವು ತಿಳಿಯಬೇಕು. ಇನ್ನು ನಷ್ಟಗಳು ಎದುರಾದಾಗ ನಮಗೆ ಹಲವರು ಜನರ ಕಣ್ಣು ನಿನ್ನ ಮೇಲೆ ಬಿದ್ದಿದೆ ಎಂದು ಹೇಳುತ್ತಾರೆ ಅದಕ್ಕೆ ಉತ್ತಮವಾದಂತಹ ಉಪಾಯ ಎಂದರೆ ಮಣಿ ಮಂತ್ರ ತಂತ್ರ ಔಷಧ ಈ ಪದ ಇದು ಬರಿ ಮಂತ್ರ ಮಾತ್ರವಲ್ಲ ಇದು ದೇವರಿಂದ ಮತ್ತು ದೃಷ್ಟಿ ನಿವಾರಕ ದಿಂದ ಆಗುವಂಥದ್ದು..
ಹಾಗಾಗಿ ಅದರ ಪರಿಹಾರಕ್ಕೆ ಒಂದು ಉಪಾಯವಿದೆ ಅದೇನೆಂದರೆ ಒಂದು ನೀಲಿ ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಚೌಕವಾಗಿ ಅದನ್ನು ಒಲೆದುಕೊಳ್ಳಬೇಕು ನಂತರ ಅದನ್ನು ನೀಲಿ ದಾರದಿಂದ ಮೂರು ಭಾಗ ಸುತ್ತಬೇಕು, ಮೂರು ಭಾಗ ಸುತ್ತಿದಾಗ ಒಂದು ಭಾಗ ಖಾಲಿ ಉಳಿಯುತ್ತದೆ ಉಳಿದಂತಹ ಭಾಗವನ್ನು ಹಾಗೆ ಬಿಟ್ಟುಬಿಡಬೇಕು. ಆನಂತರ ಉಳಿದಿರುವಂತಹ ಭಾಗದಲ್ಲಿ ಅಂದರೆ ಅದನ್ನು ದಾರ ಸುತ್ತಿರುವಂತಹ ಭಾಗಗಳಲ್ಲಿ ಅದರ ಒಳಗೆ 15 ಅವರೇ ಬೀಜ ಹಾಕಿ ಇಡಬೇಕು ನಂತರ ಅದಕ್ಕೆ 25 ಕರಿ ಎಳ್ಳು ಅಂದರೆ ಲೆಕ್ಕ ಹಾಕಿದಂತೆ 25 ಎಳ್ಳು ಕಾಳುಗಳು ಮಾತ್ರವೇ ಇರಬೇಕು ಹೀಗೆ ಅವೆರಡನ್ನು ಅದರೊಳಗೆ ಹಾಕಿ ಇಟ್ಟುಕೊಳ್ಳಬೇಕು ಅಂದರೆ ವಸ್ತ್ರದ ಒಳಗೆ ಹಾಕಿ ಇಡಬೇಕು ಇನ್ನು ಮುಂದುವರೆಯುತ್ತಾ ನಂತರ ಅದರ ಜೊತೆಗೆ ಜವ್ವದ್ ಎಂಬ ಪೌಡರ್ ಸಿಗುತ್ತದೆ ಅದು ಕಾಮನ್ ಆಗಿ ಪೂಜಾ ಮಳಿಗೆಗಳಲ್ಲಿ ಸಿಗುತ್ತದೆ ಅದು ಚಿಕ್ಕ ಡಬ್ಬಿಯನ್ನು ತೆಗೆದುಕೊಂಡರೆ ಸಾಕು ಜವ್ವಾದನ್ನು ತೆಗೆದುಕೊಂಡು ಅದಕ್ಕೆ ಅವಸ್ತ್ರಕ್ಕೆ ಹಾಕಬೇಕು ಆನಂತರ ಅದನ್ನು ಮುಚ್ಚಿ ಇಡಬೇಕು..
ನಂತರ ಮುಚ್ಚಿ ಇಟ್ಟಂತಹ ಆ ವಸ್ತ್ರವನ್ನು ಚೌಕವಾಗಿರುವಂತಹ ಅ ವಸ್ತ್ರವನ್ನು ನೀಟಾಗಿ ಪೂರ್ತಿಯಾಗಿ ಒಲಿದು ಬಿಡಬೇಕು ನಂತರ ಅದನ್ನು ತೆಗೆದುಕೊಂಡು ಶುಕ್ರವಾರ ದಿನದ ಬೆಳಗ್ಗೆ 5 6 7 ಇಲ್ಲ ಮಧ್ಯಾಹ್ನದ ಒಂದು ಎರಡು ಮೂರು ಇಲ್ಲವೇ ಸಾಯಂಕಾಲದ 17 18 ಮತ್ತು 19 ಗಂಟೆಗಳ ಒಳಗೆ ಅಂದರೆ ಅಂತಹ ಸಮಯದಲ್ಲಿ ಮಾತ್ರ ಅದನ್ನು ನಾವು ಪೂಜೆಗೆ ತೆಗೆದುಕೊಳ್ಳಬೇಕು ಆದರೆ ಈ ರೀತಿಯಾಗಿ ಮಾಡಿ ಈ ರೀತಿಯಾಗಿ ಮುದ್ರಿಸಿದಂತಹ ವಸ್ತ್ರಕ್ಕೆ ಸರ್ಪ ಮುದ್ರಿಕೆ ಹಾಕಿಸುವುದು ಮಾತ್ರ ಕಡ್ಡಾಯ ಏಕೆಂದರೆ ಸರ್ಪದ ಅಥವಾ ನಾಗದ ಕಾರ್ಯ ಇಲ್ಲ ಎಂದರೆ ಆ ಕೆಲಸ ಯಾವುದು ನಡೆಯುವುದಿಲ್ಲ.
ಇದು ದಕ್ಷಿಣ ಕನ್ನಡದವರಿಗೆ ಚೆನ್ನಾಗಿ ಗೊತ್ತು ಇನ್ನು ಗಣಪತಿ ಇಲ್ಲದೆ ಇದ್ದರೂ ಕೂಡ ಯಾವ ಕೆಲಸವು ನಡೆಯುವುದಿಲ್ಲ ಇದು ಉತ್ತರ ಕನ್ನಡದವರಿಗೆ ಗೊತ್ತು. ಇದರ ಜೊತೆಗೆ ನಾವು ಪೂಜೆಗೆ ಕುಳಿತುಕೊಳ್ಳುವಾಗ ಶುದ್ಧ ಮನಸ್ಸಿನಿಂದ ಸಂಕಲ್ಪವನ್ನು ಮಾಡಬೇಕು ಸಂಕಲ್ಪ ಮಾಡುವಾಗ ದೇವರಲ್ಲಿ ದೇವರೇ ನನಗೆ ವ್ಯಾಪಾರದಲ್ಲಿ ಬಹಳ ತೊಂದರೆಯಾಗುತ್ತಿದೆ 10 ದಿನ ಕಸ್ಟಮರ್ಸ್ ಎಲ್ಲರೂ ಕೂಡ ಚೆನ್ನಾಗಿ ಬರುತ್ತಾರೆ 11ನೇ ದಿನ ಮತ್ತೆ ತೊಂದರೆ ಶುರುವಾಗುತ್ತದೆ ಇನ್ನು ದಿನ ಬಿಟ್ಟು ದಿನ ಮತ್ತೆ ತೊಂದರೆ ಶುರುವಾಗುತ್ತದೆ ಹಾಗಾಗಿ ಇಂತಹ ಎಲ್ಲ ಸಮಸ್ಯೆಗಳನ್ನು ನಿನ್ನ ಪಾದಗಳಲ್ಲಿಯೇ ಹಾಕಿದ್ದೇನೆ ನೀನೆ ನೋಡಿಕೊಳ್ಳಬೇಕು ಎಂದು ಸಂಕಲ್ಪ ಮಾಡಬೇಕು.
ನಂತರ ಸಿದ್ಧಿವಿನಾಯಕನ ಮೂಲ ಮಂತ್ರವನ್ನು ಜಪಿಸಬೇಕು ಆನಂತರ ಶ್ರೀ ಲಕ್ಷ್ಮಿ ದೇವಿಯ ವರ ನಮಗೆ ದೊರಕಬೇಕು ಎಂದು ಹೇಳಿ ಶ್ರೀ ಲಕ್ಷ್ಮಿ ದೇವಿಯ ಮಂತ್ರವನ್ನು ಕೂಡ ಪಠಿಸುತ್ತಾ ಆನಂತರ ಅದನ್ನು ನಾವು ವ್ಯಾಪಾರ ಮಾಡುವಂತಹ ಸ್ಥಳಗಳಲ್ಲಿ ವಿವಿಧ ಮೂಲಗಳಲ್ಲಿ ವಿವಿಧ ರೀತಿಯಲ್ಲಿ ನಾವು ಅಂತವುಗಳನ್ನು ಇಡಬಹುದು ಅದರ ಸುವಾಸನೆ ಮತ್ತು ಅದರ ಕೆಲಸದಿಂದ ನಮ್ಮ ಬಳಿಗೆ ಬರುವಂತಹ ಎಷ್ಟೋ ಜನ ಕಷ್ಟಮರ್ಸ್ ತೆಗೆದುಕೊಂಡು ಹಲವು ರೀತಿಯಾದಂತಹ ವ್ಯಾಪಾರದ ಹೆಚ್ಚಳಿಕೆ ನಮ್ಮಲ್ಲಿ ನಡೆಯುತ್ತದೆ ಹಾಗಾಗಿ ಇಂತಹ ಉಪಾಯ ಬಹಳಷ್ಟು ನಮಗೆ ಉಪಯೋಗವಾಗುತ್ತದೆ.