ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕ್ರಿಯೆಯು ಪೂರ್ವ ನಿರ್ದಾರಿತ ಎಂದು ನಮ್ಮ ಧಾರ್ಮ ಹಾಗು ಶಾತ್ರಗಳು ಮೊದಲಿನಿಂದಲೂ ಹೇಳುತ್ತಾ ಬಂದಿದೆ,ಇದೆಲ್ಲ ಭಗವಂತನ ನಿರ್ಣಯ, ಇನ್ನು ಮನುಷ್ಯನ ಪೂರ್ವ ಜನ್ಮದ ಪಾಪ ಪುಣ್ಯಗಳ ನಿಮಿತ್ತ ಅವನ ಹೊಸ ಜನುಮ ಶುರು ಮಾಡುತ್ತಾನೆ,ಅದರಂತೆ ಅವನ ಹುಟ್ಟಿನ ದಿನಾಂಕ ಅವನ ಕರ್ಮಗಳನ್ನ ತಿಳಿ ಹೇಳುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ, ಆರಂತೆ ಹುಟ್ಟಿದ ದಿನಾಂಕ ಆದರಿಸಿ ಮನುಜನಿಗೆ ಕಾಡುವ ರೋಗಗಳ ಬಗ್ಗೆ ಒಂದು ವಿವರಣೆ ನೀಡಿದ್ದೇವೆ.
ದಿನಾಂಕ 1, 10, 19, 28 : ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಹೃದಯದ ಒತ್ತಡ, ಕಣ್ಣಿನ ಬಾಧೆ, ರಕ್ತದ ಒತ್ತಡ, ತಲೆ ತಿರುಗುವುದು, ಅಪಸ್ಮಾರ, ಟೈಫಾಯ್ಡ್, ಶಿರೋ ರೋಗಗಳು ಉಂಟಾಗಬಹುದು, ಸಾಮಾನ್ಯವಾಗಿ 19, 28, 37, 55, 64, 73, 82 ವಯಸ್ಸಿನಲ್ಲಿ ಯಾವುದೇ ವರ್ಷದ ಅಕ್ಟೋಬರ್, ಡಿಸೆಂಬರ್ ಮತ್ತು ಜನವರಿ ತಿಂಗಳು ಗಂಡಾಂತಕಾರಿ ಯಾಗಿರುತ್ತದೆ, ಪ್ರತಿ ಭಾನುವಾರ ಸೂರ್ಯನಾರಾಯಣನ ಸೇವೆ, ಆದಿತ್ಯ ಹೃದಯ ಪಾರಾಯಣ ಮಾಡಬೇಕು.
ದಿನಾಂಕ 2, 11, 20, 29 : ರಲ್ಲಿ ಜನಿಸಿದವರು ಶೀತ, ಅಪಸ್ಮಾರ, ಕೆಮ್ಮು, ಶ್ವಾಸಕೋಷ, ಗಂಟಲು ಬೇನೆ, ಗ್ಯಾಸ್ ಟ್ರಬಲ್ ಮತ್ತಿತರ ಬಾಧೆಗಳು ಕಾಡಬಹುದು, ಸಾಮಾನ್ಯವಾಗಿ ಈ ದಿನಾಂಕದಲ್ಲಿ ಜನಿಸಿದವರಿಗೆ 20, 25, 29, 43, 47, 52, 65 ವಯಸ್ಸಿನಲ್ಲಿ ಆರೋಗ್ಯದ ತೊಂದರೆಗಳು ಉಂಟಾಗುತ್ತದೆ ಜನವರಿ, ಫೆಬ್ರವರಿ, ಜುಲೈ ತಿಂಗಳಲ್ಲಿ ಎಚ್ಚರದಿಂದ ಇರಬೇಕು, ಪ್ರತಿ ಸೋಮವಾರ ಸೋಮೇಶ್ವರನಿಗೆ ಅರ್ಚನೆ ಮಾಡಿಸಿ, ದೇವೀ ಆರಾಧನೆ ಮಾಡಿ.
ದಿನಾಂಕ 3, 12, 21, 30 : ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಸಾಮಾನ್ಯವಾಗಿ ಪಿತ್ತಕೋಶ ತೊಂದರೆ, ಕಾಮಾಲೆ ರೋಗ, ಅತಿಭೇದಿ, ಅಜೀರ್ಣ, ಹೊಟ್ಟೆ ಉಬ್ಬರದಂತಹ ತೊಂದರೆಗಳು ಕಾಣಬಹುದು, ಅದರಲ್ಲೂ 12, 21, 39, 48, 57, 66 ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು ಡಿಸೆಂಬರ್, ಫೆಬ್ರವರಿ, ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚು, ಪ್ರತಿ ಗುರುವಾರ ಕ್ಷಿಣಾಮೂರ್ತಿ ಹಾಗೂ ಗುರು ರಾಯರ ಸೇವೆ ಮಾಡಿ.
ದಿನಾಂಕ 4, 13, 22, 31 : ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಜ್ವರ, ಶರೀರದಲ್ಲಿ ಗಾಯ, ಮಾಂತ್ರಿಕ ಭಾದೆಗಳಿಂದ ರೋಗ, ಹೊಟ್ಟೆನೋವು ಉಂಟಾಗುವ ಸಾಧ್ಯತೆ ಹೆಚ್ಚು, 13, 22, 31, 40, 49, 58 ನೇ ವಯಸ್ಸಿನಲ್ಲಿ ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರದಿಂದ ಇರುವುದು ಒಳ್ಳೆಯದು ಜನವರಿ, ಫೆಬ್ರವರಿ, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಜಾಗರೂಕರಾಗಿರಿ, ದುರ್ಗಾದೇವಿಯ ಅರ್ಚನೆ ಮಾಡುವುದು ಒಳ್ಳೆಯದು.
ದಿನಾಂಕ 5, 14, 23 : ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಉದರ ಸಂಬಂಧಿ ರೋಗಗಳು, ಸೊಂಟ ಹಾಗೂ ಬೆನ್ನು ನೋವು ಕಾಡಬಹುದು ನಿದ್ರಾ ಹೀನತೆ ಕಾಡಬಹುದು, ಈ ದಿನಾಂಕದಲ್ಲಿ ಜನಿಸಿದವರು 14, 23, 41, 50, 68 ನೇ ವಯಸ್ಸಿನಲ್ಲಿ ಆರೋಗ್ಯದ ವಿಚಾರದಲ್ಲಿ ಹುಷಾರಾಗಿರಬೇಕು ಜೂನ್, ಸೆಪ್ಟೆಂಬರ್, ಡಿಸೆಂಬರ್ ತಿಂಗಳಲ್ಲಿ ಎಚ್ಚರದಿಂದಿರಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ದಿನಾಂಕ 6, 15, 24 : ರಲ್ಲಿ ಜನಿಸಿದವರಿಗೆ ಗರ್ಭಾಶಯ ಹಾಗೂ ಗುಪ್ತ ಸಂಬಂಧಿ ರೋಗ ಉಂಟಾಗಬಹುದು ಅನಿಮಿಯಾ, ಸಕ್ಕರೆ ಕಾಯಿಲೆ, ನರಗಳ ದೌರ್ಬಲ್ಯತೆ ಉಂಟಾಗಬಹುದು, ಈ ಸಂಖ್ಯೆಯಲ್ಲಿ ಜನಿಸಿದವರು 15, 24, 42, 51, 60 ನೇ ವಯಸ್ಸಿನಲ್ಲಿ ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಒಳಿತು ಮೇ, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಗಮನವಿರಲಿ, ದೇವಿ ಆರಾಧನೆ ಒಳ್ಳೆಯದು.
ದಿನಾಂಕ 7, 16, 25 : ಈ ದಿನಾಂಕಗಗಳಲ್ಲಿ ಜನಿಸಿದವರಿಗೆ ಜೀರ್ಣಾಂಗಗಳಲ್ಲಿ ತೊಂದರೆ, ಬೆವರುವಿಕೆ, ಚಿಂತೆಯಿಂದ ಉಂಟಾಗುವ ರೋಗಗಳು ಕಾಡಬಹುದು, ಈ ಸಂಖ್ಯೆಯವರು ತಮ್ಮ 7, 16, 25, 34, 43, 52, 61 ನೇ ವಯಸ್ಸಿನಲ್ಲಿ ಎಚ್ಚರದಿಂದ ಇರುವುದು ಒಳಿತು ಜನವರಿ, ಫೆಬ್ರವರಿ, ಜುಲೈ, ಆಗಸ್ಟ್ ತಿಂಗಳಲ್ಲಿ ಆರೋಗ್ಯದ ಕಡೆ ನಿಗಾ ಇಡಿ, ಮಂಗಳವಾರದಂದು ಗಣಪತಿ ಆರಾಧನೆ ಮಾಡಿ.
ದಿನಾಂಕ 8, 17, 26 : ಈ ಸಂಖ್ಯೆಯಲ್ಲಿ ಜನಿಸಿದವರು ರಕ್ತ ದೋಷ, ಶಾರೀರಿಕ ಆಲಸ್ಯ, ಅಜೀರ್ಣ, ಮೆದುಳು ಸಂಬಂಧಿತ ರೋಗಗಳಿಂದ ನರಳುವ ಸಾಧ್ಯತೆ ಹೆಚ್ಚು, ಇವರ 17, 26, 35, 44, 53, 62 ನೇ ವಯಸ್ಸಿನಲ್ಲಿ ಅನಾರೋಗ್ಯ ಸಂಭವಿಸುವ ಸಾಧ್ಯತೆಯಿರುತ್ತದೆ ಡಿಸೆಂಬರ್, ಜನವರಿ, ಫೆಬ್ರವರಿ, ಜುಲೈ ತಿಂಗಳಲ್ಲಿ ಎಚ್ಚರದಿಂದಿರಿ, ಶನಿವಾರದಂದು ಆಂಜನೇಯನಿಗೆ ಸೇವೆ ಮಾಡಿರಿ.
ದಿನಾಂಕ 9, 18, 27 :< ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಮಾಂಸಖಂಡ ನೋವು, ಕಿವಿಬಾಧೆ, ಶಿರೋ ಭಾದೆ ಉಂಟಾಗಬಹುದು, ಅವರು ತಮ್ಮ 9, 18, 27, 36, 45, 63 ನೇ ವರ್ಷದಲ್ಲಿ ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಒಳಿತು ಏಪ್ರಿಲ್, ಮೇ, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಜಾಗೃತರಾಗಿರಿ, ಲಕ್ಷ್ಮೀ ನರಸಿಂಹ ಸ್ವಾಮಿಯ ಆರಾಧನೆ ಮಾಡಿ ಎಲ್ಲವೂ ಒಳಿತಾಗುತ್ತದೆ.ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರ ಜೊತೆಯಲ್ಲಿ ಹಂಚಿಕೊಳ್ಳಿ.