ನಮಸ್ಕಾರ ಪ್ರಿಯ ವೀಕ್ಷಕರೆ ಈ ಮಾಹಿತಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಉಪಯುಕ್ತಕರವಾದಂತಹ ಒಂದು ಪರಿಹಾರವನ್ನು ತಿಳಿಸಿಕೊಡಲಿದ್ದೇವೆ. ಅದೇನೆಂದರೆ ಈ ಸಮಾಜದಲ್ಲಿ ನಾವು ಉತ್ತಮ ಮಟ್ಟಗೆ ಕೆಲಸವನ್ನು ನಿರ್ವಹಿಸಬೇಕು ಅಂದರೆ ಆ ವ್ಯಕ್ತಿಗೆ ಕೆಲಸದ ಅವಶ್ಯಕತೆ ತುಂಬಾನೇ ಇರುತ್ತದೆ ಹಾಗೆಯೇ ಇವತ್ತಿನ ದಿವಸಗಳಲ್ಲಿ ನಿರುದ್ಯೋಗದಿಂದ ಬಳಲುತ್ತಿರುವವರ ಸಂಖ್ಯೆ ತುಂಬಾ ಹೆಚ್ಚಾಗಿಯೇ ಇದೆ ಇನ್ನು ಕೆಲವರಿಗಂತೂ ತಾವು ವಿದ್ಯಾಭ್ಯಾಸ ಮಾಡಿದ ಕ್ಷೇತ್ರದಲ್ಲಿ ಕೆಲಸ ಸಿಗದೆ ಬೇರೆ ಬೇರೆ ತರಹದ ಕೆಲಸಗಳನ್ನ ಮಾಡುತ್ತಾ ಇರುತ್ತಾರೆ.
ಇನ್ನು ಕೆಲವರಿಗಂತೂ ಕೆಲಸದಲ್ಲಿ ತುಂಬ ಕಿರಿಕಿರಿಯಾಗುತ್ತದೆ ಇರುತ್ತದೆ ಈ ರೀತಿ ಎಲ್ಲಾ ಸಮಸ್ಯೆಗಳಿಂದ ನೀವು ಕೂಡ ಬಳಲುತ್ತಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಉಪಯುಕ್ತವಾದ ಪರಿಹಾರವನ್ನು ತಿಳಿಸಿಕೊಡುತ್ತೇನೆ .ಅದನ್ನು ನೀವು ಕೂಡ ಕೇವಲ ಇಪ್ಪತ್ತೊಂದು ದಿವಸಗಳ ಕಾಲ ನಿಷ್ಠೆಯಿಂದ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿಯೂ ಕೂಡ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.ಇನ್ನೂ ಇಪ್ಪತ್ತ್ ಒಂದು ದಿವಸಗಳ ಕಾಲ ಮಾಡಬೇಕಾಗಿರುವಂತಹ ಆ ಪರಿಹಾರಗಳು ಯಾವುವು ಎಂಬುದನ್ನು ತಿಳಿಯೋಣ, ಈ ಲೇಖನದಲ್ಲಿ. ಮೊದಲಿಗೆ ಇದಕ್ಕಾಗಿ ಬೇಕಾಗಿರುವುದು ಶ್ರೇಷ್ಠವಾದ ಒಂದು ಬೇರು. ಹೌದು ಆ ಬೇರು ಯಾವುದು ಅಂದರೆ ಬಿಲ್ವಪತ್ರೆಯ ಮರದ ಬೇರು ನಮಗೆ ಅವಶ್ಯಕವಾಗಿರುತ್ತದೆ ಮತ್ತು ಇದನ್ನು ನೀವು ಭಾನುವಾರದ ದಿವಸದಂದು ಶುರು ಮಾಡಬೇಕಾಗುತ್ತದೆ,
ಅಂದರೆ ಮೊದಲನೆಯ ದಿವಸ ಭಾನುವಾರ ಆಗಿರಬೇಕು. ಭಾನುವಾರದ ದಿವಸದ ಹಿಂದಿನ ದಿನವೇ ಬಿಲ್ವಪತ್ರೆ ಮರದ ಬಳಿ ಹೋಗಿ ಅಲ್ಲಿ ಕುಳಿತು ಲಕ್ಷ್ಮೀ ದೇವಿಯನ್ನು ನೆನೆದು ಮತ್ತು ನಿಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ಉದ್ಯೋಗ ಕ್ಷೇತ್ರದಲ್ಲಿ ನಮಗೆ ಈ ರೀತಿಯ ತೊಂದರೆಗಳಿವೆ ಎಂದು ನೀವು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ನಂತರ ಆ ಮರದ ಬುಡದಲ್ಲಿರುವ ಚಿಕ್ಕ ಬೇರನ್ನು ನೀವು ತೆಗೆದುಕೊಂಡು ಬರಬೇಕು.ಈ ಬೇರನ್ನು ನೀವು ಭಾನುವಾರದ ಹಿಂದಿನ ದಿವಸವೇ ತೆಗೆದುಕೊಂಡು ಮನೆಗೆ ತಂದು ಇಡಬೇಕು ನಂತರ ಮಾರನೆದಿವಸ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಆ ಬೇರನ್ನು ಒಂದು ಶುದ್ಧವಾದ ತಟ್ಟೆಯ ಮೇಲೆ ಇರಿಸಿ ಲಕ್ಷ್ಮೀದೇವಿಯನ್ನು ನೆನೆಯುತ್ತಾ ನಿಮ್ಮ ಮನಸ್ಸಿನಲ್ಲಿ ಮಾಡಿಕೊಂಡಿರುವ ಸಂಕಲ್ಪಗಳನ್ನು ತಾಯಿಗೆ ಹೇಳಿಕೊಂಡು, ಧೂಪ ದೀಪಾರಾಧನೆ ಗಳನ್ನು ಮಾಡಬೇಕು
ಮತ್ತು ಈ ಪೂಜೆಯನ್ನು ಇಪ್ಪತ್ತೊಂದು ದಿವಸಗಳ ಕಾಲ ಪ್ರತಿದಿನ ಮಾಡಬೇಕಾಗುತ್ತದೆ. ಹಾಗೂ ನೆನಪಿನಲ್ಲಿ ಇಡೀ ಲಕ್ಷ್ಮೀ ದೇವಿ ಪೂಜೆ ಮಾಡುವಾಗ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇರಿಸಿ ಹಾಗೂ ಮಂಗಳವಾರ ಮತ್ತು ಶುಕ್ರವಾರದ ವಿಶೇಷ ದಿವಸಗಳಂದು ಗೋಧಿಯಿಂದ ಮಾಡಿದ ಯಾವುದೇ ಸಿಹಿ ಖಾದ್ಯವನ್ನು ತಾಯಿಗೆ ನೈವೇದ್ಯ ಸಮರ್ಪಿಸಿ.ಈ ರೀತಿ ಇಪ್ಪತ್ತೊಂದು ದಿವಸಗಳ ಕಾಲ ಪೂಜೆ ಮಾಡಿದ ಮೇಲೆ ಇಪ್ಪತ್ತೆರಡನೆಯ ದಿವಸ ದಂದು ಆ ಬೇರನ್ನು ಸಣ್ಣಗೆ ಮಡಚಿ ಒಂದು ಬೆಳ್ಳಿಯ ತಾಯತದ ಒಳಗೆ ಸುತ್ತಿ ಅದನ್ನು ಕಪ್ಪು ದಾರಕ್ಕೆ ಪೋಣಿಸಿ, ನೀವು ನಿಮ್ಮ ಬಲಗೈಗೆ ಹೆಣ್ಣುಮಕ್ಕಳಾಗಲಿ ಗಂಡುಮಕ್ಕಳಾಗಲಿ ಬಲಗೈಗೆ ಕಟ್ಟಿಕೊಳ್ಳಬೇಕು.
ಈ ರೀತಿ ನೀವು ಮಾಡುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಯಾವುದೇ ತೊಂದರೆಗಳು ಆಗುತ್ತಿದ್ದರೂ ಅದು ಪರಿಹಾರ ಆಗುತ್ತದೆ ಮತ್ತು ಹಣಕಾಸಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಲಕ್ಷ್ಮೀ ದೇವಿಯನ್ನು ನಂಬಿ ಈ ಪರಿಹಾರವನ್ನು ತಪ್ಪದೆ ಪಾಲಿಸಿ ಇದರಿಂದ ನಿಮಗೆ ಎಲ್ಲವೂ ಕೂಡ ಶುಭ ಆಗುತ್ತದೆ ಮತ್ತು ನಿಮಗೆ ಉಂಟಾಗುತ್ತಿರುವ ತೊಂದರೆಗಳು ಕೂಡ ನಿವಾರಣೆಯಾಗುತ್ತದೆ.