Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವ ರೀತಿಯ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಒಳ್ಳೆಯದು ರಾಮತುಳಸಿಯೋ ಇಲ್ಲ ಕೃಷ್ಣ ತುಳಸಿಯೋ …!!!!

ನಮಸ್ಕಾರ ಪ್ರಿಯ ವೀಕ್ಷಕರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ತುಳಸಿಗಿಡ ಇಟ್ಟು ಬೆಳೆಸಬೇಕಾಗುತ್ತದೆ ಯಾಕೆಂದರೆ ತುಳಸಿಗಿಡ ವಿಷ್ಣುವಿನ ಸ್ವರೂಪ ತುಳಸಿ ಗಿಡವನ್ನು ಯಾರು ಮನೆಯ ಮುಂದೆ ಇಟ್ಟು ಪೂಜೆ ಅನ್ನು ಮಾಡ್ತಾರೊ ಅಂತಹವರ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.ಯಾರೂ ಪ್ರತಿ ದಿನ ತುಳಸಿ ಮಾತೆಯನ್ನು ಮನಸಾರೆ ಪೂಜೆ ಮಾಡುತ್ತಾ ಬರುತ್ತಾರೋ ಅಂಥವರಿಗೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಅಂತ ಕೂಡ ಹೇಳ್ತಾರೆ. ಇನ್ನು ತುಳಸಿ ಗಿಡವನ್ನು ಮನೆಯ ಮುಂದೆ ಬೆಳೆಸುವುದು ಅಮೃತ ಪ್ರಾಪ್ತಿಗಾಗಿ.

ದೇವತೆಗಳು-ಅಸುರರು ಕ್ಷೀರಸಾಗರವನ್ನು ಮಥಿಸುವ ಸಂದರ್ಭದಲ್ಲಿ ಸಾಕ್ಷಾತ್ ನಾರಾಯಣ ಧನ್ವಂತರಿಯ ರೂಪದಿಂದ ಸುಧಾಕಮಂಡಲವನ್ನು ಧರಿಸಿ ಬರುತ್ತಾನೆ. ದೇವತೆಗಳಿಗೆ ಅಮೃತವನ್ನು ಬಡಿಸುವ ಆನಂದ ಧನ್ವಂತರಿಯ ಕಣ್ಣುಗಳಲ್ಲಿ ಹರಿದಾಡಿತು. ಆ ಆನಂದ ಅಶ್ರುಗಳಾಗಿ ಅಮೃತ ಕಳಸದಲ್ಲಿ ಉದುರಿದವು. ಆಗಲೇ ತುಳಸಿ ಸಸ್ಯ ಹುಟ್ಟಿತು ಎಂದು ಪುರಾಣದ ಹಿನ್ನೆಲೆ ಇದೆ.ನಮ್ಮ ಪದ್ಧತಿಯೂ ಕೂಡ ಆಗಿದೆ ಈ ಸಂಪ್ರದಾಯ ಒಂದೆರಡು ವರುಷಗಳ ಹಿಂದಿನದ್ದು ಅಲ್ಲ. ಇದು ಅನೇಕ ವರುಷಗಳ ಹಿಂದಿನಿಂದಲೆ ನಡೆಸಿಕೊಂಡು ಬಂದಿರುವ ಅಂತಹ ಒಂದು ಪದ್ಧತಿಯಾಗಿದೆ ಈ ಪದ್ದತಿಗೆ ವೈಜ್ಞಾನಿಕವಾದ ಕಾರಣಗಳು ಕೂಡ ಇರುವುದನ್ನು ನಾವು ಗಮನಿಸಬಹುದಾಗಿದೆ.

ತುಳಸಿ ಗಿಡಗಳಲ್ಲಿಯೂ ಕೂಡ ಹಲವಾರು ವಿಧಗಳಿವೆ ಅಂತಹ ತುಳಸಿಗಿಡಗಳಲ್ಲಿ 2ತುಳಸಿ ಗಿಡವನ್ನು ಮನೆಯ ಮುಂದೆ ಬೆಳೆಸುತ್ತಾರೆ, ಒಂದು ರಾಮ ತುಳಸಿ ಮತ್ತು ಕೃಷ್ಣ ತುಳಸಿ.ರಾಮ ತುಳಸಿ ಮತ್ತು ಕೃಷ್ಣ ತುಳಸಿ ಈ ಎರಡು ತುಳಸಿಯಲ್ಲಿ ಯಾವುದು ಶ್ರೇಷ್ಠ ಯಾವ ಗಿಡವನ್ನು ಮನೆಯ ಮುಂದೆ ಬೆಳೆಸಬೇಕು ಹೀಗೆ ಅನೇಕ ಪ್ರಶ್ನೆಗಳು ಮಂದಿಯ ಮನಸ್ಸಲ್ಲಿ ಓಡ್ತಾ ಇದೆ.ಆ ಒಂದು ಸಂಶಯವನ್ನು ಪರಿಹರಿಸಿಕೊಳ್ಳಲು ಇಂದಿನ ಮಾಹಿತಿಯಲ್ಲಿ ಸಂಪೂರ್ಣ ಲೇಖನವನ್ನು ತಿಳಿದು ನಿಮಗೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಮಾಹಿತಿಗೆ ಲೈಕ್ ಮಾಡುವುದನ್ನು ಮರೆಯದಿರಿ.

ಯಾವ ಪ್ರದೇಶದಲ್ಲಿ ಒಂದು ತುಳಸಿ ಸಸ್ಯ ಇರುತ್ತದೋ ಅಲ್ಲಿ ತ್ರಿಮುರ್ತಿಗಳಾದ ಬ್ರಹ್ಮ, ವಿಷ್ಣು, ರುದ್ರಾದಿ ದೇವತೆಗಳು, ಲಕ್ಷ್ಮೀ, ಸರಸ್ವತಿ, ಗಾಯತ್ರಿ, ಉಮಾದೇದೇವಿ, ಶಚೀದೇವಿ, ಇಂದ್ರ, ಅಗ್ನಿ, ಯಮ, ವರುಣ, ವಾಯು, ಕುಬೇರ, ಆದಿತ್ಯಾದಿಗ್ರಹದೇವತೆಗಳು, ವಿಶ್ವೇದೇವತೆಗಳು, ಅಷ್ಟವಸ್ತುಗಳು, ಚತುರ್ಧಶಮನುಗಳು, ದೇವರ್ಷಿಗಳು, ವವಿದ್ಯಾದರರು, ಗಂಧರ್ವರು, ಸಿದ್ಧರು, ಅಪ್ಸರೆಯರು ಸೇರಿದಂತೆ ಇನ್ನಿತರ ದೇವತೆಗಳ ಪತ್ನಿಯರು ತುಳಸಿ ಪುಷ್ಪದಲ್ಲಿ ಸನ್ನಿಹಿತರಾಗಿರುತ್ತಾರೆ ಎಂದು ಅದನ್ನು ಸಾಮಾನ್ಯವಾಗಿ ಮನೆಯ ಮುಂಬದಿಯಲ್ಲೇ ನೆಟ್ಟಿರುತ್ತಾರೆ.

ಮೊದಲನೆಯದಾಗಿ ಹೇಳಬೇಕೆಂದರೆ ರಾಮ ತುಳಸಿ ಮತ್ತು ಕೃಷ್ಣ ತುಳಸಿ ಈ ಎರಡೂ ತುಳಸಿ ಗಿಡವು ಕೂಡ ಶ್ರೇಷ್ಟವಾದದ್ದೇ ನಮ್ಮ ಮನೆಯ ಮುಂದೆ ಯಾವ ತುಳಸಿ ಗಿಡವನ್ನಾದರೂ ಬೆಳೆಸಿದರೂ ನಮಗೆ ಒಳ್ಳೆಯ ಫಲವನ್ನೇ ನೀಡುತ್ತದೆ.ಆದರೆ ಈ ರಾಮ ತುಳಸಿ ಮತ್ತು ಕೃಷ್ಣ ತುಳಸಿ ನಡುವೆ ಒಂದಿಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳನ್ನು ನಾನು ನಿಮಗೆ ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇನೆ ಆನಂತರ ನೀವು ಯಾವ ತುಳಸಿ ಗಿಡವನ್ನಾದರೂ ಮನೆಯ ಅಂಗಳದಲ್ಲಿ ಬೆಳೆಸಬಹುದು.

ಮೊದಲನೆಯದಾಗಿ ರಾಮ ತುಳಸಿ ಗಿಡದ ಎಲೆಗಳು ನೋಡಲು ಬಿಳಿಯಾಗಿರುತ್ತದೆ ಆದರೆ ಕೃಷ್ಣ ತುಳಸಿಯ ಗಿಡದ ಎಲೆಗಳು ಕಪ್ಪಾಗಿರುತ್ತದೆ ಆದಕಾರಣವೆ ರಾಮ ತುಳಸಿ ಅನ್ನು ಬಿಳಿತುಳಸಿ ಅಂತ ಕರಿತಾರೆ ಮತ್ತು ಕೃಷ್ಣ ತುಳಸಿಯನ್ನು ಕರಿತುಳಸಿ ಅಂತ ಕೂಡ ಕರೆಯುವುದುಂಟು.ರಾಮ ತುಳಸಿಯ ಎಲೆಗಳು ಅಷ್ಟಾಗಿ ಒಗುರಾಗಿ ಇರುವುದಿಲ್ಲ ಮತ್ತು ಇದರ ಎಲೆಗಳು ಉತ್ತಮವಾಗಿರುತ್ತದೆ ಆದರೆ ಕೃಷ್ಣ ತುಳಸಿಯ ಎಲೆಗಳು ಕಪ್ಪಾಗಿದ್ದು ಇದರ ಎಲೆಗಳು ಸ್ವಲ್ಪ ಪುಟ್ಟದಾಗಿಯೆ ಇರುತ್ತದೆ. ಆದರೆ ಈ ಕೃಷ್ಣ ತುಳಸಿ ಎಲೆಗಳು ಸ್ವಲ್ಪ ಜಾಸ್ತಿಯೇ ಇರುತ್ತದೆ ಆದಕಾರಣ ಇದನ್ನು ಹೆಚ್ಚಾಗಿ ನಾಟಿ ಔಷಧಿಯಲ್ಲಿ ಬಳಕೆ ಮಾಡಲಾಗುತ್ತದೆ.

ಇದಿಷ್ಟು ಕೃಷ್ಣ ತುಳಸಿ ಮತ್ತು ರಾಮ ತುಳಸಿ ನಡುವೆ ಇರುವಂತಹ ವ್ಯತ್ಯಾಸಗಳು ಆಗಿರುತ್ತವೆ ನೀವು ಇನ್ನೂ ಕೂಡ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳಸಿಲ್ಲವಾದಲ್ಲಿ ತಪ್ಪದೆ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ತುಳಸಿ ಮಾತೆಯ ಆಶೀರ್ವಾದವನ್ನು ಪಡೆದು ಕೊಳ್ಳೆ.ಹಾಗೆಯೆ ತುಳಸಿ ಗಿಡದಲ್ಲಿ ಅನೇಕ ಅನೇಕ ಆರೋಗ್ಯಕರ ಲಾಭಗಳು ಇರುವುದನ್ನು ಗಮನಿಸಬಹುದಾಗಿದೆ. ತುಳಸಿ ಎಲೆಯನ್ನು ಸೇವಿಸುವುದರಿಂದ ಆರೋಗ್ಯ ಕೂಡ ವೃದ್ಧಿಸುತ್ತದೆ. ತುಳಸಿ ಎಲೆಯಿಂದ ಬೀಸುವ ಗಾಳಿ ಅನ್ನು ಸೇವನೆ ಮಾಡುವುದರಿಂದ ಅನೇಕ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ