ಚಾಕೋಲೇಟ್ ತಿನ್ನೋದ್ರಿಂದ ಹಲ್ಲು ಹಾಳಾಗುತ್ತೆ, ಶುಗರ್ ಬರುತ್ತೆ ಅನ್ನೋ ಭಯ ನಿಮ್ಮಲ್ಲಿ ಇದ್ದರೆ ಮೊದಲು ಅದನ್ನ ತೆಗೆದು ಬಿಡಿ, ಸರಿಯಾಗಿ ಹಲ್ಲು ಸ್ವಚ್ಛ ಮಾಡದೆ ಹೋದರೆ ಏನೇ ತಿಂದರು ಹಲ್ಲು ಹುಳುಕು ಸಮಸ್ಯೆ ಸಂಭವಿಸುತ್ತದೆ ಹಾಗು ಸಕ್ಕರೆ ಕಾಯಿಲೆ ಸಿಹಿ ತಿನ್ನುವುದರಿಂದ ಬರುವುದಿಲ್ಲ ಬದಲಿಗೆ ಸಕ್ಕರೆ ಕಾಯಿಲೆ ಬಂದಮೇಲೆ ಸಿಹಿ ತಿನ್ನ ಬಾರದು.
ಹಾಗಾದರೆ ಡಾರ್ಕ್ ಚೊಕೊಲೇಟ್ ತಿನ್ನೋದ್ರಿಂತ ಏನು ಲಾಭ ಅಂದ್ರೆ ದೈನಂದಿನ ಮಾನಸಿಕ ಒತ್ತಡವು ಚೊಕೊಲೇಟ್ ತಿನ್ನುವುದರಿಂದ ಕಡಿಮೆಯಾಗುತ್ತದೆ ಯಂತೆ.
ನಿಮಗೇನಾದರೂ ಮರೆವಿನ ಸಮಸ್ಯೆ ಇದ್ದರೆ ಚಾಕೊಲೇಟ್ ನಿಮಗೆ ಸಹಾಯ ಮಾಡಬಹುದು, ಇದು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದಲ್ಲಿ ಸಂಭವಿಸುವ ಹಲವು ಉರಿಯೂತ ಸಮಸ್ಯೆಗಳನ್ನ ತಡೆಯುವುದಲ್ಲದೆ, ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮ್ಮ ಮನಸ್ಥಿತಿಯನ್ನು ಉತ್ತಮ ಗೊಳಿಸುತ್ತದೆ.
ಡಾರ್ಕ್ ಚಾಕೊಲೇಟ್ ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಿದ್ದು ನಿಮಗೆ ಇಷ್ಟೆಲ್ಲಾ ಲಾಭಗಳು ದೊರೆಯುವುದು ಇದರಿಂದಲೇ, ಕೊಕೊ ಬೀಜದಲ್ಲಿ ಅತ್ಯಧಿಕ ಪ್ರಮಾಣ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯುವ ಅಂಶಗಳಿದ್ದು ಅದು ಮೆದುಳು ಹಾಗೂ ಹೃದಯದ ಆರೋಗ್ಯಗಳಿಗೆ ಉತ್ತಮವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ.