ಮಹಿಳೆಯರು ಬಳ್ಳಾರಿಯಲ್ಲಿ ಇರುವಂತಹ ಈ ದೇವಸ್ಥಾನಕ್ಕೆ ಹೋಗಲು ಹಿಂದೆಮುಂದೆ ನೋಡುತ್ತಾರಂತೆ ? ಕಾರಣ ಏನು ಅಂತ ತಿಳ್ಕೊಳಿ !!!

ಭಕ್ತಿ

ನಮಗೆ ನಿಮಗೆ ಗೊತ್ತಿರುವ ವಿಚಾರ ಏನಪ್ಪಾ ಅಂದರೆ ಸದ್ಯಕ್ಕೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಹೋಗಬಾರದು ಎನ್ನುವ ಚರ್ಚೆ ನಡೆಯುತ್ತಲೇ ಇದೆ ಹಾಗೆ ಹೋದರೆ ಏನಾಗುತ್ತದೆ ಎಂದು ಕೂಡ ಕೆಲವು ಮಹಿಳಾ ಸಂಘದ ಮಹಿಳೆಯರು ಹೇಳುತ್ತಿದ್ದಾರೆ. ಈ ವಿಚಾರ ಚರ್ಚೆಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ದೇವಸ್ಥಾನದಲ್ಲಿ ಮಹಿಳೆಯರು ಈ ದೇವಸ್ಥಾನದ ಒಳಗಡೆ ಹೋಗಲು ಹಿಂದೆ ಮುಂದೆ ನೋಡ್ತಾರೆ ಅಂತೆ.

ಅದು ಯಾವ ದೇವಸ್ಥಾನ ಅನ್ನುವ ಪ್ರಶ್ನೆಗೆ ಉತ್ತರ ಬಳ್ಳಾರಿಯಲ್ಲಿ ಇರುವಂತಹ ಕುಮಾರಸ್ವಾಮಿ ದೇವಸ್ಥಾನ. ಈ ದೇವಸ್ಥಾನದಲ್ಲಿ ಮಹಿಳೆಯರಿಗೆ ದರ್ಶನವನ್ನು ಮಾಡಲು ಅವಕಾಶ ಇದ್ದರೂ ಕೂಡ ಇಲ್ಲಿ ಮಹಿಳೆಯರು ಹೋಗಲು ಹಿಂದೇಟು ಹಾಕುತ್ತಾರೆ, ಬಳ್ಳಾರಿಯಿಂದ ಸದಾ ದೂರು  ಪಟ್ಟಣಕ್ಕೆ 12 ಕಿಲೋಮೀಟರ್ ದೂರದಲ್ಲಿ ಇರುವಂತಹ ಈ ದೇವಸ್ಥಾನ ಈ ತರದ ಪ್ರಶ್ನೆಗೆ ಒಳಗಾಗಿದೆ. ಇಲ್ಲಿರುವ ಈ ದೇವಸ್ಥಾನವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ ಉದಾಹರಣೆಗೆ ಕಾರ್ತಿಕೇಯ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಷಣ್ಮುಖ ಸ್ವಾಮಿ, ಹಾಗೂ ನವೀನ ಸ್ವಾಮಿ ಎಂದು ಕೂಡ ಈ ದೇವಾಲಯಕ್ಕೆ ಹೆಸರಿಟ್ಟು ಕರೆಯುತ್ತಾರೆ.

ಈ ದೇವಸ್ಥಾನಕ್ಕೆ  ಪುರಾತನ ಹಿನ್ನೆಲೆ ಇದೆ, ಆ ಪುರಾತನ ಹಿನ್ನೆಲೆ ಏನಾದರೂ ಎಂದರೆ ತಾರಕನ ವಧೆ ಮಾಡಲು ಕುಮಾರಸ್ವಾಮಿ ದೇವರು ಇಲ್ಲಿ ಬಂದು ನೆಲೆಸಿದ್ದರಂತೆ ಎಂದು ಪುರಾಣ ಹೇಳುತ್ತದೆ. ಹಾಗೆ ಈ ದೇವಸ್ಥಾನವನ್ನು ಕಟ್ಟಿಸಿದವರು 8 ನೇ ಶತಮಾನದಲ್ಲಿ ಆಳಿದಂತಹ ಚಾಲುಕ್ಯರು. ಇವೆಲ್ಲಾ ಮಾಹಿತಿಗಳು ಪುರಾಣದಲ್ಲಿ ಉಲ್ಲೇಖವಾಗಿವೆ.

ಈ ಕುಮಾರಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಹೋಗಲು ಯಾಕೆ ಹಿಂದೇಟು ಹಾಕುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕೆಳಗಡೆ ಕೊಟ್ಟಿದ್ದೇವೆ ಓದಿ?

ಹೌದು ಸ್ನೇಹಿತರೆ ಇದಕ್ಕೆ ಒಂದು ಬಲವಾದ ಕಾರಣವಿದೆ, ಕಾರಣವೇನಾದರೂ ಎನ್ನುವ ಪ್ರಶ್ನೆಗೆ ಉತ್ತರ, ಪುರಾಣದ ಪ್ರಕಾರ ಕುಮಾರಸ್ವಾಮಿಯ ತಾಯಿ ಪಾರ್ವತಿ ದೇವಿಯು ತನ್ನ ಮಗನಿಗೆ  ಹುಡುಗಿಯನ್ನು ನೋಡಿಕೊಂಡು ಬರುತ್ತಾರೆ, ಅವಾಗ ಕುಮಾರಸ್ವಾಮಿ ಹುಡುಗಿ ಯಾವ ತರ ಇದ್ದಾಳೆ ಎಂದು ಕೇಳಿದ ಪ್ರಶ್ನೆಗೆ ಅವಳ ತಾಯಿ ಪಾರ್ವತಿ ನನ್ನ ಹಾಗೆಯೇ ಇದ್ದಾಳೆ ಎಂದು ಹೇಳುತ್ತಾರೆ. ಇದನ್ನು ಕೇಳಿದಂತಹ ಕುಮಾರಸ್ವಾಮಿ ನಿನ್ನ ಹಾಗೆ ಇದ್ದಾಳೆ ಎಂದರೆ ನನಗೆ ತಾಯಿ ಸಮಾನ ನಾನು ಅವಳನ್ನು ಮದುವೆ ಆಗೋದೇ ಇಲ್ಲ ಎಂದು ಹೇಳುತ್ತಾನೆ.  ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಬ್ರಹ್ಮಚಾರಿಯಾಗಿ ಉಳಿದು ಬಿಡುತ್ತೇನೆ ಎಂದು ಉತ್ತರವನ್ನು ಕೊಡುತ್ತಾನೆ. ಈ ಕಥೆಯ ಹಿನ್ನೆಲೆಯಲ್ಲಿ ಇಲ್ಲಿನ ಮಹಿಳೆಯರು ಈ ದೇವಸ್ಥಾನಕ್ಕೆ ಬರಲು ಹಿಂದೇಟು ಹಾಕುತ್ತಾರೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ. ಇದನ್ನು ಹೊರತುಪಡಿಸಿ ಇನ್ ಯಾವುದು ಕಾರಣ ಈ ದೇವಸ್ಥಾನಕ್ಕೆ ಮಹಿಳೆಯರು ಬರದೇ ಇರುವುದಕ್ಕೆ ಕಂಡುಬಂದಿಲ್ಲ.

ಗೊತ್ತಾಯ್ತಲ್ಲ ಸ್ನೇಹಿತರೆ ಯಾಕೆ ಮಹಿಳೆಯರು ಈ ದೇವಸ್ಥಾನಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ ಎಂದು, ಇದು ಒಂದು ವಿಚಿತ್ರವಾದ ಕಾರಣ ಅನ್ಸುತ್ತೆ ಅಲ್ವಾ. ಯಾವುದೋ ಒಂದು ಪುರಾಣ ಕತೆಯನ್ನು  ಕೇಳಿ ಹೀಗೆ ನಡೆದುಕೊಳ್ಳುವುದು ಅಂತಹ ನನ್ನ ಮಹಿಳೆಯರಿಗೆ ನಾನು ಹೇಳುವುದು ಒಂದೇ, ಯಾವುದೇ ದೇವರ ಆದರೂ ಕೂಡ ನೀವು ಯಾಕೆ ಬಂದೆ ಎಂದು ಕೇಳುವುದಿಲ್ಲ ಹಾಗೆ ನೀವು ಇದೇ ನೈವೇದ್ಯವನ್ನು ಕೊಡಬೇಕು ಎಂದು ಕೂಡ ಆಗುವುದಿಲ್ಲ. ಇವೆಲ್ಲ ಸಂಪ್ರದಾಯವನ್ನು ಮಾಡಿದವರು ಮಾನವ. ಈ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಏನೂ ಆಗುವುದಿಲ್ಲ ಹೋಗಿ ಪೂಜೆ ಮಾಡಬಹುದು ಎನ್ನುವುದು ನನ್ನ ಅಭಿಪ್ರಾಯ.

ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ  ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುವುದರ ಮುಖಾಂತರ ಹಂಚಿಕೊಳ್ಳುವುದನ್ನು ಮರೆಯಬೇಡಿ. ಈ ತರದ ವಿಚಾರಗಳು ತುಂಬಾ ಕಡಿಮೆಯಾಗುವುದು. ಆದ್ದರಿಂದ  ನೀವು ಆದಷ್ಟು ನಿಮ್ಮ ಸ್ನೇಹಿತರಿಗೆ ಈ ವಿಚಾರವನ್ನು ಶೇರ್ ಮಾಡಲು ಮರೆಯಬೇಡಿ.

ನಿಮ್ಮ ಕನ್ನಡತನವನ್ನು ಟಿ ಶರ್ಟ್ ಹಾಕಿಕೊಂಡು ತೋರಿಸಿ ಕೇವಲ 200 Rs. ಮಾತ್ರ ಕೊಂಡುಕೊಳ್ಳಿ

ಈವಾಗಲೇ ಖರೀದಿಮಾಡಿ ….

Leave a Reply

Your email address will not be published. Required fields are marked *