ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ 7 ದಿನದಲ್ಲಿ ನಿಮ್ಮ ಮುಖ ಬೆಳ್ಳಗಾಗುತ್ತದೆ..!!

279

ಮುಖದ ಚರ್ಮದ ಆರೈಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ, ಎಷ್ಟೇ ಕಷ್ಟ ಪಟ್ಟರು ಹೊರಗಿನ ಕಲುಷಿತ ವಾತಾವರಣ ದಿಂದ ನಿಮ್ಮ ಚರ್ಮ ಹಲವು ತೊಂದರೆಗಳನ್ನ ಅನುಭವಿಸ ಬೇಕಾಗುತ್ತದೆ ಹಾಗು ಬಿಸಿಲು ನೀಮ್ಮ ಚರ್ಮವನ್ನು ಸುಡುತ್ತದೆ, ಇದರಿಂದ ಮುಕ್ತಿ ಹೊಂದಲು ನೀವು ಹಲವು ಕ್ರೀಮ್ ಹಾಗು ಸೋಪ್ ಗಳನ್ನ ಬಳಸುತ್ತಿದ್ದರು ಯಾವುದೇ ಪ್ರಯೋಜವಿಲ್ಲವಾದರೆ ನಾವು ತಿಳಿಸುವ ಈ ಉಪಾಯವನ್ನು ಒಮ್ಮೆ ಪರೀಕ್ಷಿಸಿ ನೋಡಿ.

ಬೆಳಗ್ಗೆ ಎಷ್ಟೇ ಆರೈಕೆ ಮಾಡಿದರು ಅದು ಉಳಿಯುವುದಿಲ್ಲ ಯಾಕೆಂದರೆ ಬೆವರಿನ ಮುಕಾಂತರವೋ ಅಥವಾ ನೀವೇ ಮುಖ ತೊಳೆಯುವ ಕಾರಣ ಅಥವಾ ಬಿಸಿಲು ಹೀಗೆ ನಾನಾ ತೊಂದರೆ ಹಾಗಾಗಿ ರಾತ್ರಿ ಮಲಗುವ ಮುನ್ನ ಆರೈಕೆ ಮಾಡಿದರೆ ಬೆಳಗ್ಗಿನ ಜಾವದ ತನಕ ಯಾವುದೇ ತೊಂದರೆ ಇರುವುದಿಲ್ಲ, ಚರ್ಮ ಸ್ವಚ್ಛ ಕೋಮಲ ವಾಗುತ್ತದೆ, ಅದಕ್ಕಾಗಿ ನಾವು ತಿಳಿಸುವ ಈ ಕ್ರೀಮ್ ಅನ್ನು ನೀವು ಮನೆಯಲ್ಲೇ ತಯಾರಿಸ ಬೇಕು.

ತಯಾರಿಸಲು ಬೇಕಾದ ಸಾಮಾಗ್ರಿ : ಹಾಲಿನ ಕೆನೆ, ಗುಲಾಭಿ ನೀರು, ಆಲಿವ್ ಆಯಿಲ್ ಹಾಗು ಮೆಡಿಕಲ್ ಸ್ಟೋರ್ ನಲ್ಲಿ ಸಿಗುವ ಗ್ಲಿಸರಿನ್.

ಒಂದು ಸಣ್ಣ ಬಟ್ಟಲಲ್ಲಿ ಮೊದಲು ಹಾಲಿನ ಕೆನೆ, ಗುಲಾಬಿ ನೀರು, ಒಂದು ಚಮಚ ಆಲಿವ್ ಆಯಿಲ್, ಹಾಗು ಸ್ವಲ್ಪ ಗ್ಲಿಸರಿನ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನೆನೆಯಪೀಡಿ ಈ ಮಿಶ್ರಣವನ್ನು ಪ್ರತಿ ದಿನ ಮಾಡುವ ಬದಲು ಒಂದೇ ಸರಿ ಏಳು ದಿನಕ್ಕಾಗುವಷ್ಟು ಮಾಡಿ ಒಂದು ಡಬ್ಬಿಯಲ್ಲಿ ಶೇಖರಿಸಿ.

ಇನ್ನು ನೀವೇ ತಯಾರಿಸಿದ ಈ ಕ್ರೀಮ್ ಅನ್ನು ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಮೊದಲು ಶುಭ್ರವಾಗಿ ತೊಳೆದು ನಂತ್ರ ಈ ಕ್ರೀಮ್ ಅನ್ನು ಬಳಸಿ ಮುಖವನ್ನ ಮಸಾಜ್ ಮಾಡಬೇಕು ಹಾಗು ಬೆಳಗ್ಗಿನ ಜಾವದ ತನಕ ಹಾಗೆ ಬಿಟ್ಟು ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನ ತೊಳೆಯ ಬೇಕು, ಹೀಗೆ ಸತತವಾಗಿ ಏಳು ದಿನ ಮಾಡುವುದರಿಂದ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯಲು ಶುರು ಮಾಡುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here