ಬಾದಾಮಿಯಲ್ಲಿ ಪೋಷಕಾಂಶಗಳು ಹೆಚ್ಚಿರುತ್ತದೆ, ದೇಹದ ಆರೋಗ್ಯಕ್ಕೆ ಬಹಳ ಪರಿಣಾಮ ಕಾರಿ, ಬಾದಾಮಿಯಲ್ಲಿ ಶೇ. 16.5ರಷ್ಟು ಪ್ರೋಟೀನ್ ಅಂಶ ಮತ್ತು ಶೇ. 41ರಷ್ಟು ಎಣ್ಣೆಯ ಅಂಶ ಇರುತ್ತದೆ, ಮಾನಸಿಕ ಬುದ್ದಿ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುವ ಈ ಬಾದಾಮಿಯ ಉಪಯೋಗಗಳ ಬಗ್ಗೆ ಇಂದು ತಿಳಿಯೋಣ.
ಬುದ್ದಿ ಶಕ್ತಿ : ನೆನಪಿನ ಶಕ್ತಿ ಕಡಿಮೆ ಇದ್ದವರಿಗೆ ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅತ್ಯುತ್ತಮವಾದ ಔಷಧಿಯಾಗಿದೆ ಎಂದು ಹೇಳಲಾಗಿದೆ, ಮೆದುಳು ಸಾಮರ್ಥ್ಯ ಹೆಚ್ಚಿಸಬೇಕೆಂದು ಬಯಸುವುದಾದರೆ ದಿನಾ ನಾಲ್ಕು ಬಾದಾಮಿ ಮಿಸ್ ಮಾಡದೆ ತಿನ್ನಿ ಹಾಗು ಬದಲಾವಣೆಯನ್ನು ನೀವೇ ಪರೀಕ್ಷಿಸಿ, ಮಕ್ಕಳಿಗೆ ಓದಿದ್ದು ನೆನಪಿನಲ್ಲಿ ಉಳಿಯಲು ಇದು ಉತ್ತಮ ಉಪಾಯ, ದಿನಾ ನಾಲ್ಕು ಬಾದಾಮಿ ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚಾಗುವುದರ ಜತೆಗೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
ತೂಕ ಇಳಿಕೆಗೆ ಸಹಕಾರಿ : ಹೆಚ್ಚಿನ ತೂಕ ಇದ್ದವರು ಬಾದಾಮಿಯನ್ನು ತಿನ್ನುವ ಅಭ್ಯಾಸಾಕ್ ಮಾಡಿಕೊಳ್ಳಿ ಇದರಲ್ಲಿ ಕಡಿಮೆ ಕ್ಯಾಲೋರಿಯ ಇದ್ದು, ಬಾದಾಮಿ ಹಸಿವನ್ನು ಇಂಗಿಸುತ್ತದೆ ಇದರಿಂದ ದೇಹದ ತೂಕ ಇಳಿಕೆಗೆ ಬಹಳ ಸಹಕಾರಿ.
ಹೃದಯಾಘಾತ : ವಯಸ್ಸಾದ ಮೇಲೆ ಕಾಡುತ್ತಿದ್ದ ಹೃದಯಘಾತದ ಸಮಸ್ಯೆಯು ಇತ್ತೀಚಿನ ದಿನದಲ್ಲಿ ಎಲ್ಲ ವಯಸ್ಸಿನವರಿಗೂ ಈ ಸಮಸ್ಯೆ ಕಾಡುತ್ತಿದೆ, ಅಂತವರಿಗೆ ವಾರದಲ್ಲಿ 5 ಬಾರಿ ಬಾದಾಮಿ ತಿಂದರೆ ಹೃದಯಾಘಾತ ಆಗುವ ಬರುವ ಸಾಧ್ಯತೆ 50% ಕಡಿಮೆಯಾಗುತ್ತದೆ.
ಮೂಳೆಯನ್ನು ಬಲಪಡಿಸುತ್ತದೆ : ಕಾಲು ಮಂಡಿ ನೋವು ಹಾಗು ಇತರ ಮೂಳೆ ನೋವಿನ ಸಮಸ್ಯೆ ಇದ್ದವರಿಗೆ ಬಾದಾಮಿಯಲ್ಲಿರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ : ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಅಂದರೆ ಅರೋಗ್ಯ ಹೆಚ್ಚು ಎಂದರ್ಥ.
ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು : ಗರ್ಭಿಣಿಯರು ಬಾದಾಮಿಯನ್ನು ತಮ್ಮ ಡಯಟ್‌ನಲ್ಲಿ ಸೇರಿಸುವುದರಿಂದ ಗರ್ಭದಲ್ಲಿರುವ ಮಗುವಿನ ಹಾಗೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಪ್ರಸವ ಪೂರ್ವ ತೊಂದರೆ ಉಂಟಾಗುವುದಿಲ್ಲ.
ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.