Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ವ್ಯಾಪಾರದ ಮೇಲೆ ಬೇರೆಯವರ ದೃಷ್ಟಿ ತಗುಲಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿತ್ತಿದ್ದೀರಾ ಹಾಗಾದ್ರೆ ಹೀಗೆ ಮಾಡಿ ವ್ಯಾಪಾರದಲ್ಲಿ ಲಾಭ ಆಗುತ್ತೆ …!!!

ನಿಮ್ಮ ಅಂಗಡಿಗೆ ಏನಾದರೂ ಬಹಳ ದೃಷ್ಟಿಯಾಗಿದ್ದರೆ ಈ ಒಂದು ಚಿಕ್ಕ ಪರಿಹಾರವನ್ನ ಮಾಡಿ, ಯಾವುದೇ ಕಾರಣಕ್ಕೂ ನಿಮ್ಮ ಅಂಗಡಿಗೆ ದೃಷ್ಟಿ ಎನ್ನುವುದು ತಾಗೋದಿಲ್ಲ. ಮೊದಲು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು, ಆದರೆ ಕೆಲ ಜನರ ಕೆಟ್ಟ ದೃಷ್ಟಿಯ ಕಾರಣದಿಂದ ನಿಮ್ಮ ವ್ಯಾಪಾರ ಚೆನ್ನಾಗಿ ಆಗುತ್ತಿಲ್ವಾ, ಹಾಗಾದರೆ ಈ ಒಂದು ಚಿಕ್ಕ ನಿಂಬೆ ಹಣ್ಣಿನ ಪರಿಹಾರವನ್ನು ಮಾಡಿ ನೋಡಿ. ಈ ಪರಿಹಾರ ಮಾಡುವುದರಿಂದ ನಿಮ್ಮ ಎಲ್ಲಾ ದೃಷ್ಟಿ ದೋಷಗಳು ತೊಲಗಿ ಹೋಗಿ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಯಶಸ್ಸು ಕಾಣುತ್ತೀರಾ, ಜೊತೆಗೆ ನಿಮ್ಮ ವ್ಯಾಪಾರದ ಅಭಿವೃದ್ದಿ ಸಹ ಆಗುತ್ತದೆ.

ಈ ಒಂದು ಪ್ರಯೋಗವನ್ನು ನೀವು ಬೆಳ್ಳಗಿನ ಜಾವ ಅಥವಾ ಸಂಜೆಯ ಸಮಯದಲ್ಲಿ ಹುಣ್ಣಿಮೇ ಅಥವಾ ಅಮಾವಾಸ್ಯೆಯದಿನದಂದು ಮಾಡಬೇಕು. ಇನ್ನು ಇದಕ್ಕೆ ಸೂಕ್ತವಾದ ಸಮಯ ಎಂದರೆ ಅದು ಬೆಳ್ಳಗಿನಜಾವ 6 ರಿಂದ 7 ಅಥವಾ ಸಂಜೆಯ 6 ರಿಂದ 7 ಸಮಯ ಈ ಪ್ರಯೋಗಕ್ಕೆ ಸೂಕ್ತ. ಇದಕ್ಕಾಗಿ ನೀವು ಯಾವುದೇ ಹಣ ಖರ್ಚು ಮಾಡುವ ಅಗತ್ಯ ಇಲ್ಲ. ನಿಮ್ಮ ಮನೆಯಲ್ಲಿರುವ ಸಾಮಾಗ್ರಿಗಲಿಂದಲೇ ಈ ಪ್ರಯೋಗವನ್ನು ನೀವು ಸುಲಭವಾಗಿ ಮಾಡಬಹುದು. ಈ ಒಂದು ಚಿಕ್ಕ ಪ್ರಯೋಗ ಮಾಡಿ ನಿಮ್ಮ ಎಲ್ಲಾ ದೃಷ್ಟಿ ದೋಷಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತೋರಿಸುತ್ತೇವೆ ಬನ್ನಿ..

ಈ ಪ್ರಯೋಗಕ್ಕೆ ಬೇಕಾದ ಸಾಮಾಗ್ರಿಗಳು ಎಂದರೆ ಕೇವಲ ಒಂದು ನಿಂಬೆ ಹಣ್ಣು ಹಾಗೆ ಹರಿಶಿಣ ಹಾಗೂ ಕುಂಕುಮ. ಕೇವಲ ಈ ಮೂರು ಸಮಾಗ್ರಿಗಳಿಂದ ನೀವು ನಿಮ್ಮ ಅಂಗಡಿ ಮೇಲಿನ ಎಲ್ಲಾ ದೃಷ್ಟಿ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಮೊದಲು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಚಾಕುವಿನಿಂದ ಎರಡು ಭಾಗಗಳಾಗಿ ಮಾಡಿಕೊಳ್ಳಿ, ನಂತರ ಈ ಎರಡು ನಿಂಬೆ ಹಣ್ಣಿಗೆ ಹರಿಷಿಣವನ್ನು ತೆಗೆದುಕೊಂಡು ಸಂಪೂರ್ಣವಾಗಿ ಹಚ್ಚಬೇಕು. ನಂತರ ಇದಕ್ಕೆ ಕುಂಕುಮವನ್ನು ತಗೆದುಕೊಂಡು ಅದನ್ನು ಹಚ್ಚಬೇಕು.

ಈ ಎರಡು ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ನಿಮ್ಮ ಆಂಗಡಿಯ ಬಾಗಿಲಿನ ಬಳಿ ಇಡಬೇಕು. ಅಂದರೆ ನಿಮ್ಮ ಅಂಗಡಿಯ ಹೊರಗೆ ಬಾಗಿಲಿನ ಬಳಿ ಎಡಗಡೆಗೆ ಒಂದು ಹಾಗೆ ಬಲಗಡೆಗೆ ಒಂದು ನಿಂಬೆ ಹಣ್ಣಿನ ತುಂಡನ್ನು ಇಡಬೇಕು. ಇನ್ನು ಇದನ್ನು ಈ ರೀತಿ ನಿಮ್ಮ ಅಂಗಡಿಯ ಹೊರಗೆ ಇಡುವ ಸಮಯದಲ್ಲಿ ತಾಯಿ ದುರ್ಗಾದೇವಿಯನ್ನು ನೆನದು ಓಂ ನಮೋ ದುರ್ಗಾದೇವಿಯೇ ನಮಃ ಎನ್ನುವ ಮಂತ್ರವನ್ನು ಜಪಿಸುತ್ತಾ ಇಡಬೇಕು. ಇನ್ನು ಈ ಮಂತ್ರವನ್ನು 11 ಬಾರಿ ತಾಯಿಯನ್ನು ನೆನೆದು ಜಪಿಸಿ ಇಡಬೇಕು.

ಈ ರೀತಿ ಮಾಡುವುದರಿಂದ ಆ ತಾಯಿ ದುರ್ಗೆಯ ಸಾಕ್ಷಾತ್ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ. ಇನ್ನು ಈ ಒಂದು ಸಣ್ಣ ಪ್ರಯೋಗ ಮಾರ್ಗದಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಹಾಗೆ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಎನ್ನುವುದನ್ನು ನೀವು ಕಾಣುತ್ತೀರಾ. ಜೊತೆಗೆ ಯಾರ ಕೆಟ್ಟ ದೃಷ್ಟಿ ನಿಮ್ಮ ಅಂಗಡಿಯ ಮೇಲೆ ಬಿದ್ದರೂ ಸಹ ಅವೆಲ್ಲವನ್ನು ಈ ನಿಂಬೆ ಹಣ್ಣು ತೋಲಗಿಸುತ್ತದೆ. ವ್ಯಾಪಾರದಲ್ಲಿ ನಷ್ಟ, ಹಣ ಕಾಸಿನ ಸಮಸ್ಯೆ, ವ್ಯವಹಾರದಲ್ಲಿ ಮೋಸ ಹೀಗೆ ಹಲವಾರು ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ನಾವು ಹೇಳಿದ ಈ ಒಂದು ಉಪಾಯ ನಿಮ್ಮ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತದೆ.

ಇನ್ನು ಈ ನಿಂಬೆ ಹಣ್ಣು ಯಾವುದೇ ಕೆಟ್ಟ ದೃಷ್ಟಿ ಬಿದ್ದರೆ ಇದು ಸಂಪೂರ್ಣವಾಗಿ ಒಣಗಿ ಹೋಗುತ್ತದೆ ಆಗ ಇದನ್ನು ತೆಗೆದುಕೊಂಡು ಹೋಗಿ ಯಾವುದಾದರೂ ಒಂದು ಮರದ ಬುಡಕ್ಕೆ ಇದನ್ನು ಹಾಕಿ ಹಿಂದೆ ತಿರುಗಿ ನೋಡದೆ ಬರಬೇಕು. ಇನ್ನು ಹೀಗೆ ಮಾಡಿದ ನಂತರ ಮನೆಗೆ ಬಂದು ಸ್ನಾನ ಮಾಡಿ, ತಾಯಿ ದುರ್ಗೆಯನ್ನು ಸ್ಮರಿಸುತ್ತಾ ಮನೆಯ ದೀಪ ಹಚ್ಚಿ ಪೂಜೆ ಮಾಡಬೇಕು. ಈ ರೀತಿ ನೀವು ಮೂರು ಅಮಾವಾಸ್ಯೆ ಮಾಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.

 

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ