ತೀವ್ರವಾಗಿ ಕಾಡುತ್ತಿರುವ ನಗಡಿಗೆ ಮೂಲಂಗಿ ಬಳಸಿ ಹೀಗೆ ಮಾಡಿ ತಕ್ಷಣ ಪರಿಣಾಮ ಪಡೆಯಿರಿ..!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನೆಗಡಿ ಒಂದು ರೀತಿಯ ಅಂಟುರೋಗ ನೆಗಡಿಯು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ಮನೆಯ ಇರುವವರನ್ನು ಕಾಣಿಸದೆ ಬಿಡಲು ನೆಗಡಿ ಬರಲು ಮುಖ್ಯವಾದ ಕಾರಣ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವುದು ಹೀಗಾಗಿ ದೇಹದ ಶಕ್ತಿ ಕುಂಠಿತವಾಗಿ ನೆಗಡಿ ತುಂಬಾ ಉಪಟಳವನ್ನು ನೀಡುವುದು.

ನೆಗಡಿಯಿಂದ ಪಾರಾಗಲು ಕೆಲವು ಸೂಚನೆಗಳು.ಮೂಲಂಗಿಯನ್ನು ಹಸಿಯಾಗಿ ಅಥವಾ ಅಡುಗೆಯಲ್ಲಿ ಸೇರಿಸಿ ತಿನ್ನುವುದರಿಂದ ನೆಗಡಿಯನ್ನು ದೂರ ಮಾಡಬಹುದು.ಶುಂಠಿ ರಸದಲ್ಲಿ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ನೆಗಡಿಯ ಕಾಟವನ್ನು ತಪ್ಪಿಸಿಕೊಳ್ಳಬಹುದು.

ಹಾಲಿಗೆ ಸ್ವಲ್ಪ ಅರಿಶಿಣ ಬೆಲ್ಲ ಸೇರಿಸಿ ಕೆಂಪಗೆ ಕಾಯಿಸಿ ಕುಡಿಯಿರಿ.ನೆಗಡಿ ದೂರವಾಗಲು ಒಂದು ಲೋಟ ನೀರಿಗೆ ಸ್ವಲ್ಪ ದಾಲ್ಚಿನ್ನಿ ಚೂರ್ಣವನ್ನು ಕಾಳು ಮೆಣಸಿನಪುಡಿ ಸ್ವಲ್ಪ ಸೇರಿಸಿ ಚೆನ್ನಾಗಿ ಕುದಿಸಿ ಈ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನೆಗಡಿ ದೂರವಾಗುವುದು.

ಮೆಣಸನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿಕೊಳ್ಳಿ ಅದಕ್ಕೆ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸಿ ದಿನವೂ ಸೇವಿಸುವುದರಿಂದ ನೆಗಡಿ ದೂರವಾಗುವುದು ನೆಗಡಿ ಅಂಟು ಕಾಯಿಲೆ ಇದರ ಉಪಟಳವನ್ನು ಸಹಿಸುವುದು ತುಂಬಾ ಕಷ್ಟ.

ಕೆಂಡದ ಮೇಲೆ ಅರಿಶಿನ ಪುಡಿ ಹಾಕಿ ಅದರ ಹೊಗೆಯನ್ನು ಸೇವಿಸಿದರೆ ನೆಗಡಿ ಮಾಯವಾಗುವುದು.

ಬಿಸಿಯಾದ ಟಿ ಯನ್ನು ಮೊದಲು ತಯಾರಿಸಿಕೊಂಡು ಅದಕ್ಕೆ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ನೆಗಡಿ ದೂರವಾಗುವುದು.

ದೊಡ್ಡ ಪತ್ರೆ ತುಳಸಿ ಎಲೆಯ ರಸವನ್ನು ವಿಲೆದೆಲೆ ರಸವನ್ನು ಸೇರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ನೆಕ್ಕು ವುದರಿಂದ ನೆಗಡಿ ದೂರವಾಗುವುದು.

ಮತ್ತೊಂದು ಸುಲಭವಾದ ಉಪಾಯ ಪ್ರತಿದಿನ ಅಥವಾ ಆಗಾಗ ಶರೀರಕ್ಕೆ ಉಪ್ಪು ತಿಕ್ಕಿ ಸ್ನಾನ ಮಾಡುವುದರಿಂದ ನೆಗಡಿ ದೂರವಾಗುವುದು ಅದೇ ರೀತಿ ನಮ್ಮ ಸಹನೆಯು ಹೆಚ್ಚುವುದು.

ಪುದಿನ ಎಲೆಗಳಿಂದ ನೆಗಡಿಯನ್ನು ದೂರ ಮಾಡಬಹುದು ಪುದೀನಾ ಎಲೆಗಳನ್ನು ಬಿಡಿಸಿಕೊಂಡು ಕುದಿಯುವ ನೀರಿಗೆ ಹಾಕಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಅದರ ಹೊಗೆಯನ್ನು ಮೂಗಿನ ಹೊಳ್ಳೆಗಳಿಂದ ಎಳೆದುಕೊಳ್ಳಿ.

ಈ ರೀತಿ ಮಾಡುವುದರಿಂದ ಪುದಿನಾ ಎಲೆಗಳು ಇರುವ ಔಷಧೀಯ ಗುಣಗಳು ನೆಗಡಿಯನ್ನು ದೂರ ಮಾಡುತ್ತವೆ.

ಗಮನಿಸಿ: ಪುದಿನ ಎಲೆ ಶುಂಠಿ ದೊಡ್ಡ ಪತ್ರೆ ಮುಂತಾದ ನೆಲೆಗಳಲ್ಲಿ ಔಷಧಿಯ ಗುಣಗಳಿವೆ ಶುಂಠಿಯೂ ದೇಹವನ್ನು ಉಷ್ಣ ಗೊಳಿಸುವುದು ಹಾಲು ಕರಿಮೆಣಸು ಮುಂತಾದ ಪದಾರ್ಥಗಳಲ್ಲಿ ದೇಹವನ್ನು ಉಷ್ಣತೆಯ ಮಟ್ಟಕ್ಕೆ ತರುವ ಗುಣ ಇದೆ.

 

Leave a Reply

Your email address will not be published.