ಜೀವನದಲ್ಲಿ ಎಂತಹ ಕಷ್ಟಗಳಿದ್ದರು ಸಾಕ್ಷಾತ್ ದತ್ತಾತ್ರೆಯ ಸ್ವಾಮಿಯವರ ಅನುಗ್ರಹ ಪಡೆದ ಅವಧೂತ ಶ್ರೀ ನಂಜುಂಡಸ್ವಾಮಿಯವರ ಮಠಕ್ಕೆ ಬನ್ನಿ ಸಾಕು.ಪವಾಡ ನೋಡಿ.

Uncategorized

ದೇಗುಲ ದರ್ಶನ ಕರ್ನಾಟಕ ತಂಡದಿಂದ ಅನೇಕ ವಿಸ್ಮಯಕಾರಿ ಪವಾಡ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ.ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಪುಣ್ಯ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ನೀಡಿದರೆ ಸಾಕು ಸಕಲ ಸಂಕಷ್ಟಗಳು ದೂರಾಗುವುದು ಖಚಿತ.ಅಪ್ಪನವರ ಆಶಿರ್ವಾದದಿಂದ ಈಗಾಗಲೇ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ ಒಳಿತನ್ನು ಕಾಣುತ್ತಿದ್ದಾರೆ.ಅವಧೂತ ಶ್ರೀ ನಂಜುಂಡಸ್ವಾಮಿಯವರ ದರ್ಶನ ಪಡೆದು ನಿಸ್ವಾರ್ಥ ಮನಸ್ಸಿನಿಂದ ಬೇಡಿಕೊಂಡರೆ ಎಂತಹ ಸಮಸ್ಯೆಯಾದರೂ ಬಗೆಹರಿಯುವುದು ಖಚಿತ.ಸುಮಾರು ವರ್ಷಗಳ ಹಿಂದೆ ಸಾಮಾನ್ಯ ವ್ಯಕ್ತಿಯಾಗಿದ್ದ ಶ್ರೀ ನಂಜುಂಡಸ್ವಾಮಿಯವರು ಮೈಸೂರಿನ ನಂಜುಂಮಳಿಗೆಯಲ್ಲಿ ವಾಸಿಸುತ್ತಿದ್ದರು.ಅವರಿಗೆ ಒಂದು ವಿಚಿತ್ರವಾದ ಕನಸು ಒಮ್ಮೆ ಬಿದ್ದಿತು.ಆ ಕನಸು ಪ್ರತಿ ದಿನ ಪ್ರತಿ ಕ್ಷಣ ಅವರ ಮನಸ್ಸು ಮತ್ತು ಬುದ್ದಿಯಲ್ಲಿ ಕುಳಿತು ಪ್ರತಿ ಕ್ಷಣವೂ ವಿಚಲಿತರಾಗುವಂತೆ ಮಾಡಿತು.ಆಗ ನಂಜುಂಡಸ್ವಾಮಿಯವರ ಮತ್ತೊಂದು ಕನಸಿನಲ್ಲಿ ಸಾಕ್ಷಾತ್ ದತ್ತಾತ್ರೇಯ ಸ್ವಾಮಿ ಬಂದು.ನನ್ನ ಪಾದುಕೆಗಳು ಒಂದು ಸ್ಥಳದಲ್ಲಿದೆ.ಆ ಮೂಲ ಪಾದುಕೆಗಳನ್ನು ನೀನು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ತಂದು ಪ್ರತಿಷ್ಠಾಪಿಸಬೇಕು ಎಂಬ ಆಜ್ಞೆ ದೊರೆಯಿತು.ನಂಜುಂಡಸ್ವಾಮಿಯವರು ಆ ಕನಸು ಬಿದ್ದ ತಕ್ಷಣ ಮೂಲ ಪಾದುಕೆಗಳನ್ನು ಹೊರಟೆಬಿಟ್ಟರು.ಹಗಲು ರಾತ್ರಿ ಎನ್ನದೆ ಮೂಲ ಪಾದುಕೆ ಇರುವ ಸ್ಥಳವನ್ನು ಶ್ರೀ ನಂಜುಂಡಸ್ವಾಮಿಯವರು ತಲುಪಿದರು.ದತ್ತಾತ್ರೇಯ ಅವರ ಆ ದೇಗುಲದಲ್ಲಿ ಪಾದುಕೆಗಳನ್ನು ತೆಗೆದುಕೊಂಡು ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.ಮೂರು ದಿನಗಳ ಕಾಲ ಊಟ,ತಿಂಡಿ ನಿದ್ದೆ ಇಲ್ಲದೆ ಒಂದು ಮರದ ಮೇಲೆ ಶ್ರೀ ನಂಜುಂಡಸ್ವಾಮಿಯವರು ಆ ಪಾದುಕೆಗಳಿಗಾಗಿ ಕಾದು ಕುಳಿತಿದ್ದರು.ಮೂರನೆಯ ದಿನ ಸಾಕ್ಷಾತ್ ದತ್ತಾತ್ರೇಯ ಸ್ವಾಮಿಗಳು ದೇಗುಲದ ಬಾಗಿಲು ತೆರೆದರು.ಆಗ ನಂಜುಂಡಸ್ವಾಮಿಯವರು ಪಾದುಕೆಗಳನ್ನು ಅಲ್ಲಿಂದ ತೆಗೆದುಕೊಂಡು ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಪಾದದ ಕೆಳಗೆ ತಂದು ಪ್ರತಿಷ್ಠಾಪಿಸಿದರು.ಶ್ರೀ ನಂಜುಂಡಸ್ವಾಮಿಯವರು ಸಾಕ್ಷಾತ್ ದೈವಾಂಶ ಸಂಭೂತರು‌ ಅವರಿಂದ ಅನೇಕ ಜನರು ಒಳಿತನ್ನು ಕಂಡಿದ್ದಾರೆ. ಅವರು ಚಾಮುಂಡೇಶ್ವರಿ ಬೆಟ್ಟದ ಕೆಳಗಿನ ತಪ್ಪಲಿನಲ್ಲಿ ಐಕ್ಯರಾಗಿ ನಂಬಿ ಬಂದ ಭಕ್ತರ ಬಾಳಿನಲ್ಲಿ ಬೆಳಕನ್ನು ನೀಡುವ  ಪವಾಡ ಪುರುಷರಾಗಿ ನೆಲೆಸಿದ್ದಾರೆ.ಅವರ ಶೀಷ್ಯರಾದ ಶ್ರೀ ಶಾಂಡಿಲ್ಯ ಅವರಿಗೆ ನನ್ನ ನಂತರ ನೀನು ಈ ಮಠವನ್ನು ನಡೆಸಿಕೊಂಡು ಹೋಗುಬೇಕು ಎಂದು ಹೇಳಿದ್ದಾರೆ ಹಾಗೂ ಪ್ರತಿನಿತ್ಯ ಶಾಂಡಿಲ್ಯ ಅವರು ಈಗಲೂ ಸಹ ಅಪ್ಪ ಅವರ ಜೊತೆ ಮಾತಾಡುತ್ತಾರೆ.ಶಾಂಡಿಲ್ಯ ಅವರು ಸಹ ಅಪ್ಪನವರ ಮಾರ್ಗದರ್ಶನದಂತೆ ಬಂದ ಭಕ್ತರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾರೆ.ಯಾವುದೇ ಚಟ ಕುಡಿತ ಇದ್ದರೆ ಕೆಟ್ಟ ಚಟಗಳಿದ್ದರೆ ,ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ,ವ್ಯಾಪಾರದಲ್ಲಿ ನಷ್ಟ,ಹಣಕಾಸು ಸಮಸ್ಯೆ,ಜೀವನದಲ್ಲಿ ಜಿಗುಪ್ಸೆ ಹೊಂದಿದ ಲಕ್ಷಾಂತರ ಜನರ ಬಾಳನ್ನು ಅವರ ಅಪ್ಪನವರ ದೈವಿಕ ಶಕ್ತಿಯಿಂದ ಪರಿಹರಿಸಿದ್ದಾರೆ.ಪರಿಹರಿಸುತ್ತಿದ್ದಾರೆ.ನಿಮಗೆ ಎಂತಹ ಸಮಸ್ಯೆ ಇದ್ದರು ಸಹ ಈ ಪವಿತ್ರ ಶ್ರೀ ನಂಜುಂಡಸ್ವಾಮಿಯವರ ಮಠಕ್ಕೆ ಬೇಟಿ ನೀಡಿ ಸಾಕು.ಶ್ರೀ ದತ್ತಾತ್ರೇಯ ಸ್ವಾಮಿಯವರ ಮೂಲ ಪಾದುಕೆ ಇರುವ ಈ ಪುಣ್ಯಕ್ಷೇತ್ರ ಇರುವುದು ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ.ಈ ಸ್ಥಳದ ಬಗ್ಗೆ ಮತ್ತಷ್ಟು ಮಾಹಿತಿಗೆ ದೇಗುಲ ದರ್ಶನ ಕರ್ನಾಟಕ ತಂಡವನ್ನು ಸಂಪರ್ಕಿಸಿ.ಅಪ್ಪನವರ ಮಂತ್ರವನ್ನು ನೀವು ಪಠಿಸಿದರೆ ಸಕಲ ಸಂಕಷ್ಟವೂ ದೂರಾಗುವುದು ಖಚಿತ.ಓಂ ಅವಧೂತಾಯ ವಿಧ್ಮಹೇ.ಸದ್ಗುರು ದೇವಾಯ ಧೀಮಹಿ.ತನ್ನೋ ನಂಜುಂಡಸ್ವಾಮಿ ಅಪ್ಪ ಪ್ರಚೋದಯಾತ್ ಓಂ.ಶಾಂಡಿಲ್ಯ ಅವರ ಕುಟೀರಕ್ಕೆ ನೀವು ಭೇಟಿ ನೀಡಿದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

Leave a Reply

Your email address will not be published.