ನೀವೇನಾದರೂ ಈ ವಿಷಯವನ್ನು ಮನದಲ್ಲಿ ಇಟ್ಟುಕೊಳ್ಳದೆ ಧರ್ಮಸ್ಥಳಕ್ಕೆ ಹೋದರೆ ಹುಷಾರ್? ನಿಮಗೆ ಪ್ರವೇಶ ಇರುವುದಿಲ್ಲ.

ಉಪಯುಕ್ತ ಮಾಹಿತಿ ಭಕ್ತಿ

ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಇರುವಂತಹ ಧರ್ಮಸ್ಥಳ ಎನ್ನುವ ಪ್ರದೇಶದಲ್ಲಿ ಇರುವಂತಹ ಧರ್ಮಸ್ಥಳದ ಶ್ರೀ ಮಂಜುನಾಥನ ಸೇವೆಯನ್ನು ಮಾಡಲು ದೇಶಾದ್ಯಂತ ಹಾಗೂ ಹೊರ ದೇಶದಿಂದ ಕೂಡ ದಿನದಿಂದ ದಿನಕ್ಕೆ ಸಾವಿರಾರು ಜನರು ಇಲ್ಲಿಗೆ ಬಂದು ಶ್ರೀ ಮಂಜುನಾಥನ ದರ್ಶನ ಮಾಡಿ ಹೋಗುತ್ತಾರೆ.

ಇಲ್ಲಿಗೆ ಬರುವಂತಹ ಜನರು ನೇತ್ರಾವತಿ ನದಿಯಲ್ಲಿ ಮಿಂದು ಶ್ರೀ ಮಂಜುನಾಥನ ದರ್ಶನವನ್ನೂ ಮಾಡಿ ಹೋಗುವುದು ನೀವು ನೋಡೇ ಇರುತ್ತೀರ.

ಹಾಗಾದರೆ ಧರ್ಮಸ್ಥಳಕ್ಕೆ ಬರುವಾಗ ನೀವು ಕೆಲವೊಂದು ನಿಯಮವನ್ನು ಪಾಲನೆ ಮಾಡಲೇಬೇಕು, ಹಾಗೆ ಮಾಡದಿದ್ದಲ್ಲಿ ಧರ್ಮಸ್ಥಳದ ಒಳಗಡೆ ನಿಮಗೆ ಪ್ರವೇಶ ಇರುವುದಿಲ್ಲ ಹಾಗೂ ನೀವು ಶ್ರೀ ಮಂಜುನಾಥನ ದರ್ಶನವನ್ನೂ ಮಾಡಲು ಆಗುವುದಿಲ್ಲ, ಹಾಗಾದರೆ ಯಾವ ರೀತಿಯ ನಿಯಮವನ್ನು ಪಾಲನೆ ಮಾಡಿದರೆ ಶ್ರೀ ಮಂಜುನಾಥನ ದರ್ಶನ ನಿಮಗೆ ಆಗುತ್ತದೆ.

ಎನ್ನುವುದಕ್ಕೆ ಇಲ್ಲಿದೆ ಒಂದು ಸಂಪೂರ್ಣವಾದ ವಿಚಾರ. ನೀವೇನಾದರೂ ಈ ದೇವಸ್ಥಾನಕ್ಕೆ ಬರುವಾಗ ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಂಡು  ಬಂದರೆ ಅದಕ್ಕೆ ನಿಮಗೆ ಈ ದೇವಸ್ಥಾನದ ಒಳಗಡೆ ಪ್ರವೇಶ ಇರುವುದಿಲ್ಲ, ಅದಲ್ಲದೆ ದೇವಸ್ಥಾನದ ಒಳಗಡೆ ನೀವು ಕ್ಯೂ ಅಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಗರ್ಭಗುಡಿಯ ಸೇರುವ ಮೊದಲು ನೀವು ಹಾಗೂ ಬನಿಯನ್ನು ಒಳಗಡೆ ಬರಬೇಕು.

ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಈ ಧರ್ಮಸ್ಥಳ ಎನ್ನುವ ಪ್ರದೇಶದಲ್ಲಿ ಯಾವುದೇ ಭಕ್ತರು ಎಲ್ಲಿಂದಲೋ  ಬಂದರೂ ಕೂಡ ಇಲ್ಲಿ ದಿನಗಳು ಊಟವನ್ನು ಹಾಕುತ್ತಾರೆ, ಯಾವ ಭಕ್ತನಿಗೂ ಕೂಡ ಊಟ ಇಲ್ಲದೆ ಈ ಪ್ರದೇಶದಿಂದ ಹೊರಗಡೆ ಕಳಿಸಲಾ ರರು. ಅದಲ್ಲದೆ ಈ ಧರ್ಮಸ್ಥಳದಲ್ಲಿ ನೀವೇನಾದರೂ ಉಳಿದುಕೊಂಡು ಹೋಗಬೇಕಾದರೆ ನಿಮಗೆ ಅಲ್ಲೇ ಉಳಿದುಕೊಳ್ಳುವ ಅಂತಹ ಸೌಲಭ್ಯ ಕೂಡ ಧರ್ಮಸ್ಥಳದಲ್ಲಿ ಕಲ್ಪಿಸಲಾಗಿದೆ.

ಹಾಗೆ ನೀವು ಕೇವಲ 100 ರೂಪಾಯಿಗೆ ನಿಮ್ಮ ಫ್ಯಾಮಿಲಿಯ ಸಮೇತ ನೀವು ಅಲ್ಲಿ ಲಾಡ್ಜ್ನಲ್ಲಿ ಉಳಿದುಕೊಳ್ಳುವ ಅಂತಹ ಸೌಲಭ್ಯ ಧರ್ಮಸ್ಥಳದಲ್ಲಿ ಮಾತ್ರ ಇರುತ್ತದೆ ಆದರೆ ಈ ರೀತಿಯಾದ ಕಡಿಮೆ ಸೌಲಭ್ಯ ನಿಮಗೆ ಭಾರತ ದೇಶದಲ್ಲಿ ಯಾವ ದೇವಸ್ಥಾನದಲ್ಲೂ ಕೂಡಾ ನೀವು ಕಾಣುವುದಕ್ಕೆ ಸಾಧ್ಯವಿಲ್ಲ.

ಕೆಲವರು ಹೇಳುವ ಹಾಗೆ  ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಆಣೆ ಯನ್ನು ಹಾಕಿಸಿಕೊಳ್ಳುವುದು ನೀವು ನೋಡಿರ್ತೀರ ಯಾಕೆಂದರೆ ಧರ್ಮಸ್ಥಳದ ದೇವರ ಮೇಲೆ ಆಣೆ ಹಾಕಿದರೆ ಈ ದೇವರು ಸುಮ್ಮನೆ ಬಿಡುವುದಿಲ್ಲ ಸುಳ್ಳು ಎನ್ನುವುದು ದೇವರ ಹತ್ತಿರ ನಡೆಯುವುದಿಲ್ಲ.

ಆಧುನಿಕ ಕೆಲವೊಂದು ಪ್ರದೇಶದಲ್ಲಿ ಯಾವುದಾದರೂ ತಪ್ಪು ಕೆಲಸ ನಡೆದಿದೆ ಆಗಲಿ ಅಥವಾ ಯಾವುದಾದರೂ ವ್ಯಕ್ತಿಯ ಮೇಲೆ ಅಪವಾದ ಬಂದರೆ ಅವರನ್ನು ಪಂಚಾಯತಿಯಲ್ಲಿ ಧರ್ಮಸ್ಥಳ ದೇವರ ಮೇಲೆ ಆಣೆ ಯನ್ನು ಹಾಕಿಸಿಕೊಳ್ಳುತ್ತಾರೆ.  ಇದರಿಂದ ತಪ್ಪು ಮಾಡಿದಂತಹ ವ್ಯಕ್ತಿಯ ಆಣೆಯನ್ನು ಹಾಕಲು ಹಿಂದೆ ಮುಂದೆ ಏನು ನೋಡುತ್ತಾನೆ ಇದರಿಂದ ತಪ್ಪು ಕೆಲಸ ಮಾಡಿರುವರು ಯಾರು ಅಂತ ಗೊತ್ತಾಗುತ್ತದೆ. ಭಯದ ಮಗಳೇ ಭಕ್ತಿ ಭಯ ಎಲ್ಲಿರುತ್ತದೆಯೋ ಅಲ್ಲಿ ಭಕ್ತಿ ಇದ್ದೇ ಇರುತ್ತದೆ ಧರ್ಮಸ್ಥಳದ ಮೇಲೆ ಆಣೆ ಯನ್ನು ಹಾಕಿದರೆ ಅವನು ನಿಜವಾಗಲೂ ತಪ್ಪು ಮಾಡಿದರೆ ದೇವರು ಅವನನ್ನು ಬಿಡುವುದಿಲ್ಲ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಇರುವಂತಹ ಒಂದು ಅಚಲವಾದ ನಂಬಿಕೆ ಆಗಿದೆ.

ಆದ್ದರಿಂದ ಈ ದೇವರ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಸಾವಿರಾರು ಜನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ದೇವರನ್ನು ನಮಸ್ಕರಿಸಿ ಹೋಗುತ್ತಾರೆ.  ಈ ಲೇಖನ  ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ನಮ್ಮ ಲೇಖನವನ್ನು ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ದಯವಿಟ್ಟು ಮರೆಯಬೇಡಿ.

Leave a Reply

Your email address will not be published. Required fields are marked *