43 ದೇವಸ್ಥಾನಗಳು ಒಂದೇ ಜಾಗದಲ್ಲಿ ಇರುವಂತಹ ಪ್ರದೇಶವಿದು, ನಿಮಗೆ ಆಶ್ಚರ್ಯವಾಗಬಹುದು ಇದು ನಿಜವಾದ ಮಾತು ಇದು ಬೇರೆ ಯಾವ ರಾಜ್ಯದಲ್ಲೂ ಅಲ್ಲ ಇದು ನಮ್ಮ ರಾಜ್ಯದಲ್ಲಿ ಇರುವಂತಹ ಒಂದು ಪವಿತ್ರವಾದ ಸ್ಥಳ ? ಹಾಗಾದರೆ ಅದು ಯಾವುದು ಅಂತ ತಿಳ್ಕೊಬೇಕು ಈ ಲೇಖನವನ್ನು ಸಂಪೂರ್ಣವಾಗಿ ಓದಿ !!!

ಉಪಯುಕ್ತ ಮಾಹಿತಿ ಭಕ್ತಿ

ನೀವು ತಿಳಿದುಕೊಳ್ಳಬೇಕಾದ ಒಂದು ವಿಚಾರ ಏನಪ್ಪಾ ಅಂದರೆ ಒಂದೊಂದು ದೇವಸ್ಥಾನದಲ್ಲಿ ಒಂದು ವಿಚಿತ್ರವಾದ 1 ಪದ್ಧತಿ ಹಾಗೂ ಚಿತ್ರವಾದ ಸಂಗತಿಗಳು ಇದ್ದೇ ಇರುತ್ತದೆ ಕೆಲವೊಂದು ದೇವಸ್ಥಾನಗಳಲ್ಲಿ  ಪವಾಡಗಳಲ್ಲಿ ಹೆಸರು ಆದರೆ ಕೆಲವೊಂದು ದೇವಸ್ಥಾನಗಳು .

ದೇವಸ್ಥಾನಗಳ ಕಟ್ಟಿದಂತಹ ರೀತಿ ಹಾಗೂ ದೇವಸ್ಥಾನದಲ್ಲಿ ಇರುವಂತಹ ವಿಶೇಷತೆಗಳಿಂದ ಅದು ತುಂಬಾ ಫೇಮಸ್ ಆಗಿ ಬಿಡುತ್ತದೆ. ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ಯನ್ನು ನಾನು ನಿಮಗೆ ತೆಗೆದುಕೊಂಡು ಬಂದಿದ್ದೇನೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ದೇವಸ್ಥಾನದಲ್ಲಿ 43  ದೇವಸ್ಥಾನಗಳನ್ನು ಹೊಂದಿರುವಂತಹ ಒಂದು ಪ್ರದೇಶ ಇದೆ.

ನಿಮಗೆ ಇದರ ಬಗ್ಗೆ ಆಶ್ಚರ್ಯವಾದರೂ ಇದು ಆಶ್ಚರ್ಯ ಪಡಬೇಕಾದ ಅಂತಹ ವಿಚಾರವೇನು ಅಲ್ಲ ಇದು ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಹಾಗಾದರೆ ಆ ಪ್ರದೇಶ ಇರೋದಾದ್ರೂ ಎಲ್ಲಿ ಹಾಗೂ ಅದರ ಬಗ್ಗೆ ಇರುವಂತಹ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ತಿಳಿದುಕೊಳ್ಳೋಣ.

ಈ ಪ್ರದೇಶ ಇರುವುದು ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದು ಇರುವುದು ಮಂಡ್ಯ ಜಿಲ್ಲೆಯ ಮೇಲುಕೋಟೆ ಪಾಂಡವಪುರ ಒಂದು ಚಿಕ್ಕ ಹಳ್ಳಿಯಲ್ಲಿ. ಅಲ್ ಇರುವಂತಹ ಹೊಯ್ಸಳ  ಚೆಲುವರಾಯಸ್ವಾಮಿ ಎನ್ನುವಂತಹ ಒಂದು ದೇವಸ್ಥಾನ. ಇದು ಒಂದು ದೊಡ್ಡ ಧಾರ್ಮಿಕ ಸ್ಥಳವಾಗಿ ಈ ಪ್ರದೇಶದಲ್ಲಿ ಹೊರಹೊಮ್ಮಿದೆ. ನೀವು ಎಲ್ಲಿಗೆ ಹೋಗಬೇಕು ಆದರೆ ಮೊದಲು ನೀವು ಮಂಡ್ಯಕ್ಕೆ ಬಂದು ಅಲ್ಲಿಂದ ನೀವು 22 ಕಿಲೋಮೀಟರ್ ಕ್ರಮಿಸಿದರೆ ಇಲ್ಲಿರುವ ಚೆಲುವರಾಯ ಸ್ವಾಮಿಯ ದೇವಸ್ಥಾನಕ್ಕೆ ನೀವು ತಲುಪಬಹುದಾಗಿದೆ.

ಅದಲ್ಲದೆ ಹೇಗೆ ಪ್ರದೇಶದಲ್ಲಿ ಬೆಟ್ಟದ ಮೇಲೆ ನರಸಿಂಹ ಸ್ವಾಮಿಯ ದೇವಸ್ಥಾನ ವನ್ನು ಕೂಡ ನೀವು ನೋಡಬಹುದಾಗಿದೆ. ಈ ಪ್ರದೇಶದಲ್ಲಿ 43 ದೇವಸ್ಥಾನಗಳು ಇವೆ ಎನ್ನುವುದಕ್ಕೆ ನಾವು ಕೆಳಗೆ ಕೊಟ್ಟಿರುವಂತಹ ದೇವಸ್ಥಾನಗಳ ಪಟ್ಟಿಯನ್ನು ನೀವು ಓದಿ ಅರ್ಥಮಾಡಿಕೊಳ್ಳಿ. ಈ ಪ್ರದೇಶದಲ್ಲಿ ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಯೋಗ ನರಸಿಂಹ ಸ್ವಾಮಿ ದೇವಸ್ಥಾನ,

ಶಾಂಡಿಲ್ಯ ಸನ್ನಿಧಿ, ಕುಲಶೇಖರ ಸನ್ನಿಧಿ, ವೇದಾಂತದೇಶಿಕರ ಸನ್ನಿಧಿ, ಬದ್ರಿ ನಾರಾಯಣ ದೇವಸ್ಥಾನ, ಕೇಶವ ದೇವರ ದೇವಸ್ಥಾನ, ನಂಜ್ ಇಯರ್ ದೇವಸ್ಥಾನ, ಮಾರಮ್ಮನ ದೇವಸ್ಥಾನ, ಪೇಟೆ ಆಂಜನೇಯನ ಸನ್ನಿಧಿ, ತಿರುಮಂಗೈ ಅಲ್ವರ್ ಸನ್ನಿಧಿ, ಪೇಟೆ ಕೃಷ್ಣ ದೇವರ ಸನ್ನಿಧಿ, ಸೀತಾ ರಮ್ಯ ದೇವಸ್ಥಾನ್,ಪರಕಾಲ ಮಠ, ಆದಿಶೇಷ ದೇವಸ್ಥಾನ, ವೆಂಕಟೇಶ್ವರ ಗುಡಿ, ಕರಣಿಕ ನಾರಾಯಣ ಗುಡಿ, ಪಂಚ ಭಾಗವತ ಕ್ಷೇತ್ರ, ವರಾಹ ದೇವರ ದೇವಸ್ಥಾನ, ಲಕ್ಷ್ಮಿ ನಾರಾಯಣ ದೇವಸ್ಥಾನ, ಹನುಮಾನ್ ದೇವಾಲಯ,

ಬಿಂದು ಮಾಧವ ದೇವಾಲಯ, ಹಯಗ್ರೀವ ದೇವಾಲಯ, ಸಿಟಿ ಹನುಮಾನ್ ದೇವಾಲಯ, ದತ್ತ ನಾರಾಯಣ ಗುಡಿ, ಕರ ಮೆಟ್ಟಿಲು ಆಂಜನೇಯ ಗುಡಿ, ಶನೇಶ್ವರ ದೇವಸ್ಥಾನ, ವರಸಿದ್ಧಿ ವಿನಾಯಕನ ದೇವಸ್ಥಾನ,  ಕವಿಗಳ ಆಂಜನೇಯನ ಗುಡಿ, ಮುಳಬಾಗಿಲು ಆಂಜನೇಯ ದೇವಸ್ಥಾನ, ಶ್ರೀನಿವಾಸ ದೇವಸ್ಥಾನ, ರಾಯರು ಗೋಪುರ ಆಂಜನೇಯ ದೇವಸ್ಥಾನ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಸುಗ್ರೀವನ ಗುಡಿ, ಅಕ್ಕ-ತಂಗಿಯರ ಹೊಂಡ, ಹೊರ ತಮ್ಮನ ದೇವಸ್ಥಾನ, ಶಿವನ ಗುಡಿ.ಗುದದಲ್ಲಿ ಸ್ನೇಹಿತರೆ ಈ ರೀತಿಯಾಗಿಯೇ 43 ದೇವಸ್ಥಾನವನ್ನು ಹೊಂದಿರುವಂತಹ ಈ ಪ್ರಸಿದ್ಧ ಕ್ಷೇತ್ರಕ್ಕೆ ನಿಮಗೇನಾದರೂ ಸಮಯ ಸಿಕ್ಕಿದ್ದಲ್ಲಿ ಇಲ್ಲಿಗೆ ಬಂದು ದೇವರ ದರ್ಶನವನ್ನು ಮಾಡಿಕೊಂಡು ಬನ್ನಿ.

ಇಲ್ಲಿ ದೇವಸ್ಥಾನವನ್ನು ಅತ್ಯಂತ ರಮಣೀಯವಾಗಿ ಕಟ್ಟಿಸಲಾಗಿದೆ ಈ ದೇವಸ್ಥಾನವಾದ ಸೌಂದರ್ಯವನ್ನು ನೀವು ನೋಡಿದರೆ ನಿಜವಾಗಲೂ ನೀವು ಬೆರಗಾಗುತ್ತೀರಿ, ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.