ದುಡ್ಡನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಾಕು ಮನೆಗೆ ಯಾವಾಗಲೂ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ..!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಈ ದಿಕ್ಕಿನಲ್ಲಿ ಹಣವನ್ನು ಇಟ್ಟರೆ ನಿಮ್ಮ ಮನೆಗೆ ಯಾವಾಗಲೂ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ.ಹಾಯ್ ಪ್ರಿಯ ಓದುಗರೇ ಹೆಚ್ಚಾಗಿ ಎಲ್ಲರೂ ಹಣದ ವ್ಯವಸ್ಥೆಯನ್ನು ಮಾಡಲು ಎಂತೆಂತಹ ಕಷ್ಟವಾದ ಕೆಲಸಗಳನ್ನು ಕೂಡ ಮಾಡುತ್ತಾರೆ ಕೆಲಸವಿಲ್ಲದೆ ಯಾವ ವ್ಯಕ್ತಿಗೂ ಹಣ ಸಿಗುವುದಿಲ್ಲ. ಅಂದರೆ ಪರಿಶ್ರಮವಿಲ್ಲದ ಜಾಗದಲ್ಲಿ ಲಕ್ಷ್ಮೀದೇವಿಯು ಇರುವುದಿಲ್ಲ. ಹೀಗೆ ಕಷ್ಟಪಟ್ಟು ದುಡಿದ ಹಣ ಬೇಗ ಬೇಗನೆ ಅನಾವಶ್ಯಕವಾಗಿ ಖರ್ಚಾಗಿ ಹೋಗುವ ಸಾಧ್ಯತೆ ಇರುತ್ತದೆ ಇದಕ್ಕೆ ಕಾರಣ ಮನೆಯ ವಾಸ್ತು ದೋಷ ಕೂಡ ಆಗಿರಬಹುದು. ಸ್ನೇಹಿತರೆ ಮನೆ ಚೆನ್ನಾಗಿ ಕಟ್ಟುವುದಕ್ಕಿಂತ ವಾಸ್ತು ಪ್ರಕಾರವಾಗಿ ಚಿಕ್ಕದಾಗಿ ಕಟ್ಟಿದರು ಒಳ್ಳೆಯದು. ವಾಸ್ತು ಪ್ರಕಾರವಾಗಿ ಕಟ್ಟಿದ ಮನೆಯಲ್ಲಿ ಹಣದ ಒಳ ಹರಿವು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

ಹಾಗೆ ಮನೆಯಲ್ಲಿ ನೆಮ್ಮದಿ ಸಂತೋಷ ಆರೋಗ್ಯ ಎಂಬುದು ಸದಾ ಇರುತ್ತದೆ. ವಾಸ್ತು ಪ್ರಕಾರ ಎಂದರೆ ಯಾವ ದಿಕ್ಕಿನಲ್ಲಿ ಯಾವ ಯಾವ ಸ್ಥಳ ಇರುವುದು ಎಂಬ ಅರ್ಥ ಉದಾಹರಣೆಗೆ ಅಗ್ನಿಮೂಲೆಯಲ್ಲಿ ಅಡುಗೆಮನೆ ಪೂರ್ವ ದಿಕ್ಕಿನಲ್ಲಿ ದೇವರ ಮನೆ ಒಂದೊಂದು ಸ್ಥಳಕ್ಕೆ ಒಂದೊಂದು ದಿಕ್ಕು ಎಂಬುದು ಇರುತ್ತದೆ ಇದರ ಪ್ರಕಾರ ನಾವು ಮನೆಯನ್ನು ನಿರ್ಮಾಣ ಮಾಡುವುದು ವಾಸ್ತು ಪ್ರಕಾರ ಆಗಿದೆ ಎಂದು ನಾವು ತಿಳಿಯಬಹುದು. ಹಾಗಾದರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಹಾಗೂ ಏಕೆ ಇದೇ ದಿಕ್ಕಿನಲ್ಲಿ ಹಣವನ್ನು ಇಡಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ. ಹಣವನ್ನು ಉತ್ತರದಿಕ್ಕಿನಲ್ಲಿ ಅಂದರೆ ಮನೆಯ ಕುಬೇರ ದಿಕ್ಕು ಎಂದು ಕರೆಸಿಕೊಳ್ಳುವ ಉತ್ತರದಿಕ್ಕಿನಲ್ಲಿ ಹಣವನ್ನು ಇಡುವುದು ಉತ್ತಮ ಅದೇ ರೀತಿಯಾಗಿ ಉತ್ತರದಿಕ್ಕಿನಲ್ಲಿ ಹೆಚ್ಚಾಗಿ ಭಾರದ ವಸ್ತುಗಳನ್ನು ಇಡಬಾರದು.

ಉತ್ತರ ದಿಕ್ಕು ಹಣವನ್ನು ಇಡಲು ಶ್ರೇಷ್ಟವಾಗಿದೆ ಹಾಗೂ ಈ ದಿಕ್ಕಿನಲ್ಲಿ ಹಣವನ್ನು ಇರುವುದರಿಂದ ನಿಮ್ಮ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಣವನ್ನು ಇಡುವ ಯಾವುದೇ ಸ್ಥಳದಲ್ಲಿ ಕನ್ನಡಿಯನ್ನು ಅಳವಡಿಸುವುದು ಇನ್ನು ವಿಶೇಷ. ಇದರಿಂದಾಗಿ ನಾವು ಹಣವನ್ನು ತೆರೆಯಲು ಹೋದಾಗ ಕನ್ನಡಿಯಿಂದ ಅದು ಡಬಲ್ ರೀತಿಯಾಗಿ ಕಾಣುವಂತೆ ಇಟ್ಟುಕೊಂಡರೆ ಇದು ಕೂಡ ನಮ್ಮ ಹಣವನ್ನು ವೃದ್ಧಿ ಮಾಡುತ್ತದೆ ನಂಬಿಕೆ ಕೂಡ ಇದೆ. ಸ್ನೇಹಿತರೇ ಉತ್ತರ ದಿಕ್ಕಿನಲ್ಲಿ ದುಡ್ಡನ್ನು ಇಟ್ಟಾಗ ಅದರ ಮೇಲೆ ಯಾವುದೇ ರೀತಿಯ ಸೆಲ್ಫ್ ಗಳು ಇರಬಾರದು. ಹಾಗೆ ಬಂಗಾರ ಇಡುವ ಸ್ಥಳದಲ್ಲಿ ಕೂಡ ಕನ್ನಡಿಯನ್ನು ಅಳವಡಿಸಿಕೊಳ್ಳಿ ಏಕೆಂದರೆ ಬಂಗಾರ ಕೂಡ ತಾಯಿ ಮಹಾಲಕ್ಷ್ಮಿಯ ಸ್ವರೂಪವಾಗಿದೆ.

ಹಾಗೆ ಉತ್ತರದಿಕ್ಕಿನಲ್ಲಿ ಟಾಯ್ಲೆಟ್ ಟೆರಸ್ಗೆ ಹೋಗಲು ಮೆಟ್ಟಿಲುಗಳು ಇರಬಾರದು ಇದು ಕೂಡ ವಾಸ್ತುದೋಷ ಆಗುತ್ತದೆ ಇದರಿಂದಾಗಿ ಮನೆಯಲ್ಲಿ ಹಣದ ಹೊರ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಯಾವುದಾದರೂ ಮುಖಾಂತರ ಹಣ ಖರ್ಚಾಗುತ್ತದೆ ಇರುತ್ತದೆ ಹಾಗೆ ಮನೆಯಲ್ಲಿ ಆರೋಗ್ಯದ ತೊಂದರೆಗಳು ಕೂಡ ಹೆಚ್ಚಾಗಬಹುದು. ಇನ್ನೂ ಉತ್ತರ ದಿಕ್ಕಿನ ಮೇಲ್ಭಾಗದಲ್ಲಿ ಅಂದರೆ ದುಡ್ಡು ಇಡುವ ಸ್ಥಳದಲ್ಲಿ ನಾವು ನೆಲವನ್ನು ಅಗೆಯುವುದು ಹಾಗೂ ಅದರ ಮೇಲಿಂದ ಏನನ್ನಾದರೂ ಬೀಳಿಸುವ ಹಾಗೆ ಇಡುವುದನ್ನು ಮಾಡಬಾರದು ಇದರಿಂದ ಕೂಡ ಮನೆಯಲ್ಲಿ ಹಣಕಾಸಿನ ತೊಂದರೆ ಆಗುತ್ತದೆ.

ಇನ್ನು ಅಡುಗೆ ಮನೆಯಲ್ಲಿ ನೀಲಿ ಬಣ್ಣವನ್ನು ಹಚ್ಚುವುದು ಒಳ್ಳೆಯದಲ್ಲ ಇದು ಕೂಡ ಹಣವನ್ನು ಖರ್ಚು ಆಗುವಂತೆ ಮಾಡುತ್ತದೆ ನೀವೇನಾದರೂ ಅಡುಗೆ ಕೋಣೆಯಲ್ಲಿ ನೀಲಿ ಬಣ್ಣವನ್ನು ಹಚ್ಚಿದರೆ ಅಡುಗೆ ಮನೆಯಲ್ಲಿ ಕೆಂಪು ಬಣ್ಣದ ಲೈಟ್ ಅನ್ನು ಉಪಯೋಗಿಸುವುದು ಉತ್ತಮ. ಉತ್ತರ ದಿಕ್ಕಿನಲ್ಲಿ ಹಳದಿ ಬಣ್ಣದಲ್ಲಿ ನೀರನ್ನು ತುಂಬಿಸಿ ಇಡುವುದರಿಂದ ಉತ್ತರದಿಕ್ಕಿನ ವಾಸ್ತುದೋಷವೂ ದೂರವಾಗುತ್ತದೆ. ಸ್ನೇಹಿತರೆ ಹಣವನ್ನು ದುಡಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ಹಾಗೆ ಅವಶ್ಯಕತೆಯಿದ್ದಾಗ ಮಾತ್ರ ಮಾಡುವುದು ಇದು ಹಣವನ್ನು ಗಳಿಸಿದ ಹಾಗೆ. ವಾಸ್ತು ಪ್ರಕಾರ ಹಣವನ್ನು ಇಟ್ಟು ನಿಮ್ಮ ದುಡಿಮೆಗೆ ಒಳ್ಳೆಯ ಲಾಭ ಸಿಗುವಂತೆ ಮಾಡಿಕೊಳ್ಳಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಇನ್ನು ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *