ನಿಮ್ಮ ಮನೆಯ ಬಾಗಿಲಿನ ಹಿಂದೆ ಯಾವುದೇ ಕಾರಣಕ್ಕೂ ಇದನ್ನು ಇಡಬೇಡಿ, ಒಂದು ವೇಳೆ ಈ ವಸ್ತು ಇದ್ದರೆ ಈಗಲೇ ಅದನ್ನು ತೆಗೆದುಬಿಡಿ, ಇಲ್ಲವಾದರೆ ನಿಮ್ಮ ಮನೆ ನಾಶವಾಗುವುದು ಖಂಡಿತ!…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ನಿಮ್ಮ ಮನೆಯ ಬಾಗಿಲಿನ ಹಿಂದೆ ಈ ಒಂದು ವಸ್ತು ಇದ್ದರೆ, ಅದನ್ನು ಇವತ್ತೇ ತೆಗೆದು ಬಿಡಬೇಕು. ಇಲ್ಲವಾದರೆ ನಿಮಗೆ ಅಷ್ಟ ಕಷ್ಟಗಳು ಎದುರಾಗುತ್ತದೆ. ನಿಮ್ಮ ಮನೆಯ ಬಾಗಿಲಿನ ಹಿಂದೆ ಈ ವಸ್ತು ಏನಾದರೂ ಇತ್ತು ಎಂದರೆ ನಿಮ್ಮ ಮನೆಯಲ್ಲಿ ಯಾವಾಗಲೂ ದಾರಿದ್ಯ ಎನ್ನುವುದು ತುಂಬಿರುತ್ತದೆ. ಗಂಡ ಹೆಂಡತಿ ಜಗಳಗಳು ನಿಲ್ಲುವುದಿಲ್ಲ, ಹಣಕಾಸಿನ ಸಮಸ್ಯೆಗಳು ಹೀಗೆ ನಾನಾರೀತಿಯ ಸಮಸ್ಯೆಗಳು ಒಂದರ ಮೇಲೊಂದು ಬರಲು ಶುರುವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು, ಆ ವಸ್ತು ಯಾವ ಕಾರಣಕ್ಕಾಗಿ ನಿಮ್ಮ ಮನೆಯ ಬಾಗಿಲಿನ ಹಿಂದೆ ಇರಬಾರದು ಎನ್ನುವುದನ್ನು ಇಂದು ನಿಮಗೆ ತಿಳಿಸುತ್ತೇವೆ ಬನ್ನಿ..

ಆ ವಸ್ತುಗಳು ಯಾವುದು ಎನ್ನುವ ಕುತೂಹಲ ನಿಮಗೂ ಇದ್ದರೆ ಬನ್ನಿ ನೋಡೋಣ, ಧರಿಸಿದ ಬಟ್ಟೆಗಳನ್ನು, ಮೈಲಿಗೆ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮುಖ್ಯ ದ್ವಾರ ಆಗಿರಬಹುದು, ಅಥವಾ ಯಾವುದೇ ಕೊನೆಯ ದ್ವಾರದ ಹಿಂಬಾಗದಲ್ಲಿ ಆ ಬಟ್ಟೆಗಳನ್ನು ಹಾಕಿ ನೇತು ಹಾಕಬಾರದು. ಕೆಲವರ ಮನೆಯಲ್ಲಿ ರೂಮ್ ಅಥವಾ ಯಾವುದಾದರೂ ಒಂದು ಕೊಣೆಯ ಬಾಗಿಲಿಗೆ ಹ್ಯಾಂಗರ್ ಗಳನ್ನು ಹಾಕಿ ಅಲ್ಲಿ ತಾವು ಧರಿಸಿದಂತಹ ಮೈಲಿಗೆ ಬಟ್ಟೆಗಳನ್ನು ನೇತು ಹಾಕುವ ಕೆಲಸ ಮಾಡುತ್ತಾರೆ. ಇಂತಹ ಕೆಲಸವನ್ನು ನೀವು ಮಾಡುತ್ತಿದ್ದರೆ, ಅದನ್ನು ಮೊದಲು ನಿಲ್ಲಿಸಿ.

ನಾವು ಒಮ್ಮೆ ಒಂದು ಬಟ್ಟೆಯನ್ನು ಧರಿಸಿ ಅದನ್ನು ಬಿಚ್ಚಿಟ್ಟ ನಂತರ ಅದರಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಇರುತ್ತದೆ. ಆ ಬಟ್ಟೆಗಳು ಮೈಲಿಗೆಯ ಸಂಕೇತವಾಗಿದ್ದು, ನಾವು ಮನೆಯ ಬಾಗಿಲುಗಳನ್ನು ದ್ವಾರಗಳನ್ನು ತಾಯಿ ಮಹಾಲಕ್ಷ್ಮೀಗೆ ಹೋಲಿಸುತ್ತೇವೆ. ಯಾವುದೇ ಕಾರಣಕ್ಕೂ ಬಾಗಿಲನ್ನು ಕಾಲಿನಲ್ಲಿ ತುಳಿಯಬಾರದು, ಕಾಲು ಸೋಕಿಸಬಾರದು ಎನ್ನುತ್ತೇವೆ, ಅದೇ ರೀತಿ ನಾವು ಬಾಗಿಲಿಗೆ ದ್ವಾರ ಪೂಜೆಯನ್ನು ಮಾಡುತ್ತೇವೋ ಅದೇ ರೀತಿ ನಾವು ಬಾಗಿಲಿಗೆ ವಿಶೇಷವಾದಂತಹ ಮಹತ್ವವನ್ನಿ ನೀಡಬೇಕು. ನೀವು ನಿಮ್ಮ ದೇಹಕ್ಕೆ ಧರಿಸಿರುವಂತಹ ಬಟ್ಟೆಗಳನ್ನು ಬಾಗಿಲಿನ ಹಿಂಬಾಗಕ್ಕೆ ನೇತು ಹಾಕುವುದನ್ನು ಮೊದಲು ನಿಲ್ಲಿಸಬೇಕು.

ಕೆಲವರು ಕೆಲಸ ಕಾರ್ಯಗಳು ಎಂದು ಹೋಗುತ್ತಿರುತ್ತಾರೆ, ಕೆಲ ಜಾಗಗಳಲ್ಲಿ ಕೆಲವರಿಗೆ ಸಮವಸ್ತ್ರವನ್ನು ನೀಡಿರುತ್ತಾರೆ, ಹಾಗೆ ಶಾಲೆಗಳಲ್ಲಿ ಸಹ ಮಕ್ಕಳಿಗೆ ಸಮವಸ್ತ್ರವನ್ನು ನೀಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಆ ಬಟ್ಟೆಯನ್ನು ನೀವು ದಿನಾಲೂ ಧರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಸಹ ನೀವು ಯಾವುದೇ ಕಾರಣಕ್ಕೂ ಬಟ್ಟೆಗಳನ್ನು ಬಾಗಿಲಿನ ಹಿಂದೆ ನೇತು ಹಾಕಬಾರದು. ಅಂಥಹ ಬಟ್ಟೆಗಳನ್ನು ನೀವು ಯಾವುದಾದರೂ ಒಂದು ಗೋಡೆಗೆ ನೇತು ಹಾಕಿ ಅಲ್ಲಿ ನೀವು ಆ ಬಟ್ಟೆಗಳನ್ನು ಇಟ್ಟುಕೊಂಡರೆ ಒಳ್ಳೆಯದು. ಅದನ್ನು ಹೊರತು ಪಡಿಸಿ ಯಾವುದೇ ಕಾರಣಕ್ಕೂ ಬಾಗಿಲಿನ ಹಿಂದೆ ಮಾತ್ರ ಬಟ್ಟೆಗಳನ್ನು ಇಡಬೇಕಿ.

ಈ ರೀತಿ ನೀವು ಮಾಡುವುದರಿಂದ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ನೀವು ಕೇವಲ ನಷ್ಟಗಳನ್ನ ಮಾತ್ರ ಕಾಣುತ್ತೀರಾ. ಹಾಗೆ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಹೆಚ್ಚಾಗುತ್ತದೆ. ಇದರಿಂದ ಕಲಹಗಳು ಹೆಚ್ಚಾಗುತ್ತದೆ. ಇನ್ನು ನಿಮ್ಮ ಮನೆಯಲ್ಲಿ ಪ್ರತಿ ನಿತ್ಯ ಜಗಳದ ವಾತಾವರಣ ಇರುತ್ತದೆ. ಹಾಗೆ ನಿಮ್ಮ ಮನೆಯ ಮೇಲೆ ಲಕ್ಷ್ಮಿದೇವಿಯ ಅನುಗ್ರಹ ಕಡಿಮೆಯಾಗಿ, ಸಾಕಷ್ಟು ಹಣ ಕಾಸಿನ ಸಮಸ್ಯೆ ಬರುತ್ತದೆ. ಇನ್ನು ಈ ರೀತಿಯ ಮೈಲಿಗೆ ಬಟ್ಟೆಗಳನ್ನು ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು. ಈ ರೀತಿ ಈ ದಿಕ್ಕಿನಲ್ಲಿ ನಿಮ್ಮ ಮೈಲಿಗೆ ಬಟ್ಟೆಗಳನ್ನು ಇಟ್ಟರೆ ನಿಮ್ಮ ಮನೆಗೆ ಅತ್ಯಂತ ಶುಭವಾಗುತ್ತದೆ.

Leave a Reply

Your email address will not be published. Required fields are marked *