ಈ ರೀತಿಯ ಕಾಲುಂಗುರವನ್ನು ಹೆಣ್ಣುಮಕ್ಕಳು ಹಾಕಿಕೊಳ್ಳುವುದರಿಂದ ಗಂಡನ ಆಯಸ್ಸು ಹೆಚ್ಚಾಗಿ ಅವರು ಜೀವನದಲ್ಲಿ ಏಳಿಗೆಯನ್ನು ಹೊಂದುತ್ತಾರೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕಾಲುಂಗುರ ಹಾಕಿಕೊಳ್ಳುವುದು ಕೇವಲ ಫ್ಯಾಷನ್ಗಾಗಿ ಅಲ್ಲ ಇದರಲ್ಲಿ ಗಂಡನ ಅಭಿವೃದ್ಧಿ ಹಾಗೂ ಶ್ರೇಯಸ್ಸು ಅಡಗಿದೆ.ಹಾಯ್ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣುಮಗಳಿಗೆ ಕಾಲುಂಗುರವನ್ನು ತೊಡಿಸುವುದು ಒಂದು ಸಂಪ್ರದಾಯವಾಗಿದೆ. ಕಾಲುಂಗುರ ಹಾಕಿಕೊಂಡವರನ್ನು ನೋಡಿ ಅವರದು ಮದುವೆಯಾಗಿದೆ ಎಂದು ಗುರುತಿಸುತ್ತಾರೆ ಇದು ಕೇವಲ ಮದುವೆಯಾಗಿದೆ ಎಂದು ತಿಳಿಯಲು ಅಲ್ಲ ಇದರಲ್ಲಿ ಗಂಡನ ಆಯಸ್ಸು ಆರೋಗ್ಯ ಮತ್ತು ಅಭಿವೃದ್ಧಿ ಹೆಚ್ಚುತ್ತದೆ ಎಂದು ನಂಬಿಕೆಯಿದೆ. ಒಂದು ಹೆಣ್ಣು ಮದುವೆಯಾದ ಮೇಲೆ ಗಂಡನ ಮನೆಗೆ ಹೋಗುತ್ತಾಳೆ. ಅಲ್ಲಿಯ ಹೊಸ ಜಾಗವನ್ನು ಎದುರಿಸಲು ಅವಳಿಗೆ ಸ್ವಲ್ಪ ಕಷ್ಟವಾಗಬಹುದು. ಒಂದು ಮನೆಯನ್ನು ಬೆಳಗಲು ಬಂದವಳಿಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ.

ಕಾಲುಂಗುರ ಹಾಕಿಕೊಳ್ಳುವುದರಿಂದ ಗಂಡ-ಹೆಂಡತಿಯ ನಡುವೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಹಾಗೂ ಕಾಲುಂಗುರ ತುಂಬಾ ಶ್ರೇಷ್ಠವಾದದ್ದು ಇದನ್ನು ಯಾರು ತಪ್ಪದೇ ಹಾಕಿಕೊಳ್ಳುತ್ತಾರೆ ಅವರಿಗೆ ಅಂದರೆ ಅವರ ಗಂಡನಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಮತ್ತು ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರುವಂತೆ ಆಗುತ್ತದೆ. ಕಾಲುಂಗುರ ಸೂರ್ಯ-ಚಂದ್ರರ ಸಂಕೇತ ಆಗಿದೆ ಇದನ್ನು ಮಹಿಳೆಯರು ಹಾಕುವುದರಿಂದ ಅವರ ಆಶೀರ್ವಾದ ಸದಾ ಇದರಿಂದ ಪತಿ-ಪತ್ನಿ ಜೀವನದಲ್ಲಿ ಖುಷಿಯಾಗಿ ಹಾಗೂ ನೆಮ್ಮದಿಯಿಂದ ಇರಲು ಸಹಾಯ ಆಗುತ್ತದೆ.

ಕಾಲುಂಗುರವನ್ನು ಕೇವಲ ಫ್ಯಾಷನ್ ಗಾಗಿ ಹಾಕಿಕೊಳ್ಳಬಾರದು. ಒಂದು ಹೆಣ್ಣಿಗೆ ಹಣೆಗೆ ಕುಂಕುಮ ತಲೆಗೆ ಹೂವು ಕೊರಳಿಗೆ ಮಾಂಗಲ್ಯ ಹಾಗೂ ಕೈಗೆ ಬಳೆಗಳು ಮೂಗಿಗೆ ಮೂಗು ಬೊಟ್ಟು ಮತ್ತು ಕಾಲಿಗೆ ಕಾಲುಂಗುರ ಇವುಗಳನ್ನು ಇರುವುದು ಅವಳ ಸೌಭಾಗ್ಯದ ಸಂಕೇತವಾಗಿದೆ. ಇವುಗಳನ್ನೆಲ್ಲಾ ಹಾಕಿಕೊಳ್ಳುವ ಮಹಿಳೆಯರು ತುಂಬಾ ಭಾಗ್ಯವಂತರು. ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ಮಹಿಳೆಯರಿಗೆ ತುಂಬಾ ಒಳ್ಳೆಯ ಸ್ಥಾನವಿದೆ. ಕಾಲುಂಗುರದಲ್ಲಿ ಗಂಡನ ಶ್ರೇಯಸ್ಸು ಅಡಗಿದೆ ಎಂದರೆ ತಪ್ಪಾಗಲಾರದು. ಮಹಿಳೆಯರು ಕಾಲುಂಗುರ ಧರಿಸಿದರೆ ಸೌಂದರ್ಯ ಮಾತ್ರ ಹೆಚ್ಚಾಗುವುದಿಲ್ಲ ಅವಳಿಗೆ ತುಂಬಾ ಶುಭವಾಗುತ್ತದೆ.

ಕಾಲುಂಗುರವನ್ನು ಎರಡು ಕಾಲಿನ ಹೆಬ್ಬೆರಳಿನ ಪಕ್ಕ ಇರುವ ತೋರು ಬೆರಳಿಗೆ ಹಾಕುವುದರಿಂದ ತುಂಬಾ ಒಳ್ಳೆಯದು ಹಾಗೂ ಇವುಗಳನ್ನು ಹಾಕಿಕೊಳ್ಳುವುದರಿಂದ ಮಹಿಳೆಯರಿಗೆ ಹೆರಿಗೆ ಆಗುವಾಗ ನೋವು ಹೆಚ್ಚಾಗಿ ಕಾಣುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಮದುವೆಯಾದ ಮೇಲೆ ಅವಳ ಋತುಚಕ್ರದಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಕಾಲುಂಗುರಗಳು ನೋಡಿಕೊಳ್ಳುತ್ತದವೆ. ಅಂದರೆ ಕಾಲುಂಗುರ ಹಾಕುವುದರಿಂದ ಇಂತಹ ಸಮಸ್ಯೆಗಳು ಕಾಡುವುದಿಲ್ಲ ಸಂತಾನ ಭಾಗ್ಯವೂ ಕೂಡ ನಿಮಗೆ ಇರುತ್ತದೆ. ಆದರೆ ಕಾಲಿನ ಬೆರಳಿಗೆ ತಕ್ಕಂತೆ ಕಾಲುಂಗುರಗಳನ್ನು ಮಾಡಿಸಿಕೊಳ್ಳಬೇಕು ತುಂಬಾ ಟೈಟಾಗಿ ಅಥವಾ ಲೂಸಾಗಿ ಕಾಲುಂಗುರಗಳನ್ನು ಹಾಕಿಕೊಳ್ಳಬಾರದು.

ಇದು ನಿಮ್ಮ ಗಂಡನ ಅನಾರೋಗ್ಯಕ್ಕೆ ಹಾಗೂ ಆರ್ಥಿಕ ಪರಿಸ್ಥಿತಿಗೆ ಕಾರಣವಾಗಬಹುದು. ಇನ್ನೂ ಕಾಲುಂಗುರದಲ್ಲಿ ಐದು ಸುತ್ತು ಅಥವಾ ಎರಡು ಸುತ್ತು ಅಥವಾ 9 ಸುತ್ತು ಇರುವ ಕಾಲುಂಗುರಗಳ ಸಿಗುತ್ತವೆ. ಇವುಗಳಲ್ಲಿ ಯಾವುದನ್ನಾದರೂ ನೀವು ಹಾಕಿಕೊಳ್ಳಬಹುದು ಆದರೆ ಮದುವೆಯಾದ ನಂತರ ಕಾಲುಂಗುರವನ್ನು ತೆಗೆಯಬಾರದು. ಇನ್ನೂ ಯಾವುದೇ ಕಾರಣಕ್ಕೂ ಬಂಗಾರದ ಕಾಲುಂಗುರವನ್ನು ಮಾಡಿಸಿ ಹಾಕಿಕೊಳ್ಳಬಾರದು. ಇದು ಮಹಾಲಕ್ಷ್ಮಿಗೆ ಅವಮಾನಿಸಿದಂತೆ ಆಗುತ್ತದೆ ಇದರಿಂದ ಮಹಾಲಕ್ಷ್ಮಿಯು ತುಂಬಾ ಕೋಪಗೊಳ್ಳುತ್ತಾಳೆ. ಕೇವಲ ಬೆಳ್ಳಿ ಕಾಲುಂಗುರವನ್ನು ಮಾತ್ರ ಬಳಸಬೇಕು ಅದರಲ್ಲೂ ಗೆಜ್ಜೆ ಇರುವ ಕಾಲುಂಗುರಗಳು ಇದ್ದರೆ ತುಂಬಾ ಶ್ರೇಷ್ಠ.

ಇನ್ನೂ ಮುಖ್ಯವಾದ ವಿಷಯವೆಂದರೆ ಯಾವುದೇ ಕಾರಣಕ್ಕೂ ಯಾರಿಗೂ ಕಾಲುಂಗುರವನ್ನು ಉಡುಗೊರೆಯಾಗಿ ಕೊಡಬಾರದು ಮತ್ತು ಮದುವೆಯಾಗದ ಮಹಿಳೆಯರು ಅಥವಾ ತರುಣಿಯರು ಫ್ಯಾಷನ್ ಗಾಗಿ ಕಾಲುಂಗುರವನ್ನು ಹಾಕಬಾರದು. ಹೆಣ್ಣುಮಕ್ಕಳು ಕಾಲುಂಗುರವನ್ನು ಧರಿಸುವುದು ತುಂಬಾ ಮುಖ್ಯವಾಗಿದೆ. ಕಾಲುಂಗುರವನ್ನು 2 ಕಾಲಿನ ಬೆರಳಿಗೆ ಹಾಕಬೇಕು. ಮಧ್ಯದ ಬೆರಳು ಅಥವಾ ತೋರುಬೆರಳು ಎರಡರಲ್ಲೂ ಹಾಕಿಕೊಂಡರು ಪರವಾಗಿಲ್ಲ ಒಟ್ಟಿನಲ್ಲಿ ಕಾಲುಂಗುರ ಹಾಕುವುದು ಯಶಸ್ಸಿಗೆ ಹಾಗೂ ಶ್ರೇಯಸ್ಸಿಗೆ ಕಾರಣವಾಗಿದೆ. ಕಾಲುಂಗುರಗಳು ಮಹಿಳೆಯರಿಗೆ ಸೌಂದರ್ಯ ಕೊಡುವುದಲ್ಲದೆ ಅವರ ಜೀವನಕ್ಕೂ ಸೌಂದರ್ಯವನ್ನು ತಂದುಕೊಡುತ್ತವೆ ಹಾಗಾದರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.