ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ದಾನ ಮಾಡಬೇಡಿ ಹಾಗೇನಾದ್ರೂ ಮಾಡಿದ್ರೆ ನಿಮ್ಮ ಮನೆಗೆ ಕಷ್ಟ ತಪ್ಪಿದ್ದಲ್ಲ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಂಜೆ ವೇಳೆ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ಮನೆಗೆ ದರಿದ್ರ ಅಂಟುವುದು ಖಂಡಿತ ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯಿರಿ.
ಹಾಯ್ ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ. ನೀವು ಕೂಡ ಇಂತಹ ತಪ್ಪುಗಳನ್ನು ತಿಳಿಯದೆ ಕೆಲವೊಂದು ಬಾರಿ ಮಾಡಿರುತ್ತೀರಿ. ಇದರಿಂದ ಕೂಡ ನಿಮ್ಮ ಮನೆಗೆ ದರಿದ್ರತನ ಎಂಬುದು ಅಂಟಿರಬಹುದು ಹಾಗಾದರೆ ಆ ತಪ್ಪುಗಳು ಯಾವುವು ಎಂಬುದನ್ನು ಈಗ ತಿಳಿಯೋಣ. ನಮ್ಮ ಮನೆಯಲ್ಲಿ ನಾವು ಏನಾದರೂ ಕೆಲಸ ಮಾಡುವಾಗ ತಕ್ಷಣ ನಮ್ಮ ಮನೆಯಲ್ಲಿ ವಸ್ತುಗಳು ಸಿಗದೆ ಇದ್ದಾಗ ಅಥವಾ ಇರದೇ ಇದ್ದಾಗ ಪಕ್ಕದ ಮನೆಗೆ ಹೋಗಿ ಕೇಳುವ ಅಭ್ಯಾಸ ಇರುತ್ತದೆ.

ಕೆಲವೊಬ್ಬರು ಕೊಡುತ್ತಾರೆ ಹಾಗೂ ಇನ್ನೂ ಕೆಲವೊಬ್ಬರು ಕೊಡುವುದಿಲ್ಲ. ಆದರೆ ನಾವು ಯಾವ ವಸ್ತುಗಳನ್ನು ಯಾವ ಸಮಯದಲ್ಲಿ ಕೇಳಬೇಕು ಎಂಬುದನ್ನು ತಿಳಿದಿರಬೇಕು ಹಾಗೆಯೇ ಯಾರಾದರೂ ಅಣ್ಣ ಅಕ್ಕ ತಂಗಿ ತಮ್ಮ ಅತ್ತೆ ಚಿಕ್ಕಮ್ಮ ಸಂಬಂಧಿಕರು ಅಕ್ಕಪಕ್ಕದ ಮನೆಯವರು ಯಾರೇ ಆದರೂ ಈ ವಸ್ತುಗಳನ್ನು ಕೇಳಿದರೆ ಕೊಡಬಾರದು ಏಕೆಂದರೆ ಇದರಿಂದ ನಿಮಗೆ ಹಾಗೂ ನಿಮ್ಮ ಮನೆಗೆ ದರಿದ್ರ ಬರುವ ಸಾಧ್ಯತೆ ಇರುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಮತ್ತು ಅವುಗಳನ್ನು ನಾವು ಈ ಸಮಯದಲ್ಲಿ ಕೊಟ್ಟರೆ ಆಗುವ ಸಮಸ್ಯೆಗಳೇನು ಎಂಬುದನ್ನು ತಿಳಿಯೋಣ. ಸಾಯಂಕಾಲ ಅಂದರೆ ಗೋಧೂಳಿ ಸಮಯದಲ್ಲಿ ಅಥವಾ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಈ ವಸ್ತುಗಳನ್ನು ನೀವು ಕೊಡಲೇಬಾರದು

ಯಾರಾದರೂ ಬೇಕಂತಲೇ ಅಥವಾ ತಿಳಿಯದೆ ಈ ವಸ್ತುಗಳನ್ನು ಕೇಳಿದರೆ ಕೊಡಬೇಡಿ. ಸಾಯಂಕಾಲ ಪೂಜೆಗೆ ಸಂಬಂಧಪಟ್ಟ ಅರಿಶಿನ ಕೊಂಬು ಅಡಿಕೆ ಎಲೆ ಕುಂಕುಮ ಇಂತಹ ವಸ್ತುಗಳನ್ನು ಯಾರಿಗೆ ಆದರೂ ಕೊಡಬಾರದು. ಕುಂಕುಮವನ್ನು ಹಣೆಗೆ ಹಚ್ಚಿ ಕಳಿಸಬಹುದು ಆದರೆ ಕೈಯಲ್ಲಿ ಕುಂಕುಮವನ್ನು ಕೊಟ್ಟು ಕಳಿಸಬಾರದು. ಈ ರೀತಿಯಾದ ವಸ್ತುಗಳನ್ನು ಸಾಯಂಕಾಲ ಕೊಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನಿಲ್ಲುವುದಿಲ್ಲ. ಬದಲಿಗೆ ಅವರನ್ನು ಒಳಗೆ ಕರೆದು ನೀರನ್ನು ಕೊಟ್ಟು ಕಳುಹಿಸಬೇಕು. ಗೋಧೂಳಿ ಸಮಯದಲ್ಲಿ ಯಾರು ಈ ವಸ್ತುಗಳನ್ನು ಮನೆಯಿಂದ ಹೊರಗೆ ಕೊಡುತ್ತಾರೋ ಅವರಿಗೆ ದರಿದ್ರತನ ಎಂಬುದು ಅಂಟುತ್ತದೆ. ನೀವೇನಾದರೂ ಈ ವಸ್ತುಗಳನ್ನು ಗೋಧೂಳಿ ಸಮಯದಲ್ಲಿ ಕೊಟ್ಟರೆ ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ

ಹಾಗೂ ದಾಂಪತ್ಯದಲ್ಲಿ ವಿರಸಗಳು ಹೆಚ್ಚಾಗುತ್ತವೆ ಮನೆಯಲ್ಲಿ ಗೊಂದಲಗಳು ಹೆಚ್ಚಾಗುತ್ತದೆ. ಗೋಧೋಳಿ ಸಮಯದಲ್ಲಿ ಹಾಗೂ ಅದರ ನಂತರ ಮನೆಯಲ್ಲಿ ಗುಡಿಸಿದ ಕಸವನ್ನು ಸಹ ಹೊರಗೆ ಹಾಕಬಾರದು. ಕಸ ಕೂಡ ಮಹಾಲಕ್ಷ್ಮಿ ದೇವಿಯ ಸಂಕೇತವಾಗಿದೆ ಆದ್ದರಿಂದ ಕಸವನ್ನು ಸಾಯಂಕಾಲದ ವೇಳೆಗೆ ಹೊರಗೆ ಹಾಕಬಾರದು ಇದರಿಂದ ನಷ್ಟಲಕ್ಷ್ಮಿ ಮನೆಯಲ್ಲಿ ವಾಸಿಸುತ್ತಾಳೆ. ಮೇಲೆ ಹೇಳಿರುವ ವಸ್ತುಗಳನ್ನು ನಾವು ಸಾಯಂಕಾಲದ ವೇಳೆ ಕೊಟ್ಟರೆ ಎಷ್ಟೇ ಕಷ್ಟಪಟ್ಟು ದುಡಿದರೂ ಹಣಮನೆಯಲ್ಲಿ ನಿಲ್ಲುವುದಿಲ್ಲ ನೀರಿನಂತೆ ಹರಿಯುತ್ತದೆ.

ಉಪ್ಪನ್ನು ಸಹ ಸಾಯಂಕಾಲ ಯಾರಿಗೂ ಸಾಲ ಕೊಡಬಾರದು. ಅಕ್ಕ ಪಕ್ಕದ ಮನೆಯಲ್ಲಿ ಸಹಾಯವನ್ನು ಕೇಳುವಾಗ ಸಮಯವನ್ನು ನೋಡಿಕೊಳ್ಳಬೇಕು ಬೇಕಾದರೆ ಸಮಯದ ಒಳಗಡೆ ನೀವು ವಸ್ತುಗಳನ್ನು ತೆಗೆದುಕೊಂಡರೆ ತೊಂದರೆ ಇಲ್ಲ. ಸಾಯಂಕಾಲದ ಹೂಗಳನ್ನು ಕೂಡ ಹರಿಯಬಾರದು ಕಷ್ಟದ ಸಮಯದಲ್ಲಿ ತೊಂದರೆ ಇದ್ದಾಗ ವಸ್ತುಗಳನ್ನು ಕೊಡಿ ಆದರೆ ಪದೇಪದೇ ಅದೇ ತಪ್ಪುಗಳನ್ನು ಮಾಡಬಾರದು ಸ್ನೇಹಿತರೆ ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟ ಆಗಿದ್ದರೆ ನೀವು ಕೂಡ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು

Leave a Reply

Your email address will not be published.