ನಿಯಮಿತವಾಗಿ ನೀವೇನಾದ್ರು ಇದನ್ನು ಸೇವಿಸುತ್ತಾ ಬಂದರೆ ನಿಮ್ಮ ದೇಹ ಆಗುತ್ತೆ ವಜ್ರಕಾಯ… ಇದನ್ನು ತಿಂದರೆ ಸಾಕು ಯಾವತ್ತೂ ನೀವು ವೈದ್ಯರ ಹತ್ತಿರ ಹೋಗುವ ಪ್ರಮೇಯವೇ ಬರಲ್ಲ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ.ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ವಿಶೇಷವಾದಂತಹ ಶಕ್ತಿಯನ್ನು ಹೊಂದಿದಂತಹ ಔಷಧಿ ಗಿಡದ ಬಗ್ಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಹಲವಾರು ಔಷಧಿ ಸಸ್ಯಗಳು ಇರುತ್ತವೆ ಆದರೆ ನಮಗೆ ಅವುಗಳ ಪ್ರಯೋಜನಗಳು ತಿಳಿದಿರುವುದಿಲ್ಲ.ನಮಗೆ ಗೊತ್ತಿಲ್ಲದೆ ಇರುವಂತಹ ಹಲವಾರು ಸಸ್ಯಗಳು ಉತ್ತಮವಾದಂತಹ ವಿಶೇಷವಾದಂತಹ ಔಷಧೀಯ ಗುಣಗಳನ್ನು ಹೊಂದಿವೆ.ವೈದ್ಯರ ಹತ್ತಿರ ಹೋದರು ಕೂಡ ವಾಸಿಯಾಗದಂತಹ ಕಾಯಿಲೆಗಳನ್ನು ಕೆಲವೊಂದು ಔಷಧಿ ಸಸ್ಯಗಳ ಬಳಕೆಯಿಂದ ರೋಗಗಳನ್ನು ಗುಣಪಡಿಸಿಕೊಳ್ಳಬಹುದು.ನಮಗೆ ಗೊತ್ತಿರುವಂತಹ ಹಲವಾರು ಆಯುರ್ವೇದಿಕ ಸಸ್ಯಗಳಿವೆ ಆದರೂ ಕೂಡ ನಮಗೆ ಕೆಲವೊಂದು ಗೊತ್ತಿರದೇ ಇರುವಂತಹ ಎಲೆಮರೆಯ ಕಾಯಂತೆ ಇರುವಂತಹ ಉತ್ತಮವಾದಂತಹ ಗುಣಗಳನ್ನು ಹೊಂದಿರುವಂತಹ ಸಸ್ಯಗಳು ಕೂಡ ಇವೆ .

ಅದರ ಬಗ್ಗೆ ನಮಗೆ ಅವುಗಳ ಉಪಯೋಗಗಳು ಗೊತ್ತಿರುವುದಿಲ್ಲ. ಹೀಗಾದೆ ನಾವು ಇಂದಿನ ಮಾಹಿತಿಯಲ್ಲಿ ಹೇಳುವಂತಹ ಒಂದು ಸಸ್ಯವನ್ನು ನೀವು ಎಲ್ಲಾದರೂ ಕಂಡರೆ ಬಿಡಬೇಡಿ ಮನೆಗೆ ತೆಗೆದುಕೊಂಡು ನಿಮ್ಮ ಮನೆಯಲ್ಲಿ ಬೆಳೆಸಿಕೊಳ್ಳಲು ಪ್ರಯತ್ನ ಮಾಡಿ ಸ್ನೇಹಿತರೆ.ಹೌದು ನಾವು ಹೇಳುವ ಈ ಮಾಹಿತಿಯಲ್ಲಿ ಈ ಸಸ್ಯವು ಸಾಮಾನ್ಯವಾಗಿ ಬಯಲುಸೀಮೆಯಲ್ಲಿ ಸಿಗುವಂತಹ ಸಸ್ಯವಾಗಿದೆ. ಇದು ಮಲೆನಾಡಿನ ಭಾಗದಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ.ಇದು ಬೇರೆ ಯಾವುದೂ ಸಸ್ಯವಲ್ಲ ಉತ್ತಮವಾದಂತಹ ಔಷಧಿ ಗುಣಗಳನ್ನು ಯಾವುದೆಂದರೆ ಅದೇ ಅತಿಬಲ ಸಸ್ಯ. ಹೌದು ಸ್ನೇಹಿತರೆ ಅತಿಬಲ ಸಸ್ಯಕ್ಕೆ ಹಲವಾರು ರಾಮಾಯಣದಲ್ಲಿ ಈ ಸಸ್ಯಕ್ಕೆ ಹಲವಾರು ಕಥೆಗಳಿವೆ.

ರಾಮಾಯಣದಿಂದ ಈ ಸಸ್ಯಕ್ಕೆ ಅತಿಬಲ ಎನ್ನುವ ಹೆಸರು ಬಂದಿದೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ. ಸ್ನೇಹಿತರೆ ಅತಿಬಲ ಸಸ್ಯದಿಂದ ಹಲವಾರು ನಮಗೆ ಆರೋಗ್ಯ ಪ್ರಯೋಜನಗಳಿವೆ. ಹೃದಯ ಕಾಯಿಲೆಯಿಂದ ಹಿಡಿದು ಪುರುಷತ್ವದ ವರೆಗೂ ಎಲ್ಲ ಕಾಯಿಲೆಗೂ ಔಷಧಿಯನ್ನು ನೀಡುವಂತಹ ಒಂದು ಗಿಡ ಯಾವುದೆಂದರೆ ಅದು ಅತಿಬಲ ಗಿಡ.ಈ ಸಸ್ಯವು ಹೃದಯಾಕಾರದ ಎಲೆಗಳನ್ನು ಹೊಂದಿರುತ್ತದೆ ಈ ಸಸ್ಯದ ಮೂರು ನಾಲ್ಕು ಎಲೆಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿ ಕಷಾಯವನ್ನು ದಿನಕ್ಕೆ ಮೂರು ಬಾರಿ ಕೊಡುವುದರಿಂದ ಕಿಡ್ನಿಯಲ್ಲಿ ಇರುವಂತಹ ಕಲ್ಲುಗಳು ಮೂತ್ರನಾಳದಿಂದ ಹೊರಗಡೆ ಹೋಗುತ್ತವೆ.ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಇದ್ದರೆ ಈ ಗಿಡದ ಮೂರು ನಾಲ್ಕು ಎಲೆಗಳನ್ನು ತೊಳೆದು ಕುದಿಸಿ ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರೆ ನಿಮ್ಮ ಕಣ್ಣು ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಸಾಮಾನ್ಯವಾಗಿ ನಾಯಿ ಕಚ್ಚಿದಾಗ ಎಲ್ಲರೂ ಕೂಡ ವೈದ್ಯರ ಹತ್ತಿರ ಹೋಗುತ್ತಾರೆ ಅದರ ಬದಲು ಎಲೆಗಳನ್ನು ಚೆನ್ನಾಗಿ ಅರೆದು ನಾಯಿ ಕಚ್ಚಿದ ಜಾಗಕ್ಕೆ ಒಂದು ಬಟ್ಟೆಯ ಸಹಾಯದಿಂದ ಕಟ್ಟಿದರೆ ನಂಜು ಇರೋದಿಲ್ಲ.ಯಾವುದೇ ರೀತಿಯ ಗಾಯಗಳಾದರೂ ಕೂಡ ಈ ಅತಿಬಲ ಸಸ್ಯದ ಎಲೆಗಳನ್ನು ಚೆನ್ನಾಗಿ ಜಜ್ಜಿ ಆ ರಸವನ್ನು ಹಚ್ಚುತ್ತ ಬಂದರೆ ಗಾಯಗಳು ಕೂಡ ಆದಷ್ಟು ಬೇಗ ಗುಣವಾಗುತ್ತದೆ.ವಿಷಮ ಶೀತ ಜ್ವರ ಹಾಗೂ ಸಾಮಾನ್ಯ ಜ್ವರ ಇರುವವರು ಅತಿಬಲ ಸಸ್ಯ ಕಷಾಯವನ್ನು ಮಾಡಿಕೊಂಡು ಅದಕ್ಕೆ ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ಇವರಿಗೆ ಜ್ವರ ವಾಸಿಯಾಗುತ್ತದೆ ಹಾಗೆಯೇ ಇವರಿಗೆ ರೋಗನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ.

ವಾರಕ್ಕೆ ಎರಡರಿಂದ ಮೂರು ಬಾರಿ ಈ ಕಷಾಯವನ್ನು ಅಂದರೆ ಅತಿಬಲ ಸಸ್ಯ ಕಷಾಯವನ್ನು ಸೇವಿಸುತ್ತಾ ಬಂದರೆ ನಿಮ್ಮ ಹೃದಯ ಯಾವುದೇ ರೀತಿಯಾದಂತಹ ತೊಂದರೆಯಾಗದಂತೆ ಅದರ ಕೆಲಸವನ್ನು ಮಾಡಲು ಪ್ರಾರಂಭ ಮಾಡುತ್ತದೆ.ಇದೇ ಕಷಾಯವನ್ನು ದಿನಕ್ಕೆರಡು 2 ಚಮಚ ನಿಮ್ಮ ಮಕ್ಕಳಿಗೆ ಕುದಿಸಿದರೆ ನಿಮ್ಮ ಮಕ್ಕಳ ಹೊಟ್ಟೆಯಲ್ಲಿರುವ ಜಂತು ಹುಳದ ಸಮಸ್ಯೆ ನಿವಾರಣೆಯಾಗುತ್ತದೆ. ಸೊಂಟ ನೋವಿನಿಂದ ಬಳಲುತ್ತಿದ್ದರೆ ಮೊದಲು ಎಣ್ಣೆಯನ್ನು ಹಚ್ಚಿ ನಂತರ ಎಲೆಗಳನ್ನು ಬಟ್ಟೆಯ ಸಹಾಯದಿಂದ ಕಟ್ಟಿದರೆ ಸೊಂಟದ ನೋವು ಆದಷ್ಟು ಬೇಗ ಗುಣಮುಖವಾಗುತ್ತದೆ.ಈಗ ಹೇಳಬೇಕೆಂದರೆ ಸಸ್ಯದ ಪ್ರತಿಯೊಂದು ಅಂಗವೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.