ನವಗ್ರಹಗಳಿಗೆ ಪ್ರದಕ್ಷಿಣೆಯನ್ನು ಹಾಕುವಾಗ ಅಪ್ಪಿ ತಪ್ಪಿಯೂ ಈ ತರಹದ ತಪ್ಪುಗಳನ್ನು ಮಾಡಬೇಡಿ ಹಾಗೇನಾದ್ರೂ ಮಾಡಿದ್ರೆ ದೋಷಗಳು ನಿಮಗೆ ಅಂಟಿಕೊಳ್ಳುತ್ತವೆ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಬ್ಬರಿಗೆ ದೇವರ ಬಗ್ಗೆ ಕೆಲವೊಂದು ವಿಚಾರಗಳು ತಿಳಿದಿರುವುದಿಲ್ಲ ಅದರಲ್ಲೂ ಮುಖ್ಯವಾಗಿ ನವಗ್ರಹಗಳ ಬಗ್ಗೆ ಎಲ್ಲರಿಗೂ ಕೂಡ ತಿಳಿದಿರುತ್ತದೆ. ನವಗ್ರಹಗಳು ಎಷ್ಟು ನವಗ್ರಹಗಳು ಯಾವುವು ಎಂಬ ಮಾಹಿತಿ ಇದೆ ಆದರೆ ಯಾವ ನವಗ್ರಹ ದಿಂದ ಏನು ಉಪಯೋಗ ನವಗ್ರಹದ ಪೂಜೆ ಮಾಡಿದ ನಂತರ ನಾವು ಯಾವ ತಪ್ಪುಗಳನ್ನು ಮಾಡಬಾರದು ಎಂಬ ಮಾಹಿತಿ ಮಾತ್ರ ಇರುವುದಿಲ್ಲ ಆದರೆ ಈ ದಿನ ನಾವು ನಿಮಗೆ ನವಗ್ರಹ ಪೂಜೆ ಮಾಡಿಕೊಂಡು ಬಂದ ನಂತರ ಅಥವಾ ದೇವಾಲಯಕ್ಕೆ ಹೋಗಿ ಬಂದ ನಂತರ ನವಗ್ರಹಗಳ ದರ್ಶನ ಆದ ಮೇಲೆ ನೀವು ಯಾವ ರೀತಿಯಾದಂಥ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯಗಳಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ನವಗ್ರಹಗಳು ಇರುವುದು ಸರ್ವೇ ಸಾಮಾನ್ಯವಾಗಿದೆ ದೇವಾಲಯದಲ್ಲಿ ನಾವು ನವಗ್ರಹಗಳನ್ನು ದರ್ಶನ ಮಾಡುತ್ತೇವೆ ಆದರೆ ದರ್ಶನ ಮಾಡಿದ ನಂತರ ಏನು ಮಾಡಬೇಕು ಎಂಬ ಮಾಹಿತಿಯನ್ನು ಮಾತ್ರ ನಾವು ತಿಳಿದುಕೊಂಡಿರುವುದಿಲ್ಲ ಆದರೆ ಈ ದಿನ ನಾವು ನಿಮಗೆ ನವಗ್ರಹ ದೇವರುಗಳ ದರ್ಶನ ಆದ ನಂತರ ಏನು ಮಾಡಬೇಕು ಮತ್ತು ದೇವರ ದರ್ಶನ ಮಾಡುವುದಕ್ಕಿಂತ ಮೊದಲು ನೀವು ಹೇಗೆ ನಡೆದುಕೊಳ್ಳಬೇಕು ಎಂಬ ಮಾಹಿತಿಯನ್ನ ಈ ದಿನ ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ದೇವಾಲಯದ ಒಳಗೆ ಹೋದ ನಂತರ ಮೊದಲು ನಾವು ಕೈ ಕಾಲುಗಳನ್ನು ತೊಳೆದು ನಂತರ ದೇವಾಲಯದ ಒಳ ಪ್ರವೇಶಿಸಬೇಕು ಮೊಟ್ಟಮೊದಲನೆಯದಾಗಿ ನವಗ್ರಹಗಳ ದರ್ಶನ ಮಾಡಿ ನವಗ್ರಹಗಳಿಗೆ ಸುತ್ತನ್ನ ಹಾಕಿದ ನಂತರ ಬೇರೆ ದೇವರಿಗೆ ಸುತ್ತನ್ನ ಹಾಕಬೇಕು ಯಾವಾಗಲೂ ಕೂಡ ಒಂಭತ್ತು ಸುತ್ತನ್ನೇ ಹಾಕಬೇಕು ಮೂರು ಸುತ್ತು ಹಾಕಬೇಕು ಹನ್ನೊಂದು ಸುತ್ತನ್ನೇ ಹಾಕಬೇಕು ಎಂಬ ರೂಡಿಯಿಲ್ಲ ನಿಮಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಹಾಕಿದರೆ ಸಾಕು ಇಪ್ಪತ್ತೊಂದು ಸುತ್ತು ಹಾಕಿದರೆ ಶ್ರೇಷ್ಠ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.ಆದರೆ ನಾವು ಇಲ್ಲಿ ನೆನಪಿಡಬೇಕಾದ ಮತ್ತೊಂದು ವಿಷಯವೇನೆಂದರೆ ನವಗ್ರಹಗಳ ದರ್ಶನ ಮಾಡಿ ಮನೆಗೆ ಬಂದ ತಕ್ಷಣ ನಾವು ಎಂದೂ ಕೂಡ ಕೈ ಕಾಲುಮುಖವನ್ನು ತೊಳೆಯಬಾರದು ಕಾಲಿಗೆ ಮತ್ತು ಕೈಗೆ ನೀರನ್ನ ಸ್ಪರ್ಶಿಸಲೇ ಬಾರದು ಇದನ್ನು ನಾವು ಚೆನ್ನಾಗಿ ನೆನಪಿನಲ್ಲಿಡಬೇಕು

ನವಗ್ರಹಗಳಲ್ಲಿ ರಾಹು ಮತ್ತು ಕೇತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿರುತ್ತವೆ ಅವುಗಳನ್ನ ನೆನೆದು ನಾವು ನವಗ್ರಹಗಳ ಪ್ರದಕ್ಷಿಣೆ ಮಾಡುವ ಅವಶ್ಯಕತೆಯಿಲ್ಲ ಅವುಗಳನ್ನು ಬಿಟ್ಟು ಬೇರೆ ಗ್ರಹಗಳನ್ನು ನೆನೆದು ಪ್ರದಕ್ಷಿಣೆ ಹಾಕಿದರೆ ಸಾಕು ಎಂಬುದನ್ನು ನಾವು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು.ಮತ್ತೊಂದು ವಿಶೇಷವಾದ ಅಂಶ ಎಂದರೆ ನಾವು ದೇವಾಲಯದಲ್ಲಿ ಚಪ್ಪಲಿ ಬಿಡುವುದಕ್ಕೆ ಸ್ಥಳ ಇಲ್ಲದಿದ್ದರೆ ಅಂದರೆ ಚಪ್ಪಲಿ ಬಿಡುವುದಕ್ಕೆ ಪ್ರತ್ಯೇಕ ಸ್ಥಳಗಳನ್ನು ಮಾಡಿಕೊಂಡಿರುತ್ತಾರೆ ಆ ರೀತಿ ಸ್ಥಳಗಳಿಲ್ಲದೆ ಇದ್ದರೆ ದೇವಾಲಯದ ಮುಂದೆ ಒಂದು ಸ್ತಂಭ ಇರುತ್ತದೆ. ಆ ಸ್ತಂಭದ ಮುಂದೆ ಚಪ್ಪಲಿಯನ್ನ ಬಿಡುವ ಅಭ್ಯಾಸವನ್ನ ಮಾಡಿಕೊಂಡಿರುತ್ತೇವೆ ಆದರೆ ಎಂದೂ ಕೂಡ ನೀವು ಆ ರೀತಿ ಮಾಡಬಾರದು

ಆ ರೀತಿ ಮಾಡಿದರೆ ಖಂಡಿತವಾಗಿಯೂ ನಿಮಗೆ ದರಿದ್ರ ಎಂಬುದು ಬರುತ್ತದೆ ದೇವರ ಕೃಪೆ ನಿಮಗೆ ಇರುವುದಿಲ್ಲ ಆದ್ದರಿಂದ ದೇವಾಲಯಕ್ಕೆ ಹೋದಾಗ ಚಪ್ಪಲಿಯನ್ನು ದೇವಸ್ಥಾನದ ಹೊರಗಡೆ ಬಿಡುವ ಅಭ್ಯಾಸವನ್ನು ಮಾಡಿಕೊಳ್ಳಿ ಮತ್ತು ಮೊದಲೇ ಹೇಳಿದ ಹಾಗೆ ನವಗ್ರಹ ಪ್ರದಕ್ಷಿಣೆ ಹಾಕುವಂತೆ ಸಂದರ್ಭದಲ್ಲಿ ಹೇಳಿದ ಮಾತು ಗಮನದಲ್ಲಿ ಇಟ್ಟುಕೊಂಡು ಪ್ರದಕ್ಷಿಣೆ ಹಾಕಿ ಎಂಬುದು ನಮ್ಮ ಕಳಕಳಿಯ ಪ್ರಾರ್ಥನೆ ಈ ಮಾಹಿತಿ ನೀವು ತಿಳಿದುಕೊಂಡು ನಂತರ ಬೇರೆಯವರಿಗೂ ತಿಳಿಸಿ ಧನ್ಯವಾದ.

Leave a Reply

Your email address will not be published. Required fields are marked *