“S” ಅಕ್ಷರದಿಂದ ನಿಮ್ಮ ಹೆಸರು ಶುರು ಆಗುತ್ತಾ .. ಹಾಗಾದ್ರೆ ನಿಮ್ಮಲ್ಲಿ ಈ ರಹಸ್ಯಮಯ ಗುಣಗಳು ಅಡಗಿರುತ್ತವೆ … ಹಾಗಾಗಿ ನಿಮ್ಮನ್ನು ಹಿಡಿಯುವವರು ಯಾರು ಇಲ್ಲ …!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

S ಹೆಸರಿನವರ ಗುಣ ಸ್ವಭಾವ ಲಕ್ಷಣ ಹೇಗೆ ಇರುತ್ತದೆ ಎಂದು ಮಾಹಿತಿಯಿಂದ ತಿಳಿದು ಕೊಳ್ಳಿ.ಹಾಯ್ ಫ್ರೆಂಡ್ಸ್ ಈ ಮಾಹಿತಿಯಲ್ಲಿ ನಾನು S ಅಥವಾ ಸ ಪದದಿಂದ ಶುರುವಾಗುವ ಹೆಸರಿನವರು ಯಾವ ಸ್ವಭಾವ ಹೊಂದಿರುತ್ತಾರೆ ಮತ್ತು ಇವರ ಪ್ರೀತಿ ಆರೋಗ್ಯ ಬುದ್ಧಿ ಹೇಗಿರುತ್ತದೆಂದು ಕೂಡ ತಿಳಿಸುತ್ತೇನೆ. ಪ್ರತಿಯೊಬ್ಬರು ಹುಟ್ಟಿದ ಮೇಲೆ ಅವರು ಹುಟ್ಟಿದ ಸಮಯ ಹಾಗೂ ನಕ್ಷತ್ರಗಳ ಮೇಲೆ ಅವರಿಗೆ ಒಂದು ಹೆಸರಿನ ಪದ ಬರುತ್ತದೆ. ಅದು ಯಾವ ಅಕ್ಷರವೂ ಕೂಡ ಆಗಿರಬಹುದು. ಜಾತಕದ ಪ್ರಕಾರ ಅವರ ಜನ್ಮ ನಕ್ಷತ್ರದಲ್ಲಿ ಯಾವ ಹೆಸರಿನಿಂದ ಬರುತ್ತದೆಯೋ ಅದನ್ನೇ ಕರೆಯುವುದು ಶ್ರೇಷ್ಠ.

ಹಾಗಾದರೆ S ಹೆಸರಿನ ವ್ಯಕ್ತಿಗಳು ಯಾವ ರೀತಿಯಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಅವರ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ ನಿಮ್ಮ ಹೆಸರು S ನಿಂದ ಶುರುವಾಗಿದ್ದರೆ ನೀವು ಕೂಡ ಈ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ಹೊಂದಿರುತ್ತೀರಿ. ಮೊದಲು ಈ ಹೆಸರಿನವರು ಪ್ರೀತಿಯಲ್ಲಿ ಹೇಗೆ ಇರುತ್ತಾರೆ ಎಂದು ನೋಡೋಣ S ಹೆಸರಿನವರು ಪ್ರೀತಿಯಲ್ಲಿ ತುಂಬಾ ಗಂಭೀರವಾಗಿರುತ್ತಾರೆ ಯಾವುದೇ ಪ್ರೀತಿಯನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ ಹಾಗೆ ಇವರು ಯಾರನ್ನಾದರೂ ಪ್ರೀತಿಸಿದರೆ ಅವರನ್ನು ತುಂಬಾ ಹಚ್ಚಿಕೊಳ್ಳುತ್ತಾರೆ ಅವರಿಗೆ ನೋವಾದರೆ ಇವರಿಗೆ ಸಹಿಸಲು ಆಗುವುದಿಲ್ಲ. ಇವರು ನಿಜವಾದ ಪ್ರೀತಿಯನ್ನು ಕೊಟ್ಟು ನಿಜವಾದ ಪ್ರೀತಿಯನ್ನು ಗಳಿಸುತ್ತಾರೆ.

ಪ್ರೀತಿಯಲ್ಲಿ ಇವರು ಅದೃಷ್ಟವಂತರಾಗಿರುತ್ತಾರೆ ತಮ್ಮನ್ನು ಪ್ರೀತಿಸುವವರನ್ನು ಎಷ್ಟೇ ಕಷ್ಟವಾದರೂ ಅವರನ್ನೇ ಪಡೆಯುತ್ತಾರೆ. ಇವರ ಬುದ್ಧಿವಂತಿಕೆಯಿಂದ ಮುಂದೆ ಬರುವ ಎಲ್ಲಾ ಕಷ್ಟಗಳನ್ನು ತೊಂದರೆಗಳನ್ನು ಜಾಣತನದಿಂದ ನಿಭಾಯಿಸುತ್ತಾರೆ. ಇನ್ನು ಇವರ ವಿಶೇಷವಾದ ಗುಣಗಳನ್ನು ತಿಳಿಯಿರಿ S ಹೆಸರಿನ ಹುಡುಗಿ ಆಗಲಿ ಅಥವಾ ಹುಡುಗನಾಗಲಿ ತುಂಬಾ ರಹಸ್ಯವಾಗಿ ಇರುತ್ತಾರೆ. ಇವರು ಮಾತನಾಡುವ ಶೈಲಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ ಹಾಗೆ ಇವರು ಮಾತನಾಡುವಲ್ಲಿ ಶ್ರೀಮಂತರಾಗಿರುತ್ತಾರೆ ಅದಕ್ಕೆ ಇವರು ಎಲ್ಲರಿಗೂ ಬೇಗ ಆಕರ್ಷಿತರಾಗುತ್ತಾರೆ.

ಇವರ ಮುಖ ಯಾವಾಗಲೂ ಹಸನ್ಮುಖಿಯಾಗಿ ಇರುತ್ತದೆ ಶುಭ ಕಾರ್ಯಕ್ರಮದಲ್ಲಿ ಇವರು ತುಂಬಾನೇ ಭಾಗವಹಿಸುತ್ತಾರೆ ಹಾಗೂ ಅಲ್ಲಿನ ಜವಾಬ್ದಾರಿಗಳನ್ನು ತೆಗೆದುಕೊಂಡು ತುಂಬಾ ಖುಷಿಯಿಂದ ಇರುತ್ತಾರೆ. ಯಾವುದೇ ಕೆಲಸವನ್ನು ಕೊಟ್ಟರು ತಮ್ಮ ಇಷ್ಟ ದಿಂದಲೇ ಎಲ್ಲಾ ಕೆಲಸವನ್ನು ಮಾಡಿಕೊಂಡು ಹೋಗುತ್ತಾರೆ. ಇವರು ತುಂಬಾ ಕ್ರಿಯೇಟಿವ್ ಆಗಿ ಇರುತ್ತಾರೆ ಲೀಡರ್ಶಿಪ್ ತೆಗೆದುಕೊಳ್ಳಲು ತುಂಬಾನೇ ಇಷ್ಟ ಪಡುತ್ತಾರೆ ಹಾಗೂ ಇವರು ತುಂಬಾ ಗುರಿಗಳನ್ನು ಅವರ ಜೀವನದಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಇವರು ಎಲ್ಲಿ ಗಲಾಟೆ ಹಾಗೂ ಗದ್ದಲ ಇರುತ್ತದೆ ಅಂತಹ ಸ್ಥಳದಲ್ಲಿ ಇವರು ಇರುವುದಿಲ್ಲ ಕೆಟ್ಟವರನ್ನು ತಿರುಗಿ ಕೂಡ ನೋಡುವುದಿಲ್ಲ.

ಇಂಥವರಿಂದ ದೂರವುಳಿದು ತಮ್ಮ ಹೊಸ ದಾರಿಯನ್ನು ರೂಪಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ತುಂಬಾ ಪೊಸೆಸಿವ್ ಆಗಿರುತ್ತಾರೆ ಅಂದರೆ ತಮ್ಮ ಪ್ರೀತಿಯನ್ನು ಬೇರೆಯವರೊಂದಿಗೆ ಶೇರ್ ಮಾಡಲು ಇಷ್ಟಪಡುವುದಿಲ್ಲ ಹಾಗೆಯೇ ಇವರು ಇದರಿಂದಾಗಿ ನೋವನ್ನು ಕೂಡ ಅನುಭವಿಸುತ್ತಾರೆ ಇವರು ಸ್ವಲ್ಪ ಸಿಡುಕಿನ ಸ್ವಭಾವದವರಾಗಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಏನು ಅಡೆತಡೆಗಳು ಬಂದರೂ ಇವರು ಸಹಿಸುವುದಿಲ್ಲ. ಇವರು ಪ್ರೀತಿಗೆ ತುಂಬಾ ಮಹತ್ವವನ್ನು ನೀಡುತ್ತಾರೆ ಅದಕ್ಕಾಗಿಯೇ ಇವರು ಅಷ್ಟೇ ನೋವನ್ನು ಕೂಡ ಮುಂದೆ ಅನುಭವಿಸುತ್ತಾರೆ. ಎಲ್ಲಿ ಅತಿಯಾದ ಪ್ರೀತಿ ಇರುತ್ತದೆಯೋ ಅಲ್ಲಿ ನೋವು ಎಂಬುದು ಸಹ ಇರುತ್ತದೆ.

ಕಲೆಯಲ್ಲಿ ವಿಜ್ಞಾನದಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಇನ್ನು ಇವರು ಪರಿಶ್ರಮದಿಂದ ಕೆಲಸ ಮಾಡಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುತ್ತಾರೆ. ಹಾಗೆ ಇವರು ತುಂಬಾ ಸ್ವಾಭಿಮಾನಿಗಳು ಕೂಡ ಆಗಿರುತ್ತಾರೆ. ಇವರ ಪರಿಶ್ರಮದಿಂದಾಗಿ ತುಂಬಾ ಹಣವನ್ನು ಗಳಿಸುತ್ತಾರೆ ಜೀವನದಲ್ಲಿ ಮುಂದೆ ತುಂಬಾ ಯಶಸ್ಸನ್ನು ಕೂಡ ಪಡೆಯುತ್ತಾರೆ. ಇವರಿಗೆ ಸ್ವಲ್ಪ ತೋರಿಕೆ ಗುಣವು ಕೂಡ ಬಂದಿರುತ್ತದೆ ಹಾಗಾಗಿ ಇವರು ಎಲ್ಲ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿ ಇರುತ್ತಾರೆ. ಇವರು ಹೃದಯದಿಂದ ಕೆಟ್ಟವರಾಗಿರುವುದಿಲ್ಲ ಆದರೆ ಇವರ ಸ್ವಭಾವ ನೋಡಿ ಕೆಲವರು ಇವರನ್ನು ಕೆಟ್ಟವರೆಂದು ಭಾವಿಸುತ್ತಾರೆ.

ಅವರು ಮಾತಿನಲ್ಲಿ ಎಲ್ಲರನ್ನೂ ಆಕರ್ಷಿತರನ್ನಾಗಿ ಮಾಡುತ್ತಾರೆ. ಇವರಿಗೆ ಸ್ವಲ್ಪ ಸ್ವಾಭಿಮಾನ ಇರುವುದರಿಂದ ಬೇರೆಯವರ ಸಹಾಯವನ್ನು ಕೇಳಲು ಇಷ್ಟಪಡುವುದಿಲ್ಲ. ಹಾಗಾದರೆ ಈ ಹೆಸರಿನ ಅವರಿಂದ ಏನೇನೆಲ್ಲ ನಿರೀಕ್ಷಿಸಬಹುದು ಎಂದು ಈಗ ನೋಡಿ. ಇವರು ತುಂಬಾ ಪರಿಶ್ರಮ ಪಡುವುದರಿಂದ ಜೀವನದಲ್ಲಿ ಯಶಸ್ಸನ್ನು ಬಯಸಲು ಇಷ್ಟಪಡುತ್ತಾರೆ. ಇವರು ತುಂಬಾ ಬುದ್ಧಿ ಶಾಲಿ ಆಗಿರುವುದರಿಂದ ಎಲ್ಲಿ ಜ್ಞಾನವು ಸಿಗುತ್ತದೆ ಅಲ್ಲಿ ಇವರು ಇರುತ್ತಾರೆ ಮತ್ತು ಜ್ಞಾನವನ್ನು ಪಡೆಯುತ್ತಾರೆ. ಇನ್ನು ಇವರ ಆರೋಗ್ಯದ ವಿಷಯಕ್ಕೆ ಬಂದರೆ ಇವರು ತುಂಬಾ ಚಿಂತೆಯನ್ನು ಮಾಡುತ್ತಾರೆ ಇವರಿಗೆ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಜಾಸ್ತಿ ಇರುತ್ತವೆ ಗ್ಯಾಸ್ ಆಗಿರಬಹುದು ಹೊಟ್ಟೆ ನೋವು ಬರಬಹುದು ಇವರು ಕೆಲವೊಮ್ಮೆ ಗುಪ್ತ ರೋಗಗಳನ್ನು ಕೂಡ ಅನುಭವಿಸುತ್ತಾರೆ. ಹಾಗೇ ಅವರು ಎಲ್ಲೇ ಹೋದರೂ ತಮ್ಮ ಗುರುತುಗಳನ್ನು ಬಿಟ್ಟು ಬರುವ ರಾಗಿರುತ್ತಾರೆ. ಮಾಹಿತಿ ಇಷ್ಟವಾಗಿದ್ದರೆ ಧನ್ಯವಾದಗಳು.

Leave a Reply

Your email address will not be published. Required fields are marked *