ಈ ರೀತಿಯ ಗುಳಿ ನಿಮ್ಮ ಕೆನ್ನೆಯಲ್ಲಿಯೂ ಬೀಳುತ್ತಾ ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂತರು ಇನ್ಯಾರು ಇರಲ್ಲ ಬಿಡಿ …ಯಾಕೆ ಗೊತ್ತ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೆನಾದ್ರೂ ಗುಳಿಕೆನ್ನೆ ಅಂದ್ರೆ ಡಿಂಪಲ್ ಬೀಳುತ್ತಾ ಹಾಗಾದರೆ ಈ ಅದೃಷ್ಟ ನಿಮ್ಮದಾಗುತ್ತದೆ ಪೂರ್ತಿಯಾಗಿ ಓದಿ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ಡಿಂಪಲ್ ಬ್ಯೂಟಿಗಳ ಬಗ್ಗೆ ತಿಳಿದುಕೊಳ್ಳೋಣ. ಮಹಿಳೆಯರು ನೋಡಲು ತುಂಬಾ ಚೆನ್ನಾಗಿ ಕಾಣಬೇಕು ಎನ್ನುವ ಆಸೆಯನ್ನು ಇಟ್ಟುಕೊಳ್ಳುತ್ತಾರೆ. ಇದು ಕೇವಲ ಮೇಕಪ್ ಮಾಡಿಕೊಳ್ಳುವುದರಿಂದ ಬರುವುದಿಲ್ಲ ಇದು ಅವರ ಮುಖ ಲಕ್ಷಣ ಹಾಗೂ ಮುಖದ ಮೇಲಿರುವ ಡಿಂಪಲ್ ಹಾಗೂ ಕಪ್ಪು ಆಕಾರದ ಚುಕ್ಕೆಗಳ ಮೇಲೆ ಕೂಡ ಇವರು ಸೌಂದರ್ಯದಿಂದ ಕಾಣುತ್ತಾರೆ.

ಎಲ್ಲರಿಗೂ ನನಗೂ ಡಿಂಪಲ್ ಬೀಳಬೇಕಿತ್ತು ಅನಿಸುತ್ತದೆ ಏಕೆಂದರೆ ಡಿಂಪಲ್ ಬಿದ್ದವರು ತುಂಬಾ ಕ್ಯೂಟ್ ಆಗಿ ಕಾಣಿಸುತ್ತಾರೆ. ಗುಳಿಕೆನ್ನೆ ಬೀಳುವವರು ನಕ್ಕಾಗ ಮಾತನಾಡಿದಾಗ ಅದು ಅವರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ ಅವರ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ತುಂಬಾ ಹೀರೋಯಿನ್ ಮತ್ತು ಹೀರೋಗಳಿಗೂ ಕೂಡ ಗುಳಿಕೆನ್ನೆಗಳಿವೆ. ಇವರೆಲ್ಲಾ ತುಂಬಾ ಅದೃಷ್ಟವಂತರು ಹಾಗೂ ಕ್ಯೂಟ್ ಆಗಿ ಕಾಣಿಸಿಕೊಳ್ಳುವವರು. ಉದಾಹರಣೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ರಚಿತರಾಮ್ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ಗುಳಿಕೆನ್ನೆ ಗಂಡಸರಿಗೂ ಬೀಳುತ್ತವೆ ಹಾಗೂ ಹೆಣ್ಣು ಮಕ್ಕಳಿಗೂ ಬೀಳುತ್ತವೆ.

ಈ ತರ ಗುಳಿಕೆನ್ನೆ ಬೀಳುವವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ. ಹಾಗಾದರೆ ಇವರಿಗೆ ಯಾವ ಗ್ರಹದಿಂದ ಗುಳಿಕೆನ್ನೆ ಬೇಳಲು ಸಹಾಯವಾಗಿರುತ್ತದೆ ಎಂದರೆ ಶುಕ್ರ ಗ್ರಹದಿಂದ ಹೌದು ಸ್ನೇಹಿತರೆ ಶುಕ್ರನು ಯಾರ ಜಾತಕದಲ್ಲಿ ಯಾವ ಲಗ್ನದಲ್ಲಿ ಇವರಿಗೆ ಹೊಂದುತ್ತಾನೋ ಆಗ ಇಂಥವರಲ್ಲಿ ಗುಳಿಕೆನ್ನೆ ಗಳು ಬೀಳುತ್ತವೆ ಅಂದರೆ ಇವರು ತುಂಬಾ ಅದೃಷ್ಟವಂತರಾಗಿರುತ್ತಾರೆ ಹಾಗೆಯೇ ಇವರಿಗೆ ಶುಕ್ರದೆಸೆ ಎನ್ನುವುದು ತುಂಬಾ ಚೆನ್ನಾಗಿರುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಗುಳಿ ಕೆನ್ನೆಗಳು ಕಾಣಿಸುತ್ತವೆ. ಇವರ ಜಾತಕದಲ್ಲಿ ಶುಕ್ರ ಗ್ರಹದ ಪರಿಣಾಮದಿಂದ ತುಂಬಾ ಯಶಸ್ವಿಗಳಾಗಿರುತ್ತಾರೆ.

ಗುಳಿಕೆನ್ನೆ ಬೀಳುವ ಹೆಣ್ಣುಮಕ್ಕಳಿಗೆ ಹೆಚ್ಚಾಗಿ ಅತ್ತೆಯಿಂದ ತೊಂದರೆಗಳು ಇರುವುದಿಲ್ಲ ಹಾಗೆಯೇ ಇವರು ಅತ್ತೆ ಇಲ್ಲದ ಮನೆಗೆ ಸೊಸೆಯಾಗಿ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇವರ ದೇಹವು ತುಂಬಾ ನಾಜೂಕಾಗಿ ಇರುತ್ತದೆ ಹಾಗೆಯೇ ಇವರು ತುಂಬಾ ಸೂಕ್ಷ್ಮತೆಯಿಂದ ಇರುತ್ತಾರೆ. ಗುಳಿಕೆನ್ನೆ ಇರುವವರು ಯಾರೇ ಆಗಲಿ ಎಲ್ಲರಿಗೂ ಆಕರ್ಷಿತರಾಗುತ್ತಾರೆ ಹಾಗೆಯೇ ಅವರಿಗೆ ಎಲ್ಲರನ್ನು ಸೆಳೆಯುವ ಸೌಂದರ್ಯ ಹೆಚ್ಚಾಗಿರುತ್ತದೆ. ಇವರು ನೋಡಲು ತುಂಬಾ ಕೋಮಲವಾಗಿ ಇರುತ್ತಾರೆ ಹಾಗೆಯೇ ಇವರ ಸ್ವಭಾವವೂ ತುಂಬಾ ಸಾಫ್ಟ್ ಆಗಿ ಇರುತ್ತದೆ. ಹೆಚ್ಚಾಗಿ ಇವರು ಸಂಗೀತ ಹಾಗೂ ಭರತನಾಟ್ಯ ಕಲೆಯಲ್ಲಿ ತುಂಬಾ ಒಳ್ಳೆಯ ಹೆಸರನ್ನು ಮಾಡುತ್ತಾರೆ.

ಗುಳಿಕೆನ್ನೆ ಬೀಳುವವರು ತುಂಬಾ ವಿಶೇಷವಾಗಿ ಇರುತ್ತಾರೆ ಹಾಗೆ ಚಿಕ್ಕ ಮಕ್ಕಳಿದ್ದಾಗ ಅಂದರೆ 12 ರಿಂದ 18 ವಯಸ್ಸಿನವರೆಗೆ ಇವರು ಜೀವನದಲ್ಲಿ ತುಂಬಾ ಏರುಪೇರುಗಳನ್ನು ಕಾಣುತ್ತಾರೆ. ನಂತರದ ದಿನಗಳಲ್ಲಿ ಇವರು ತುಂಬಾ ಹೆಸರನ್ನು ಮಾಡುತ್ತಾರೆ ಹಾಗೆಯೇ ಇವರು ತುಂಬಾ ಪಾಸಿಟಿವ್ ಆಟಿಟ್ಯೂಡ್ಅನ್ನು ಹೊಂದಿರುತ್ತಾರೆ. ಇಂಥವರು ಯಾವುದೇ ಕೆಲಸದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಹಾಗೆಯೇ ಇವರು ಸುಲಭವಾಗಿ ಸೋಲು ಒಪ್ಪಿಕೊಳ್ಳುವುದಿಲ್ಲ ಅಷ್ಟು ಗಟ್ಟಿಯಾಗಿ ಇರುತ್ತಾರೆ. ಶುಕ್ರ ಗ್ರಹದ ಆಶೀರ್ವಾದದಿಂದ ಇವರು ಯಾವಾಗಲೂ ಜೀವನದಲ್ಲಿ ತುಂಬಾ ಯಶಸ್ಸಿನಿಂದ ಇರುತ್ತಾರೆ ಇವರಿಗೆ ಯಾವುದೇ ತೊಂದರೆಗಳು ಬರುವುದಿಲ್ಲ ಬಂದರೂ ಅವುಗಳನ್ನು ಎದುರಿಸುವ ಶಕ್ತಿ ಅವರಲ್ಲಿ ಹೆಚ್ಚಾಗಿರುತ್ತದೆ.

ಇವರ ಜೀವನದಲ್ಲಿ ಶುಭ ಅನ್ನೋದು ಯಾವಾಗಲೂ ಅವರ ಬೆನ್ನ ಹಿಂದೆಯೇ ಇರುತ್ತದೆ. ಇಂಥವರನ್ನು ಮದುವೆಯಾಗುವ ಹುಡುಗರು ಸಹ ಇವರನ್ನು ತುಂಬಾ ಪ್ರೀತಿಸುತ್ತಾರೆ. ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ತುಂಬಾ ಶ್ರದ್ಧೆ ಹಾಗೂ ಪ್ರಮಾಣಿಕತೆ ಇರುತ್ತದೆ. ಆದರೆ ಗುಳಿಕೆನ್ನೆ ಬೀಳುವವರು ಲಕ್ಷ್ಮಿಯಂತೆ ಯಾವಾಗಲೂ ಚಂಚಲತೆಯಿಂದ ಇರುತ್ತಾರೆ ಒಂದೇ ಕಡೆ ಸ್ಥಿರವಾಗಿ ನಿಲ್ಲುವುದಿಲ್ಲ. ಅಂದರೆ ಇವರ ಮಾತಿಗೆ ಮರ್ಯಾದೆ ಇಲ್ಲದ ಜಾಗದಲ್ಲಿ ಇವರು ಒಂದು ಕ್ಷಣವೂ ಇರುವುದಿಲ್ಲ ಹಾಗೆಯೇ ಇವರು ಅವರಿಂದ ದೂರವಾಗಿ ಬೇರೆಯವರೊಂದಿಗೆ ಆಕರ್ಷಿತರಾಗುತ್ತಾರೆ.

ಹಾಗೆ ಇವರು ತಾವು ಖುಷಿ ಪಡುವುದಷ್ಟೇ ಅಲ್ಲದೆ ತಮ್ಮ ಸುತ್ತಮುತ್ತಲು ಇರುವವರನ್ನು ಸಹ ಖುಷಿಯಾಗಿ ಇರಲು ಇಷ್ಟಪಡುತ್ತಾರೆ. ಇಂಥವರು ತಮ್ಮವರ ರಕ್ಷಣೆಗಾಗಿ ಎಲ್ಲಾ ಕಷ್ಟಗಳಿಗೂ ಮುಂದೆ ನಿಂತು ಹೋರಾಡುತ್ತಾರೆ ಹಾಗೆಯೇ ಇವರಿಗೆ ತುಂಬಾ ಸೌಂದರ್ಯ ಪ್ರಜ್ಞೆ ಇರುತ್ತದೆ ಅಂದರೆ ಇವರು ಹಾಕುವ ಬಟ್ಟೆಗಳಲ್ಲಿ ಮಾಡಿಕೊಳ್ಳುವ ಮೇಕಪ್ ಗಳಲ್ಲಿ ತುಂಬಾ ಚೆನ್ನಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಹಣದ ತೊಂದರೆ ಯಾವಾಗಲೂ ಬರುವುದಿಲ್ಲ ಆಗಾಗ ಶಾಪಿಂಗ್ ತುಂಬಾ ಬಟ್ಟೆಗಳನ್ನು ಖರೀದಿಸುವ ಗುಣವನ್ನು ಹೊಂದಿರುತ್ತಾರೆ.

ಇವರ ಆಹಾರದ ಬಗ್ಗೆ ಹೇಳಬೇಕು ಎಂದರೆ ಇವರಿಗೆ ಸಿಹಿ ಪದಾರ್ಥಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಹಾಗೆ ಇವರು ಎಲ್ಲರ ಜೊತೆ ಬೆರೆತು ಅವರ ಜೊತೆ ಸಮಯ ಕಳೆಯಬೇಕು ಎಂಬ ಭಾವನೆ ಹೊಂದಿರುತ್ತಾರೆ. ಇವರ ಅದೃಷ್ಟವೆಂದರೆ ಇವರು ಎಲ್ಲಾ ಭೋಗಭಾಗ್ಯಗಳನ್ನು ಹೊಂದಿರುತ್ತಾರೆ ಅದೃಷ್ಟವಂತರಾಗಿರುತ್ತಾರೆ ಗುಳಿಕೆನ್ನೆ ಬೀಳುವವರ ಜಾತಕದಲ್ಲಿ ಶುಕ್ರನು ಆಶೀರ್ವಾದ ತುಂಬಾ ಚೆನ್ನಾಗಿದ್ದರೆ ಇಷ್ಟೆಲ್ಲ ನಡೆಯುತ್ತವೆ ಹಾಗಾದರೆ ಗುಳಿಕೆನ್ನೆ ಅವರ ಅದೃಷ್ಟ ಏನೆಂದು ನಿಮಗೆ ಈಗ ತಿಳಿದಿರಬಹುದು.

Leave a Reply

Your email address will not be published. Required fields are marked *