ಈ ಒಂದು ಗಿಡವನ್ನು ನಿಮ್ಮ ಮನೆಯ ಮುಂಭಾಗದಲ್ಲಿ ಬೆಳೆಸಿಕೊಂಡರೆ ಅದೃಷ್ಟ ನಿಮ್ಮ ಹಿಂಬಾಲ ಇರುತ್ತಂತೆ.ಸಾಕ್ಷಾತ್ ಶ್ರೀ ರಾಮ ಚಂದ್ರರೇ ಹೇಳಿದ ಮಾತು. ಹಾಗಾದ್ರೆ ಈ ಗಿಡ ಯಾವುದು ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಒಂದು ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಸಾಕು ನೀವು ಶ್ರೀಮಂತರಾಗುವುದು ಖಚಿತ ಹಾಗೆ ಆರೋಗ್ಯವೂ ನಿಮ್ಮ ಜೀವನದಲ್ಲಿ ವೃದ್ಧಿಸುವುದಲ್ಲದೆ ಸುಖ ಶಾಂತಿ ನೆಮ್ಮದಿಯಿಂದ ಇರಲು ಕೂಡ ಈ ಗಿಡ ನಿಮಗೆ ಸಹಾಯಕಾರಿಯಾಗಿದೆ ಹಾಗಾದರೆ ಬನ್ನಿ ಈ ಗಿಡ ಯಾವುದೂ ಇದರ ಹಿನ್ನೆಲೆ ಏನು ಯಾವುದನ್ನು ತಿಳಿಯೋಣ ಈ ಒಂದು ಮಾಹಿತಿಯಲ್ಲಿ ನಿಮಗೂ ಕೂಡ ಇಂದಿನ ಮಾಹಿತಿ ಆಸಕ್ತಿಕರವಾಗಿದೆ ಪ್ರಯೋಜನಕಾರಿ ಯಾಗಿದ್ದರೆ ಮಾಹಿತಿಗೆ ತಪ್ಪದೇ ಲೈಕ್ ಮಾಡಿ ಹಾಗೂ ಕಾಮೆಂಟ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಹೌದು ನಾನು ಮಾತನಾಡಲು ಹೊರಟಿರುವಂತಾ ಆ ಒಂದು ಗಿಡ ಯಾವುದು ಅಂದರೆ ಗೋರಂಟಿ ಸೊಪ್ಪಿನ ಗಿಡ ಈ ಒಂದು ಗಿಡ ನಿಮ್ಮ ಮನೆಯ ಅಂಗಳದಲ್ಲಿ ದ್ದರೆ ನಿಮಗೆ ಅನೇಕ ಪ್ರಯೋಜನಗಳಿವೆ .ಹೆಣ್ಣು ಮಕ್ಕಳಿಗಂತೂ ಇದೊಂದು ದೇವರು ಕೊಟ್ಟ ವರ ಅಂತಾನೇ ಹೇಳಬಹುದಾಗಿದೆ. ಇದು ಆರೋಗ್ಯವನ್ನು ವೃದ್ಧಿಸುವುದಲ್ಲದೆ ದೇಹದ ಉಷ್ಣಾಂಶವನ್ನು ತಂಪಾಗಿರಿಸಲು ಕೂಡ ಸಹಾಯಕಾರಿಯಾಗಿದೆ, ಹಾಗಾದರೆ ಈ ಒಂದು ಗೋರಂಟಿ ಗಿಡದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.ಈ ಗಿಡದ ಮಹತ್ವವನ್ನು ತಿಳಿಯುವುದಕ್ಕಿಂತ ಮೊದಲು ಈ ಗಿಡದ ಇತಿಹಾಸವನ್ನು ಮೊದಲು ತಿಳಿಯೋಣ

ರಾಮನ ಪಟ್ಟಾಭಿಷೇಕದ ನಂತರ ಸೀತೆಯು ರಾಮನಿಗೆ ಹೇಳುತ್ತಾಳೆ ತಾನು ಲಂಕೆಯಲ್ಲಿ ಇರುವಂತಹ ಸಮಯದಲ್ಲಿ ನನ್ನ ಕಷ್ಟ, ದುಗುಡ ನೋವುಗಳನ್ನು ಗೋರಂಟಿ ಗಿಡದೊಂದಿಗೆ ಹೇಳಿಕೊಳ್ಳುತ್ತಿದ್ದೆ.ಆಗ ನನ್ನ ಮನಸ್ಸು ಸ್ವಲ್ಪ ನೆಮ್ಮದಿ ಕಾಣುತ್ತಿತ್ತು ಎಂದು ರಾಮನ ಬಳಿ ಹೇಳಿದಾಗ ಆಗ ರಾಮನು ಅಂದಿನಿಂದ ಯಾರ ಮನೆಯಲ್ಲಿ ಈ ಒಂದು ಗೋರಂಟಿ ಗಿಡವು ಇರುತ್ತದೆಯೋ ಅಂತವರ ಮನೆಯಲ್ಲಿ ನೆಮ್ಮದಿ ಸುಖ ಶಾಂತಿಯು ನೆಲೆಸಿ ಅವರ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಾಡದೇ ಇರಲಿ ಎಂಬ ವರವನ್ನು ನೀಡುತ್ತಾರೆ.

ಅಂದಿನಿಂದಲೂ ಈ ಒಂದು ವಾಡಿಕೆ ಇದೆ ಯಾರ ಮನೆಯಲ್ಲಿ ಗೋರಂಟಿ ಗಿಡವೂ ಇರುತ್ತದೆಯೋ ಅವರ ಮನೆಯಲ್ಲಿ ಸಮಸ್ಯೆಗಳು ಪರಿಹಾರಗೊಳ್ಳುವುದು ಎಂದು. ಈ ಒಂದು ಗೋರಂಟಿ ಗಿಡದ ಎಲೆಗಳನ್ನು ಹೆಣ್ಣು ಮಕ್ಕಳು ತಮ್ಮ ಕೈಗೆ ಬಣ್ಣ ಹಚ್ಚಿ ಕೊಳ್ಳಲೆಂದು ಬಳಸುತ್ತಾರೆ ಇದರಲ್ಲಿರುವ, ಇದರಲ್ಲಿರುವ ಲುಸೀನಾ ಎಂಬ ಅಂಶವೂ ಬಣ್ಣವನ್ನು ಬದಲಾಯಿಸುವುದಕ್ಕೆ ಸಹಾಯ ಮಾಡುತ್ತದೆ.ಆಷಾಢ ಮಾಸದಲ್ಲಿ ಗೋರಂಟಿ ಅನ್ನು ಹಚ್ಚಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ ಮತ್ತು ಆಷಾಢ ಮಾಸದಲ್ಲಿ ಗೋರಂಟಿ ಹಚ್ಚಿ ಕೊಳ್ಳುವುದನ್ನು ಪದ್ಧತಿ ಕೂಡ ಮಾಡಿದ್ದಾರೆ .

ಯಾಕೆ ಅಂತ ಹೇಳುವುದಾದರೆ ಇದರ ಹಿಂದೆ ಒಂದು ಅಗಾಧವಾದ ಕಾರಣವಿದೆ ಅದೇನೆಂದರೆ ಆಷಾಢ ಮಾಸದಲ್ಲಿ ಮಳೆ ಶುರುವಾಗುತ್ತದೆ ಹೆಣ್ಣು ಮಕ್ಕಳ ಕೈ ಕಾಲುಗಳು ಸೀಳುತ್ತದೆ ಆಗ ಗೋರಂಟಿ ಸೊಪ್ಪನ್ನು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚುವುದರಿಂದ ಇಂತಹ ಸಮಸ್ಯೆ ಪರಿಹಾರ ಆಗುವುದಲ್ಲದೆ ಈ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ .ಮತ್ತು ಉಗುರುಗಳಿಗೆ ಈ ಗೋರಂಟಿ ಯನ್ನು ಹಚ್ಚುವುದರಿಂದ ಉಗುರಿನ ಆರೋಗ್ಯವೂ ಹೆಚ್ಚುತ್ತದೆ ಹಾಗೇ ಮಲಗುವ ಮುನ್ನ ದಿಂಬಿನ ಮೇಲೆ ಈ ಸೊಪ್ಪನ್ನು ಹರಡಿ ಒಂದು ಬಟ್ಟೆಯನ್ನು ಅದರ ಮೇಲೆ ಹಾಸಿ ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ.

ಹದಿನೈದು ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಒಂದೂವರೆ ಲೋಟ ನೀರನ್ನು ಕುದಿಸಲು ಇಟ್ಟು ಅದು ಒಂದು ಲೋಟಕ್ಕೆ ಬರುವವರೆಗೂ ಕುದಿಸಿದ ನಂತರ ಅದನ್ನು ಶೋಧಿಸಿ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯಲ್ಲಿ ಬರುವ ದುರ್ವಾಸನೆ ಹಾಗೆ ಬಾಯಲ್ಲಿ ಆಗುವ ಹುಣ್ಣು ಇವೆಲ್ಲವೂ ಕೂಡ ನಿವಾರಣೆಗೊಳ್ಳುತ್ತದೆ.ಬೇಸಿಗೆ ಕಾಲದಲ್ಲಿ ತಲೆ ಸುತ್ತು ನಿಶ್ಯಕ್ತಿ ಇಂತಹ ಸಮಸ್ಯೆಗಳು ಕಾಡುತ್ತಿದ್ದರೆ ಐದು ಗ್ರಾಂ ಗೋರಂಟಿ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಶೋಧಿಸಿ ಆ ನೀರನ್ನು ಸೇವಿಸುವುದರಿಂದ ನಿಶ್ಯಕ್ತಿ ದೂರವಾಗುತ್ತದೆ.

ಹಾಗೆ ಈ ಗೋರಂಟಿ ಬದಲು ಇತ್ತೀಚೆಗೆ ಹೆಣ್ಣು ಮಕ್ಕಳು ಮೆಹಂದಿ ಕೋನಿನ ಮೊರೆ ಹೋಗಿದ್ದಾರೆ ಆದರೆ ಇದರಲ್ಲಿ ರಾಸಾಯನಿಕ ಅಂಶವು ಹೆಚ್ಚಾಗಿದ್ದು ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರಬಹುದು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ 

Leave a Reply

Your email address will not be published.