ಇಲಿಯ ಕಾಟದಿಂದ ಸುಸ್ತಾಗಿದ್ದೀರಾ … ಅವುಗಳಿಗೆ ಹೀಗೆ ಮಾಡಿ ಸಾಕು ಜನುಮದಲ್ಲಿ ಇಲಿಗಳು ನಿಮ್ಮ ಬಳಿ ಸುಳಿಯಲ್ಲ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಕ್ಕಳು ಇದ್ದ ಮನೆಯಲ್ಲಿ ಎಷ್ಟು ಸ್ವಚ್ಛ ಇರಬೇಕು ಅಂದರೆ ಮಕ್ಕಳು ತಮ್ಮ ಕೈಗಳಿಂದ ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಮುಟ್ಟುತ್ತಾನೆ ಇರುತ್ತಾರೆ ಆಟ ಆಡುವಾಗ ಪ್ರತಿಯೊಂದು ವಸ್ತುಗಳನ್ನು ಮುಟ್ಟಿಯೇ ಆಟ ಆಡ್ತಾನೆ ಇರ್ತಾರೆ.ಅದೇ ಮನೆಯಲ್ಲಿ ಇಲಿಗಳು ಇದ್ದರೆ ಇಲಿಗಳು ಕೂಡ ಯಾವಾಗ ಏನು ಕೆಲಸ ಮಾಡುತ್ತೆ ಅಂತಾನೆ ಗೊತ್ತಿರುವುದಿಲ್ಲ. ಈ ಇಲಿಗಳು ಪ್ಲಾಸ್ಟಿಕ್ನಂತಹ ವಸ್ತುಗಳನ್ನು ಕಡಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ ಕಾರಣ ಇಲಿಗಳು ಮನೆಯಲ್ಲಿದ್ದರೆ ಯಾವಾಗ ಎಲ್ಲಿ ಏನು ಮಾಡ್ತಾ ಇರುತ್ತೆ ಅಂತ ಯೋಚನೆ ಮಾಡೋದೇ ಆಗಿಬಿಡುತ್ತದೆ.ಆದ ಕಾರಣ ಈ ಇಲಿಗಳು ಇದ್ದರೆ ಅದನ್ನು ಮನೆಯಿಂದ ಓಡಿಸುವುದಕ್ಕಾಗಿ ಸುಲಭ ಪರಿಹಾರಗಳನ್ನು ಮನೆ ಮದ್ದುಗಳನ್ನು ತಿಳಿಸುತ್ತೇವೆ, ಇದನ್ನು ನೀವು ಮಾಡಿ ಸಾಕು. ಇಲಿಗಳು ಮನೆಯಿಂದ ಹೋಗುತ್ತವೆ

ಈ ಇಲಿಗಳ ಕಾಟ ಕೂಡ ತಪ್ಪುತ್ತದೆ. ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರೆ ಆಗಾಗ ಮನೆಯನ್ನು ಸ್ವಚ್ಛ ಮಾಡುತ್ತಲೆ ಇರಿ. ಯಾಕೆ ಅಂದರೆ ಈ ಇಲಿಗಳು ರೇಬಿಸ್ ನಂತಹ ಕಾಯಿಲೆಯನ್ನು ಕೂಡಾ ಹರಡಬಹುದು.ಮೊದಲನೆಯದಾಗಿ ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಪೆಪ್ಪರ್ ಮಿಂಟ್ ಆಯಿಲ್, ಇದು ಗ್ರಂಥಿಕೆಯ ಅಂಗಡಿಯಲ್ಲಿ ದೊರೆಯುತ್ತದೆ. ಮ‍ತ್ತು ಮಾರುಕಟ್ಟೆಯಲ್ಲಿ ಕೂಡ ಸಿಗುತ್ತದೆ.ಇದನ್ನು ತಂದು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಈ ಪಾತ್ರೆಗೆ ಹತ್ತಿಯ ಉಂಡೆಗಳನ್ನು ಹಾಕಿ ನೆನೆಯಲು ಬಿಡಬೇಕು. ನಂತರ ಇಲಿಗಳು ಎಲ್ಲೆಲ್ಲಿ ಓಡಾಡುತ್ತಿದೆಯೋ ಅಲ್ಲಿ ಈ ಹತ್ತಿಯ ಉಂಡೆಗಳನ್ನು ಇಡಬೇಕು ಇದರಿಂದ ಈ ಪೆಪ್ಪರ್ ಮಿಂಟ್ ಎಣ್ಣೆಯ ವಾಸನೆಗೆ ಇಲಿಗಳು ಬರುವುದೆ ಇಲ್ಲ.

ಎರಡನೆಯದಾಗಿ ಪ್ಲಾಸ್ಟರ್ಆಫ್ ಪ್ಯಾರಿಸ್ ಮತ್ತು ಕೋಕೋ ಪೌಡರ್ ಇವೆರಡನ್ನು ಮಿಶ್ರಣ ಮಾಡಿ ಸ್ವಲ್ಪ ನೀರನ್ನು ಹಾಕಿ ಉಂಡೆ ಮಾಡಬೇಕು. ಈ ಒಂದು ಪದಾರ್ಥವನ್ನು ತಿಂದರೆ ಅಂದರೆ ಈ ಮಿಶ್ರಣದ ಉಂಡೆಯನ್ನು ಇಲಿಗಳು ಸೇವಿಸಿದರೆ ನಾಶವಾಗುತ್ತದೆ.ಮೂರನೆಯದಾಗಿ ಬೇಕಿಂಗ್ ಸೋಡಾದೊಂದಿಗೆ ಪೀನಟ್ ಬಟರ್ ಅನ್ನು ಬೆರೆಸಿ ಇದನ್ನು ಕೂಡ ಉಂಡೆ ಮಾಡಿ ಇಲಿಗಳು ಓಡಾಡುವಂತಹ ಜಾಗದಲ್ಲಿ ಇಟ್ಟರೆ ಈ ಒಂದು ಮಿಶ್ರಣವನ್ನು ತಿಂದು ಕೂಡ ಇಲಿಗಳು ಸತ್ತು ಹೋಗುತ್ತದೆ.ಈರುಳ್ಳಿಯ ವಾಸನೆ ಕಂಡರೆ ಇಲಿಗಳಿಗೆ ಆಗುವುದಿಲ್ಲ ಇದನ್ನು ಸಣ್ಣದಾಗಿ ಕತ್ತರಿಸಿ ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಇಲಿಗಳು ಅಂತಹ ಸ್ಥಳಕ್ಕೆ ಬರುವುದೇ ಇಲ್ಲ. ಇನ್ನು ರೆಡ್ ಚಿಲ್ಲಿ ಫ್ಲೇಕ್ಸ್ ಇದನ್ನು ಇಲಿಗಳು ಓಡಾಡುವ ಜಾಗದಲ್ಲಿ ಉದುರಿಸುವುದರಿಂದ ಕೂಡ ಇಲಿಗಳು ಈ ಘಟಕ್ಕೆ ಅಂತಹ ಜಾಗದಲ್ಲಿ ಬರುವುದಿಲ್ಲ.

ಬೆಳ್ಳುಳ್ಳಿ ಮತ್ತು ಲವಂಗ ಈ ಎರಡೂ ಪದಾರ್ಥದ ವಾಸನೆಯ ಕಾಟಕ್ಕೆ ಇಲಿಗಳು ಬರುವುದೇ ಇಲ್ಲ ಇದನ್ನು ಜಜ್ಜಿ ಇಲಿಗಳು ಓಡಾಡುವ ಜಾಗದಲ್ಲಿ ಇಡಬೇಕು. ಇದರಿಂದ ಇಲಿಗಳು ಅಂತಹ ಒಂದು ಜಾಗಕ್ಕೆ ಬರುವುದೇ ಇಲ್ಲ ಈ ಕೆಲವೊಂದು ಸುಲಭ ಪರಿಹಾರಗಳನ್ನು ಮಾಡಿ, ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳಿ ಮತ್ತು ಇಲಿಗಳು ಕೂಡ ಮನೆಯೊಳಗೆ ಬರುವುದೇ ಇಲ್ಲ.ಈ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಇಂಟ್ರೆಸ್ಟಿಂಗ್ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published.