ನಿಮ್ಮ ಮನೆಯಲ್ಲಿ ದಾಸವಾಳದ ಗಿಡವನ್ನು ಬೆಳೆಸಿಕೊಂಡಿದ್ದೀರಾ .. ಅದರಲ್ಲಿ ಸರಿಯಾಗಿ ಹೂವು ಬಿಡುತ್ತಿಲ್ವಾ ಹಾಗಾದ್ರೆ ಗಿಡಕ್ಕೆ ಇದನ್ನು ಹಾಕಿದ್ರೆ ಸಾಕು ನಿಮ್ಮ ದಾಸವಾಳದ ಗಿಡದಲ್ಲಿ ಸಾಕು ಅನ್ನೋವಷ್ಟು ಹೂವು ಬಿಡುತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ವೀಕ್ಷಕರೇ ಇಂದಿನ ಮಾಹಿತಿಯಲ್ಲಿ ನಾವು ಒಂದು ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳೋಣ, ಹೌದು ಸಾಕಷ್ಟು ಜನರಿಗೆ ಮನೆಯ ಮುಂದೆ ಗಿಡ ಬೆಳೆಸಬೇಕು ಅನ್ನುವ ಹವ್ಯಾಸ ಇರುತ್ತದೆ,ಈ ರೀತಿ ಗಿಡಗಳನ್ನು ಬೆಳೆಸುವಾಗ ನಾವು ಕೆಲವೊಂದು ಮಾಹಿತಿಯನ್ನು ಮುಂಚೆಯೇ ತಿಳಿದಿರಬೇಕಾಗುತ್ತದೆ. ಇನ್ನು ಹೂವಿನ ಗಿಡಗಳನ್ನು ಮನೆಯ ಮುಂದೆ ಬೆಳೆಸುವಾಗ ಅದನ್ನು ಕ್ರಮಬದ್ಧವಾಗಿ ಬೆಳೆಸುವುದರಿಂದ ಗಿಡದಲ್ಲಿ ಹೂವುಗಳು ಚೆನ್ನಾಗಿ ಬಿಡುತ್ತದೆ.

ಮತ್ತು ಗಿಡದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಯಾವುದೇ ನುಸಿ ಅಥವಾ ರೋಗ ಹಿಡಿಯುವುದು ಇಂತಹ ಸಮಸ್ಯೆಗಳು ಗಿಡಗಳಿಗೆ ಎದುರಾಗುವುದಿಲ್ಲ.ಮನೆಯ ಮುಂದೆ ಹೂವಿನ ಗಿಡ ಬೆಳಸಬೇಕು ಅನ್ನುವವರು ಅಥವಾ ಈ ಹೂವಿನ ಗಿಡವನ್ನು ಈಗಾಗಲೇ ಮನೆಯ ಮುಂದೆ ಬೆಳೆಸುವವರು, ಈ ಒಂದು ಮಾಹಿತಿಯನ್ನು ತಪ್ಪದೇ ತಿಳಿಯಿರಿ .ಹಾಗೂ ದಾಸವಾಳದ ಗಿಡವನ್ನು ಹೇಗೆ ಬೆಳೆಸಬೇಕು ದಾಸವಾಳ ಗಿಡವನ್ನು ಬೆಳೆಸುವಾಗ ಅದಕ್ಕೆ ಯಾವೆಲ್ಲ ಪೋಷಣೆ ಮಾಡಬೇಕು ಎಂಬುದರ ಮಾಹಿತಿಯನ್ನು ಇಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ ನೀವು ದಾಸವಾಳದ ಗಿಡವನ್ನು ಬೆಳೆಸಬೇಕು ಅಂತಿದ್ದರೆ, ಅದಕ್ಕೆ ಬಳಸಬೇಕಾಗಿರುವ ಮಣ್ಣು ಯಾವುದಿರಬೇಕು ಅಂದರೆ, ಜೇಡಿಮಣ್ಣನ್ನು ಹೊರತುಪಡಿಸಿ ನೀವು ಕಪ್ಪು ಮಣ್ಣನ್ನು ಬಳಸಬಹುದಾಗಿದೆ,ಈಗಾಗಲೇ ಜೇಡಿ ಮಣ್ಣಿನಲ್ಲಿ ಗಿಡವನ್ನು ಬೆಳೆಸಿದ್ದೀವಿ ಅನ್ನುವವರು ಅಥವಾ ಜೇಡಿ ಮಣ್ಣು ಮಾತ್ರ ಇದೆ ಗಿಡಗಳನ್ನು ಬೆಳೆಸುವುದಕ್ಕಾಗಿ ಎನ್ನುವವರು, ಈ ಜೇಡಿ ಮಣ್ಣಿಗೆ ಸ್ವಲ್ಪ ಮರಳನ್ನು ಮಿಶ್ರಿತ ಮಾಡಿ ಗಿಡವನ್ನು ನೀಡಬಹುದು.ಯಾವುದೇ ಗಿಡವನ್ನು ಬೆಳೆಸುವವರು ಒಂದು ಮಾಹಿತಿಯನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರಬೇಕು, ಅದೇನೆಂದರೆ ವಾರಕ್ಕೊಮ್ಮೆ ಈ ಗಿಡಗಳನ್ನು ಬೆಳೆಸುವಾಗ, ಮಣ್ಣನ್ನು ಆಗಾಗ ಸಡಿಲ ಮಾಡುತ್ತ ಇರಬೇಕು, ಇದರಿಂದ ಗಿಡವು ಚೆನ್ನಾಗಿ ಬೆಳೆಯುತ್ತದೆ .ಮತ್ತು ದಾಸವಾಳದ ಗಿಡವನ್ನು ಬೆಳೆಸುತ್ತಿದ್ದರೆ ಅಂದರೆ ಈ ದಾಸವಾಳ ಗಿಡ ಬೆಳೆಯುವುದಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ ನೀರು ಹಾಕಿದರೂ ಇದು ಮಣ್ಣಿನ ಮುಖಾಂತರ ಹರಿದು ಹೋಗಬೇಕು ಆ ರೀತಿ ವ್ಯವಸ್ಥೆಯನ್ನು ಮಾಡಿದ್ದರೆ ಉತ್ತಮ, ಗಿಡವು ಕೂಡ ಚೆನ್ನಾಗಿ ಬೆಳೆಯುತ್ತದೆ.

ದಾಸವಾಳದ ಗಿಡವನ್ನು ಬೆಳೆಸುವುದಕ್ಕಾಗಿ ಈ ಗಿಡದ ಮಣ್ಣಿಗೆ ಕಾಂಪೋಸ್ಟ್ ಗೊಬ್ಬರವನ್ನು ನೀಡುವುದು ಒಳ್ಳೆಯದು. ಹಾಗೆ ಈ ದಾಸವಾಳದ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಎಂದರೆ ಈ ದಾಸವಾಳದ ಹೂವು ಎಲೆ ಇವೆಲ್ಲ ಕೂಡ ಬಹಳಷ್ಟು ಪ್ರಯೋಜನಕಾರಿ ಅಂಶವನ್ನು ಪಡೆದುಕೊಂಡಿದ್ದು ಕೂದಲುಗಳ ಹಾರೈಕೆಗೆ ಅಂತೂ ಈ ದಾಸವಾಳದ ಎಲೆಗಳು ಉತ್ತಮ ಮನೆ ಮದ್ದು ಕೂಡ ಆಗಿದೆ.ದೇವರ ಅಲಂಕಾರದಲ್ಲಿಯೂ ಅಷ್ಟೇ ಈ ದಾಸವಾಳದ ಹೂವುಗಳನ್ನು ಬಳಸುವುದರಿಂದ ಬಹಳಾನೇ ಅಂದವಾಗಿ ಕಾಣುವುದರೊಂದಿಗೆ ಪೂಜೆಗೆ ಒಂದು ವಿಶೇಷತೆಯನ್ನು ಕೂಡ ಈ ದಾಸವಾಳದ ಹೂವು ನೀಡುತ್ತದೆ.ಈ ರೀತಿ ಮನೆಯ ಮುಂದೆ ಬಣ್ಣ ಬಣ್ಣದ ದಾಸವಾಳದ ಗಿಡಗಳನ್ನು ಬೆಳೆಸಿ ಮತ್ತು ವಾತಾವರಣವನ್ನು ಶುದ್ಧವಾಗಿ ಇಟ್ಟು ಕೊಳ್ಳುವುದರೊಂದಿಗೆ ಮನೆಯ ಅಂದವೂ ಕೂಡ ಹೆಚ್ಚುತ್ತದೆ.

ಈ ರೀತಿಯಾಗಿ ದಾಸವಾಳದ ಗಿಡವನ್ನು ಬೆಳೆಸುವಾಗ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡು ದಾಸವಾಳದ ಗಿಡವನ್ನು ಬೆಳೆಸುವುದರಿಂದ ಈ ಗಿಡ ಚೆನ್ನಾಗಿ ಹೂವುಗಳನ್ನು ಬಿಡುತ್ತದೆ .ಮತ್ತು ಪೂಜೆಗೂ ಅಂದ ಮನೆಗೂ ಕೂಡ ಅಂದ ಈ ದಾಸವಾಳದ ಗಿಡಗಳು. ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ರುಷರ ಮಾಡಿ ಧನ್ಯವಾದ.

Leave a Reply

Your email address will not be published.