ದಿನದಿಂದ ದಿನಕ್ಕೆ ನಿಮ್ಮ ಏಳಿಗೆಯನ್ನು ಕಂಡು ಜನ ಹೊಟ್ಟೆ ಉರ್ಕೋತಿದಾರ .. ಹಾಗಾದ್ರೆ ಕೆಂಪು ಮತ್ತು ಹಳದಿ ಬಟ್ಟೆಯಲ್ಲಿ ಈ ಒಂದು ಪರಿಹಾರ ಮಾಡಿಕೊಳ್ಳಿ ಸಾಕು ಕೆಟ್ಟ ಜನರ ಕಣ್ಣು ನಿಮ್ಮ ಮೇಲೆ ಬೀಳಲ್ಲ …!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಂಪು ಹಾಗೂ ಹಳದಿ ಬಟ್ಟೆಯಲ್ಲಿ ಈ ಒಂದು ಪರಿಹಾರ ಮಾಡಿಕೊಂಡರೆ ನಿಮ್ಮ ಮೇಲೆ ಯಾರ ಕೆಟ್ಟದೃಷ್ಟಿಯು ಬೀಳುವುದಿಲ್ಲ ಮತ್ತು ಬೇರೆಯವರ ನರದೃಷ್ಟಿ ದೋಷಗಳು ಕೂಡ ನಿಮಗೆ ಬರುವುದಿಲ್ಲ.ಸ್ನೇಹಿತರೆ ಮಹಿಳೆಯರು ಎಲ್ಲಿಗಾದರೂ ಹೊರಟರೆ ಕಾರ್ಯಕ್ರಮಗಳಿಗೆ ಹೊರಟಾಗ ತುಂಬಾ ಸಂತೋಷ ಹಾಗೂ ಸಡಗರದಿಂದ ಹೊರಡುತ್ತಾರೆ. ಮಹಿಳೆಯರು ನೋಡಲು ಚೆನ್ನಾಗಿರುತ್ತಾರೆ ಅದರಲ್ಲೂ ಶುಭ ಕಾರ್ಯಕ್ರಮದಲ್ಲಿ ಅವರು ಮೇಕಪ್ ಮಾಡಿಕೊಂಡು ಹೊರಟರೆ ಬೇರೆಯವರ ದೃಷ್ಟಿ ಬೀಳುವುದು ಖಂಡಿತ. ಕೆಲವೊಬ್ಬರಿಗೆ ಬೇಗ ದೃಷ್ಟಿ ಆಗುವುದು ಇಲ್ಲ ಇನ್ನು ಕೆಲವೊಬ್ಬರಿಗೆ ಯಾರಾದರೂ ನೋಡಿದ ತಕ್ಷಣ ದೃಷ್ಟಿಯಾಗುತ್ತೆ.

ಇಂಥವರು ಈ ತರಹದ ಪರಿಹಾರಗಳನ್ನು ಮಾಡಿಕೊಂಡರೆ ಯಾವ ದೃಷ್ಟಿಯು ನಿಮಗೆ ತಾಕುವುದಿಲ್ಲ. ದೃಷ್ಟಿಯಾದರೆ ಕೆಲವೊಬ್ಬರಿಗೆ ತಕ್ಷಣ ಜ್ವರ ಬರುವ ಸಾಧ್ಯತೆ ಇರುತ್ತದೆ. ಜ್ವರ ಬಂದ ಮೇಲೆ ಅವರ ಮುಖದ ಲಕ್ಷಣ ಬದಲಾಗುತ್ತದೆ. ಅದಕ್ಕೆ ಸ್ನೇಹಿತರೆ ಮಕ್ಕಳಿಗೆ ದೃಷ್ಟಿ ಆದಮೇಲೆ ಹೇಳುತ್ತಾರೆ ದೃಷ್ಟಿ ಆದಮೇಲೆ ಅವನು ಅಥವಾ ಅವಳು ಸೊರಗಿ ಹೋದಳು ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಹಾಗಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಹೇಗೆ ಮಾಡಬೇಕು ಮತ್ತು ಯಾವಾಗ ಮಾಡಬೇಕು ಎಲ್ಲಿ ಮಾಡಬೇಕು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ

ಅದೇ ರೀತಿಯಾಗಿ ಯಾವ ಸಾಮಾಗ್ರಿಗಳು ಈ ಪರಿಹಾರಕ್ಕೆ ಬೇಕು ಎಂದು ಕೂಡ ತಿಳಿಸುತ್ತೇನೆ. ಸ್ನೇಹಿತರೆ ಒಂದು ಪರಿಹಾರ ತುಂಬಾ ಸರಳವಾಗಿದೆ ಹಾಗೆ ಖರ್ಚು ಕೂಡ ಕಡಿಮೆ. ನಮ್ಮ ಮನೆಯಲ್ಲಿ ಕೆಂಪು ಅಥವಾ ಹಳದಿ ಬಟ್ಟೆ ಪೀಸ್ ಇದ್ದರೆ ತೆಗೆದುಕೊಳ್ಳಿ. ಇದನ್ನು ದೇವರ ಜಗಲಿ ಮೇಲೆ ಹಾಕಬೇಕು ನಂತರ ಕೆಂಪು ಬಟ್ಟೆಯ ಮೇಲೆ 11 ಮೆಣಸಿನ ಕಾಳುಗಳನ್ನು ಅಂದರೆ ಮಸಾಲೆ ಪದಾರ್ಥಗಳಲ್ಲಿ ಬಳಸುವ ಮೆಣಸಿನ ಕಾಳುಗಳನ್ನು ತೆಗೆದುಕೊಂಡು ಅದಕ್ಕೆ ಹಾಕಬೇಕು ನಂತರ ಇದನ್ನು ಮೂಟೆಯಾಕಾರ ಮಾಡಿ ಕಟ್ಟಿಕೊಳ್ಳಬೇಕು. ಇದನ್ನು ನೀವು ಎಲ್ಲಿಗಾದರೂ ಹೊರಟಾಗ ನಿಮ್ಮ ಬ್ಯಾಗ್ ಅಥವಾ ಪರ್ಸ್ ನಲ್ಲಿ ಇಟ್ಟುಕೊಂಡು ಹೋಗಬೇಕು ಇದರಿಂದ ನಿಮಗೆ ಯಾವುದೇ ದೃಷ್ಟಿ ದೋಷ ಹಾಗೂ ನರ ದೋಷ ಆಗುವುದಿಲ್ಲ.

ಇದನ್ನು ವರ್ಷಕ್ಕೊಮ್ಮೆ ಮಾಡಿದರೆ ಸಾಕು ಅದನ್ನೇ ನೀವು ಬ್ಯಾಗ್ನಲ್ಲಿ ಇಟ್ಟುಕೊಳ್ಳಬೇಕು. ಭಾನುವಾರ ಬೆಳಿಗ್ಗೆ ಅಥವಾ ಸಾಯಂಕಾಲ ಇದನ್ನು ಮಾಡಬೇಕು. ಇನ್ನು ಹಳದಿ ಬಣ್ಣದ ಬಟ್ಟೆಯಲ್ಲಿ 11 ಮೆಣಸಿನ ಕಾಳುಗಳನ್ನು ಹಾಕಿ ಮೂಟೆಯಾಕಾರ ಕಟ್ಟಿ ಇಟ್ಟು ಕೊಳ್ಳಬೇಕು. ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ದುಡ್ಡು ಇಡುವ ಸ್ಥಳದಲ್ಲಿ ಇಟ್ಟರೆ ನಿಮಗೆ ಹಣದ ಸಮಸ್ಯೆಗಳು ಬರುವುದಿಲ್ಲ. ನಿಮ್ಮ ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳು ಕೂಡ ದೂರ ಆಗುತ್ತದೆ. ನಂತರ ಈ ಮೆಣಸಿನ ಕಾಳುಗಳ ಗಂಟುಗಳನ್ನು ವರ್ಷ ಆದಮೇಲೆ ಯಾರು ತುಳಿಯದ ಜಾಗಕ್ಕೆ ಹಾಕಬೇಕು. ಸ್ನೇಹಿತರೆ ಮನೆಯ ಮೇಲೆ ಅಥವಾ ಮನುಷ್ಯರ ಮೇಲೆ ನರದೃಷ್ಟಿ ಅಥವಾ ದೃಷ್ಟಿ ದೋಷ ಆದರೆ ವರ್ಷಗಟ್ಟಲೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಅದಕ್ಕಾಗಿ ಇಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ಮಾಡಿಕೊಳ್ಳಬೇಕು ಇದರಿಂದ ನಿಮಗೆ ಒಳ್ಳೆಯ ಲಾಭ ಸಿಕ್ಕೆ ಸಿಗುತ್ತದೆ. ಯಾರ ಮುಖದಲ್ಲಿ ತುಂಬಾ ಲಕ್ಷಣ ಹಾಗೂ ಒಳ್ಳೆಯ ಗೋದಿಬಣ್ಣ ಇರುತ್ತದೆ ಅವರಿಗೆ ಬೇಗ ದೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸ್ನೇಹಿತರೇ ನೀವು ಕೂಡ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ತಿಳಿಸಿ. ಇಂತಹ ಒಳ್ಳೆಯ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.