ಮನೆಯ ಈ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟುಕೊಂಡರೆ ಸಾಕು ನಿಮ್ಮ ಜೀವನದ ದಿಕ್ಕೇ ಬದಲಾಗುತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಕೆಲವು ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಒಂದು ರೀತಿಯಾದ ಬದಲಾವಣೆ ಆಗುತ್ತದೆ ಎಂದು ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ .ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಗಡಿಯಾರ ಅಂತೂ ಇದ್ದೆ ಇರುತ್ತದೆ .ಈ ಒಂದು ಸಮಯವನ್ನು ತೋರಿಸುವ ಗಡಿಯಾರವನ್ನು ಈ ಒಂದು ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತೆ ಎಂದು ಹೇಳುತ್ತಾರೆ. ಹಾಗಾದ್ರೆ ಗಡಿಯಾರವನ್ನು ಮನೆಯಲ್ಲಿ’ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ ಮತ್ತು ಯಾವ ದಿಕ್ಕು ಅಶುಭ ಎನ್ನುವ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ನೀವೇನಾದರೂ ಮನೆಯನ್ನು ವಾಸ್ತು ಪ್ರಕಾರವೇ ಇಡಬೇಕು ಅನ್ನೋ ಒಂದು ಯೋಜನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ದಿಕ್ಕುಗಳ ಬಗ್ಗೆ ನೀವು ಮೊದಲು ಸರಿಯಾಗಿ ಅರ್ಥ ಮಾಡಿಕೊಂಡಿರ ಬೇಕಾಗುತ್ತದೆ ಯಾಕೆ ಅಂದರೆ ಮನೆಯಲ್ಲಿ ವಾಸ್ತು ಪ್ರಕಾರವಾಗಿ ಮನೆಯ ಮೂಲೆಗಳು ಮಾತ್ರ ಇದ್ದರೆ ಸಾಲದು ಮನೆಯಲ್ಲಿ ಇರತಕ್ಕಂತಹ ವಸ್ತುಗಳು ಕೂಡ ವಾಸ್ತು ಪ್ರಕಾರವೇ ಇರಬೇಕಾಗುತ್ತದೆ ಅಷ್ಟೇ ಅಲ್ಲದೆ ನಾವು ಇಡುವಂತಹ ವಸ್ತುಗಳು ವಾಸ್ತು ಪ್ರಕಾರವೇ ಇಡುವುದರಿಂದ ಆ ವಸ್ತುಗಳ ಉತ್ತಮವಾದ ಪರಿಣಾಮ ನಮ್ಮ ಜೀವನದ ಮೇಲೆ ಬೀರುತ್ತದೆ ಅನ್ನು ಒಂದು ನಂಬಿಕೆಯೂ ಕೂಡಾ ಇದೆ ಹಾಗಾದರೆ ನಮ್ಮ ಮನೆಯಲ್ಲಿ ಪ್ರಮುಖ ವಸ್ತುಗಳಾದ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ ಯಾವ ದಿಕ್ಕಿನಲ್ಲಿ ಇಟ್ಟರೆ ಅಶುಭ ಅನ್ನುವುದನ್ನು ತಿಳಿದುಕೊಳ್ಳೋಣ ಇಂದಿನ ಈ ಮಾಹಿತಿಯಲ್ಲಿ.

ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ ಮುಂದೆ ಸಾಗುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ಜಾಗ ಪಡೆದಿರುವ ಸಮಯ ಹಾಗೂ ಮನೆಯ ಗೋಡೆಯಲ್ಲಿ ನೇತು ಹಾಕುವ ಗಡಿಯಾರವೂ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಕಾಲದ ಪ್ರತೀಕ ಗಡಿಯಾರ ಹೌದು ನಿಮಗೆಲ್ಲರಿಗೂ ತಿಳಿದಿದೆ ನಾವು ಗಡಿಯಾರವನ್ನು ಮನೆಯಲ್ಲಿ ಇರಿಸುವುದೇ ಸಮಯವನ್ನು ನೋಡುವುದಕ್ಕಾಗಿ ಈ ಸಮಯವನ್ನು ನೋಡುವ ಸಾಧನವಾಗಿರುವ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬಾರದು ಯಾವುದೇ ಕಾರಣಕ್ಕೂ ಮನೆಯಲ್ಲಿ ದಕ್ಷಿಣ ಭಾಗದಲ್ಲಿ ಈ ಒಂದು ಗಡಿಯಾರವನ್ನು ಇರಿಸಬೇಡಿ ಇದರ ಬದಲು ಪೂರ್ವ ಪಶ್ಚಿಮ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೀವೇನಾದರೂ ಗಡಿಯಾರವನ್ನು ಏರಿಸಿದರೆ ನಿಮಗೆ ಬಹಳಾನೇ ಅದೃಷ್ಟ ಒಲಿದು ಬರುತ್ತದೆ.

ಈಶಾನ್ಯ ಮೂಲೆಯನ್ನು ಶಿವನ ಮೂಲೆ ಅಂತ ಹೇಳ್ತಾರೆ ಒಂದು ದಿಕ್ಕಿನಲ್ಲಿ ನೀವೇನಾದರೂ ಗಡಿಯಾರವನ್ನು ಇರಿಸಿದರೆ ಬಹಳ ಅದೃಷ್ಟ ನಿಮ್ಮದಾಗುತ್ತದೆ ಮತ್ತು ಮನೆಯಲ್ಲಿ ಇರುವ ಗಡಿಯಾರ ಸ್ವಚ್ಛವಾಗಿ ಇರಬೇಕು ಯಾಕೆ ಅಂದರೆ ಗಡಿಯಾರ ಸ್ವಚ್ಛವಾಗಿ ಇದ್ದಷ್ಟು ಮನೆಯಲ್ಲಿರುವ ಸದಸ್ಯರ ಕೆಲಸ ಕಾರ್ಯಗಳು ಕೂಡ ಅಷ್ಟೇ ಸುಸೂತ್ರವಾಗಿ ಪರಿಪೂರ್ಣವಾಗಿ ಜರುಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ.ಇನ್ನು ಮನೆಯಲ್ಲಿ ಕೆಟ್ಟ ಗಡಿಯಾರವನ್ನು ನಿಂತ ಗಡಿಯಾರವನ್ನು ಅಥವಾ ಹೊಡೆದ ಗಡಿಯಾರವನ್ನು ಇಟ್ಟುಕೊಳ್ಳಲೇ ಬೇಡಿ ಇದರಿಂದ ನಿಮ್ಮ ಸಮಯ ಕೆಡಬಹುದು ಅನ್ನೋ ಒಂದು ಸೂಚನೆ ಇದಾಗಿರುತ್ತದೆ.

ಆ ರೀತಿಯ ಗಡಿಯಾರಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಕೂಡಲೇ ತೆಗೆದು ಆಚೆ ಹಾಕುವುದು ಒಳ್ಳೆಯದು. ನಿಮ್ಮ ಮನೆಯಲ್ಲಿ ನೀವು ಪೆಂಡುಲಮ್ ಗಡಿಯಾರವನ್ನು ಹೌದು ನಮ್ಮ ಪೂರ್ವಜರು ಬಳಸುತ್ತಿದ್ದ ಪೆಂಡುಲಮ್ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಂಡರೆ ಅದು ಸುಮಧುರ ಶಬ್ದವನ್ನು ಮಾಡುತ್ತಿದ್ದರೆ ಅದು ಲಕ್ಷ್ಮೀದೇವಿಗೆ ಖುಷಿಯನ್ನು ನೀಡುತ್ತದೆ ಅಂತ ಆದಷ್ಟು ಪ್ರತಿಯೊಬ್ಬರ ಮನೆಯಲ್ಲಿಯೂ ಈ ಪೆಂಡುಲಂ ಗಡಿಯಾರವನ್ನೂ ಇರಿಸಿಕೊಳ್ಳುವುದು ಒಳ್ಳೆಯದು.ಕೆಲವರು ಗಡಿಯಾರವನ್ನು ದಾನ ನೀಡ್ತಾರೆ ಇನ್ನು ಕೆಲವರು ಗಡಿಯಾರವನ್ನು ಉಡುಗೊರೆಯಾಗಿ ನೀಡುತ್ತಾರೆ ಆದರೆ ಇಂತಹ ಕೆಲಸವನ್ನು ನೀವೇನಾದರೂ ಮಾಡ್ತಾ ಇದ್ರೆ ಈಗಲೇ ಆ ಒಂದು ಪದ್ಧತಿಯನ್ನು ಬದಲಾಯಿಸಿಕೊಳ್ಳಿ

ನೀವೇನಾದರೂ ಈ ರೀತಿ ಗಡಿಯಾರವನ್ನು ಉಡುಗೊರೆಯಾಗಿ ನೀಡುತ್ತಾ ಇದ್ದರೆ ನಿಮ್ಮ ಒಂದು ಉತ್ತಮವಾದ ಸಮಯ ಅವರಿಗೆ ಒಲಿಯುವುದು ಅಥವಾ ಅವರ ಕೆಟ್ಟ ಸಮಯ ನಿಮಗೆ ಒಲಿಯುವುದು ಇಂತಹ ಒಂದು ಘಟನೆ ಜರುಗಬಹುದು ಅಂತ ಶಾಸ್ತ್ರಗಳು ತಿಳಿಸುತ್ತದೆ ಆದ ಕಾರಣ ಯಾವತ್ತಿಗೂ ಗಡಿಯಾರಗಳನ್ನು ಯಾರಿಗೂ ದಾನವಾಗಿ ಅಥವಾ ಉಡುಗೊರೆಗೆ ನೀಡಬೇಡಿ.ನೀವು ಮನೆಯ ಮುಖ್ಯ ದ್ವಾರ ಅಥವಾ ಮನೆಯ ದ್ವಾರಗಳ ಮೇಲ್ಭಾಗದಲ್ಲಿ ಗಡಿಯಾರವನ್ನು ಇರಿಸಿದ್ದರೆ ಆ ರೀತಿ ಮಾಡಬೇಡಿ ನೀವು ಈ ಗಡಿಯಾರದ ಕೆಳಗೆ ಓಡಾಡಿದಷ್ಟು ಸಮಯ, ನಿಮ್ಮ ಜೀವನದಲ್ಲಿ ಕೂಡ ನೀವು ಗಡಿಯಾದ ತಿರುಗಿದ ಹಾಗೆ ತಿರುಗುತ್ತಿರುತ್ತೀರ ಅಂತ ಹೇಳಲಾಗುತ್ತದೆ.

ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.