ನಿಂಬೆಹಣ್ಣುಗಳು ನಾಲ್ಕೇ ದಿನಕ್ಕೆ ಹಾಳಾಗುತ್ತಿವೆಯಾ ಹಾಗಾದ್ರೆ ಈ ಒಂದು ಚಿಕ್ಕ ಉಪಾಯ ಮಾಡಿದರೆ ಸಾಕು ಮೂರು ತಿಂಗಳಿನ ವರೆಗೂ ತಾಜಾ ಹಣ್ಣಿನಂತೆ ಹಾಗೆ ಇರುತ್ತವೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಎರಡು ಟಿಪ್ಸ್ ಗಳನ್ನು ಬಳಸಿ ನಿಂಬೆಹಣ್ಣನ್ನು ಎರಡು ಅಥವಾ ಮೂರು ತಿಂಗಳವರೆಗೆ ಇಡಬಹುದು ಹಾಗಾದರೆ ಟಿಪ್ಸ್ಗಳನ್ನು ತಪ್ಪದೆ ನೋಡಿ.
ಹಾಯ್ ಸ್ನೇಹಿತರೆ ನಿಂಬೆಹಣ್ಣುಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ ಮಾರ್ಕೆಟ್ ನಲ್ಲಿ ಇವುಗಳಿಗೆ ಬೇಸಿಗೆಯಲ್ಲಿ ಹೆಚ್ಚಾಗಿ ಬೆಲೆ ಇರುತ್ತದೆ. ಉಪ್ಪಿನ ಕಾಯಿ ಹಾಕಬೇಕು ಎಂದುಕೊಳ್ಳುವವರು ನಿಂಬೆಹಣ್ಣನ್ನು ಖರೀದಿಸಿಕೊಂಡು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ನಿಂಬೆಹಣ್ಣುಗಳು ಹೊರಗೆ ಇಟ್ಟರೆ ಎರಡು ಅಥವಾ ಮೂರು ದಿನದಲ್ಲಿ ಕೊಳೆಯುತ್ತವೆ. ಫ್ರಿಡ್ಜ್ ಒಳಗಡೆ ಇಟ್ಟರೆ ಹತ್ತು ಅಥವಾ ಹದಿನೈದು ದಿನಗಳಲ್ಲಿ ಕೆಟ್ಟುಹೋಗುತ್ತದೆ.

ನಿಮಗೆ ಏನಾದರೂ ಅವಶ್ಯಕತೆ ಇದ್ದರೆ ಅವು ನಿಮಗೆ ಎರಡು ಅಥವಾ ಮೂರು ತಿಂಗಳು ಫ್ರೆಶ್ ಆಗಿ ಇರಬೇಕು ಅಂದುಕೊಂಡಿದ್ದರೆ ಈ ರೀತಿಯಾದ ಎರಡು ಟಿಪ್ಸ್ ಗಳನ್ನು ಉಪಯೋಗಿಸಿ ನಿಂಬೆಹಣ್ಣುಗಳು ತಾಜಾತನದಿಂದ 2 ತಿಂಗಳವರೆಗೂ ಇರುತ್ತವೆ.ನಿಂಬೆಹಣ್ಣನ್ನು ಶುಭ ಕಾರ್ಯಕ್ರಮಗಳಿಗೆ ಹಾಗೂ ಮನೆಯಲ್ಲಿ ಕೂಡ ಹೆಚ್ಚಾಗಿ ಬಳಸುತ್ತಾರೆ. ನಿಂಬೆಹಣ್ಣನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಮತೋಲನ ಇರುತ್ತದೆ ಹಾಗೂ ತೆಳ್ಳಗೆ ಕೂಡ ಆಗುತ್ತಾರೆ. ಈಗಿನ ಆಹಾರ ಪದ್ಧತಿಗೆ ಎಲ್ಲರೂ ತುಂಬಾ ದಪ್ಪಗಾಗಿ ಇರುತ್ತಾರೆ. ಅದಕ್ಕಾಗಿ ನಿಂಬೆಹಣ್ಣನ್ನು ಪ್ರತಿನಿತ್ಯ ಆಹಾರದಲ್ಲಿ ಸೇರಿಸಿದರೆ ತುಂಬಾ ಒಳ್ಳೆಯದು.

ಕಡಿಮೆ ಬೆಲೆ ಇದ್ದಾಗ ಹೆಚ್ಚಾಗಿ ನಿಂಬೆಹಣ್ಣುಗಳನ್ನು ತೆಗೆದುಕೊಂಡು ಫ್ರಿಜ್ಜಿನಲ್ಲಿ ಇಟ್ಟುಕೊಳ್ಳಬಹುದು. ನಿಂಬೆಹಣ್ಣನ್ನು ಪೂಜೆಗೆ ಹಾಗೂ ಮಾಟ ಮಂತ್ರಗಳಿಗೂ ಕೂಡ ಉಪಯೋಗಿಸುತ್ತಾರೆ. ಇದು ಎಲ್ಲಾ ಕಾಲದಲ್ಲಿ ಬೇಕಾಗುವಂತಹ ಹಣ್ಣು. ನಿಂಬೆ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ಯಾವುದೇ ತೊಂದರೆ ಕೂಡ ಇಲ್ಲ ಅದರಲ್ಲೂ ನಿಂಬೆಹಣ್ಣನ್ನು ಉಪ್ಪಿನಕಾಯಿ ಮಾಡಿಕೊಂಡು ಇಟ್ಟುಕೊಂಡರೆ ಯಾವತ್ತು ಬೇಕು ಅವಾಗ ಊಟದಲ್ಲಿ ಹಾಕಿಕೊಂಡು ತಿನ್ನಬಹುದು.ನಿಂಬೆಹಣ್ಣಿನಿಂದ ಇನ್ನೂ ಸುಮಾರು ಉಪಯೋಗಗಳಿವೆ. ಹಾಗಾದರೆ ಇಂತಹ ಉಪಯುಕ್ತವಾದ ಹಣ್ಣುಗಳನ್ನು ಹೇಗೆ ಸ್ಟೋರ್ ಮಾಡಿ ಇಡುವುದು ಎಂದು ನೋಡಿ.

ನಾನು ಈ ಮಾಹಿತಿಯಲ್ಲಿ ನಿಮಗೆ ಎರಡು ಟಿಪ್ಸ್ ಗಳನ್ನು ನೀಡುತ್ತೇನೆ ಅದರಲ್ಲಿ ನಿಮಗೆ ಯಾವುದು ಒಪ್ಪಿಗೆ ಆಗುತ್ತದೆ ಅದನ್ನು ನೀವು ಮಾಡಬಹುದು. ಮೊದಲನೆಯ ವಿಧಾನ ಏನೆಂದರೆ ನಿಂಬೆ ಹಣ್ಣನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿಕೊಳ್ಳಬೇಕು ಇವುಗಳನ್ನು ಚೆನ್ನಾಗಿ ತಣ್ಣೀರಿನಿಂದ ತೊಳೆಯಬೇಕು. ನಂತರ ಇವುಗಳನ್ನು ಒಣ ಬಟ್ಟೆಯಲ್ಲಿ ಹಾಕಿ ಒಣಗಿಸಬೇಕು. ನಂತರ ಆ ಪಾತ್ರೆಯನ್ನು ಹತ್ತು ನಿಮಿಷ ಫ್ರಿಜ್ಜಿನಲ್ಲಿ ಇಡಬೇಕು ನಂತರ ಒಂದು ಪಾತ್ರೆಗೆ ಟಿಶ್ಯು ಪೇಪರ್ ಪಾತ್ರೆಯ ಒಳಗಡೆ ಕೆಳಗೆ ಹಾಕಬೇಕು.ಚೆನ್ನಾಗಿ ನಿಂಬೆಹಣ್ಣುಗಳನ್ನು ವರೆಸಿ ಮತ್ತು ಒಣಗಿಸಿ ಆ ಪಾತ್ರೆಯಲ್ಲಿ ಹಾಕಬೇಕು

ಅದರ ಮೇಲೆ ಮತ್ತೊಂದು ಟಿಶ್ಯೂ ಪೇಪರ್ ಮುಚ್ಚಿ ತಟ್ಟೆಯನ್ನು ಮುಚ್ಚದೆ ಹಾಗೆ ಫ್ರಿಜ್ಜಿನಲ್ಲಿ ಇಡಬೇಕು. ಈ ರೀತಿಯಾಗಿ ಮಾಡುವುದರಿಂದ ನಿಂಬೆಹಣ್ಣುಗಳು ತಾಜಾ ಭರಿತವಾಗಿ ಎರಡು ಅಥವಾ ಮೂರು ತಿಂಗಳುಗಳು ಚೆನ್ನಾಗಿ ಇರುತ್ತವೆ. ಹಾಗಾದರೆ ಈ ವಿಧಾನವು ಕೂಡ ತುಂಬಾ ಸರಳವಾಗಿದೆ. ಹೆಚ್ಚಾಗಿ ನಿಂಬೆಹಣ್ಣುಗಳು ಕೊಳೆಯುವುದಿಲ್ಲ ಆದರೆ ಫ್ರಿಜ್ಜಿನಲ್ಲಿ ಕರೆಂಟ ಸಪ್ಲೈ ಸತತವಾಗಿ ಇರಬೇಕು. ಇನ್ನು ಎರಡನೆಯ ವಿಧಾನ ಯಾವುದೆಂದರೆ ಮೇಲಿನಂತೆ ನಿಂಬೆ ಹಣ್ಣನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು ನಂತರ ಇವುಗಳನ್ನು ಒಂದು ಒಣ ಬಟ್ಟೆಯಲ್ಲಿ ಹಾಕಿ ಒಣಗಿಸಿಕೊಳ್ಳಬೇಕು. ನಂತರ ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಳ್ಳಬೇಕು.

ಆ ನಿಂಬೆಹಣ್ಣುಗಳನ್ನು ಪೇಪರ್ನಲ್ಲಿ ಸುತ್ತಿ ಒಂದೊಂದಾಗಿ ಅವುಗಳನ್ನು ಪಾತ್ರೆಯಲ್ಲಿ ಹಾಕಬೇಕು ನಂತರ ಮೇಲೆ ಒಂದು ದೊಡ್ಡದಾದ ಕವರನ್ನು ಮುಚ್ಚಬೇಕು ತಟ್ಟೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ವಿಧಾನವನ್ನು ಬಳಸಿ ಕೂಡ ನಿಂಬೆಹಣ್ಣನ್ನು ಫ್ರೆಶ್ ಆಗಿ ಎರಡು ತಿಂಗಳುಗಳ ಕಾಲ ಇಟ್ಟುಕೊಳ್ಳಬಹುದು. ಸ್ನೇಹಿತರೆ ನಿಂಬೆ ಹಣ್ಣು ಹೆಚ್ಚಾಗಿದ್ದರೆ ಅದನ್ನು ಕೆಡಿಸುವ ಬದಲು ಈ ರೀತಿಯಾದ ವಿಧಾನಗಳನ್ನು ಬಳಸಿ ಉಪಯೋಗಿಸಿಕೊಳ್ಳಿ. ಪ್ರತಿನಿತ್ಯ ಒಂದೊಂದೇ ನಿಂಬೆಹಣ್ಣನ್ನು ಕೂಡ ಉಪಯೋಗಿಸಿಕೊಳ್ಳುತ್ತಾ ಬರಬಹುದು. ಹಾಗಾದರೆ ಸ್ನೇಹಿತರೇ ಈ ಮಾಹಿತಿ ನಿಮಗೆ ತುಂಬಾ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗಿದ್ದರೆ ಈ ಕೂಡಲೇ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ನಿಂಬೆಹಣ್ಣುಗಳನ್ನು ತಾಜಾತನದಿಂದ ಇಟ್ಟುಕೊಳ್ಳುವುದು ಹೇಗೆ ಎಂದು ತಿಳಿಸಿ ಧನ್ಯವಾದಗಳು.

Leave a Reply

Your email address will not be published.